Smartphones: ಜನವರಿ ಅಂತ್ಯದೊಳಗೆ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿವೆ ಈ ಸ್ಮಾರ್ಟ್‌ಫೋನ್‌ಗಳು..!

ಜನವರಿ 2022 ಪ್ರಗತಿಯಲ್ಲಿದ್ದು, ಸ್ಮಾರ್ಟ್‌ಫೋನ್‌ ಪ್ರಪಂಚದಲ್ಲಿ ದೊಡ್ಡ ಬಿಡುಗಡೆಗಳು ಇನ್ನೂ ಬಾಕಿಯಿವೆ. ಶಿಯೋಮಿ ತನ್ನ ಉತ್ಕೃಷ್ಟ ದರ್ಜೆಯ ಶಿಯೋಮಿ 11ಟಿ ಪ್ರೋ ಬಿಡುಗಡೆ ಕುರಿತು ಪ್ರಕಟಣೆಗೆ ಸಿದ್ಧವಾಗಿದ್ದರೆ, ರಿಯಲ್ ಮಿ ತನ್ನ ಭಾರತೀಯ ಆವೃತ್ತಿಯನ್ನು ಮಿತವ್ಯಯದ ರಿಯಲ್ ಮಿ 9ಐ ಸ್ಮಾರ್ಟ್ ಫೋನ್ ಬಿಡುಗಡೆ ಮೂಲಕ ಶುರು ಮಾಡಲು ವ್ಯಾಪಕ ತಯಾರಿ ಮಾಡಿಕೊಂಡಿದೆ.

Xiaomi 11T Pro / ಶಿಯೋಮಿ 11ಟಿ ಪ್ರೋ

Xiaomi 11T Pro / ಶಿಯೋಮಿ 11ಟಿ ಪ್ರೋ

 • Share this:
  ಹೊಸ ವರ್ಷ (New Year) ಆರಂಭವಾಗಿ ಇನ್ನು 2 ವಾರಗಳಾಗಿಲ್ಲ, ಅದಾಗಲೇ ಮಾರುಕಟ್ಟೆಯ ಕಾರ್ಯಚಟುವಟಿಕೆಗಳು ಬಿರುಸುಗೊಂಡಿವೆ. ಯಾವ ಮಾರುಕಟ್ಟೆ (Market) ಎಂದು ಗೊಂದಲಕ್ಕೀಡಾದಿರಾ? ಮತ್ಯಾವುದೂ ಅಲ್ಲ; ಸ್ಮಾರ್ಟ್‌ಫೋನ್ (Smartphone)‌ ಮಾರುಕಟ್ಟೆ!!. ಕಳೆದ 12 ದಿನಗಳಲ್ಲಿ ಎಲ್ಲ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಅಸಂಖ್ಯಾತ ಸ್ಮಾರ್ಟ್‌ಫೋನ್‌ ಮಾದರಿಗಳನ್ನು ಬಿಡುಗಡೆ ಮಾಡಿರುವುದನ್ನು ನಾವೀಗಾಗಲೇ ಕಂಡಿದ್ದೇವೆ. ಎಲ್ಲ ಕಂಪನಿಗಳೂ (Companies) ದರಗಳ ವಿಚಾರದಲ್ಲಿ ಒಂದಿಷ್ಟು ಹೊಸತನ್ನು ತರಲು ಪ್ರಯತ್ನಿಸಿವೆ. ಒಂದು ವೇಳೆ ನೀವೇನಾದರೂ ಶಿಯೋಮಿ 11 ಹೈಪರ್ ಚಾರ್ಜ್ (Xiaomi 11 Hyper Charge), ಮೋಟೊ ಜಿ71 (Moto G71) ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್21 ಎಫ್ಇ (Samsung Galaxy S21 FE) ಮಾತ್ರ ಈ ತಿಂಗಳ ದೊಡ್ಡ ಮಾರುಕಟ್ಟೆ ಬಿಡುಗೆಗಳು ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು ತಿಳಿವಳಿಕೆಯಾಗಿದೆ.

  ಜನವರಿ 2022 ಪ್ರಗತಿಯಲ್ಲಿದ್ದು, ಸ್ಮಾರ್ಟ್‌ಫೋನ್‌ ಪ್ರಪಂಚದಲ್ಲಿ ದೊಡ್ಡ ಬಿಡುಗಡೆಗಳು ಇನ್ನೂ ಬಾಕಿಯಿವೆ. ಶಿಯೋಮಿ ತನ್ನ ಉತ್ಕೃಷ್ಟ ದರ್ಜೆಯ ಶಿಯೋಮಿ 11ಟಿ ಪ್ರೋ ಬಿಡುಗಡೆ ಕುರಿತು ಪ್ರಕಟಣೆಗೆ ಸಿದ್ಧವಾಗಿದ್ದರೆ, ರಿಯಲ್ ಮಿ ತನ್ನ ಭಾರತೀಯ ಆವೃತ್ತಿಯನ್ನು ಮಿತವ್ಯಯದ ರಿಯಲ್ ಮಿ 9ಐ ಸ್ಮಾರ್ಟ್ ಫೋನ್ ಬಿಡುಗಡೆ ಮೂಲಕ ಶುರು ಮಾಡಲು ವ್ಯಾಪಕ ತಯಾರಿ ಮಾಡಿಕೊಂಡಿದೆ. ಐಕ್ಯೂಒಒ ಕೂಡಾ ತನ್ನ iQOO 9 ಸರಣಿ ಬಿಡುಗಡೆಯ ಬಗ್ಗೆ ಜಾಹೀರಾತು ನೀಡಿದ್ದರೂ, ನಿರ್ದಿಷ್ಟವಾಗಿ ಯಾವ ದಿನಾಂಕದಂದು ಬಿಡುಗಡೆಯಾಗುತ್ತದೆ ಎಂಬ ಕುರಿತು ಇನ್ನಷ್ಟೇ ಪ್ರಕಟಿಸಬೇಕಿದೆ.

  ಒಂದು ವೇಳೆ ನೀವು ಜನವರಿ 2022ರಲ್ಲಿ ಈ ಹೊಸ ಬಿಡುಗಡೆಗಳ ಬಗ್ಗೆ ಯೋಜನೆ ಹೊಂದಿದ್ದರೆ, ಮುಂದೆ ಬಿಡುಗಡೆಯಾಗಲಿರುವ ಈ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕುರಿತು ತಿಳಿಯಿರಿ:

  ರಿಯಲ್ ಮಿ 9ಐ:ಈ ಸ್ಮಾರ್ಟ್‌ಫೋನ್‌ ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು, ಭಾರತಕ್ಕೂ ಯಾವುದೇ ಬದಲಾವಣೆ ಇಲ್ಲದೆ ಆಗಮಿಸುವ ನಿರೀಕ್ಷೆ ಇದೆ. ಇದರರ್ಥ, ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್ ಡ್ರ್ಯಾಗನ್ 680 ಚಿಪ್, 6.6 ಇಂಚಿನ ಎಫ್ಎಚ್‌ಡಿ+90 ಹರ್ಟ್ಜ್ ಎಲ್‌ಸಿಡಿ ಡಿಸ್ಪ್ಲೇ, 33 ವ್ಯಾಟ್ ಸಾಮರ್ಥ್ಯದ ವೇಗವಾಗಿ ಚಾರ್ಜ್ ಆಗುವ 5000ಎಂಎಎಚ್ ಬ್ಯಾಟರಿ, ಆ್ಯಂಡ್ರಾಯ್ಡ್ ಆಧಾರಿತ ರಿಯಲ್ ಮಿ ಯುಐ 2 ಬೇಸ್ ಹೊಂದಿರಲಿದೆ. ನೀವು 50ಎಂಪಿ ಮುಖ್ಯ+2ಎಂಪಿ ಹಿರಿದಾದ+2ಎಂಪಿ ಕಪ್ಪುಬಿಳುಪು ಸೆನ್ಸರ್ ಹಾಗೂ 16 ಎಂಪಿಯ ಕ್ಯಾಮೆರಾ ಕೂಡಾ ಪಡೆಯಲಿದ್ದೀರಿ.

  ಈ ಸ್ಮಾರ್ಟ್‌ಫೋನ್‌ ‘ಐ’ ಸರಣಿಯ ಸಾಧನವಾಗಿರುವುದನ್ನು ಪರಿಗಣನೆಗೆ ತೆಗೆದುಕೊಂಡರೆ, ಇದರ ಮಾರುಕಟ್ಟೆ ದರವೂ ಮೋಟೊ ಜಿ31 ಹಾಗೂ ಇನ್ಫಿನಿಕ್ಸ್ ನೋಟ್ 11ನ ದರದಷ್ಟೇ ಇರುವ ಸಾಧ್ಯತೆಯನ್ನು ನಿರೀಕ್ಷಿಸಬಹುದಾಗಿದೆ.

  ಇದನ್ನು ಓದಿ:  OnePlus: ಇನ್ಮುಂದೆ ಭಾರತದ ಗ್ರಾಹಕರಿಗೆ OnePlus 9R ಸಿಗುವುದಿಲ್ಲವಂತೆ..! ಅದಕ್ಕೆಂದೇ ಕಂಪನಿ ಹೊರ ತರುತ್ತಿದೆ ಹೊಸ ಸ್ಮಾರ್ಟ್‌ಫೋನ್

  ಡ್ರ್ಯಾಗನ್ ಬಾಲ್ ಆವೃತ್ತಿಯ ರಿಯಲ್ ಮಿ ಜಿಟಿ ನಿಯೋ 2:ರಿಯಲ್ ಮಿ ನಿಯೋ 2 ಹೊಸ ಅವೃತ್ತಿಯೇನೂ ಅಲ್ಲದಿದ್ದರೂ, ಈ ಆವೃತ್ತಿಯನ್ನು ಡ್ರ್ಯಾಗನ್ ಬಾಲ್ ಜೆಡ್ ಆವೃತ್ತಿಯೊಂದಿಗೆ ಭಾರತದಲ್ಲಿ ಪರಿಚಯಿಸುವುದಾಗಿ ಜಾಹೀರಾತು ನೀಡುತ್ತಲೇ ಇದೆ. ಈ ಸ್ಮಾರ್ಟ್‌ಫೋನ್‌ ವೈಶಿಷ್ಟಗಳಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲದಿದ್ದರೂ, ಆಸ್ವಾದನೀಯ ಡ್ರ್ಯಾಗನ್ ಬಾಲ್ ಜೆಡ್‌ನಿಂದ ಪ್ರೇರಿತಗೊಂಡಿರುವ ಪೇಯಿಂಟ್ ಜಾಬ್ ವೈಶಿಷ್ಟ್ಯ ಹೊಂದಿರುವ ಹಿಂಬದಿಯನ್ನು ಹೊಂದಿರಲಿದೆ. ಬಳಕೆದಾರರು ಈ ಅನಿಮೇಷನ್ ಕಾರ್ಟೂನ್ ಸರಣಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ವಿಶೇಷ ವಿನ್ಯಾಸಗಳ ಮೂಲಕ ಸಂಭ್ರಮಿಸಬಹುದಾಗಿದೆ.

  ಶಿಯೋಮಿ 11ಟಿ ಪ್ರೋ: ಈ ಆವೃತ್ತಿಯು ತೀರಾ ತಡವಾಗಿ ಭಾರತವನ್ನು ಪ್ರವೇಶಿಸುತ್ತಿದ್ದರೂ, ಈಗಾಗಲೇ ಹಳತಾಗಿರುವ ಎಂಐ 11ಎಕ್ಸ್ ಪ್ರೋ ಬದಲಿಯಾಗುವ ಸಾಧ್ಯತೆ ಇದೆ.

  ಇದನ್ನು ಓದಿ: Realme: ಶೀಘ್ರದಲ್ಲೇ ಜಾಗತಿಕವಾಗಿ ಲಾಂಚ್ ಆಗಲಿರುವ Realme GT 2: ಕಂಪನಿಯ ಮುಂದಿನ ಯೋಜನೆಗಳೇನು?

  ಐಕ್ಯೂಒಒ 9 ಸರಣಿ: ಐಕ್ಯೂಒಒ ತನ್ನ ಐಕ್ಯೂಒಒ 9 ಸರಣಿಯ ಬಿಡುಗಡೆ ಬಗ್ಗೆ ಇನ್ನಷ್ಟೇ ಪ್ರಕಟಿಸಬೇಕಿದ್ದರೂ, “ಶೀಘ್ರದಲ್ಲೇ ಬರಲಿದೆ” ಎಂಬ ಜಾಹೀರಾತುಗಳು ಅದರ ಬಿಡುಗಡೆ ಇನ್ನು ಕೆಲವೇ ವಾರಗಳಲ್ಲಿ ಆಗಬಹುದು ಎಂಬ ಸುಳಿವನ್ನು ನೀಡುತ್ತಿವೆ.
  Published by:Harshith AS
  First published: