6G ಭಾರತಕ್ಕೆ ಯಾವಾಗ ಬರುತ್ತೆ? ಇಂಟರ್​ನೆಟ್​ ವೇಗ ಮತ್ತು ವಿಶೇಷತೆಯ ಬಗ್ಗೆ ಇಲ್ಲಿದೆ ಮಾಹಿತಿ

6G Internet: ಟೆಲಿಕಾಂ ಇಲಾಖೆ (ಡಿಒಟಿ) ರಾಜ್ಯ ಟೆಲಿಕಾಂ ಸಂಶೋಧನಾ ಕಂಪನಿ ಸಿ-ಡಾಟ್ ಗೆ ಜವಾಬ್ದಾರಿಯನ್ನು ವಹಿಸಿರುವ ಮತ್ತು 6G ನೆಟ್‌ವರ್ಕ್‌ಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಸಾಧ್ಯತೆಗಳನ್ನು ಅನ್ವೇಷಿಸಲು ಸರ್ಕಾರವು ಸಿ-ಡಾಟ್​ಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ

6G

6G

  • Share this:
    India 6G Internet: ಭಾರತದಲ್ಲಿ ಟೆಲಿಕಾಂ ಕಂಪನಿಗಳು ಪ್ರಸ್ತುತ 5G ಪ್ರಯೋಗಗಳನ್ನು ನಡೆಸುತ್ತಿದ್ದು, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ 5G ಸೇವೆಯನ್ನು ಆರಂಭಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ, 5G ಸೇವೆಯ ವಾಣಿಜ್ಯ ಹೊರಹೊಮ್ಮುವಿಕೆಗೆ ಮುಂಚಿತವಾಗಿ ಈಗಾಗಲೇ 6G ಬರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ . ಭಾರತದಲ್ಲಿ 6G ಗಾಗಿ ತಯಾರಿ ಕೂಡ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, 6G ಇಂಟರ್​ನೆಟ್​ 5Gಗಿಂತ 50 ಪಟ್ಟು ವೇಗವನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ.

    ವಾಸ್ತವವಾಗಿ, 6G ನೆಟ್‌ವರ್ಕ್‌ಗಾಗಿ ಸರ್ಕಾರವು ತಯಾರಿ ಆರಂಭಿಸಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಟೆಲಿಕಾಂ ಇಲಾಖೆ (ಡಿಒಟಿ) ರಾಜ್ಯ ಟೆಲಿಕಾಂ ಸಂಶೋಧನಾ ಕಂಪನಿ ಸಿ-ಡಾಟ್ ಗೆ ಜವಾಬ್ದಾರಿಯನ್ನು ವಹಿಸಿರುವ ಮತ್ತು 6G ನೆಟ್‌ವರ್ಕ್‌ಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಸಾಧ್ಯತೆಗಳನ್ನು ಅನ್ವೇಷಿಸಲು ಸರ್ಕಾರವು ಸಿ-ಡಾಟ್​ಗೆ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ.

    ಟೆಲಿಕಾಂ ಕಾರ್ಯದರ್ಶಿ ಕೆ ರಾಜಾರಾಮನ್, 6G ಗೆ ಸಂಬಂಧಿಸಿದ ತಾಂತ್ರಿಕ ನಿರೀಕ್ಷೆಗಳನ್ನು ಪರಿಗಣಿಸಬೇಕು ಹಾಗಾಗಿ 6G ಅನ್ನು ವಿಶ್ವವ್ಯಾಪಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಹಾಗೂ ಈ ಸಮಯದಲ್ಲಿ ಭಾರತೀಯರು ಇದರಲ್ಲಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದಾರೆ. ಭಾರತವು ಪ್ರಸ್ತುತ 5G ಪ್ರಯೋಗಕ್ಕೆ ಒಳಪಟ್ಟಿದ್ದು, 5G ನೆಟ್​​ವರ್ಕ್ ಅನ್ನು ವಾಣಿಜ್ಯಿಕವಾಗಿ ದಕ್ಷಿಣ ಕೊರಿಯಾ, ಚೀನಾ ಮತ್ತು ಯುಎಸ್ ಮಾರುಕಟ್ಟೆಯಲ್ಲಿ 2019 ರಲ್ಲಿ ಆರಂಭಿಸಲಾಗಿದೆ.

    Read Also: Maruti Suzuki: ಹಬ್ಬಕ್ಕೆ ಮಾರುತಿ ಸುಜುಕಿ​ ಕಡೆಯಿಂದ ಬಂಪರ್​ ಆಫರ್​, ಪ್ರತೀ ಕಾರಿನ ಮೇಲೆ ಕನಿಷ್ಠ 48,000 ಡಿಸ್ಕೌಂಟ್!

    ಪ್ರಸ್ತುತ ಅನೇಕ ಕಂಪನಿಗಳು 6G ನೆಟ್‌ವರ್ಕ್‌ಗಾಗಿ ಕೆಲಸ ಮಾಡುತ್ತಿವೆ. ಇವುಗಳಲ್ಲಿ 6G ಕೆಲಸ ಆರಂಭಿಸಿರುವ ಸ್ಯಾಮ್‌ಸಂಗ್, ಎಲ್‌ಜಿ, ಹುವಾವೇ ಮುಂತಾದ ದೈತ್ಯರ ಹೆಸರುಗಳು ಸೇರಿವೆ. 2028-2030 ರ ವೇಳೆಗೆ ಜಾಗತಿಕವಾಗಿ 6​​ಜಿ ನೆಟ್‌ವರ್ಕ್‌ಗಳನ್ನು ವಿಸ್ತರಿಸಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕಾಗಿಯೇ ಭಾರತವು 6ಜಿ ನೆಟ್‌ವರ್ಕ್‌ಗಾಗಿ ಸಿದ್ಧತೆಗಳನ್ನು ಆರಂಭಿಸಿದೆ ಎಂದು ಗಮನಿಸಬೇಕಾದ ವಿಷಯವಾಗಿದೆ.

    5G ನೆಟ್​ವರ್ಕ್​ ವೇಗ

    5G ನೆಟ್‌ವರ್ಕ್‌ಗೆ ಬಂದರೆ, ಇದು ಗರಿಷ್ಠ 20Gbps ವರೆಗಿನ ಡೇಟಾ ಡೌನ್‌ಲೋಡ್ ವೇಗವನ್ನು ನೀಡುತ್ತದೆ. ಮತ್ತೊಂದೆಡೆ, ಭಾರತದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆಯ ಸಮಯದಲ್ಲಿ ಡೇಟಾ ಡೌನ್‌ಲೋಡ್‌ನ ಗರಿಷ್ಠ ವೇಗ 3.7Gbps ಗೆ ತಲುಪಿದೆ. ಮೂರು ಕಂಪನಿಗಳಾದ ಏರ್‌ಟೆಲ್, ವಿಐ ಮತ್ತು ಜಿಯೋ 5ಜಿ ನೆಟ್‌ವರ್ಕ್ ಟ್ರಯಲ್‌ಗಳಲ್ಲಿ 3 ಜಿಬಿಪಿಎಸ್ ವರೆಗಿನ ಡೇಟಾ ಡೌನ್‌ಲೋಡ್‌ಗಳ ವೇಗ ಪರೀಕ್ಷೆಗಳನ್ನು ನಡೆಸಿದೆ.

    Read Also: WhatsApp, Gmail ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನ ವಶಕ್ಕೆ ಪಡೆಯುತ್ತಿರುವ ಚೀನಾ ಪೊಲೀಸರು

    6G ವೇಗ

    6G ನೆಟ್‌ವರ್ಕ್‌ನಲ್ಲಿ 1000Gbps ವೇಗ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಎಲ್‌ಜಿ 6ಜಿ ಟ್ರೇಲ್‌ಗಳನ್ನು ಆರಂಭಿಸಿದೆ ವರದಿಗಳು ಹರಿದಾಡುತ್ತಿವೆ. ಮಾಹಿತಿಯ ಪ್ರಕಾರ, ಕಂಪನಿಯು ಇತ್ತೀಚೆಗೆ 6G ನೆಟ್​ವರ್ಕ್​ ಅನ್ನು ಜರ್ಮನಿ, ಬರ್ಲಿನ್ ನಲ್ಲಿ ಟ್ರಯಲ್ ಮಾಡಲು ಆರಂಭಿಸಿತ್ತು. ಈ ಪರೀಕ್ಷೆಯ ಸಮಯದಲ್ಲಿ 100 ಮೀಟರ್ ದೂರದಲ್ಲಿ ಡೇಟಾ ಟೆಸ್ಟಿಂಗ್​ ಮಾಡಲಾಗಿದೆ. ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪರಿಗಣಿಸಲಾಗಿದೆ. 6ಜಿ ನೆಟ್‌ವರ್ಕ್‌ನಲ್ಲಿ, ನೀವು 6 ಜಿಬಿ ಚಲನಚಿತ್ರವನ್ನು ಕೇವಲ 51 ಸೆಕೆಂಡುಗಳಲ್ಲಿ 1000 ಮೆಗಾಬೈಟ್‌ಗಳ ವೇಗದಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಹೇಳಲಾಗುತ್ತಿದೆ.

    6G ನೆಟ್‌ವರ್ಕ್‌ ಕುರಿತಾದ ಪ್ರಮುಖ ವಿಚಾರಗಳು

    • 6G ನೆಟ್​ವರ್ಕ್ 5G.2 ಗಿಂತ 15 ಪಟ್ಟು ವೇಗವಾಗಿರುತ್ತದೆ-

    • ಜಪಾನ್ ನಲ್ಲಿ 6G ನೆಟ್​ವರ್ಕ್ 2030 ಬರಲಿದೆ

    • ಜಪಾನ್ ಹೊರತುಪಡಿಸಿ, ದಕ್ಷಿಣ ಕೊರಿಯಾ, ಚೀನಾ ಮತ್ತು ಫಿನ್ ಲ್ಯಾಂಡ್ ಕೂಡ 6G ನೆಟ್ ವರ್ಕ್ ಗೆ ತಯಾರಿ ನಡೆಸುತ್ತಿವೆ .

    • ಭಾರತದಲ್ಲೂ 6G ನೆಟ್​ವರ್ಕ್​ಗಾಗಿ ಕೆಲಸಗಳು ಆರಂಭಿಸಲಾಗಿದೆ.

    • 5- DW ವರದಿಯ ಪ್ರಕಾರ, 6G ನೆಟ್​ವರ್ಕ್​ಗಾಗಿ ಯುರೋಪಿಯನ್ ಯೂನಿಯನ್ ನಲ್ಲಿ ಲಕ್ಷಾಂತರ ಯೂರೋಗಳನ್ನು ಖರ್ಚು ಮಾಡಲಾಗುತ್ತಿದೆ.


    ಒಟ್ಟಿನಲ್ಲಿ 6G ಇಂಟರ್​ನೆಟ್​ 5Gಗಿಂತ 50 ಪಟ್ಟು ವೇಗವನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ.
    Published by:Harshith AS
    First published: