Instagram: ಇನ್‌ಸ್ಟಾಗ್ರಾಮ್ ಬಳಸುತ್ತಿದ್ದೀರಾ? ಈ ಹೊಸ 7 ಫೀಚರ್ ಗಳನ್ನು ಒಮ್ಮೆ ಟ್ರೈ ಮಾಡಿ

ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ನಲ್ಲಿರುವ ಅನೇಕ ವಿಶಿಷ್ಟವಾದ ಫೀಚರ್ ಗಳಿಂದಲೇ ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಬಹುದು. ಅದರಲ್ಲೂ ಈ ಅಪ್ಲಿಕೇಶನ್ ನಲ್ಲಿರುವ ರೀಲ್ಸ್ ಫೀಚರ್ ನಲ್ಲಿ ನಿಮ್ಮ ಸ್ನೇಹಿತರೊಡನೆ ವೀಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಎಷ್ಟರ ಮಟ್ಟಿಗೆ ಈ ಸಾಮಾಜಿಕ ಮಾಧ್ಯಮಗಳು (Social Media) ಮನುಷ್ಯನ ಜೀವನವನ್ನು ಅವರಿಸಿಕೊಂಡಿವೆ ಎಂದರೆ ಒಬ್ಬ ಮನುಷ್ಯ ತನ್ನ ಮನೆಯವರೊಂದಿಗೆ ಕಳೆಯುವ ಸಮಯಕ್ಕಿಂತ ಹೆಚ್ಚು ಸಮಯವನ್ನು ಈ ಸಾಮಾಜಿಕ ಮಾಧ್ಯಮಗಳಲ್ಲಿ ಮುಳುಗಿ ಕಳೆಯುತ್ತಿದ್ದಾನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು. ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook), ವಾಟ್ಸಪ್ (WhatsApp) ಹೀಗೆ ಇನ್ನೂ ಅನೇಕ ಸಾಮಾಜಿಕ ಮಾಧ್ಯಮಗಳು ಜನರಿಗೆ ಪ್ರತಿಕ್ಷಣ ಹೊಸ ಹೊಸ ಸುದ್ದಿಗಳನ್ನು ತಿಳಿದುಕೊಳ್ಳಲು ಮತ್ತು ಇಡೀ ಜಗತ್ತಿನಲ್ಲಿ ನಡೆಯುತ್ತಿರುವ ಚಿತ್ರ-ವಿಚಿತ್ರ ಸಂಗತಿಗಳನ್ನು ಕ್ಷಣ ಮಾತ್ರದಲ್ಲಿ ನಮ್ಮ ಮುಂದೆ ತಂದಿಡುತ್ತದೆ. ಇಷ್ಟೇ ಅಲ್ಲದೆ ಈ ಸಾಮಾಜಿಕ ಮಾಧ್ಯಮಗಳು ನಮ್ಮ ಸ್ನೇಹಿತರೊಡನೆ (Friends) ಮತ್ತು ಸಂಬಂಧಿಕರೊಡನೆ ಒಂದು ರೀತಿಯಲ್ಲಿ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.

ವಿಶಿಷ್ಟವಾದ ಫೀಚರ್ ಗಳಿಂದಲೇ ಜನಪ್ರಿಯತೆ ಪಡೆದ ಇನ್‌ಸ್ಟಾಗ್ರಾಮ್
ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ನಲ್ಲಿರುವ ಅನೇಕ ವಿಶಿಷ್ಟವಾದ ಫೀಚರ್ ಗಳಿಂದಲೇ ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಬಹುದು. ಅದರಲ್ಲೂ ಈ ಅಪ್ಲಿಕೇಶನ್ ನಲ್ಲಿರುವ ರೀಲ್ಸ್ ಫೀಚರ್ ನಲ್ಲಿ ನಿಮ್ಮ ಸ್ನೇಹಿತರೊಡನೆ ವೀಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳಬಹುದು.

ಇನ್ನೂ ಏಳು ಹೊಸ ಫೀಚರ್  ಸೇರ್ಪಡೆ
ಈಗ ಈ ಅಪ್ಲಿಕೇಶನ್ ನಲ್ಲಿ ಇನ್ನೂ ಏಳು ಹೊಸ ಫೀಚರ್ ಗಳನ್ನು ಸೇರಿಸಲಾಗಿದೆಯಂತೆ, ಅವುಗಳನ್ನು ನೀವು ಬಹುಶಃ ಟ್ರೈ ಮಾಡಿರಲಿಕ್ಕಿಲ್ಲ. ಈ ಹೊಸದಾಗಿ ಸೇರಿಸಿರುವಂತಹ ಫೀಚರ್ ಗಳು ಮ್ಯೂಸಿಕ್ ಪ್ರಿವೀವ್ ಅನ್ನು ಹಂಚಿಕೊಳ್ಳುವ, ಸೈಲೆಂಟ್ ಮೆಸೇಜ್ ಗಳನ್ನು ಕಳುಹಿಸುವ, ಯಾರು ನಿಮ್ಮೊಂದಿಗೆ ಚಾಟ್ ಮಾಡಲು ಆನ್‌ಲೈನ್ ನಲ್ಲಿ ಇದ್ದಾರೆ ಎನ್ನುವಂತಹ ಅನೇಕ ಫೀಚರ್ ಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಏಳು ಹೊಸ ಫೀಚರ್ ಗಳು ಕೆಲವು ಆಯ್ದ ದೇಶಗಳಲ್ಲಿನ ಬಳಕೆದಾರರಿಗೆ ಮಾತ್ರ ಲಭ್ಯವಿವೆ. ಇವುಗಳನ್ನು ನಂತರದಲ್ಲಿ ಎಲ್ಲಾ ದೇಶಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಲಾಗುತ್ತಿದೆ. ಇಲ್ಲಿದೆ ನೋಡಿ ನೀವು ತಿಳಿದುಕೊಳ್ಳಬೇಕಾಗಿರುವ 7 ಹೊಸ ಫೀಚರ್ ಗಳ ಬಗ್ಗೆ ಇನ್ನಷ್ಟು ವಿವರ.

1. ನೀವು ಬ್ರೌಸ್ ಮಾಡುತ್ತಿರುವಾಗ ನಿಮಗೆ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬಹುದು
ನೀವು ನಿಮ್ಮ ಫೀಡ್ ಗಳನ್ನು ಬ್ರೌಸ್ ಮಾಡುವಾಗ ನಿಮಗೆ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬಹುದು. ನಿಮ್ಮ ಇನ್ಬಾಕ್ಸ್ ಗೆ ಹೋಗದೇ ನಿಮ್ಮ ಬ್ರೌಸ್ ಮಾಡುವ ಪುಟವನ್ನು ಕಳೆದುಕೊಳ್ಳದೆ ಸಂದೇಶಗಳಿಗೆ ಪ್ರತಿಕ್ರಿಯಿಸಬಹುದು. ಈ ಹೊಸ ಫೀಚರ್ ಅಪ್ಲಿಕೇಶನ್ ನಲ್ಲಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡುವುದನ್ನು ಇನ್ನಷ್ಟು ಸುಲಭ ಮಾಡಿದ್ದಾರೆ.

ಇದನ್ನೂ ಓದಿ:  Flipkart Offer: ಭರ್ಜರಿ ರಿಯಾಯಿತಿ ಬೆಲೆಗೆ ಪೊಕೊ ಸ್ಮಾರ್ಟ್​ಫೋನ್​! ಇಂಥಾ ಅವಕಾಶ ಮತ್ತೆ ಸಿಗದು

2. ನೀವು ಯಾವುದೇ ವಿಷಯಗಳನ್ನು ಸ್ನೇಹಿತರೊಂದಿಗೆ ಬೇಗನೆ ಹಂಚಿಕೊಳ್ಳಬಹುದು
ನಿಮ್ಮ ಇನ್‌ಸ್ಟಾಗ್ರಾಮ್ ಬ್ರೌಸ್ ಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ, ನೀವು ನಿಮ್ಮ ಸ್ನೇಹಿತರೊಂದಿಗೆ ಆಸಕ್ತಿಕಾರವಾದ ವಿಷಯಗಳನ್ನು ಟೈಪ್ ಮಾಡುವುದರ ಮೂಲಕ ಅದನ್ನು ಹಂಚಿಕೊಳ್ಳಬಹುದು.

3. ಯಾರು ಆನ್ಲೈನ್ ನಲ್ಲಿದ್ದಾರೆ ಅಂತ ನೋಡಬಹುದು
ನಿಮ್ಮ ಇನ್ಬಾಕ್ಸ್ ಮೇಲೆ ನಿಮ್ಮ ಜೊತೆ ಚಾಟ್ ಮಾಡಲು ಯಾರು ಆನ್‌ಲೈನ್ ನಲ್ಲಿದ್ದಾರೆ ಅಂತ ನೋಡಬಹುದು.

4. ನೀವು ಮ್ಯೂಸಿಕ್ ಪ್ರಿವೀವ್ ಅನ್ನು ಹಂಚಿಕೊಳ್ಳಬಹುದು
ನೀವು ಇನ್ಮುಂದೆ ಆ್ಯಪಲ್ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್ ಮತ್ತು ಸ್ಪೋಟಿಫೈ ನಲ್ಲಿ 30 ಸೆಕೆಂಡುಗಳ ಮ್ಯೂಸಿಕ್ ಪ್ರಿವೀವ್ ಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಇದನ್ನು ನಿಮ್ಮ ಸ್ನೇಹಿತರು ನಿಮ್ಮ ಚಾಟ್ ನಿಂದಲೇ ಕೇಳಿ ಆನಂದಿಸಬಹುದು.

5. ಸೈಲೆಂಟ್ ಸಂದೇಶಗಳನ್ನು ನೀವು ಕಳುಹಿಸಬಹುದು
ನೀವು ನಿಮ್ಮ ಸ್ನೇಹಿತರಿಗೆ ನೋಟಿಫಿಕೇಶನ್ ಇಲ್ಲದೆಯೇ ಸೈಲೆಂಟ್ ಆಗಿ ಸಂದೇಶಗಳನ್ನು ಕಳುಹಿಸಬಹುದು. ಅವರು ರಾತ್ರಿ ನಿದ್ದೆ ಮಾಡುತ್ತಿರುವಾಗ ಅಥವಾ ಕೆಲಸ ಮಾಡುತ್ತಿರುವಾಗ ಅವರಿಗೆ ಕಿರಿಕಿರಿ ಆಗದಂತೆ ಸಂದೇಶಗಳನ್ನು ಸೈಲೆಂಟ್ ಆಗಿ ಕಳುಹಿಸಬಹುದು.

6. ಲೋ-ಫೈ ಚಾಟ್ ಥೀಮ್ ಟ್ರೈ ಮಾಡಿ
ನೀವು ಯಾವುದೇ ಅಡೆತಡೆಗಳಿಲ್ಲದೆ ಸ್ನೇಹಿತರೊಂದಿಗೆ ಸಂದೇಶಗಳನ್ನು ಹಂಚಿಕೊಳ್ಳಬೇಕು ಎಂದಾದರೆ ಲೋ-ಫೈ ಚಾಟ್ ಥೀಮ್ ಅನ್ನು ಟ್ರೈ ಮಾಡಿರಿ.

ಇದನ್ನೂ ಓದಿ:  Smart Phone: ಕಡಿಮೆ ಬಜೆಟ್​ನಲ್ಲಿ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​ಫೋನ್​ ಹುಡುಕುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಆಯ್ಕೆಗಳು

7. ನಿಮ್ಮ ಸ್ಕ್ವಾಡ್ ನೊಂದಿಗೆ ಪೋಲ್ ಅನ್ನು ರಚಿಸಿಕೊಳ್ಳಬಹುದು
ನಿಮಗೆ ಯಾವುದಾದರೂ ಒಂದು ವಿಷಯದ ಬಗ್ಗೆ ಅಭಿಪ್ರಾಯ ಕೇಳಬೇಕು ಎಂದಾದರೆ ನೀವು ಈ ಅಪ್ಲಿಕೇಶನ್ ನಲ್ಲಿ ಪೋಲ್ ಅನ್ನು ರಚಿಸಿಕೊಳ್ಳಬಹುದು.
Published by:Ashwini Prabhu
First published: