ಏನಪ್ಪಾ ಸ್ಮಾರ್ಟ್ಫೋನ್ಗಳ (Smartphone) ಬೆಲೆ ಇಷ್ಟೊಂದು ಕಡಿಮೆ ಅಂತಾ ಹೇಳ್ತಿದ್ದೀರಾ ಅನ್ಕೊಂಡ್ರಾ, ಹೌದು ಇದು ಸ್ಮಾರ್ಟ್ಫೋನ್ ಯುಗ ಇಲ್ಲಿ ಸ್ಮಾರ್ಟ್ಫೋನ್ಗಳು ಹೊಸತನದ ರೂಪದಲ್ಲಿ ಬರುತ್ತಾ ಇರುತ್ತದೆ. ಅದೇ ರೀತಿಯಲ್ಲಿ ಇದರ ಬೆಲೆ ಕೂಡ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಇತ್ತೀಚೆಗೆ ದೊಡ್ಡ ಟೆಕ್ (Technology) ಕಂಪನಿಯಾಗಿರುವ ಸರ್ಚ್ ಇಂಜಿನ್ ಗೂಗಲ್ (Search Engine Google) ತನ್ನ ಬ್ರಾಂಡ್ನ ಅಡಿಯಲ್ಲಿ ಗೂಗಲ್ ಪಿಕ್ಸೆಲ್ 6ಎ (Google Pixel 6A) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಆರಂಭದ ದಿನಗಳಲ್ಲಿ ಈ ಸ್ಮಾರ್ಟ್ಫೋನ್ನ ಬೆಲೆ ಕೂಡ ಒಂದು ರೀತಿಯಲ್ಲಿ ಹೆಚ್ಚಿತ್ತು ಎನ್ನಬಹುದು. ಆದರೆ ಈಗ ಈ ಸ್ಮಾರ್ಟ್ಫೋನ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹೌದು, ಗೂಗಲ್ ತನ್ನ ಕಂಪನಿಯಲ್ಲಿ ಈ ಬಾರಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಆರಂಭಿಕ ಬೆಲೆ 43,999 ರೂಪಾಯಿ ಆಗಿತ್ತು. ಆದರೆ ಈಗ ಈ ಸ್ಮಾರ್ಟ್ಫೋನ್ನ ಆಫರ್ಸ್ನೊಂದಿಗೆ ಕೇವಲ 10 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು. ಹಾಗಿದ್ರೆ ಇಷ್ಟೊಂದು ಬೆಲೆಯ ಸ್ಮಾರ್ಟ್ಫೋನ್ ಇಷ್ಟು ಕಡಿಮೆಗೆ ಮಾರಾಟವಾಗಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿಯೋಣ.
ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ನ ಫೀಚರ್ಸ್
ಬ್ಯಾಟರಿ ಸಾಮರ್ಥ್ಯ
ಇನ್ನು ಈ ಸ್ಮಾರ್ಟ್ಫೋನ್ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು ಗೂಗಲ್ ಪಿಕ್ಸೆಲ್ 6ಎ ನಲ್ಲಿ 4,410mAh ಬ್ಯಾಟರಿಯನ್ನು ನೀಡಲಾಗಿದೆ. ಈ ಸ್ಮಾರ್ಟ್ಪೋನ್ನಲ್ಲಿ 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇನ್ನು ಬ್ಯಾಟರಿ ಸೇವರ್ ಆನ್ ಮಾಡಿದರೆ 72 ಗಂಟೆಗಳ ಕಾಲ ಬಳಸಬಹುದಾಗಿದೆ.
ಕನೆಕ್ಟಿವಿಟಿ ಫೀಚರ್ಸ್
ಈ ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಫೀಚರ್ಸ್ಗಳನ್ನು ಹೊಂದಿದೆ. ಮೊಬೈಲ್ನ ಸೆಕ್ಯುರಿಟಿಗಾಗಿ ಡಿಸ್ಪ್ಲೇ ಯಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ