• Home
 • »
 • News
 • »
 • tech
 • »
 • WhatsApp ತರುತ್ತಿದೆ ಮತ್ತೊಂದು ಹೊಸ ಫೀಚರ್ಸ್, ಒಮ್ಮೆ ಸೆಂಡ್‌ ಮಾಡಿದ ಮೆಸೇಜ್‌ ಮತ್ತೆ ಎಡಿಟ್‌ ಮಾಡ್ಬಹುದಂತೆ!

WhatsApp ತರುತ್ತಿದೆ ಮತ್ತೊಂದು ಹೊಸ ಫೀಚರ್ಸ್, ಒಮ್ಮೆ ಸೆಂಡ್‌ ಮಾಡಿದ ಮೆಸೇಜ್‌ ಮತ್ತೆ ಎಡಿಟ್‌ ಮಾಡ್ಬಹುದಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾಟ್ಸಾಪ್‌ ದಿನದಿಂದ ದಿನಕ್ಕೆ ಒಂದಲ್ಲ ಒಂದು ಫೀಚರ್‌ಗಳನ್ನು ನೀಡುತ್ತಾ ಬರುತ್ತಿದೆ. ಈ ರೀತಿ ಮಾಡುವುದರಿಂದಲೇ ವಾಟ್ಸಾಪ್ ಜನರನ್ನು ತನ್ನತ್ತ ಆಕರ್ಷಿಸಿದೆ. ಈಗ ಮತ್ತೊಂದು ಹೊಸ ಫೀಚರ್ಸ್‌ ಬಂದಿದೆ!

 • Share this:

  ಮೆಟಾ (Meta) ಅಸ್ಥಿತ್ವದಲ್ಲಿರುವ ಮೆಸೇಜಿಂಗ್‌ ಆ್ಯಪ್‌ಗಳಲ್ಲಿ (Messaging Apps) ವಾಟ್ಸಾಪ್ ಕೂಡ ಒಂದು. ಇದು ಈಗಿನ ಬಳಕೆದಾರರು ಬಳಸುತ್ತಿರುವ ಪ್ರಸಿದ್ಧ ಮೆಸೇಜಿಂಗ್‌ ಆ್ಯಪ್‌ಗಳಲ್ಲಿ ಒಂದಾಗಿದೆ. ಈ ವಾಟ್ಸಾಪ್‌ (WhatsApp) ದಿನದಿಂದ ದಿನಕ್ಕೆ ಒಂದಲ್ಲ ಒಂದು ಫೀಚರ್‌ಗಳನ್ನು ನೀಡುತ್ತಾ ಬರುತ್ತಿದ್ದಾರೆ. ಈ ರೀತಿ ಮಾಡುವುದರಿಂದಲೇ ವಾಟ್ಸಾಪ್‌ ಜನರನ್ನು ತನ್ನತ್ತ ಆಕರ್ಷಿಸಿದೆ. ವಿಶೇಷ ಎಂದರೆ ಈ ವರ್ಷ ವಾಟ್ಸಾಪ್‌ ಅತೀ ಹೆಚ್ಚು ಅಪ್ಡೇಟ್‌ಗಳನ್ನು ಮಾಡಿ ಗ್ರಾಹಕರ ನೆಚ್ಚಿನ ಆ್ಯಪ್‌ ಆಗಿದೆ. ಇದು ಹೊಸ ಹೊಸ ಅಪ್ಡೇಟ್‌ಗಳನ್ನು (Update) ಗ್ರಾಹಕರಿಗೆ ನೀಡುತಾ ಬರುತ್ತಿದೆ ಇದರಿಂದ ಇನ್ನು ಮುಂದಿನ ದಿನಗಳಲ್ಲಿ ವಾಟ್ಸಾಪ್‌ ತಂತ್ರಜ್ಞಾನ (Technical) ಯುಗದಲ್ಲಿ ಹೊಸ ದಾಖಲೆಯನ್ನು ರೂಪಿಸಲಿದೆ ಎಂದು ವರದಿ ನೀಡಿದ್ದಾರೆ.


  ಮೆಸೇಜ್‌ನಲ್ಲಿ ಎಮೋಜಿ ರಿಯಾಕ್ಷನ್​ ಅನ್ನು ಬಹಳಷ್ಟು ಅಪ್ಡೇಟ್‌ ಮಾಡಿದುವುದರ ಜೊತೆಗೆ ಮೆಸೇಜ್ ಡಿಲೀಟ್ ಮಾಡುವ ಸಮಯವನ್ನು ಹೆಚ್ಚಿಸಿದೆ. ಇದಲ್ಲದೆ ಗ್ರೂಪ್ ಅಡ್ಮಿನ್​ಗೆ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ ಹೀಗೆ ಅನೇಕ ಫೀಚರ್​ಗಳನ್ನು ಪರಿಚಯಿಸಿದೆ.


  ಏನಿದು ಹೊಸ ಫೀಚರ್?


  ಈ ಎಲ್ಲಾ ಫೀಚರ್ಸ್‌ಗಳ ನಡುವೆ ಇನ್ನೋಂದು  ಅಪ್ಡೇಟ್ ತರಲು ವಾಟ್ಸಾಪ್ ಮುಂದಾಗಿದೆ. ಅದುವೇ ಎಡಿಟ್ ಆಯ್ಕೆ (Edit Feature). ಅಂದರೆ ನೀವು ವಾಟ್ಸಾಪ್​ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡಬಹುದಾಗಿದೆ. ಹಿಂದೆ ನೀವು ಒಮ್ಮೆ ಮೆಸೇಜ್‌ ಕಳುಹಿಸಿದರೆ ಯಾವುದೇ ರೀತಿಯಲ್ಲೂ ಎಡಿಟ್‌ ಮಾಡಲು ಆಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ನಿಮ್ಮ ವಾಟ್ಸಾಪ್‌ನಲ್ಲಿ ಕಳುಹಿಸಿದ ಮೆಸೇಜ್‌ ಅನ್ನು ಎಡಿಟ್‌ ಮಾಡುವ ಅವಕಾಶಗಳಿವೆ.


  ಇದನ್ನೂ ಓದಿ: ವಾಟ್ಸಪ್​​ಗೂ ಬಡಿದ ಗ್ರಹಣ, ಗ್ರೂಪ್ ಮೆಸೇಜ್​ಗಳಿಗೆ ಬ್ರೇಕ್!


  a-brand-new-feature-has-arrived-on-whatsapp-a-message-sent-once-can-be-edited-again
  ಸಾಂದರ್ಭಿಕ ಚಿತ್ರ


  ಈ ಬಗ್ಗೆ ವಾಬೇಟಾ ಇನ್ಫೋ ದ (WaaBetaInfo) ವರದಿ


  ಈ ಬಗ್ಗೆ ವಾಬೇಟಾಇನ್​ಫೊ (WaBetaInfo) ವರದಿ ಮಾಡಿದ್ದು, ವಾಟ್ಸಾಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಲಭ್ಯವಿದೆ.


  ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ. ಇನ್ನುಮುಂದೆ ಈ ಎಡಿಟ್‌ ಮಾಡುವ ಫೀಚರ್‌ಗಳು ಹೆಚ್ಚು ಬಳಕೆದಾರರಿಗೆ ಉಪಯೋಗವಾಗಲಿದೆ.


  ವಾಟ್ಸಾಪ್‌ ಗ್ರೂಪ್‌ಗೆ ಸಂಬಂಧಿಸಿದ ಅಪ್ಡೇಟ್


  ಇನ್ನು ವಾಟ್ಸಾಪ್ ಗ್ರೂಪ್ ವಿಚಾರಕ್ಕೆ ಸಂಬಂಧಿಸಿದಂತೆ ನೂತನ ಆಯ್ಕೆಯನ್ನು ಬಿಡುಗಡೆ ಮಾಡಲು ವಾಟ್ಸಾಪ್ ತಯಾರಿ ನಡೆಸಿದೆ. ವಾಟ್ಸಪ್ ತನ್ನ ನೂತನ ಅಪ್‌ಡೇಟ್‌ನಲ್ಲಿ ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಿಸಲಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ವಾಟ್ಸಾಪ್​​ ಗ್ರೂಪ್‌ಗೆ 256 ಸದಸ್ಯರನ್ನು ಸೇರಿಸಲು ಅವಕಾಶ ಇತ್ತು. ಬಳಿಕ ಆ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಿತ್ತು. ಈಗ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. ಇದರಿಂದ ವಾಟ್ಸಾಪ್‌ ಬಳಕೆದಾರರಿಗೆ ತಮ್ಮ ಗ್ರೂಪ್‌ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಸಹಾಯವಾಗುತ್ತದೆ.


  a-brand-new-feature-has-arrived-on-whatsapp-a-message-sent-once-can-be-edited-again
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಜಾಹೀರಾತು ಬಾರದಂತೆ ಮಾಡ್ಬೇಕಾ? ಈ ಟ್ರಿಕ್ಸ್‌ ಬಳಸಿ ಆ್ಯಡ್ಸ್​ ಬ್ಲಾಕ್‌ ಮಾಡಿ!


  ವಾಬೇಟಾಇನ್ಫೊ(WaBetaInfo) ನ ವರದಿಯ ಪ್ರಕಾರ, ವಾಟ್ಸಾಪ್​​ ಗ್ರೂಪ್‌ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿದೆ ಎಂದು ಹೇಳಲಾಗಿದೆ. ಆದಷ್ಟು ಬೇಗ ಈ ನೂತನ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.


  ಇದಲ್ಲದೆ ಕಳೆದ ವಾರ ತಮ್ಮ ಪ್ರೊಫೈಲ್‌ನಲ್ಲಿ ಕಾಣುವಂತಹ ಲಾಸ್ಟ್‌ ಸೀನ್‌ ಬಗ್ಗೆ ಅಪ್ಡೇಟ್‌ ಮಾಡಿತ್ತು. ಏನೆಂದರೆ ನೀವು ವಾಟ್ಸಪ್‌ನಲ್ಲಿ ಆನ್‌ಲೈನ್‌ನಲ್ಲಿದ್ದರೂ ಆನ್‌ಲೈನ್‌ ತೋರಿಸದೇ  ಲಾಸ್ಟ್‌ ಸೀನ್‌ ಮಾತ್ರ ತೋರಿಸುವಂತೆ ಸೆಟ್ಟಿಂಗ್‌ ಮಾಡಿ ಇಡಬಹುದು

  Published by:Harshith AS
  First published: