• Home
  • »
  • News
  • »
  • tech
  • »
  • IOS App​ ಅಭಿವೃದ್ಧಿ ಪಡಿಸಿದ 9 ವರ್ಷದ ಭಾರತೀಯ ಬಾಲಕಿ! ಇದನ್ನು ಕಂಡು Tim Cook ಭೇಷ್​ ಅಂದ್ರು

IOS App​ ಅಭಿವೃದ್ಧಿ ಪಡಿಸಿದ 9 ವರ್ಷದ ಭಾರತೀಯ ಬಾಲಕಿ! ಇದನ್ನು ಕಂಡು Tim Cook ಭೇಷ್​ ಅಂದ್ರು

ಟಿಮ್ ಕುಕ್

ಟಿಮ್ ಕುಕ್

ಹನಾಸ್ ಅಪ್ಲಿಕೇಶನ್​ನಲ್ಲಿ ಕೆಲವು ಕಥೆಗಳನ್ನು ಪೂರ್ವ-ರೆಕಾರ್ಡ್ ಮಾಡಲಾಗಿದೆ. ಹನಾ ಮುಹಮ್ಮದ್ ರಫೀಕ್ ಅವರ ಧ್ವನಿಯಲ್ಲಿ ಕೆಲವು ಕಥೆಗಳು ಈ ಅಪ್ಲಿಕೇಶನ್​ನಲ್ಲಿದೆ. ಅಂದಹಾಗೆಯೇ ಹನಾ ಮುಹಮ್ಮದ್ ರಫೀಕ್ ಅವರನ್ನು ಕಿರಿಯ Apple iOS ಡೆವಲಪರ್ ಎಂದು ಕರೆಯಲಾಗುತ್ತಿದೆ.

  • Share this:

    9 ವರ್ಷದ ಹನಾ ಮುಹಮ್ಮದ್ ರಫೀಕ್ (Hana Mohammed Rafeeq) ಎಂಬ ಭಾರತೀಯ ಬಾಲಕಿಯೊಬ್ಬಳು ಐಒಎಸ್ ಆ್ಯಪ್ (IOS App) ಅಭಿವೃದ್ಧಿಪಡಿಸಿದ್ದಕ್ಕಾಗಿ ಆಪಲ್ ಸಿಇಒ ಟಿಮ್ ಕುಕ್ (Tim Cook) ಅವರನ್ನು ಶ್ಲಾಘಿಸಿದ್ದಾರೆ. ಅಂದಹಾಗೆಯೇ ಈ ಬಾಲಕಿ ದುಬೈನಲ್ಲಿ ನೆಲೆಸಿದ ಭಾರತೀಯ ಮೂಲದವಳಾಗಿದ್ದಾಳೆ. ‘ಹನಾಸ್’​ (Hanas) ಎಂದು ಹೆಸರಿಸಲಾದ ಅಪ್ಲಿಕೇಶನ್​ ಅನ್ನು ಬಾಲಕಿ ಅಭಿವೃದ್ಧಿ ಪಡಿಸಿದ್ದು, ಇದು ಕಥೆ ಹೇಳುವ ಅಪ್ಲಿಕೇಶನ್ ಆಗಿದೆ. ಇದರ ವಿಶೇಷವೆಂದರೆ ಈ ಆ್ಯಪ್​ ಮೂಲಕ ಪೋಷಕರು ಕಥೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ.


    ಹಿಂದೆಲ್ಲಾ ಮಲಗುವಾಗ ಖತೆ ಹೇಳುವ ಅಥವಾ ಲಾಲಿ ಹಾಡುವ ಕಾಲವೊಂದಿತ್ತು. ಆದರೆ ಈ ಅಪ್ಲಿಕೇಶನ್ ಮೂಲಕ ಸಣ್ಣ ಕಥೆಗಳನ್ನು, ಮಲಗುವ ಸಮಯದಲ್ಲಿ ಹೇಲುವ ಕಥೆಗಳನ್ನು ಮತ್ತು ಮಕ್ಕಳಿಗಾಗಿ ನೈತಿಕ ಮತ್ತು ಕ್ಲಾಸಿಕ್ ಕಥೆಗಳನ್ನು ಸಹ ಈ ಅಪ್ಲಿಕೇಶನ್​ ಒಳಗೊಂಡಿದೆ.


    ಹನಾಸ್ ಅಪ್ಲಿಕೇಶನ್​ನಲ್ಲಿ ಕೆಲವು ಕಥೆಗಳನ್ನು ಪೂರ್ವ-ರೆಕಾರ್ಡ್ ಮಾಡಲಾಗಿದೆ. ಹನಾ ಮುಹಮ್ಮದ್ ರಫೀಕ್ ಅವರ ಧ್ವನಿಯಲ್ಲಿ ಕೆಲವು ಕಥೆಗಳು ಈ ಅಪ್ಲಿಕೇಶನ್​ನಲ್ಲಿದೆ. ಅಂದಹಾಗೆಯೇ ಹನಾ ಮುಹಮ್ಮದ್ ರಫೀಕ್ ಅವರನ್ನು ಕಿರಿಯ Apple iOS ಡೆವಲಪರ್ ಎಂದು ಕರೆಯಲಾಗುತ್ತಿದೆ.


    ಆನ್​ಲೈನ್​ನಲ್ಲಿ ಸಾಕಷ್ಟು ಅಪ್ಲಿಕೇಶನ್​ಗಳು ಬಳಕೆಗೆ ಸಿಗುತ್ತದೆ. ಆದರೆ ಹನಾಸ್​ ಅಪ್ಲಿಕೇಶನ್​ ಮಕ್ಕಳ ಕಥೆಯನ್ನು ಒಳಗೊಂಡ ಆ್ಯಪ್​​ ಆಗಿದೆ. ಹನಾಸ್​ನ ಅಧಿಕೃತ ಆ್ಯಪಲ್​ ಸ್ಟೋರ್​ ಪಟ್ಟಿಯ ಪ್ರಕಾರ, "ಬಳಕೆದಾರರಿಗೆ ಬಹು-ಉದ್ದೇಶದ ವಿಷಯ ಮತ್ತು ಮನರಂಜನಾ ಅನುಭವವನ್ನು" ಒದಗಿಸಲು ಈ ಆ್ಯಪ್​ ಅನ್ನು ವಿನ್ಯಾಸಗೊಳಿಸಲಾಗಿದೆ.


    ಹನಾಸ್ "ನಾನು ಹನಾ ಈ ಅಪ್ಲಿಕೇಶನ್‌ ಅನ್ನು ಕೇವಲ ಒಂದು ಮುಖದೊಂದಿಗೆ ಇದೀಗ ಬಿಡುಗಡೆ ಮಾಡುತ್ತಿದ್ದೇನೆ, ಇದು ಮಕ್ಕಳ ಕಥೆಯನ್ನು ಒಳಗೊಂಡಿದೆ. ನಾನು ನನ್ನ ಧ್ವನಿಯ ಆಡಿಯೋ ಕಥೆಗಳನ್ನು ಕೂಡ ಇದರಲ್ಲಿ ಸೇರಿಸಿದ್ದೇನೆ ಆದ್ದರಿಂದ ಮಕ್ಕಳು ನನ್ನ ಸ್ನೇಹಿತನಾಗಿ ನನ್ನ ಮಾತುಗಳನ್ನು ಕೇಳುವುದನ್ನು ಆನಂದಿಸಬಹುದು. ಭರವಸೆ ನನಗಿದೆ"ಎಂದು ಹೇಳಿದ್ದಾಳೆ.


    ಇದನ್ನೂ ಓದಿ: Amazon Great Indian Festival: ಕೇವಲ 30 ಸಾವಿರಕ್ಕೆ ಬ್ರಾಂಡೆಡ್​ ​ಲ್ಯಾಪ್​ಟಾಪ್​ ಖರೀದಿಸಿ!


    ಅಚ್ಚರಿಯ ಸಂಗತಿ ಎಂದರೆ ಹನಾ ಮುಹಮ್ಮದ್ ರಫೀಕ್ ಇದಕ್ಕಾಗಿ 8 ವರ್ಷದಳಿದ್ದಾಗಲೇ ಶ್ರಮಿಸುತ್ತಾ ಬಂದಿದ್ದಾಳೆ. ಅಪ್ಲಿಕೇಶನ್​ ಪೂರ್ಣಗೊಂಡ ಬಳಿಕ ಆ್ಯಪಲ್​ ಸಿಇಒ ಟಿಮ್​ ಕುಕ್​ ಅವರೊಂದಿಗೆ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.


    ಟಿಮ್​ ಕುಕ್  ಅವರು ಹನಾ ಮುಹಮ್ಮದ್ ರಫೀಕ್ ಅವರ ಆಸಕ್ತಿಯನ್ನು ಗಮನಿಸಿ "ಹನಾ, ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಎಲ್ಲಾ ಪ್ರಭಾವಶಾಲಿ ಸಾಧನೆಗಳಿಗೆ ಅಭಿನಂದನೆಗಳು! ಇದನ್ನು ಮುಂದುವರಿಸಿ ಮತ್ತು ಭವಿಷ್ಯದಲ್ಲಿ ನೀವು ಅದ್ಭುತವಾದ ಕೆಲಸಗಳನ್ನು ಮಾಡುತ್ತೀರಿ" ಎಂದು ಹೇಳಿದ್ದಾರೆ.


    ಇದನ್ನೂ ಓದಿ:


    ಕುತೂಹಲಕಾರಿ ವಿಚಾರವೆಂದರೆ. ಬಹುತೇಕರು ಶಾಲಾ ಶಿಕ್ಷಣವನ್ನು ಕಲಿತರೆ. ಹನಾ ಮುಹಮ್ಮದ್ ರಫೀಕ್ ಮನೆಯ ಶಿಕ್ಷಣವನ್ನು ಪಡೆಯುತ್ತಿದ್ದಾಳೆ ಮತ್ತು 10 ವರ್ಷ ವಯಸ್ಸಿನ ತನ್ನ ಸಹೋದರಿಯಿಂದ ಕೋಡಿಂಗ್ ಕಲಿಯುತ್ತಿದ್ದಾಳೆ. ಆಕೆಯ ಸಹೋದರಿ ಕೂಡ 6 ವರ್ಷದವಳಿದ್ದಾಗ ವೆಬ್‌ಸೈಟ್ ಅನ್ನು ರಚಿಸಿದ್ದಾಳೆ. ಮುಂದಿನ ವರ್ಷ ಆಪಲ್‌ನ ವರ್ಲ್ಡ್‌ವೈಡ್ ಡೆವಲಪರ್‌ಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹನಾ ಮುಹಮ್ಮದ್ ರಫೀಕ್ ಬಯಸಿದ್ದಾರೆ.


    ಕೋಡಿಂಗ್​ ಅಥವಾ ಆ್ಯಪ್​ ತಯಾರಿಸುವುದು ಮತ್ತು  ಆ ಆ್ಯಪ್​ಗೆ ತಕ್ಕಂತೆ ಸರಿಯಾದ ನ್ಯಾಯ ಒದಗಿಸುವುದು ಸುಲಭದ ಮಾತಲ್ಲ. ಆದರೆ ಹನಾ ಮುಹಮ್ಮದ್ ರಫೀಕ್ ಮಕ್ಕಳ ಕಥೆಯನ್ನು ಒಳಗೊಂಡ ಆ್ಯಪ್​ ಸಿದ್ಧಪಡಿಸಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಲಿದೆ. ಮತ್ತೊಂದು ಹೆಮ್ಮೆಯ ಸಂಗತಿಯೆಂದರೆ ಈಕೆ ಭಾರತೀಯಲಾಗಿದ್ದು, ಎಲ್ಲಾ ಕ್ಷೇತ್ರದಲ್ಲೂ ಬಾಲಕಿಯನ್ನು ಮುಂದೆ ಬರುತ್ತಿದ್ದಾರೆ ಎಂಬುದನ್ನು ಇದು ಸಾರುತ್ತಿದೆ.

    Published by:Harshith AS
    First published: