2021ರ ಹಣಕಾಸು ವರ್ಷದಲ್ಲಿ ಅತೀ ಹೆಚ್ಚು ಕಾರು ಮಾರಾಟವಾದ ಭಾರತದ ಟಾಪ್‌ 3 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ

2021 ರ ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್‌ಸಿಆರ್ ಪ್ರದೇಶವು ಈ ವಿಷಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾರತದ ರಾಜಧಾನಿ ನವದೆಹಲಿಯು 1,28,907 ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಕಾರು

ಕಾರು

 • Share this:
  ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ದೇಶದಲ್ಲಿ ಹಲವರು ಸಾರ್ವಜನಿಕ ವಾಹನಗಳ ಬಳಕೆ ಬಿಟ್ಟು ಸ್ವಂತ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಮಾರಾಟ ಹೆಚ್ಚಳಗೊಂಡಿದೆ. ಈ ಹಿನ್ನೆಲೆ ಭಾರತವು ಜಗತ್ತಿನಾದ್ಯಂತ ಅತ್ಯಂತ ಭರವಸೆಯ ವಾಹನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಹೆಸರಾಂತ ವಾಹನ ತಯಾರಕರು ದೇಶದಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಲು ಪ್ರಯತ್ನಿಸುತ್ತಾರೆ. ಆದರೆ ದೇಶದ ಯಾವ ಭಾಗಗಳಲ್ಲಿ ಪ್ರಯಾಣಿಕರ ವಾಹನಗಳಿಗೆ ಗರಿಷ್ಠ ಬೇಡಿಕೆ ಇದೆ ಗೊತ್ತಾ..? ಈ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. 2021 ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಕಾರು ಮಾರಾಟವನ್ನು ಹೊಂದಿರುವ ದೇಶದ ಟಾಪ್‌ ಪ್ರದೇಶಗಳು ಇಲ್ಲಿವೆ.

  ಇಡೀ ದೇಶದಲ್ಲಿ ಮಾರಾಟವಾದ 10 ಕಾರುಗಳಲ್ಲಿ 6 ಕಾರುಗಳು ಭಾರತದ ಪ್ರಮುಖ ನಗರಗಳಲ್ಲಿ ಮಾರಾಟವಾಗುತ್ತವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಕಾರು ತಯಾರಕರು ತಮ್ಮ ಕೊಡುಗೆಗಳನ್ನು ದೇಶದ ಟಾಪ್‌ನಗರಗಳಲ್ಲಿ ಮೊದಲು ಅನಾವರಣಗೊಳಿಸುತ್ತಾರೆ. ಯಾವುದೇ ಕಾರು ಮಾರಾಟದ ಹೊಸ ಕಂಪನಿಯಾದರೂ ಸರಿಯೇ ಮೊದಲು ತನ್ನ ನೆಟ್‌ವರ್ಕ್ ಅನ್ನು ದೇಶದ ಈ ಪ್ರಮುಖ ನಗರಗಳಲ್ಲಿ ಅಭಿವೃದ್ಧಿಪಡಿಸುತ್ತಾರೆ ಮತ್ತು ನಂತರ ಕ್ರಮೇಣ ರಾಷ್ಟ್ರದ ಉಳಿದ ಭಾಗಗಳಿಗೆ ವಿಸ್ತರಿಸುತ್ತಾರೆ.

  ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​​ಗೆ ಜಯಭೇರಿ; ಗೆಲುವು ಸಂಭ್ರಮಿಸಲು ಅಭ್ಯರ್ಥಿಯೇ ಇಲ್ಲ...!

  autopunditz.com ಪ್ರಕಾರ, ದೇಶದ ಪ್ರಮುಖ ನಗರಗಳು ಯುಟಿಲಿಟಿ ವಾಹನಗಳು, ಪ್ರೀಮಿಯಂ ಸೆಡಾನ್‌ಗಳು ಮತ್ತು ಐಷಾರಾಮಿ ಹ್ಯಾಚ್‌ಬ್ಯಾಕ್‌ಗಳಿಗೆ ಗರಿಷ್ಠ ಬೇಡಿಕೆಯನ್ನು ಉಂಟುಮಾಡುತ್ತವೆ.

  2021 ರ ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್‌ಸಿಆರ್ ಪ್ರದೇಶವು ಈ ವಿಷಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾರತದ ರಾಜಧಾನಿ ನವದೆಹಲಿಯು 1,28,907 ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಮೊದಲು ರಾಷ್ಟ್ರ ರಾಜಧಾನಿ ಕಾರು ಮಾರಾಟದಲ್ಲಿ ನಂ. 1 ಸ್ಥಾನ ಪಡೆದುಕೊಂಡಿತ್ತಾದರೂ, ಈಗ ಎನ್‌ಸಿಆರ್‌ ಪ್ರದೇಶವು ನವದೆಹಲಿಯನ್ನು ಹಿಂದಿಕ್ಕಿದೆ.

  ಇನ್ನು, ದಕ್ಷಿಣ ಭಾರತದಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈ ಅನೇಕ ವಾಹನ ತಯಾರಕರ ಸೌಲಭ್ಯಗಳನ್ನು ಹೊಂದಿದ್ದು, ದೇಶದ ಶೇಕಡಾ 30 ರಷ್ಟು ಕಾರು ಉತ್ಪಾದನಾ ಚಟುವಟಿಕೆಗಳಿಗೆ ನಗರವು ನೆಲೆಯಾಗಿದೆ. ಆದರೆ, ದೇಶದಲ್ಲಿ ಕಾರು ಮಾರಾಟಕ್ಕೆ ಬಂದಾಗ ಈ ಮಹಾನಗರ 8 ನೇ ಸ್ಥಾನವನ್ನು ಗಳಿಸಿದೆ.

  ಬೆಂಗಳೂರಿಗೆ ಮೂರನೇ ಸ್ಥಾನ
  ಬೆಂಗಳೂರು ಕಾರು ಮಾರಾಟದ ವಿಚಾರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಅಚ್ಚರಿಯ ಸಂಗತಿಯೆಂದರೆ, ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ದೇಶದ ಪ್ರಮುಖ ಕಾರು ಕಂಪನಿಯಾದ ಮಾರುತಿ ಕರ್ನಾಟಕದ ರಾಜಧಾನಿಯಲ್ಲಿ ಪ್ರಮುಖ ಕಾರು ಮಾರಾಟಗಾರರಲ್ಲ ಎಂಬುದು ಸಹ ಬೆಳಕಿಗೆ ಬಂದಿದೆ.
  Published by:Latha CG
  First published: