• Home
  • »
  • News
  • »
  • tech
  • »
  • Google vs ChatGPT: ಗೂಗಲ್​ಗೆ ಟಕ್ಕರ್ ಕೊಡಲು ಮುಂದಾದ ಹೊಸ ಚಾಟ್GPT ಎಂಬ ಅ್ಯಪ್! ಏನಿದರ ವಿಶೇಷತೆ?

Google vs ChatGPT: ಗೂಗಲ್​ಗೆ ಟಕ್ಕರ್ ಕೊಡಲು ಮುಂದಾದ ಹೊಸ ಚಾಟ್GPT ಎಂಬ ಅ್ಯಪ್! ಏನಿದರ ವಿಶೇಷತೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗೂಗಲ್​ಗೆ ಪ್ರತಿಸ್ಪರ್ಧಿಯಾಗಿ ಬರುತ್ತಿರುವ ಅಪ್ಲಿಕೇಶನ್​ ಚಾಟ್​GPT ಎಂಬುದಾಗಿದ್ದು, ಇದು ಗೂಗಲ್​ಗಿಂತಲೂ ಸ್ಪಷ್ಟವಾದ ಮಾಹಿತಿಗಳನ್ನು ಜನರು ಹುಡುಕಿದಾಗ ಅವರಿಗೆ ದೊರಕುವಂತೆ ಮಾಡುತ್ತದೆ. ಈ ಅಪ್ಲಿಕೇಶನ್ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

  • Share this:

    ತಂತ್ರಜ್ಞಾನ ಕಂಪನಿಗಳು (Technology Company) ದಿನದಿಂದ ದಿನಕ್ಕೆ ಬೆಳವಣಿಗೆ ಆಗುತಲೇ ಇದೆ. ಟೆಕ್​ನಲ್ಲಿ ದೊಡ್ಡ ಕಂಪನಿಯಾಗಿರುವ ಸರ್ಚ್​ ಇಂಜಿನ್ ಗೂಗಲ್ Google) ಬಹಳಷ್ಟು ಬಳಕೆದಾರರನ್ನು ಹೊಂದಿದ ಅಪ್ಲಿಕೇಶನ್ ಆಗಿದೆ. ಈ ಗೂಗಲ್ ತನ್ನ ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ತಿಳಿಸುತ್ತದೆ. ಈ ಇತ್ತೀಚಿನ ದಿನ ಜನರು ಯಾವುದೇ ವಿಷಯದ ಬಗ್ಗೆ ತಿಳಿಯಬೇಕಾದರು ಗೂಗಲ್ ಅನ್ನೇ ಹೆಚ್ಚು ಅನುಸರಿಸುತ್ತಾರೆ. ಆದರೆ ಇದೀಗ ಗೂಗಲ್​ಗೆ ಪ್ರತಿಸ್ಪರ್ಧಿಯಾಗಿ ಬರಲು ಒಂದು ಅಪ್ಲಿಕೇಶನ್ ರೆಡಿಯಾಗಿದೆ. ಅದರ ಹೆಸರು ಚಾಟ್​GPT (ChatGPT) ಎಂಬುದಾಗಿದೆ. ಇದೂ ಕೂಡ ಗೂಗಲ್​ನಂತೆಯೇ ಕಾರ್ಯವೈಖರಿಯನ್ನು ಹೊಂದಿರುವಂತಹ ಸೋಶಿಯಲ್ ಮೀಡಿಯಾ ಆಗಿದೆ.


    ಗೂಗಲ್​ಗೆ ಪ್ರತಿಸ್ಪರ್ಧಿಯಾಗಿ ಬರುತ್ತಿರುವ ಅಪ್ಲಿಕೇಶನ್​ ಚಾಟ್​GPT ಎಂಬುದಾಗಿದ್ದು, ಇದು ಗೂಗಲ್​ಗಿಂತಲೂ ಸ್ಪಷ್ಟವಾದ ಮಾಹಿತಿಗಳನ್ನು ಜನರು ಹುಡುಕಿದಾಗ ಅವರಿಗೆ ದೊರಕುವಂತೆ ಮಾಡುತ್ತದೆ. ಈ ಅಪ್ಲಿಕೇಶನ್ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.


    ಗೂಗಲ್​ಗಿಂತ ಚಾಟ್​GPT ಹೇಗೆ ಕಾರ್ಯ ನಿರ್ವಹಿಸುತ್ತದೆ?


    ಗೂಗಲ್​ ಬಿಲಿಯನ್​ನಷ್ಟು ಕೆಲವು ವೆಬ್ ಪುಟಗಳನ್ನು ವಿಶ್ಲೇಷಿಸುತ್ತದೆ ಮತ್ತು ಆ ವಿಷಯವನ್ನು ಇಂಡೆಕ್ಸ್ ಮಾಡುತ್ತದೆ. ನಂತರ ಬಳಕೆದಾರರ ಕೇಳಿದ ಪ್ರಶ್ನೆಗಳಿಗೆ ಫಲಿತಾಂಶಗಳನ್ನು ವಿಶ್ಲೇಷಿಸಿ ನೀಡುತ್ತದೆ. ಇದಾದ ನಂತರ ಗೂಗಲ್ ಆ ಲೀಸ್ಟ್​ ಅನ್ನು ಮೊಬೈಲ್​ ಸ್ಕ್ರೀನ್​ ಮೇಲೆ ನೀಡುತ್ತಾರೆ. ಗೂಗಲ್ ಸರ್ಚ್ ಇಂಜಿನ್ ಈ ರೀತಿ ಕಾರ್ಯನಿರ್ವಹಿಸುತ್ತದೆ.


    ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿ; ಇನ್ಮುಂದೆ ಪೇಟಿಯಂ, ಯಾತ್ರಾ ಆ್ಯಪ್​ನಲ್ಲೂ ಟಿಕೆಟ್ ಮಾಡ್ಬಹುದು


    ಆದರೆ ChatGPT ಇಂಟರ್ನೆಟ್ ಬಳಕೆದಾರರಿಗೆ ಉತ್ತಮ ಮತ್ತು ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ. ಇದು ತನ್ನ ಸ್ವಂತ ಹುಡುಕಾಟದೊಂದಿಗೆ ಮಾಹಿತಿಯನ್ನು ವಿಶ್ಲೇಷಿಸಿ ಮತ್ತು ಬಳಕೆದಾರರಿಗೆ ಅದೇ ನಿಖರ ಫಲಿತಾಂಶವನ್ನು ಒದಗಿಸುತ್ತದೆ.


    ಚಾಟ್​GPT ಯ ಪ್ರಯೋಜನಗಳು:


    ಗೂಗಲ್​ ಮುಖ್ಯವಾಗಿ ಬಳಕೆದಾರರಿಗೆ ಓದಲು ಅವರು ಕೇಳಿರುವ ಪ್ರಶ್ನೆಗೆ ಉತ್ತರವನ್ನು ಲಿಂಕ್​ಗಳ ಮೂಲಕ ನೀಡುತ್ತದೆ, ಆದರೆ ಇದು ಕೆಲವೊಮ್ಮೆ ಸ್ಪಷ್ಟವಾದ ಉತ್ತರವೆಂದು ಹೇಳಲು ಅಸಾಧ್ಯ. ಆದರೆ ಬಳಕೆದಾರರು ಕೇಳುವ ಯಾವುದೇ ಪ್ರಶ್ನೆಗೆ ವಿವರವಾದ ಮತ್ತು ನಿಖರವಾದ ಉತ್ತರಗಳನ್ನು ChatGPT ಒದಗಿಸುತ್ತದೆ.


    ಅದಕ್ಕಾಗಿಯೇ ChatGPT ಅನ್ನು ಬಳಸಿದ ಬಳಕೆದಾರರು ಸೋಶಿಯಲ್​ ಮೀಡಿಯಾದಲ್ಲಿ ಗೂಗಲ್​​ಗಿಂತ ಹೆಚ್ಚು ಸ್ಪಷ್ಟವಾದ ಸರ್ಚ್​ ಮಾಡಿದ್ದಕ್ಕೆ ಸರಿಯಾದ ಉತ್ತಗಳನ್ನು ಇದು ನೀಡುತ್ತದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಚಾಟ್‌ಜಿಪಿಟಿ ಗೂಗಲ್‌ಗೆ ದೊಡ್ಡ ಪೈಫೋಟಿ ನೀಡಲಿದೆಎಂದು ವಿಶ್ಲೇಷಕರು ಹೇಳುತ್ತಾರೆ. ಇದು ಇತರ ವೆಬ್‌ಸೈಟ್‌ಗಳನ್ನು ಸ್ಕ್ಯಾನ್ ಮಾಡುವ ಅಗತ್ಯವಿಲ್ಲದೇ ತನ್ನದೇ ಸೃಜನಶೀಲತೆ ಮೂಲಕ ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಒದಗಿಸುತ್ತದೆ.


    ಡೌನ್​ಲೋಡ್​ಗಳು


    ಚಾಟ್​ಜಿಪಿಟಿ ಐದು ದಿನಗಳಲ್ಲಿ 1 ಮಿಲಿಯನ್ ಬಳಕೆದಾರರನ್ನು ಸ್ವಾಧೀನಪಡಿಸಿಕೊಂಡಿದೆ. ಇದೊಂದು ಟೆಕ್ನಾಲಜಿ ಯುಗದಲ್ಲಿ ಬಹಳಷ್ಟು ಸಂಚಲನ ಮೂಡಿಸಲಿದೆ ಎನ್ನುತ್ತಾರೆ ಟೆಕ್ ತಜ್ಞರು. ಆ ಸಂಖ್ಯೆಯನ್ನು ತಲುಪಲು ಇನ್​​​ಸ್ಟಾಗ್ರಾಮ್​ 2.5 ತಿಂಗಳುಗಳನ್ನು ತೆಗೆದುಕೊಂಡಿತು. ಫೇಸ್ ಬುಕ್ ಹತ್ತು ತಿಂಗಳು ತೆಗೆದುಕೊಂಡಿತು. ಭವಿಷ್ಯದ ಅನ್ವಯಗಳ ಕುರಿತು OpenAI ಯಾವುದೇ ಸಾರ್ವಜನಿಕ ಪ್ರಕಟಣೆಗಳನ್ನು ಮಾಡುವುದಿಲ್ಲ. ಆದರೆ ಅದರ ಹೊಸ ಚಾಟ್‌ಬಾಟ್ ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಶೇರ್​ಮಾಡಲು ಪ್ರಾರಂಭಿಸಿದರೆ, ಅದು ಗೂಗಲ್​​ಗೆ ನಿಜವಾಗಿಯೂ ನಷ್ಟವಾಗಬಹುದು.


    ಬಳಸುವುದು ಹೇಗೆ


    ಚಾಟ್​ಜಿಪಿಟಿ ಬೀಟಾ ಪರೀಕ್ಷೆಗೆ ಲಭ್ಯವಿರುವ ಉಚಿತ ಸೇವೆಯಾಗಿದೆ. ಆದರೆ ಈ ಸೇವೆಯು ಮೊದಲು ಸ್ವಲ್ಪ ಸಮಯಗಳ ಕಾಲ ಮಾತ್ರ ಉಚಿತವಾಗಿ ಲಭ್ಯವಿದೆ. ಅದರ ನಂತರ ನೀವು ಅದನ್ನು ಬಳಸಲು ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದನ್ನು ಬಳಸಲು OpenAI ವೆಬ್‌ಸೈಟ್ ತೆರೆಯಿರಿ ಮತ್ತು 'Try ChatGPT' ಬಟನ್ ಅನ್ನು ಕ್ಲಿಕ್ ಮಾಡಿ. ಸೈನ್ ಅಪ್ ಮಾಡಿದ ನಂತರ ಚಾಟ್​ಜಿಪಿಟಿ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು

    Published by:Prajwal B
    First published: