ಇತ್ತೀಚೆಗೆ ತಂತ್ರಜ್ಞಾನದಲ್ಲಿ (Technology) ಬಹಳಷ್ಟು ಅಭಿವೃದ್ಧಿಗಳು ಆಗುತ್ತಲೇ ಇದೆ. ಆದರೆ ಇವೆಲ್ಲವೂ ಗ್ರಾಹಕರನ್ನು ಸಂತೃಪ್ತಿಗೊಳಿಸುವ ಉದ್ದೇಶವಾಗಿರುತ್ತದೆ. ಇತ್ತೀಚೆಗೆ ಗೂಗಲ್ (Google) ತನ್ನ ಕಂಪನಿಯಿಂದ ಬಿಡುಗಡೆಯಾದ ಅಪ್ಲಿಕೇಶನ್ಗಳನ್ನು ಅಪ್ಡೇಟ್ (Updates) ಮಾಡುವತ್ತ ಯೋಚಿಸುತ್ತಿದೆ. ಅದೇ ರೀತಿ ಗೂಗಲ್ ವಿಡಿಯೋ ಪ್ಲಾಟ್ಫಾರ್ಮ್ಗಳ (Video Plstforms) ಮೇಲೆ ಹೆಚ್ಚು ಅಭಿವೃದ್ಧಿಯ ಹೆಜ್ಜೆಯನ್ನು ಇಡುತ್ತಿದೆ. ಈ ವಿಡಿಯೋ ಪ್ಲಾಟ್ಫಾರ್ಮ್ಗಳಲ್ಲಿ ಯೂಟ್ಯೂಬ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ (Youtube) ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಬಹುದು. ಯಾವುದೇ ಸಿನೆಮಾ (Cinema), ಡ್ಯಾನ್ಸ್ (Dance), ಲೈವ್ ಶೋಗಳನ್ನು (Live Show) ನೋಡಬೇಕಾದರೆ ಯೂಟ್ಯೂಬ್ ಉತ್ತಮವಾಗಿರುವುದರಿಂದ ಪ್ರತಿಯೊಬ್ಬರೂ ಯೂಟ್ಯೂಬನ್ನೇ ಅನುಸರಿಸುತ್ತಾರೆ. ಗೂಗಲ್ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆ್ಯಂಬಿಯೆಂಟ್ ಮೋಡ್ ಎಂಬ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ.
ಯೂಟ್ಯೂಬ್ನಲ್ಲಿ ಆ್ಯಂಬಿಯೆಂಟ್ ಮೋಡ್ ಎಂಬುದು ಹೊಸ ಅಪ್ಡೇಟ್ ಆಗಿದ್ದು. ಇದು ಗ್ರಾಹಕರಿಗೆ ವಿಡಿಯೋಗಳನ್ನು ಗುಣಮಟ್ಟದಲ್ಲಿ ಕಾಣಲು ಸಹಾಯಕವಾಗುತ್ತದೆ. ಈ ಆ್ಯಂಬೆಯೆಂಟಗ ಮೋಡ್ನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ಏನಿದು ಆ್ಯಂಬಿಯೆಂಟ್ ಮೋಡ್?
ಯೂಟ್ಯೂಬ್ನ ಈ ಹೊಸ ಫೀಚರ್ಸ್ ಬಗ್ಗೆ ಹೇಳುವುದಾದರೆ ಈ ಆ್ಯಂಬಿಯೆಂಟ್ ಮೋಡ್ ಎಂಬುದು ವೀಕ್ಷಕರು ವಿಡಿಯೋ ನೋಡಬೇಕಾದರೆ ಅವರಿಗೆ ಹೊಸ ಅನುಭವವನ್ನು ನೀಡುತ್ತದೆ. ಜೊತೆಗೆ ಇದು ನೋಡುಗರ ಮನೋಸ್ಥಿತಿಯನ್ನೇ ಬದಲಾವಣೆ ಮಾಡುವ ಸಾಮರ್ಥ್ಯ ಇದಕ್ಕಿದೆ.
ಇದನ್ನೂ ಓದಿ: ಇನ್ಫಿನಿಕ್ಸ್ ಕಂಪನಿಯಿಂದ ಹೊಸ ಝೀರೋ 5ಜಿ 2023 ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ, ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ
ಅಂದರೆ ಇದು ಇಂಟರ್ಫೇಸ್ ಬ್ಯಾಗ್ರೌಂಡ್ನ ಬಣ್ಣ ಬದಲಾಗುವ ಮೂಲಕ ನೋಡುಗರಿಗೆ ವಿಡಿಯೋವನ್ನು ನೋಡುವಾಗ ಸ್ವಲ್ಪ ಧನಾತ್ಮಕ ಅನುಭವವನ್ನು ನೀಡುತ್ತದೆ. ಈ ಆ್ಯಂಬಿಯೆಂಟ್ ಫೀಚರ್ ಡೆಸ್ಕ್ಟಾಪ್, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮಾತ್ರ ಸಪೋರ್ಟ್ ಮಾಡುತ್ತದೆ.
ಯಾವ ರೀತಿ ಈ ಫೀಚರ್ಸ್ ಅನ್ನು ಬಳಕೆ ಮಾಡ್ಬಹುದು?
ಆಂಬಿಯೆಂಟ್ ಮೋಡ್ ಫೀಚರ್ಸ್ ಅನ್ನು ಉಪಯೋಗಿಸಬೇಕು ಎಂದುಕೊಂಡರೆ ನಿಮ್ಮ ಸ್ಮಾರ್ಟ್ಫೋನ್ ಅಥವಾ ಡೆಸ್ಕ್ಟಾಪ್ನಲ್ಲಿ ಯೂಟ್ಯೂಬ್ ತೆರೆದು ಸೆಟ್ಟಿಂಗ್ಸ್ನಲ್ಲಿ ಡಾರ್ಕ್ ಥೀಮ್ ಅನ್ನು ಆನ್ ಮಾಡಿದರೆ ಸಾಕು. ತಕ್ಷಣವೇ ಈ ಆ್ಯಂಬಿಯೆಂಟ್ ಮೋಡ್ ಆಟೋಮ್ಯಾಟಿಕ್ ಅಗಿ ಅನ್ ಆಗುತ್ತದೆ.
ಪ್ರತೀ ಬಾರಿಯೂ ಯೂಟ್ಯೂಬ್ನಲ್ಲಿ ವಿಡಿಯೋ ನೋಡುವಾಗ ಆ್ಯಂಬಿಯೆಂಟ್ ಮೋಡ್ನಲ್ಲಿಟ್ಟು ನೋಡಬಾರದು. ಇದರಿಂದ ನೋಡುಗರಿಗೆ ಆ ಫೀಚರ್ಸ್ ಮೇಲೆ ಬೋರಾಗ್ಬಹುದು. ಅದಕ್ಕಾಗಿ ತಮಗೆ ಬೇಕಾದ ಸಂದರ್ಭದಲ್ಲಿ ಮಾತ್ರ ಬಳಸಬೇಕು. ಒಂದು ವೇಳೆ ಆ್ಯಂಬಿಯೆಂಟ್ ಮೋಡ್ ಬೇಡವೆಂದಾದರೆ ಆಫ್ ಕೂಡಾ ಮಾಡ್ಬಹುದು. ಯೂಟ್ಯೂಬ್ ಓಪನ್ ಮಾಡಿದ ನಂತರ ಸೆಟ್ಟಿಂಗ್ ಆಯ್ಕೆಗೆ ಹೋಗಿ, ನಂತರ ಅಲ್ಲಿಯೇ ಕಾಣಿಸಿಕೊಳ್ಳುವ ‘ಆ್ಯಂಬಿಯೆಂಟ್ ಮೋಡ್’ ಅನ್ನು ಟ್ಯಾಪ್ ಮಾಡಿದರೆ ಅದು ತನ್ನಷ್ಟಕ್ಕೇ ಆಫ್ ಆಗುತ್ತದೆ.
ಯೂಟ್ಯೂಬ್ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬರಬಾರದಾ?
ಹೆಚ್ಚಿನ ಜನರಿಗೆ ಇತ್ತೀಚೆಗೆ ಯೂಟ್ಯೂಬ್ ನೋಡುವುದೆಂದರೆ ಉದಾಸೀನವಾಗಿ ಬಿಡುತ್ತೆ. ಇದಕ್ಕೆ ಕಾರಣ ಅದರಲ್ಲಿ ಬರುವಂತಹ ಜಾಹೀರಾತುಗಳು ಎಂದು ಹೇಳ್ಬಹುದು. ಆದರೆ ಇನ್ಮುಂದೆ ಯೂಟ್ಯೂಬ್ನಲ್ಲಿ ವಿಡಿಯೋ ನೋಡುವಾಗ ಬರುವಂತಹ ಜಾಹೀರಾತನ್ನು ಆ್ಯಡ್ ಬ್ಲಾಕರ್ ಅಪ್ಲಿಕೇಶನ್ಗಳನ್ನು ಉಪಯೋಗಿಸಿದರೆ ಯಾವುದೇ ಜಾಹೀರಾತಿನ ತೊಂದರೆ ಇಲ್ಲದೆ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡಬಹುದಾಗಿದೆ.
ಆ್ಯಡ್ಬ್ಲಾಕರ್ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ.ಆ್ಯಡ್ಬ್ಲಾಕರ್ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್ ಇಂಜಿನ್ಗಳಲ್ಲಿ ನೀವು ಜಾಹೀರಾತು ಮುಕ್ತ ವಿಡಿಯೋಗಳನ್ನು ನೋಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ