ಬಿಡುಗಡೆಯಾಗುತ್ತಿದೆ 61 ಹೊಸ ಎಮೋಜಿಗಳು


Updated:August 11, 2018, 11:25 AM IST
ಬಿಡುಗಡೆಯಾಗುತ್ತಿದೆ 61 ಹೊಸ ಎಮೋಜಿಗಳು

Updated: August 11, 2018, 11:25 AM IST
ಪ್ರತಿನಿತ್ಯ ವಾಟ್ಸಪ್​, ಫೇಸ್​ಬುಕ್​ ಹೈಕ್​ ಹೀಗೆ ಹಲವಾರು ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಸುವ ಸಂದೇಶಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ನೆರವಾಗುವ ಚಿತ್ರರೂಪದ ಸಂಕೇತಗಳನ್ನು ಅಥವಾ ಎಮೊಜಿಗಳ ಬಳಕೆ ಏರುತ್ತಲೇ ಇವೆ. ಹೀಗಾಗಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲು 62 ಪಾತ್ರಗಳು ಮತ್ತು ರೂಪಾಂತರಗಳನ್ನು ತಯಾರು ಮಾಡಲಾಗಿದೆ.

ಗಂಡು ಮತ್ತು ಹೆಣ್ಣಿ ರೂಪವನ್ನು ಪ್ರತಿನಿಧಿಸುವ ಹಾಗೂ ವಿಶೇಷ ಮೈಬಣ್ಣಗಳಿಗೆ ಹೋಲಿಕೆಯಾಗುವ 55 ವಿಶೇಷ ಎಮೋಜಿಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ದಿ ವರ್ಜ್​ ವರದಿ ಮಾಡಿದೆ. ಯುನಿಕೋಡ್​ ಕನ್ಸೋರ್ಟಿಯಂ ಎಂಬ ಸಂಸ್ಥೆ 179 ಮಂದಿ ನಿರ್ಮಿಸಿರುವ 61 ಎಮೋಜಿಗಳನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ.

ಈವರೆಗೆ ಸಿದ್ಧಗೊಂಡಿರುವ 61 ಎಮೀಜಿಗಳ ಪೈಕಿ, ಶ್ರವಣ ದೋಷದಿಂದ ಕೂಡಿರುವ ವ್ಯಕ್ತಿಯ ಎಮೋಜಿ ಕೂಡಾ ಸೇರ್ಪಡೆಯಾಗಿದೆ, ಮುಂದಿನ ಸೆಪ್ಟೆಂಬರ್​ನೊಳಗೆ ಈ ಪಟ್ಟಯಲ್ಲಿ ಮತ್ತಷ್ಟು ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಯುನಿಕೋಡ್​​ ಕನ್ಸೋರ್ಟಿಯಂ ಹೇಳಿದೆ.

ಇದರೊಂದಿಗೆ 2020ರಲ್ಲಿ ನಿಂಜಾ, ಮಿಲಿಟರಿ ಹೆಲ್ಮೆಟ್, ಮ್ಯಾಮತ್, ಗರಿ, ಡೋಡೋ, ಮಾಂತ್ರಿಕದಂಡ ಮತ್ತು ಸ್ಕ್ರೂಡ್ರೈವರ್ ಎಂಬ ಎಂಟು ಹೊಸ ಎಮೋಜಿಯನ್ನು ಅಳವಡಿಸಲಾಗಿದೆ.

ಈ ಹಿಂದೆ ಆ್ಯಪಲ್​ ಹೊಸ ಎಮೋಜಿಯನ್ನು ಪರಿಚಯಿಸಿತ್ತು, ಜುಲೈ 17ನ್ನು ವಿಶ್ವ ಎಮೋಜಿ ದಿನ ಎಂದೂ ಆಚರಿಸಲಾಗುತ್ತದೆ. ಎಮೋಟೈಕನ್‍ಗಳನ್ನು ಇಂದಿನ ಎಮೋಜಿಗಳ ಪೂರ್ವಜrಉ ಎಂದು ಹೇಳಲಾಗುತ್ತದೆ. ಜಪಾನ್​ನಲ್ಲಿ ಈ ಎಮೋಜಿಯನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...