5ಜಿ ಸೇವೆಯಲ್ಲಿ ಸಿನೆಮಾ ಡೌನ್​ಲೋಡ್​ಗೆ ಬೇಕಾಗುವ ಸಮಯವೆಷ್ಟು ಗೊತ್ತಾ..?

3G ನೆಟ್​ವರ್ಕ್​ನಲ್ಲಿ ಸಿನಿಮಾ ಡೌನ್​ಲೋಡ್​ ಮಾಡಲು 1ಗಂಟೆ 8ನಿಮಿಷಗಳ ಅವಧಿ ಬೇಕಾಗುತ್ತದೆ. 4G ನೆಟ್​ವರ್ಕ್​ನಲ್ಲಿ ಸಿನೆಮಾ ಡೌನ್​ಲೋಡ್​ ಮಾಡಲು 40ನಿಮಿಷಗಳ ಕಾಲವಕಾಶ ತೆಗೆದುಕೊಳ್ಳುತ್ತದೆ.

news18
Updated:April 8, 2019, 11:26 PM IST
5ಜಿ ಸೇವೆಯಲ್ಲಿ ಸಿನೆಮಾ ಡೌನ್​ಲೋಡ್​ಗೆ ಬೇಕಾಗುವ ಸಮಯವೆಷ್ಟು ಗೊತ್ತಾ..?
5G ನೆಟ್​ವರ್ಕ್
news18
Updated: April 8, 2019, 11:26 PM IST
ವಿಶ್ವದಾದ್ಯಂತ 5G ನೆಟ್​ವರ್ಕ್​ ಹಾವಳಿ ಜೋರಾಗಿದ್ದು, ಅಮೇರಿಕಾ, ಚೀನಾ, ಕೊರಿಯಾ ಮುಂತಾದ ದೇಶಗಳು ಈಗಾಗಲೇ 5G ಸೇವೆಯನ್ನು ಅಳವಡಿಸಿಕೊಂಡು ಅದರ ಸದ್ಬಳಕೆ ಮಾಡುತ್ತಿದೆ. 4G ಗಳಿಂಗಿತ ಹೆಚ್ಚಿನ ಸ್ಪೀಡ್​ನಲ್ಲಿ ಕಾರ್ಯ ನಿರ್ವಹಿಸುವ 5G ಜನರ ಮನಸ್ಸನ್ನು ಗೆದ್ದಿದೆ.

5G ಇಂಟರ್​ನೆಟ್​ ಲೋಕದ ಹೊಸ ಕ್ರಾಂತಿಯಾಗಿದ್ದು, ಕ್ಷಣಾರ್ಧದಲ್ಲೇ ಹಾಡೂ, ಸಿನೆಮಾ, ಗೇಮ್ಸ್​  ಮುಂತಾದವುಗಳನ್ನು ಡೌನ್​ಲೋಡ್​ ಮಾಡುವಷ್ಟು ವೇಗವನ್ನು ಹೊಂದಿದೆ.ಮುಂಬರುವ ದಿನಗಳಲ್ಲಿ ಭಾರತದಲ್ಲೂ 5G ಸೇವೆ ಆರಂಭವಾಗಲಿದೆ.  ಆದರೆ ಸಾಕಷ್ಟು ಜನರ ಮನಸಲ್ಲಿ ಮೂಡಿದ್ದ,  5G ಏಂದರೇನು.? 5Gಯ ಸ್ಪೀಡ್​ ಎಷ್ಟು.? ಭಾರತಕ್ಕೆ 5G ಆಗಮನ ಯಾವಾಗ? ಮುಂತಾದ ಪ್ರಶ್ನೆಗಳಿಗೆ ಉತ್ತರ ರೂಪದ ಮಾಹಿತಿಯನ್ನ ಈ ಕೆಳಗೆ ನೀಡಲಾಗಿದೆ.

5G ಎಂದರೇನು.?

5ಜಿ ಐದನೇ ತಲೆಮಾರಿನ ಸೆಲ್ಯುಲರ್ ತಂತ್ರಜ್ಞಾನ. 5ಜಿ ನೆಟ್‌ವರ್ಕ್‌ ಸಂಪೂರ್ಣ ಅಳವಡಿಕೆಯಾದಾಗ ಸೆಕೆಂಡಿಗೆ 1 GB ಡೌನ್‌ಲೋಡ್‌ ವೇಗವನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ಇದು ಪ್ರಸ್ತುತ ಇರುವ ಡೇಟಾ ವೇಗದ 100 ಪಟ್ಟು ಹೆಚ್ಚಿರುತ್ತದೆ.

5G ನೆಟ್​ವರ್ಕ್​ ಪ್ರಾರಂಭಿಸಿದ ಮೊದಲ ದೇಶ

ಚೀನಾ ದೇಶ ಮೊದಲ 5G ನೆಟ್​ವರ್ಕ್​ ಅನ್ನು ಪ್ರಾರಂಭಿಸಿದೆ. ಚೀನಾದ ಶಾಂಘೈ ನಗರದಲ್ಲಿ 5G ನೆಟ್​​ವರ್ಕ್​ ಅನ್ನು ಅಳವಡಿಸಲಾಗಿದೆ. ವಿಶ್ವದ ಕೆಲ ದೇಶ 5G ನೆಟ್​ವರ್ಕ್ ಪ್ರಾರಂಭಿಸುವಲ್ಲಿ ಪ್ರಬಲ ಪೈಪೋಟಿಯಲ್ಲಿದ್ದವು. ಆದರೆ ಚೀನಾದ ದೇಶವು ಅವನ್ನು ಹಿಂದಿಕ್ಕಿ 5G ನೆಟ್​ವರ್ಕ್ ಪ್ರಾರಂಭಿಸಿದೆ. ಚೀನಾದಲ್ಲಿ 1.8 ಶತಕೋಟಿ ಜನರು ಮೊಬೈಲ್​ ಫೋನ್​ ಬಳಸುತ್ತಿದ್ದಾರೆ. ಸಾಕಷ್ಟು ಜನರು 5Gಸೇವೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ದೇಶಪ್ರೇಮಿಗಳು V/S ದೇಶದ್ರೋಹಿಗಳ ನಡುವಿನ ಧರ್ಮಯುದ್ಧ ಈ ಲೋಕಸಭಾ ಚುನಾವಣೆ: ಪ್ರಹ್ಲಾದ್​​ ಜೋಶಿ!

ಭಾರತಕ್ಕೆ 5ಜಿ ಯಾವಾಗ..?

ಸೆಪ್ಟೆಂಬರ್​ 2018 ರ ಹೊಸ ಟೆಲಿಕಾಂ ನೀತಿ 'ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ (ಎನ್​ಡಿಸಿಪಿ 2018)' ಅನ್ನು ಸರ್ಕಾರ ಅಂಗೀಕರಿಸಿದೆ. ಹೀಗಾಗಿ ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸಲು 3300-3600 Mhz ಬ್ಯಾಂಡ್​ನ 8,293 Mhz ಯುನಿಟ್​ ಹರಾಜು ನಡೆಯಲಿದೆ. ಈ ನೀತಿಯಡಿಯಲ್ಲಿ ಟೆಲಿಕಾಂ ವಲಯದಲ್ಲಿ ಸುಮಾರು 100 ಶತಕೋಟಿ ಹೂಡಿಕೆಯ ಬಗ್ಗೆ ಚರ್ಚೆ ನಡೆದಿದೆ. ಈ ಮೂಲಕ 2022 ರ ವೇಳೆ ದೇಶದ ಎಲ್ಲಾ ಗ್ರಾಮ ಪಂಚಾಯತ್​ಗಳಲ್ಲೂ 10Gbps ಇಂಟರ್​ನೆಟ್​ ಸೇವೆಯನ್ನು ಸರ್ಕಾರ ಒದಗಿಸಲಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ದೇಶ ಖಾಸಗಿ ಟೆಲಿಕಾಂ ಕಂಪೆನಿಗಳು 5G  ಸೇವೆಯನ್ನು ನೀಡಲು ಆಸಕ್ತಿ ಹೊಂದಿದೆ ಎಂದು ಹೇಳಲಾಗಿದೆ.

ಸೆಕೆಂಡಿನಲ್ಲಿ ಸಿನೆಮಾ ಡೌನ್​ಲೋಡ್​ ಮಾಡಿ

ವಿವಿಧ ನೆಟ್​​ವರ್ಕ್​ನ​ ಸ್ಪೀಡಿನ ಕುರಿತು ಅಧ್ಯಾಯನ ನಡೆಸಿದಾಗ, 5G ಸೇವೆ ಮೂಲಕ 2GB ಸಿನೆಮಾವನ್ನು ಡೌನ್​ಲೋಡ್​ ಮಾಡಲು 35 ಸೆಕೆಂಡು ಕಾಲವಕಾಶವನ್ನು ತೆಗೆದುಕೊಳ್ಳುತ್ತದೆ.ಇನ್ನೂ 3G ನೆಟ್​ವರ್ಕ್​ನಲ್ಲಿ ಸಿನಿಮಾ ಡೌನ್​ಲೋಡ್​ ಮಾಡಲು 1ಗಂಟೆ 8ನಿಮಿಷಗಳ ಅವಧಿ ಬೇಕಾಗುತ್ತದೆ. 4G ನೆಟ್​ವರ್ಕ್​ನಲ್ಲಿ ಸಿನೆಮಾ ಡೌನ್​ಲೋಡ್​ ಮಾಡಲು 40ನಿಮಿಷಗಳ ಕಾಲವಕಾಶ ತೆಗೆದುಕೊಳ್ಳುತ್ತದೆ.  4G ಎಲ್​​ಟಿಇ ನೆಟವರ್ಕ್​ನಲ್ಲಿ ಸಿನೆಮಾ ಡೌನ್​ ಲೋಡ್​ ಮಾಡಲು 27 ನಿಮಿಷಗಳ ಕಾಲವಕಾಶ ತೆದುಕೊಳ್ಳುತ್ತದೆ. ಜಿಗಾಬಿಟ್​ ಎಲ್​​ಟಿಇ  ಸೇವೆಯಲ್ಲಿ ಸಿನೆಮಾ ಡೌನ್​ ಲೋಡ್​ ಮಾಡಲು 61 ಸೆಕೆಂಡುಗಳ ಕಾಲವಕಾಶ ತೆಗೆದುಕೊಳ್ಳುತ್ತದೆ.​First published:April 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ