ಇತ್ತೀಚೆಗ ವಾಟ್ಸಾಪ್ (WhatsApp) ಬಳಕೆದಾರರ ಸಂಖ್ಯೆ ತುಂಬಾನೇ ಹೆಚ್ಚಾಗಿದೆ. ಆದರೆ ಈ ಬೆಳವಣಿಗೆಯನ್ನು ಗಮನಿಸಿದ ಕೆಲವಂಚಕರು ವಾಟ್ಸಾಪ್ ಅನ್ನು ದುರುಪಯೋಗ ಮಾಡ್ತಾ ಇದ್ದಾರೆ. ಇತ್ತೀಚೆಗೆ ಟೆಕ್ನಾಲಜಿಯಲ್ಲಿ (Technology) ಬಳಕೆದಾರರಿಗಿಂತ ಹ್ಯಾಕರ್ಸ್ಗಳ ಸಂಖ್ಯೆ ಹೆಚ್ಚಾಗಿದೆ ಅಂತ ಹೇಳ್ಬಹುದು. ಯಾಕೆಂದರೆ ಎಲ್ಲಿ ಹೋದರೂ ಈಗ ಹ್ಯಾಕ್ ಹ್ಯಾಕ್ (Hack) ಎಂಬ ಸುದ್ದಿಯನ್ನೇ ಕೇಳುತ್ತಿದ್ದೇವೆ. ಆದರೆ ಇದೀಗ ವಿಡಿಯೋ ಕಾಲ್ (Video Call) ಮೂಲಕವೂ ಜನರನ್ನು ಮೋಸ ಮಾಡುತ್ತಿದ್ದಾರೆ. ವಾಟ್ಸಾಪ್ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ಸ್ಗಳನ್ನು (Features) ಬಿಡುಗಡೆ ಮಾಡಿದೆ. ಆದರೆ ಇದನ್ನು ಗಮನಿಸದ ಕೆಲ ಬಳಕೆದಾರರು ಈ ರೀತಿಯ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಇದೀಗ ವಾಟ್ಸಾಪ್ನಲ್ಲೊಂದು ಅಚ್ಚರಿಯ ಘಟನೆ ನಡೆದಿದೆ.
ಪ್ರಸ್ತುತ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇದೆ. ಅದೇ ರೀತಿ ವಾಟ್ಸಾಪ್ ಕೂಡ ಇದೆ. ಹೀಗೆ ಸ್ನೇಹಿತರ ಜೊತೆ, ಕುಟುಂಬದವರ ಜೊತೆ ವಿಡಿಯೋ ಕಾಲ್ನಲ್ಲಿ ಸಾಮಾನ್ಯವಾಗಿ ಮಾತನಾಡುತ್ತಾರೆ. ಆದರೆ ಇಲ್ಲೊಬ್ಬರು ಅಪರಿಚಿತ ಹುಡುಗಿಯ ಜೊತೆ ವಿಡಿಯೋ ಕಾಲ್ನಲ್ಲಿ ಮಾತಾಡಿ ಲಕ್ಷ ಲಕ್ಷ ದುಡ್ಡು ಕಳೆದುಕೊಂಡಿದ್ದಾರೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ವಿಡಿಯೋ ಕಾಲ್ ಮಾಡಿದ ಸುಂದರ ಹುಡುಗಿ
ಇತ್ತೀಚೆಗೆ ಈ ಹುಡುಗಿಯರನ್ನು ಬಳಸಿ ಅಮಾಯಕ ಯುವಕರನ್ನು ಕೆಲ ಕಿಡಿಗೇಡಿಗಳು ಮೋಸ ಮಾಡುತ್ತಿದ್ದಾರೆ. ಇದರಿಂದ ಕೆಲವರು ಮೋಸನೂ ಹೋಗಿದ್ದಾರೆ. ಇದೇ ರೀತಿಯಲ್ಲಿ ಹರಿಯಾಣದ ಸುಂದರವಾದ ಹುಡುಗಿಯೊಬ್ಬಳು ಉದ್ಯಮಿಯೋರ್ವರಿಗೆ ಪದೇ ಪದೇ ವಿಡಿಯೋ ಕಾಲ್ ಮಾಡಿ ಬರೋಬ್ಬರಿ 6 ಲಕ್ಷದ 36 ಸಾವಿರ ರೂಪಾಯಿ ಹಣವನ್ನು ದೋಚಿದ್ದಾರೆ.
ಇದನ್ನೂ ಓದಿ: 14 ದಿನಗಳ ಬ್ಯಾಟರಿ ಬ್ಯಾಕಪ್ ಹೊಂದಿರುವ ಸ್ಮಾರ್ಟ್ಬ್ಯಾಂಡ್ ಲಾಂಚ್! ಇಲ್ಲಿದೆ ಕಂಪ್ಲೀಟ್ ಮಾಹಿತಿ
ವಿಡಿಯೋಕಾಲ್ ಅನ್ನು ರೆಕಾರ್ಡ್ ಮಾಡಿಕೊಂಡ ಹುಡುಗಿ
ಉದ್ಯಮಿ ರೇವಾರಿಯ ಧರುಹೆಡಾ ಪಟ್ಟಣದ ನಿವಾಸಿವಾಗಿದ್ದು, ಇವರು ಮನೆಯಲ್ಲಿದ್ದಾಗ ಒಬ್ಬಳು ಅಪರಿಚಿತ ಹುಡುಗಿ ಒಮ್ಮೆ ವಿಡಿಯೋ ಕಾಲ್ ಮಾಡಿದ್ದಳು. ಆದರೆ ಇದನ್ನು ಅವರು ನಿರ್ಲಕ್ಷಿಸಿದ್ದರಂತೆ. ಆದರೆ ಮತ್ತೆ ಪದೇ ಪದೇ ವಿಡಿಯೋ ಕಾಲ್ ಮಾಡಿದಾಗ ರಿಸೀವ್ ಮಾಡಿ ಮಾತಾಡಿದಾಗ, ಅವಳು ರೆಕಾರ್ಡ್ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಆ ನಂತರ ಆ ವಿಡಿಯೋವನ್ನು ಹಿಡಿದುಕೊಂಡು ಮೋಸ ಮಾಡಿದ್ದಾಳೆ ಎಂದಿದ್ದಾರೆ. ಜೊತೆಗೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ.
ವಿಡಿಯೋ ಎಡಿಟ್ ಮಾಡಿ ವಂಚನೆ
ಉದ್ಯಮಿಗೆ ಪದೇ ಪದೇ ಕಾಲ್ ಬಂದಾಗ ನಂತರದಲ್ಲಿ ಸ್ವಿಕಾರ ಮಾಡಿದರಂತೆ. ಇದನ್ನು ಆಕೆ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ತನಗೆ ಬೇಕಾದ ಹಾಗೆ ಅಶ್ಲೀಲವಾಗಿ ಎಡಿಟ್ ಮಾಡಿಕೊಂಡಿದ್ದಾಳೆ. ಎಡಿಟ್ ಮಾಡಿದ ವಿಡಿಯೋವನ್ನು ಉದ್ಯಮಿಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ. ಈ ಮೂಲಕ ಆಕೆ ಉದ್ಯಮಿಯ ಬಳಿ ಮೊದಲ ಬಾರಿಗೆ ಡಿಸೆಂಬರ್ 13 ರಂದು ಹಣ ಕೇಳಿದ್ದಾಳೆ. ಮೊದಲ ಬಾರಿ ಕೇಳಿದಾಗ ಉದ್ಯಮಿ ಅವಳಿಗೆ 1 ಲಕ್ಷದ 36 ಸಾವಿರ ಹಣ ನೀಡಿದ್ದಾರೆ.
ಲಕ್ಷ ಲಕ್ಷ ಹಣ ನೀಡಿದರೂ ಸುಮ್ಮನಾಗಲಿಲ್ಲ
ಇನ್ನು ಆಕೆ ಕೇಳಿದಷ್ಟೇ ಹಣ ನೀಡಿದರೂ ಸಹ ಮತ್ತೆ ಅದೇ ತಂಡದ ಯುವಕನೊಬ್ಬ ಕರೆ ಮಾಡಿ ಮತ್ತೆ 4.5 ಲಕ್ಷ ರೂ. ಗಳನ್ನು ಕೇಳಿದ್ದಾನೆ. ಇದಕ್ಕೂ ಮೊದಲು ಆತ ಪೊಲೀಸ್ ಅಧಿಕಾರಿ ಎಂದು ಹೇಳಿ ಉದ್ಯಮಿಗೆ ಭಯ ಉಂಟು ಮಾಡಿದ್ದಾನೆ. ಹಾಗೆಯೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾನೆ. ಇದರಿಂದ ಭಯಗೊಂಡ ಉದ್ಯಮಿ ಆತ ಕೇಳಿದಷ್ಟು ಹಣವನ್ನು ಆ ವಂಚಕರಿಗೆ ನೀಡಿದ್ದಾರೆ.
6 ಲಕ್ಷದ 36 ಸಾವಿರ ರೂಪಾಯಿ ವಂಚನೆ
ಈ ಎಲ್ಲಾ ಘಟನೆಗಳು ನಡೆದ ನಂತರ ಮತ್ತೆ ಕಿಡಿಗೇಡಿಗಳು ಉದ್ಯಮಿಗೆ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಹೀಗೆ ಒಟ್ಟು 6 ಲಕ್ಷದ 36 ಸಾವಿರ ರೂಪಾಯಿಯಷ್ಟು ಹಣವನ್ನು ಪೀಕಿದ್ದಾರೆ. ಈ ಘಟನೆಯನ್ನು ಅರಿತ ಅಮಾಯಕ ಉದ್ಯಮಿ ನಂತರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಇದೀಗ ಹಣ ಟ್ರಾನ್ಸ್ಫರ್ ಮಾಡಿದ ಬ್ಯಾಂಕ್ ಖಾತೆಗಳನ್ನು ಪರೀಕ್ಷಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ