• Home
  • »
  • News
  • »
  • tech
  • »
  • WiFi Hotspot: 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ

WiFi Hotspot: 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ

ಹಾಟ್​ಸ್ಪಾಟ್

ಹಾಟ್​ಸ್ಪಾಟ್

ಮುಖ್ಯವಾಗಿ ಈ ವೈಫೈ ಹಾಟ್​ಸ್ಪಾಟ್​ಗಳು ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿದೆ. ಅದ್ರಲ್ಲೂ ವರ್ಕ್ ಫ್ರಮ್ ಹೋಮ್ ಬಂದಾಗಿನಂತೂ ಎಲ್ಲರೂ  ಆನ್​ಲೈನ್ ಮೂಲಕವೇ ಕೆಲಸಕಾರ್ಯಗಳನ್ನು ಮಾಡಲು ಆರಂಭಿಸಿದ್ದಾರೆ. ಇನ್ನು ಮುಂದಕ್ಕೆ ಅಂದರೆ 2023 ರಲ್ಲಿ ಬೇರೆ ಬೇರೆ ರೀತಿಯಲ್ಲಿ  ಪೋರ್ಟೇಬಲ್ ವೈಫೈ ಹಾಟ್​ಸ್ಪಾಟ್​ಗಳು ಬರಲಿದೆ

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ  ನೆಟ್​ವರ್ಕ್​ನ (Network) ಅವಶ್ಯಕತೆಯಿದೆ. ಆದರೆ ಈ ನೆಟ್​ವರ್ಕ್​ಗಳನ್ನು ಕೆಲವೊಂದು ಪ್ರದೇಶಗಳಲ್ಲಿ ಹೊಂದಿರುವುದಿಲ್ಲ. ಈ ಸಂದರ್ಭದಲ್ಲಿ ವೈಫೈ (WiFi)  ಬಳಕೆಯನ್ನು ಮಾಡುತ್ತಾರೆ. ಆದ್ರೆ ಈ ವೈಫೈ ಸೌಲಭ್ಯಗಳು ಈಗ ಬೇರೆ ಬೇರೆ ಅಪ್​ಡೇಟ್ ವರ್ಷನ್​ಗಳಲ್ಲಿ (Update Version) ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು ವೇಗದ ವೈ-ಫೈ ಸಂಪರ್ಕಕ್ಕೆ ಪ್ರವೇಶವನ್ನು ಹೊಂದಿಲ್ಲದಿದ್ದರೆ ಬಳಕೆದಾರರಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಇಲ್ಲಿ 2023 ರಲ್ಲಿ 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳು (Portable WiFi Hotspot) ಬರಲಿದೆ, ಇದರ ಪಟ್ಟಿಯನ್ನು ಈ ಕೆಳ ಗೆ ತಿಳಿಸಲಾಗಿದೆ. ಏನಾದರು ಕೆಲಸ ಮಾಡುವಾಗ, ಪ್ರಯಾಣ ಮಾಡುವಾಗ ಇಂಟರ್ನೆಟ್ ಸಂಪರ್ಕದಲ್ಲಿರಲು ಈ ಹಾಟ್‌ಸ್ಪಾಟ್‌ಗಳು ಮುಖ್ಯವಾಗಿದೆ.


    ಮುಖ್ಯವಾಗಿ ಈ ವೈಫೈ ಹಾಟ್​ಸ್ಪಾಟ್​ಗಳು ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿದೆ. ಅದ್ರಲ್ಲೂ ವರ್ಕ್ ಫ್ರಮ್ ಹೋಮ್ ಬಂದಾಗಿನಂತೂ ಎಲ್ಲರೂ  ಆನ್​ಲೈನ್ ಮೂಲಕವೇ ಕೆಲಸಕಾರ್ಯಗಳನ್ನು ಮಾಡಲು ಆರಂಭಿಸಿದ್ದಾರೆ. ಇನ್ನು ಮುಂದಕ್ಕೆ ಅಂದರೆ 2023 ರಲ್ಲಿ ಬೇರೆ ಬೇರೆ ರೀತಿಯಲ್ಲಿ  ಪೋರ್ಟೇಬಲ್ ವೈಫೈ ಹಾಟ್​ಸ್ಪಾಟ್​ಗಳು ಬರಲಿದೆ. ಈ ಸಾಧನಗಳ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ.


    2023 ರಲ್ಲಿ ಬರಲಿರುವ 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳು




    ವೆರಿಝೋನ್ ಜೆಟ್ಪ್ಯಾಕ್ MiFi 8800L


    ಇದನ್ನೂ ಓದಿ: ಸ್ಯಾಮ್‌ಸಂಗ್‌ನಿಂದ ಹೊಸ ಸ್ಮಾರ್ಟ್‌ ವಾಚ್, ಇದರ ಬೆಲೆ ಎಷ್ಟು ಗೊತ್ತಾ?


    ನೀವು ಬಳಸಲು ಪ್ರತಿ ತಿಂಗಳು ಡೇಟಾ ಪಾವತಿಯನ್ನು ಮಾಡಬೇಕು. ಇದು 24 ಗಂಟೆಗಳ ಉತ್ತಮ ಬ್ಯಾಟರಿ ಅವಧಿಯನ್ನು ಸಹ ಹೊಂದಿದೆ. ಈ ಹಾಟ್​ಸ್ಪಾಟ್ ಅನ್ನು ಒಮ್ಮೆ ಕನೆಕ್ಟ್ ಮಾಡಿದರೆ ನಿಮಗೆ ಯಾವುದೇ ನ್ಯೂಸ್ ಅಥವಾ ಮಅಹಿತಿಯನ್ನು ಪಡೆಯಬಹುದಾಗಿದೆ.


    ಕೇವಲ 4000 ರೂಪಾಯಿಗೆ ಈ ಸಾಧನ ಲಭ್ಯವಿದೆ. ಅಲ್ಕಾಟೆಲ್ ಲಿಂಕ್ ಝೋನ್ 4ಜಿ ಮೊಬೈಲ್ ವೈ-ಫೈ ಹಾಟ್‌ಸ್ಪಾಟ್ ಇದರ ಸೀರಿಸ್​​ನಲ್ಲಿ  ಬಿಡುಗಡೆಯಾಗಿರುವ ಹೆಚ್ಚು ಬಜೆಟ್ ಸ್ನೇಹಿ ಹಾಟ್‌ಸ್ಪಾಟ್‌ಗಳಲ್ಲಿ ಇದು ಒಂದಾಗಿದೆ. ಇದು SIM ಕಾರ್ಡ್ ಚಾಲಿತ ಆಯ್ಕೆಯನ್ನೂ ಹೊಂದಿದೆ.


    ಅಲ್ಕಾಟೆಲ್ ಲಿಂಕ್​ಝೋನ್ 4ಜಿ ಹಾಟ್​ಸ್ಪಾಟ್


    ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ ಆರು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇನ್ನು ಸ್ಪೀಡ್ ಸ್ಟ್ರೀಮಿಂಗ್‌ಗಾಗಿ 150 Mbps ಡೌನ್‌ಲೋಡ್ ಸ್ಪೀಡನ್ನು ನೀಡುತ್ತದೆ. ಇನ್ನು ಈ ಸಾಧನಗಳು ಜನಪ್ರಿಯ ಇ ಕಾಮರ್ಸ್ ವೆಬ್​ಸೈಟ್​ಗಳಾಗಿರುವ ಅಮೆಜಾನ್, ಫ್ಲಿಪ್​ಕಾರ್ಟ್​ಗಳಲ್ಲಿ ಲಭ್ಯವಿದೆ.


    ರೋಮ್ ವೈಫೈ ಆರ್10 4ಜಿ ಪೋರ್ಟಬಲ್ ವೈ-ಫೈ ಸಾಧನವು ಬ್ಯಾಟರಿ ಬಾಳಿಕೆ ವಿಚಾರದಲ್ಲಿ ಬಹಳಷ್ಟು ಉತ್ತಮವಾಗಿದೆ. ಇನ್ನು ಈ ಸಾಧನ ಯಾವುದೇ ತೊಂದರೆಗಳಿಲ್ಲದೆ 18 ಗಂಟೆಗಳವರೆಗೆ ನಿರಂತರ ಇಂಟರ್ನೆಟ್ ಅನ್ನು ನೀಡುತ್ತದೆ. ರೋಮ್ ವೈಫೈ ಆರ್10 ವೈ-ಫೈ ಐದು ಮೊಬೈಲ್ ಸಾಧನಗಳ ನಡುವೆ ಹಂಚಿಕೊಳ್ಳಬಹುದು.


    ರೋಮ್ ವೈಫೈ ಆರ್10 4ಜಿ ಹಾಟ್​ಸ್ಪಾಟ್


    ಆರ್10 4ಜಿ ಪೋರ್ಟಬಲ್​ ನ ಫೀಚರ್ಸ್:


    ಈ ಹಾಟ್‌ಸ್ಪಾಟ್ 50 Mbps ನ ಅಪ್‌ಲೋಡ್ ವೇಗ ಮತ್ತು 433 Mbps ವೇಗದ ಡೌನ್‌ಲೋಡ್ ಸ್ಪೀಡ್​ ಅನ್ನು ಹೊಂದಿದೆ. ವೈ-ಫೈ ಫ್ರೀಕ್ವೆನ್ಸಿ ಬ್ಯಾಂಡ್ ಡೀಫಾಲ್ಟ್ ಸೆಟ್ಟಿಂಗ್ 2.4 GHz ತಂತ್ರಜ್ಞಾನವಾಗಿದೆ.


    Nommi ಮೊಬೈಲ್ ಹಾಟ್‌ಸ್ಪಾಟ್‌ ಅನ್ನು ಹೆಚ್ಚಾಗಿ ಗೇಮರ್‌ಗಳು 150 ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಹೊಂದಿದ್ದಾರೆ ಜೊತೆಗೆ ವಿಶ್ವಾಸಾರ್ಹ ಮತ್ತು ಯಾವುದೇ ಸಮಸ್ಯೆಯಿಲ್ಲದೆ 4ಜಿ LTE ವೈಫೈ ಅನ್ನು ಹೊಂದಿದೆ. ಇನ್ನು ಯಾವುದೇ  ಪ್ರಯಾಣದಲ್ಲೂ, ಎಲ್ಲಿ ಬೇಕಾದರೂ ಡೌನ್‌ಲೋಡ್ ಮಾಡಲು ಮತ್ತು ಪ್ಲೇ ಮಾಡಲು ಇದು ಸಹಾಯ ಮಾಡುತ್ತದೆ.


    Nommi ಮೊಬೈಲ್ ಹಾಟ್‌ಸ್ಪಾಟ್ ಹಾಟ್​ಸ್ಪಾಟ್


    ಫೀಚರ್ಸ್:


    ಈ ವೈಫೈ ಹಾಟ್​ಸ್ಪಾಟ್ 10 ಮೊಬೈಲ್ ಸಾಧನಗಳೊಂದಿಗೆ ಜೋಡಿಸಬಹುದು ಮತ್ತು  ಸಿಮ್ ಕಾರ್ಡ್‌ಗಳ ಮೂಲಕವೂ ಇದನ್ನು ಬಳಸಬಹುದಾಗಿದೆ. ಇದರ ಬ್ಯಾಟರಿ 5600 mAh USB ಪವರ್ ಬ್ಯಾಂಕ್ ಸಾಮರ್ಥ್ಯಕ್ಕೆ ಹೋಲಿಕೆ ಮಾಡಬಹುದು. ಇದನ್ನು ಫುಲ್ ಚಾರ್ಜ್ ಮಾಡಿದಾಗ ಬ್ಯಾಟರಿಯು 24 ಗಂಟೆಗಳವರೆಗೆ ಇರುತ್ತದೆ ಮತ್ತು ನೀವು ಪ್ರಯಾಣದಲ್ಲಿರುವಾಗ ನಿಮ್ಮ ಫೋನ್ ಮತ್ತು ಇತರ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಈ ಸಾಧನವನ್ನು ಬಳಸಬಹುದು.

    First published: