ಮೊದಲ ಬಾರಿಗೆ ಕ್ರೆಡಿಟ್​ ಕಾರ್ಡ್​ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸ್ಟೋರಿ ಓದಿ

ಆರ್​ಬಿಐ ಪ್ರಕಾರ, 2019ರ ಫೆಬ್ರವರಿಯಲ್ಲಿ  ಕ್ರೆಡಿಟ್​​ ಕಾರ್ಡ್​ಗಳ ಸಂಖ್ಯೆಯಲ್ಲಿ ಶೇ.24.71 ರಷ್ಟು ಹೆಚ್ಚಳವಾಗಿದೆ.

news18
Updated:May 5, 2019, 9:35 PM IST
ಮೊದಲ ಬಾರಿಗೆ ಕ್ರೆಡಿಟ್​ ಕಾರ್ಡ್​ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸ್ಟೋರಿ ಓದಿ
ಕ್ರೆಡಿಟ್​ ಕಾರ್ಡ್
news18
Updated: May 5, 2019, 9:35 PM IST
ಬ್ಯಾಂಕ್​​​ಗಳಿಂದ​ ತ್ವರಿತ ಗತಿಯಲ್ಲಿ ಸಾಲ ಪಡೆಯಲು ಇರುವ ವಿಧಾನಗಳಲ್ಲಿ ಕ್ರೆಡಿಟ್​ ಕಾರ್ಡ್​ಗಳು ಸಹಕಾರಿಯಾಗಿದೆ. ವೈಯಕ್ತಿಕ ಸಾಲ ನೀಡುವ ಕ್ರೆಡಿಟ್​ ಕಾರ್ಡ್​ಗಳು ಗ್ರಾಹಕರ ತುರ್ತು ಸಂದರ್ಭದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಅನೇಕ ಬ್ಯಾಂಕ್​ಗಳು ಕ್ರೆಡಿಟ್​ ಕಾರ್ಡ್​ಗಳನ್ನು ನೀಡಲು ಮುಂದಾಗುತ್ತದೆ. ಆದರೆ ಮೊದಲ ಬಾರಿಗೆ ಕ್ರೆಡಿಟ್​ ಕಾರ್ಡ್​ ಬಳಸುವ ಮುನ್ನ ಕೆಲ ಸಂಗತಿಗಳನ್ನು ತಿಳಿದುಕೊಂಡರೆ ಉತ್ತಮ.

ಕ್ರೆಡಿಟ್​ ಕಾರ್ಡ್​ ಬಳಸುವ ಮುನ್ನ ಬ್ಯಾಂಕ್​​ ನೀಡುವ ಡಿಸ್ಕೌಂಟ್, ರಿವಾರ್ಡ್ಸ್​​, ಡೀಲ್ಸ್​, ಕೋ- ಬ್ರ್ಯಾಂಡೆಡ್​ ಆಫರ್ಸ್​, ಕ್ಯಾಶ್​ ಬಗೆಗೆನ ಮಾಹಿತಿಗಳು ತಿಳಿದುಕೊಳ್ಳಬೇಕು. ಅಂತೆಯೇ, ಬಡ್ಡಿದರ, ಬಡ್ಡಿ ದರದಲ್ಲಾಗುವ ಬದಲಾವಣೆ, ಬಡ್ಡಿ ರಹಿತ ಉಚಿತ ಕ್ರೆಡಿಟ್​​ನ ಅವಧಿ, ಹಣ ಮರು ಪಾವತಿಯ ಕುರಿತು ತಿಳಿದುಕೊಳ್ಳ ಬೇಕಾಗಿರುವುದು ಅಗತ್ಯ.

ಆರ್​ಬಿಐ ಪ್ರಕಾರ, 2019ರ ಫೆಬ್ರವರಿಯಲ್ಲಿ  ಕ್ರೆಡಿಟ್​​ ಕಾರ್ಡ್​ಗಳ ಸಂಖ್ಯೆಯಲ್ಲಿ ಶೇ.24.71 ರಷ್ಟು ಹೆಚ್ಚಳವಾಗಿದೆ. 2018ರ ಅವಧಿಯಲ್ಲಿ 369.35 ಕೋಟಿ ಕ್ರೆಡಿಟ್​ ಕಾರ್ಡ್​ಗಳು ಬಳಕೆಯಲ್ಲಿದ್ದವು, 2019ರ ಫೆಬ್ರವರಿಯಲ್ಲಿ 460.62 ಕೋಟಿ ಕ್ರೆಡಿಟ್​ ಕಾರ್ಡ್​ಗಳನ್ನು ಬಳಸುತ್ತಿದ್ದರು ಎಂದು ತಿಳಿಸಿದೆ.

ಇದನ್ನೂ ಓದಿ: ರಾಹುಲ್​ ಸ್ಫೋಟಕ ಆಟಕ್ಕೆ ಮಂಕಾದ ಧೋನಿ ಪಡೆ: ಇಲ್ಲಿವೆ ಕೆಲ ಚಿತ್ರಪಟಗಳು

ಅಗತ್ಯಕ್ಕೆ ಅನುಗುಣವಾದ ಎಲ್ಲಾ ವ್ಯವಹಾರಗಳಿಗೂ ಕ್ರೆಡಿಟ್​ ಕಾರ್ಡ್​ ಬಳಸಬಹುದು. ಎಟಿಎಂ, ಆನ್​ಲೈನ್​ ಪಾವತಿ, ಮೊಬೈಲ್​ ರಿಚಾರ್ಜ್​, ಮಾಡಲು ಬಳಸಬಹುದಾಗಿದೆ. ಹೀಗಿದ್ದರೂ ಕ್ರೆಡಿಟ್​ ಕಾರ್ಡ್​ ಮೂಲಕ ಎಟಿಎಂನಿಂದ ಹಣ ಪಡೆಯಲು ಕೆಲ ನಿರ್ಬಂಧಗಳಿವೆ. ಮಾತ್ರವಲ್ಲದೆ, ಎಟಿಎಂ ಮೂಲಕ ನಗದು ಹಿಂತೆಗೆತಕ್ಕೆ ಹೆಚ್ಚಿನ ಬಡ್ಡಿ ದರ ವಿಧಿಸುತ್ತದೆ.

ಕ್ರೆಡಿಟ್​ ಕಾರ್ಡ್ ಬಿಲ್​​ಗಳನ್ನು ನಿಗದಿತ ದಿನಾಂಕದ ಮೊದಲೇ ಪಾವತಿಸಬೇಕು. ಇಲ್ಲದಿದ್ದರೆ ವಿಳಂಬ ಶುಲ್ಕವನ್ನು ಭರಿಸಬೇಕಾಗುತ್ತದೆ. ಸಕಾಲಕ್ಕೆ ಬಿಲ್​ ಪಾವತಿಸದೇ ಇದ್ದರೆ ಶೇ. 22-48ರ ಬಡ್ಡಿ ದರ ವಿಧಿಸಲು ಬ್ಯಾಂಕ್​ಗಳಿಗೆ ಅನುಮತಿ ಇದೆ. ಇನ್ನೂ ಆನ್​ಲೈನ್​​ ಮತ್ತು ಪಿಒಎಸ್​​ಗಳಲ್ಲಿ ಕ್ರೆಡಿಟ್​​ ಕಾರ್ಡ್​ ಬಳಸುವ ಮುನ್ನ ಎಚ್ಚರಿಕೆವಹಿಸಬೇಕು.

ಕ್ರೆಡಿಟ್​ ಕಾರ್ಡ್​ ಬಳಕೆದಾರರು ತಮ್ಮ ಕಾರ್ಡ್​ನ ವಿವರವನ್ನು ಅಪರಿಚಿತರಿಗೆ ನೀಡಬಾರದು. ಒಟಿಪಿ, ಕ್ರೆಡಿಟ್​ ಕಾರ್ಡ್​ ಸಂಖ್ಯೆ, 4 ಅಂಕಿಗಳ ಪಿನ್​ ಮಾಹಿತಿಯನ್ನು ಗೌಪ್ಯವಾಡಿ ಇಡಬೇಕು.
First published:May 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...