ರಕ್ಷಾ ಬಂಧನದಂದು ಈ ಗಿಫ್ಟ್​ಗಳನ್ನು ನಿಮ್ಮ ಸೋದರಿಯರಿಗೆ ನೀಡಿ


Updated:August 25, 2018, 4:18 PM IST
ರಕ್ಷಾ ಬಂಧನದಂದು ಈ ಗಿಫ್ಟ್​ಗಳನ್ನು ನಿಮ್ಮ ಸೋದರಿಯರಿಗೆ ನೀಡಿ

Updated: August 25, 2018, 4:18 PM IST
ಅಣ್ಣ ತಂಗಿಯರ ಬಾಂಧವ್ಯ ಸಾರುವ ರಕ್ಷಾಬಂಧನದಕ್ಕೆ ಇನ್ನೇನು ಒಂದು ದಿನ ಬಾಕಿಯಿದೆ, ಇಂತಹ ಸಂದರ್ಭದಲ್ಲಿ  ಬೆಲೆಕಟ್ಟಲಾಗದ ಉಡುಗೊರೆಯನ್ನು ಅಣ್ಣನಾದವನು ತನ್ನ ತಗ್ಗಿಗೆ ನೀಡುತ್ತಾನೆ. ಈ ಬಾರಿ ನೀವು ನಿಮ್ಮ ಸೋದರಿಗೆ ಯಾವುದಾದರೂ ಗ್ಯಾಡ್ಜೆಟ್ಸ್​ಗಳನ್ನು ನೀಡುವ ಇರಾದೆ ಹೊಂದಿದ್ದರೆ ಈ ಕೆಳಗೆ ನಾವು ಗಿಫ್ಟ್​ ಕೊಡ ಬಹುದಾದಾದ 7 ಟೆಕ್​ ಸ್ನೇಹೀ ವಸ್ತುಗಳನ್ನು ನೀಡಿದ್ದೇವೆ.

ಅಮೆಜಾನ್​ ಇಕೋ ಡಾಟ್​

ಸ್ಮಾರ್ಟ್​ ಸ್ಪೀಕರ್​ ಇಷ್ಟ ಪಡುವಂತಹ ಟೆಕ್​ ಫ್ರೆಂಡ್ಲಿ ನಿಮ್ಮ ತಂಗಿಗೆ ಇಕೋ ಡಾಟ್​ ಅತ್ಯುತ್ತಮ ಗಿಫ್ಟ್​ಗಳಲ್ಲಿ ಒಂದು, ತಮ್ಮ ದ್ವನಿ ಮೂಲಕ ಪ್ರತಿನಿತ್ಯದ ಕಾರ್ಯಗಳನ್ನು ನಿರ್ವಹಿಸಲು ಇಕೋ ಡಾಟ್​ ಅತ್ಯುತಮ್ಮ ಗ್ಯಾಡ್ಜೆಟ್​. ಅಲೆಕ್ಸಾ ಕ್ಲೌಡ್​ ಮೂಲಕ ಕೃತಕ ಬುದ್ಧಿ ಮತ್ತೆ ಬಳಸಿ ಕಾರ್ಯ ನಿರ್ವಹಿಸುವ ಈ ಸ್ಪೀಕರ್​, ನಿಮ್ಮಷ್ಟದ ಹಾಡು, ಕರೆ ಮಾಡಲು, ಪ್ರತಿನಿತ್ಯದ ಹವಾಮಾನ ತಿಳಿಯಲು ಸಹಕಾರಿ.

ಬೆಲೆ : Rs 4099 (Amazon.in)

ಫಿಟ್ನೆಸ್​ ಬ್ಯಾಂಡ್​ಪ್ರತಿನಿತ್ಯ ಆರೋಗ್ಯದ ಕುರಿತು ಚಿಂತಿಸುವ, ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕಷ್ಟ ಪಡುತ್ತಿರುವ ನಿಮ್ಮ ಸೋದರಿಗೆ ಮಿ ಬ್ಯಾಂಡ್​ ನಂತಹ ಸ್ಮಾರ್ಟ್​ ಬ್ಯಾಂಡ್​ ಕೈ ಗಡಿಯಾರಗಳು ಉತ್ತಮ ಗಿಫ್ಟ್​ ಎಂದೇ ಹೇಳಬಹುದು. ಕೇವಲ 1,299ರಿಂದ ಆರಂಭವಾಗುವ ಈ ಬ್ಯಾಂಡ್​ಗಳಲ್ಲಿ ಫಿಟ್​ಬಿಟ್​ನಂತಹ ಬ್ಯಾಂಡ್​ಗಳು ಹೆಚ್ಚು ಫೇಮಸ್​.
Loading...

ಹೆಡ್​ಫೋನ್ಸ್​? ಇಯರ್​ಫೋನ್​ಗಳುರಕ್ಷಾ ಬಂಧನದ ಸಂದರ್ಭದಲ್ಲಿ ನೀವು ನಿಮ್ಮ ಸೋದರಿಗೆ ಹೆಡ್​ಪೋನ್​ಗಳನ್ನು ಕೂಡಾ ನೀಡಬಹುದು. ಒಂದು ವೇಳೆ ನಿಮ್ಮ ಸೋದರಿ ಜಿಮ್​ ಅಥವಾ ಯೋಗಾ ತರಗತಿಗೆ ತೆರಳುತ್ತಿದ್ದಾರೆ ಎಂದಾದರೆ ಬ್ಲೂಟೂತ್​ ಮೂಲಕ ಕಾರ್ಯ ನಿರ್ವಹಿಸುವ ಇಯರ್​ಫೋನ್​ಗಳು ಕೂಡಾ ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ  ದೊರಕುತ್ತದೆ. ಒನ್​ಪ್ಲಸ್​ ಬುಲ್ಲೆಟ್​ ಇಯರ್​ಫೋನ್, ಜೆಬಿಎಲ್​, ಹೀಗೆ ಹಲವಾರು ಹೆಡ್​ಫೋನ್​ಗಳನ್ನು ನೀವು ಗಿಫ್ಟ್​ ನೀಡಬಹುದು.

ಗೊ ಪ್ರೋ ಆ್ಯಕ್ಷನ್​ ಕ್ಯಾಮೆರಾಗಳು ನೀರು, ದೂಳು, ಯಾವದೇ ಸಂದರ್ಭದಲ್ಲಿ ನೀವು ಇಷ್ಟವಾದ ಚಿತ್ರಗಳನ್ನು ಚಿತ್ರೀಕರಿಸುವ ಸಲುವಾಗಿ ಈ ಕ್ಯಾಮೆರಾಗಳನ್ನು ಬಳಕೆ ಮಾಡಬಹುದು. ಫುಲ್​ ಹೆಚ್​ಡಿ 1080ಪಿ ಹಾಗು 10 ಮೆಗಾಪಿಕ್ಸೆಲ್​ ಕ್ಯಾಮೆರಾ ಹೊಂದಿರುವ ಗೊ ಪ್ರೋ ಕ್ಯಾಮೆರಾಗಳು, ಈ ಬಜೆಟ್​ಗೆ ಅನುಗುಣವಾಗಿ ಖರೀದಿಸುವ ಕ್ಯಾಮೆರಾ ಗಿಫ್ಟ್​ಗಳಲ್ಲಿ ಈ ಕ್ಯಾಮೆರಾ ಬೆಸ್ಟ್​. ನೀರು ನಿರೋಧಕ ಕ್ಯಾಮೆರಾಗಳಲ್ಲಿ ಒಂದಾದ ಗೊ ಪ್ರೊ 33ft ಅಡಿವರೆಗೂ ನೀವು ಈ ಕ್ಯಾಮೆರಾವನ್ನಿ ನೀರಲ್ಲಿ ಮುಳುಗಿಸಬಹುದು.

ಬೆಲೆ: Rs 13,930

ಸ್ಮಾರ್ಟ್​ಫೋನ್​ಗಳು: ಸ್ಯಾಮ್ಸಂಗ್​ ಗೆಲಾಕ್ಸಿ ಎಸ್​9+ಒಂದು ವೇಳೆ ನಿಮ್ಮ ಸೊದರಿಗೆ ಮೊಬೈಲ್​ ಫೊಟೋಗ್ರಫಿಯಲ್ಲಿ ಹೆಚ್ಚಿನ ಆಸಕ್ತಿಯಿದ್ದರೆ ನೀವು ಸ್ಯಾಮ್ಸಂಗ್​ ಗೆಲಾಕ್ಸಿ ​ S9+ ಮೊಬೈಲ್​ನ್ನು ಗಿಫ್ಟಾಗಿ ನೀಡಬಹುದು. ವಿಶ್ವದಲ್ಲೇ ಮೊಟ್ಟ ಮೊದಲ 2x ಟೆಲಿಫೊಟೊ ಜೂಮ್​ ವ್ಯವಸ್ಥೆಯಿರುವ ಡ್ಯುಯಲ್​ ಕ್ಯಾಮೆರಾ  ಹೊಂದಿದೆ ಮೊಬೈಲ್​ ಇದಾಗಿದೆ. 3,500mAh ಬ್ಯಾಟರಿ ವ್ಯವಸ್ಥೆಯಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ