• Home
  • »
  • News
  • »
  • tech
  • »
  • CCI Penalty On Google: ಗೂಗಲ್​​ಗೆ ಮತ್ತೊಮ್ಮೆ ಬಿತ್ತು 936 ಕೋಟಿ ದಂಡ! ಕಾರಣ ಇಲ್ಲಿದೆ

CCI Penalty On Google: ಗೂಗಲ್​​ಗೆ ಮತ್ತೊಮ್ಮೆ ಬಿತ್ತು 936 ಕೋಟಿ ದಂಡ! ಕಾರಣ ಇಲ್ಲಿದೆ

ಗೂಗಲ್ ಗೆ ದಂಡ ವಿಧಿಸಲಾಯಿತು.

ಗೂಗಲ್ ಗೆ ದಂಡ ವಿಧಿಸಲಾಯಿತು.

ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ ಗೂಗಲ್​ಗೆ 1337 ಕೋಟಿ ‘ದಂಡವನ್ನು ಕಟ್ಟಿತ್ತು ಆದರೆ ಈಗ ಮತ್ತೊಮ್ಮೆ ಭಾರತೀಯ ಸ್ಪರ್ಧಾ ಆಯೋಗ (CCI)  936.44 ಕೋಟಿ ರೂ. ದಂಡ ವಿಧಿಸಿದೆ. ಕಾರಣವೇನು ಗೊತ್ತಾ

  • Share this:

    ಸ್ಪರ್ಧಾ ವಿರೋಧಿ (Anti-Comparative) ಅಭ್ಯಾಸಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ ಗೂಗಲ್​ 1337 ಕೋಟಿ ‘ದಂಡವನ್ನು (Google Fine) ಕಟ್ಟಿತ್ತು ಆದರೆ ಈಗ ಮತ್ತೊಮ್ಮೆ ಭಾರತೀಯ ಸ್ಪರ್ಧಾ ಆಯೋಗ (CCI)  936.44 ಕೋಟಿ ರೂ. ದಂಡ ವಿಧಿಸಿದೆ.  ಪ್ಲೇ ಸ್ಟೋರ್ (Play Store) ನೀತಿಗಳಿಗೆ ಸಂಬಂಧಿಸಿ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ (Miss use) ಎಂದು ಹೇಳಿರುವ ಸಿಸಿಐ 936.44 ಕೋಟಿ ರೂ. ದಂಡ ವಿಧಿಸಿದೆ. ಜೊತೆಗೆ, ನ್ಯಾಯೋಚಿತವಲ್ಲದ (Unfair) ವ್ಯಾಪಾರದ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವಂತೆ CCI ಸೂಚಿಸಿದೆ.  ಗೂಗಲ್ ತನ್ನ ಈ ಅಬ್ಯಾಸದಿಂದ ಬಳಕೆದಾರರ ನಂಬಿಕೆಯನ್ನು (User Trust) ಕಳೆದುಕೊಳ್ಳುತ್ತಿದೆ. ಅದೆರೀತಿ ಹೆಚ್ಚಿನ ಉದ್ಯಮಿಗಳು (Business men) ಗೂಗಲ್​​ನ  ಬಳಕೆ ಮಾಡುತ್ತಿದ್ದರು (Google users). ಇಂತಹ ವಿಷಯಗಳನ್ನು ಕೇಳುತ್ತಿರುವಾಗ ಬಳಕೆದಾರರು ಗೂಗಲ್ ಬಳಸಲು ಹಿಂಜರಿಯುತ್ತಿದ್ದಾರೆ.


    ನಿಗದಿತ ಕಾಲಮಿತಿಯ ಒಳಗೆ ತನ್ನ ನಡವಳಿಕೆಯನ್ನು ಮಾರ್ಪಡುವಂತೆ ಗೂಗಲ್​ಗೆ CCI ಸೂಚಿಸಲಾಗಿದೆ ಎಂದು ಸಿಸಿಐ ಪ್ರಕಟಣೆ ತಿಳಿಸಿದೆ. ಒಂದು ವಾರದ  ಸಮಯದಲ್ಲಿ ಗೂಗಲ್ ವಿರುದ್ಧ ಸಿಸಿಐ ಕಠಿಣ ನಿಲುವು ತಳೆದ ಎರಡನೇ ಪ್ರಕರಣ ಇದಾಗಿದೆ.


    936 crore fine for Google Do you know the reason
    ಗೂಗಲ್ ಗೆ ದಂಡ ವಿಧಿಸಲಾಯಿತು


    ಸಿಸಿಐ ಎನು ಹೇಳಿದೆ ಗೊತ್ತಾ?


    ಆಂಡ್ರಾಯ್ಡ್ ಮೊಬೈಲ್ ಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಕ್ಟೋಬರ್ 20ರಂದು ಗೂಗಲ್​ಗೆ ಸಿಸಿಐ 1,337 ಕೋಟಿ ರೂ. ದಂಡ ವಿಧಿಸಿತ್ತು. ಜತೆಗೆ ಸ್ಪರ್ಧಾ ವಿರೋಧಿ ಅಭ್ಯಾಸಗಳನ್ನು ಮುಂದುವರಿಸಬೇಡಿ ಎಂಬ ಸೂಚನೆಯನ್ನು ನೀಡಿತ್ತು.


    ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್ ವಿರುದ್ಧ ಕೇಳಿಬಂದಿದ್ದ ದೂರುಗಳಿಗೆ ಸಂಬಂಧಿಸಿ 2020ರ ಕೊನೆಯಲ್ಲಿ ಸಿಸಿಐ ತನಿಖೆ ಆರಂಭವಾಯಿತು. ಪ್ಲೇಸ್ಟೋರ್​ನಲ್ಲಿ ಪಾವತಿ ಮಾಡಿದ ಆ್ಯಪ್​ಗಳಿಗಾಗಿ ಗೂಗಲ್​ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಮಾಡಿರುವುದು ಕಾನೂನು ಸಮ್ಮತವಲ್ಲದ ನಡವಳಿಕೆ ಎಂದು ಸಿಸಿಐ ಹೇಳಿದೆ.


    ಇದನ್ನೂ ಓದಿ: Google ಸಂಸ್ಥೆಗೆ ಬಿತ್ತು ಬರೋಬ್ಬರಿ 1337 ಕೋಟಿ ರೂಪಾಯಿ ದಂಡ! ಇಂಟರ್‌ನೆಟ್‌ ದೈತ್ಯ ಕಂಪನಿ ಮಾಡಿದ ತಪ್ಪೇನು?


    ದಂಡ ವಿಧಿಸಿದ ಕ್ರಮಕ್ಕೆ ಗೂಗಲ್​ ತೀವ್ರ ಆಕ್ಷೇಪ


    ದಂಡ ವಿಧಿಸಿದ ಕ್ರಮಕ್ಕೆ ಗೂಗಲ್​ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. 1,337 ಕೋಟಿ ರೂ. ದಂಡ ವಿಧಿಸಿರುವ  ಕಾರಣದಿಂದ  ಭಾರತದ ಗ್ರಾಹಕರು ಮತ್ತು ಉದ್ಯಮಿಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಹೇಳಿತ್ತು. ಸ್ಪರ್ಧಾ ಆಯೋಗದ ನಿರ್ಧಾರವನ್ನು ಪರಿಶೀಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ವಕ್ತಾರರು ತಿಳಿಸಿದ್ದರು.


    ದಂಡ ವಿಧಿಸಿರುವುದು ಭಾರತೀಯರಿಗೆ ಹಿಂಜರಿಯುವಂತೆ ಮಾಡಲಿದೆ. ದಂಡದ ಪರಿಣಾಮವಾಗಿ ಆ್ಯಂಡ್ರಾಯ್ಡ್‌ನ ಸುರಕ್ಷತಾ ಫೀಚರ್ಗಳು   ಸುರಕ್ಷತಾ ಅಪಾಯಗಳು ಎದುರಾಗಲಿವೆ. ಭಾರತೀಯರಿಗೆ ಮತ್ತು ಭಾರತದ ಉದ್ದಿಮೆಗಳಿಗೆ ಮೊಬೈಲ್​ಗಳ ಮೇಲಿನ ಖರ್ಚೂ ಹೆಚ್ಚಾಗಲಿದೆ ಎಂದು ಗೂಗಲ್ ಹೇಳಿತ್ತು.


    ಇದನ್ನೂ ಓದಿ: Tech Tips: ಆಂಡ್ರಾಯ್ಡ್ ಫೋನ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ ಪಟ್ ಅಂತ ಕಳಿಸಿ


    ಈ ಹಿಂದೆ ಗೂಗಲ್ ಗೆ ದಂಡ ಹಾಕಲು ಕಾರಣ ಎನು ಗೊತ್ತಾ


    ಮಾರುಕಟ್ಟೆಯಲ್ಲಿ ತನಗಿರುವ ಪ್ರಾಬಲ್ಯವನ್ನು ಆ್ಯಂಡ್ರೋಯ್ಡ್ ಫೋನ್​ಗಳ ಮಧ್ಯೆ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಗೂಗಲ್​​ಗೆ 1337.76 ಕೋಟಿ ದಂಡ ವಿಧಿಸಲಾಗಿದೆ. ಇದಲ್ಲದೆ ಗೂಗಲ್​ನ ಈ ನೀತಿಯನ್ನು ತಕ್ಷಣ ನಿಲ್ಲಿಸುವಂತೆ ಆದೇಶಿಸಲಾಗಿದೆ. ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ ಕೊಟ್ಟಿರುವ ಈ ಆದೇಶದ ಮೇಲೆ ಗೂಗಲ್ ತಕ್ಷಣದ ಪ್ರತಿಕ್ರಿಯೆ ಏನೂ ಕೊಟ್ಟಿಲ್ಲ.


    ಸ್ಪರ್ಧಾತ್ಮಕ ಹುಡುಕಾಟಗ ಅಪ್ಲಿಕೇಶನ್‌ಗಳಿಗೆ ಮಾರುಕಟ್ಟೆಯಲ್ಲಿ ಪ್ರವೇಶವನ್ನು ನಿರಾಕರಿಸುವ ಪರಿಣಾಮವಾಗಿ ಆನ್‌ಲೈನ್ ಸರ್ಚ್ ಮಾಡಲು ಮಾರುಕಟ್ಟೆಯಲ್ಲಿ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ನೋಡಿದೆ. ಅಲ್ಲದೆ, ಇದು ಸರ್ಚಿಂಗ್ ಸಂದರ್ಭದಲ್ಲೂ ತನ್ನ ಸ್ಥಾನವನ್ನು ರಕ್ಷಿಸಲು Android OS ಗಾಗಿ ಅಪ್ಲಿಕೇಶನ್ ಸ್ಟೋರ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ಇರಿಸಿದೆ.


    ಇದಲ್ಲದೆ, ಗೂಗಲ್ ಕ್ರೋಮ್ ಅಪ್ಲಿಕೇಶನ್ ಮೂಲಕ ಓಎಸ್ ಅಲ್ಲದ ನಿರ್ದಿಷ್ಟ ವೆಬ್ ಬ್ರೌಸರ್ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳಲು ಮತ್ತು ಅದರ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್ ಓಎಸ್‌ಗಾಗಿ ಅಪ್ಲಿಕೇಶನ್ ಸ್ಟೋರ್ ಮಾರುಕಟ್ಟೆಯಲ್ಲಿ ಇಂಟರ್ನೆಟ್  ತನ್ನ ಪ್ರಬಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸಿಸಿಐ ಗಮನಿಸಿ 1337 ಕೋಟಿ ದಂಡಹಾಕಲು ಮುಂದಾಯಿತು.

    Published by:Harshith AS
    First published: