WhatsApp: ನಿಮ್ಮ ವಾಟ್ಸ್ಆ್ಯಪ್‌ ಖಾತೆ ಸುರಕ್ಷಿತವಾಗಿರಬೇಕಾ? ಈ 6 ವೈಶಿಷ್ಟ್ಯಗಳನ್ನು ತಪ್ಪದೇ ಬಳಸಿ!

WhatsApp: ವಾಟ್ಸ್ಆ್ಯಪ್‌ ವೇದಿಕೆಯಲ್ಲಿ ಸ್ಪ್ಯಾಮ್, ಸ್ಟಾಕಿಂಗ್ ಮತ್ತಿತರ ಘಟನೆಗಳು ಕಾಣಿಸಿಕೊಂಡಿರುವುದೂ ಇದೆ. ಆದರೆ, ಫೇಸ್‌ಬುಕ್ ಒಡೆತನದ ಈ ಸಂಸ್ಥೆಯು ಬಳಕೆದಾರರು ಪರಿಶೀಲನೆ ಹಾಗೂ ಉಳಿಕೆಗಳನ್ನು ನೋಡುವ ಅವಕಾಶ ಒದಗಿಸಿದ್ದು, ಇದರಿಂದ ಬಳಕೆದಾರರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿರುವ ಕ್ಷಿಪ್ರ ಸಂದೇಶದ ವೇದಿಕೆ ವಾಟ್ಸ್ಆ್ಯಪ್ (Whatsapp)‌. ಸ್ಟ್ಯಾಟಿಸ್ಟಾ (Statista) ಸಂಸ್ಥೆಯ ಪ್ರಕಾರ, ಭಾರತದಲ್ಲಿ 480 ಮಿಲಿಯನ್‍ಗಿಂತ ಹೆಚ್ಚು ವಾಟ್ಸ್ಆ್ಯಪ್‌ ಬಳಕೆದಾರರಿದ್ದಾರೆ. ಕುಟುಂಬ (Family), ಗೆಳೆಯರೊಂದಿಗೆ (Friends) ಸಂಪರ್ಕ (Communication) ಹೊಂದಿರಲು ಹಾಗೆಯೇ ಎಲ್ಲರಿಗೂ ಅಲ್ಲದಿದ್ದರೂ ಹಲವಾರು ಮಂದಿಗೆ ಕೆಲಸ ನಿರ್ವಹಿಸಲು ಬೇಕಾಗಿರುವ ಜನಪ್ರಿಯ ವೇದಿಕೆ ವಾಟ್ಸ್ಆ್ಯಪ್‌ ಆಗಿದೆ. ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವುದರಿಂದ ಈ ವೇದಿಕೆಯು ಉಲ್ಲಂಘನೆಗೆ ಒಳಗಾಗುವ ಸಾಧ್ಯತೆಯೂ ಇದೆ.

    ವಾಟ್ಸ್ಆ್ಯಪ್‌ ವೇದಿಕೆಯಲ್ಲಿ ಸ್ಪ್ಯಾಮ್, ಸ್ಟಾಕಿಂಗ್ ಮತ್ತಿತರ ಘಟನೆಗಳು ಕಾಣಿಸಿಕೊಂಡಿರುವುದೂ ಇದೆ. ಆದರೆ, ಫೇಸ್‌ಬುಕ್ ಒಡೆತನದ ಈ ಸಂಸ್ಥೆಯು ಬಳಕೆದಾರರು ಪರಿಶೀಲನೆ ಹಾಗೂ ಉಳಿಕೆಗಳನ್ನು ನೋಡುವ ಅವಕಾಶ ಒದಗಿಸಿದ್ದು, ಇದರಿಂದ ಬಳಕೆದಾರರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದಾಗಿದೆ. ದತ್ತಾಂಶ ಖಾಸಗಿತನ ದಿನದ ಪ್ರಯುಕ್ತ ವಾಟ್ಸ್ಆ್ಯಪ್‌ ಹಂಚಿಕೊಂಡಿರುವ ಕೆಲವು ಸಲಹೆಗಳು ಈ ಕೆಳಕಂಡಂತಿವೆ:

    6 ಅಂಕಿಯ ಪಿನ್ ಸೃಷ್ಟಿಸಿ: 2 ಹಂತದ ಪರಿಶೀಲನಾ ವೈಶಿಷ್ಟ್ಯವು ವಾಟ್ಸ್ಆ್ಯಪ್‌ ಖಾತೆಗಳಿಗೆ ಹೆಚ್ಚುವರಿ ಸುರಕ್ಷತೆಯ ಪದರ ಒದಗಿಸುತ್ತದೆ. ಇದು ಮೂಲಭೂತವಾಗಿ ನಿಮ್ಮ ವಾಟ್ಸ್ಆ್ಯಪ್‌ ಖಾತೆಯನ್ನು ಪ್ರವೇಶಿಸಬೇಕಿದ್ದರೆ 6 ಅಂಕಿಯ ಪಿನ್ ಅನ್ನು ನಮೂದಿಸಬೇಕು ಎಂದರ್ಥ. ಬಳಕೆದಾರರು ಎರಡು ಹಂತದ ಪರಿಶೀಲನಾ ವೈಶಿಷ್ಟ್ಯವನ್ನು ಆ್ಯಪ್‍ನಲ್ಲಿರುವ ಸೆಟ್ಟಿಂಗ್ ಮೆನು ಮೂಲಕ ಕ್ರಿಯಾಶೀಲಗೊಳಿಸಿಕೊಳ್ಳಬಹುದಾಗಿದೆ.

    ನಿಮ್ಮ ಮಾತುಕತೆಗಳಿಗೆ ಸ್ಪರ್ಶ ಗುರುತು, ಮುಖ ಗುರುತು ಅಥವಾ ಬೆರಳಚ್ಚು ಬೀಗವನ್ನು ಅಳವಡಿಸಿಕೊಳ್ಳಿ: ಬಯೋಮೆಟ್ರಿಕ್ ಕ್ರಮಗಳ ಮೂಲಕ ಬಳಕೆದಾರರು ತಮ್ಮ ಖಾತೆಗಳಿಗೆ ಬೀಗ ಹಾಕಬಹುದಾದ ಅವಕಾಶ ಒದಗಿಸಿದೆ. ಇದರರ್ಥ ಐಫೋನ್‍ಗಳಲ್ಲಿ ಸ್ಪರ್ಶ ಗುರುತು ಅಥವಾ ಮುಖ ಗುರುತು ಮತ್ತು ಆ್ಯಂಡ್ರಾಯ್ಡ್‌ಗಳಲ್ಲಿ ಬೆರಳಚ್ಚು ಬೀಗದ ಅವಕಾಶವನ್ನು ಒದಗಿಸಿದೆ.

    ಕಾಣೆಯಾಗುವ ಸಂದೇಶಗಳ ಮರುಸ್ಥಾಪನೆ: ಈ ವೈಶಿಷ್ಟ್ಯವು ನಿರ್ದಿಷ್ಟ ಸಮಯದ ನಂತರ ಕಾಣೆಯಾಗುವ ಸಂದೇಶಗಳನ್ನು ಮರುಸ್ಥಾಪಿಸುವ ಅವಕಾಶವನ್ನು ವಾಟ್ಸ್ಆ್ಯಪ್‌ ಬಳಕೆದಾರರಿಗೆ ನೀಡುತ್ತದೆ. ಬಳಕೆದಾರರು ಸಮಯದ ಅವಧಿಯನ್ನು ಆಯ್ಕೆ ಮಾಡಬಹುದಾಗಿದೆ. ಬಳಕೆದಾರರು ಆಯ್ಕೆ ಮಾಡಿರುವ ಅವಧಿಯನ್ನು ಆಧರಿಸಿ ವ್ಯಕ್ತಿಗಳಿಗೆ ಅಥವಾ ಗುಂಪು ಮಾತುಕತೆಗಳಿಗೆ ರವಾನೆಯಾಗುವ ಹೊಸ ಸಂದೇಶಗಳು ಕ್ರಮವಾಗಿ 24 ಗಂಟೆಯ ನಂತರ, 7 ದಿನಗಳ ನಂತರ ಅಥವಾ 90 ದಿನಗಳ ನಂತರ ಕಾಣೆಯಾಗುತ್ತವೆ.

    ‘ಒಂದು ಬಾರಿ ವೀಕ್ಷಿಸಿದೆ’ ವೈಶಿಷ್ಟ್ಯ: ವಾಟ್ಸ್ಆ್ಯಪ್‌ ‘ಒಂದು ಬಾರಿ ವೀಕ್ಷಿಸಿದೆ’ ವೈಶಿಷ್ಟ್ಯವನ್ನೂ ಒದಗಿಸಿದೆ. ಈ ವೈಶಿಷ್ಟ್ಯ ಕೂಡಾ ಕಾಣೆಯಾಗುವ ಸಂದೇಶಗಳ ವೈಶಿಷ್ಟ್ಯದಂತೆಯೇ ಇದ್ದು, ಸಂದೇಶ ಸ್ವೀಕರಿಸಿದ ವ್ಯಕ್ತಿ ಒಮ್ಮೆ ಸಂದೇಶವನ್ನು ನೋಡಿದ ನಂತರ ಆ ಸಂದೇಶ ಕಾಣೆಯಾಗುತ್ತದೆ. ಇದರರ್ಥ ‘ಒಂದು ಬಾರಿ ವೀಕ್ಷಿಸಿದೆ’ ವೈಶಿಷ್ಟ್ಯವನ್ನು ಕ್ರಿಯಾಶೀಲಗೊಳಿಸಿ ಕಳುಹಿಸಲಾದ ಭಾವಚಿತ್ರ, ವಿಡಿಯೋಗಳನ್ನು ಕೇವಲ ಒಂದು ಬಾರಿ ಮಾತ್ರ ನೋಡಬಹುದಾಗಿದೆ. ಇದು ಯಥಾವತ್ ಇನ್ಸ್ಟಾಗ್ರಾಮ್‍ನ ‘ವ್ಯಾನಿಶ್ ಮೋಡ್’ನಂತೆಯೇ ಕಾರ್ಯನಿರ್ವಹಿಸುತ್ತದೆ.

    ಇದನ್ನು ಓದಿ: Reliance: ಮಾಧ್ಯಮ ಕ್ಷೇತ್ರಕ್ಕೆ ಪೈಪೋಟಿ ನೀಡಲು ಸಜ್ಜಾದ ರಿಲಯನ್ಸ್! ಏನು ಇದು ಹೊಸ ಪ್ಲ್ಯಾನ್?

    ಪ್ರತಿಬಂಧಿಸು ಮತ್ತು ವರದಿ ಮಾಡು: ಅಪಾಯಕಾರಿ ಸಂದೇಶಗಳನ್ನು ರವಾನಿಸುವ ಖಾತೆಗಳು, ಸ್ಪ್ಯಾಮ್ ಅಥವಾ ಸಂವಾದ ನಡೆಸಲು ಸಿದ್ಧವಿಲ್ಲದವರ ಖಾತೆಗಳನ್ನು ಸರಳವಾಗಿ ಪ್ರತಿಬಂಧಿಸುವ ಅವಕಾಶವನ್ನು ನೀಡಿದೆ. ಬಳಕೆದಾರರು ತೊಂದರೆ ನೀಡುವಂತಹ ಸಂದೇಶಗಳನ್ನು ರವಾನಿಸುವ ಖಾತೆಗಳ ಕುರಿತು ವರದಿ ಮಾಡುವ ಅವಕಾಶವನ್ನೂ ಒದಗಿಸಲಾಗಿದೆ. ಇದರೊಂದಿಗೆ, ಬಳಕೆದಾರರು ವರದಿ ಮಾಡಿರುವ ಸಂದೇಶಗಳನ್ನು ತಮ್ಮ ಫೋನ್‍ನಲ್ಲಿ ಸಂರಕ್ಷಿಸಿಟ್ಟುಕೊಂಡು, ವಾಸ್ತವ ಪರಿಶೀಲಕರಿಗೆ ಹಾಗೂ ಕಾನೂನು ಜಾರಿ ಅಧಿಕಾರಿಗಳಿಗೆ ಹಂಚಿಕೊಳ್ಳುವ ಆಯ್ಕೆಯನ್ನೂ ಒದಗಿಸಲಾಗಿದೆ.

    ಇದನ್ನು ಓದಿ: Technology: ಮಾನವ ಮೆದುಳಿಗೂ ಬಂತು ನ್ಯೂರಾಲಿಂಕ್ ಚಿಪ್! ಎಲೋನ್ ಮಸ್ಕ್ ನೇತೃತ್ವದಲ್ಲಿ ನಡೀತಿದೆ ಹೊಸ ಪ್ರಯೋಗ!

    ಗುಂಪುಗಳಲ್ಲಿ ನಿರ್ವಾಹಕರ ನಿಯಂತ್ರಣ: ವಾಟ್ಸ್ಆ್ಯಪ್‌ ಗುಂಪುಗಳಲ್ಲಿ ನಿಯಂತ್ರಣ ಸಾಧಿಸಲು, ಗುಂಪಿನ ನಿರ್ವಾಹಕರು ಯಾವ ವ್ಯಕ್ತಿ ಗುಂಪಿನಲ್ಲಿ ಸಂದೇಶ ರವಾನಿಸಬಹುದಾಗಿದೆ ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಕ್ರಿಯಾಶೀಲಗೊಳಿಸಬಹುದಾಗಿದೆ.
    First published: