• Home
  • »
  • News
  • »
  • tech
  • »
  • Jio 5G Network: ಜಿಯೋದಿಂದ ಮತ್ತೆ ಎರಡು ನಗರಗಳಲ್ಲಿ 5ಜಿ ಸೇವೆ ಆರಂಭ! ಇಲ್ಲಿದೆ ಕಂಪ್ಲೀಟ್​ ಮಾಹಿತಿ

Jio 5G Network: ಜಿಯೋದಿಂದ ಮತ್ತೆ ಎರಡು ನಗರಗಳಲ್ಲಿ 5ಜಿ ಸೇವೆ ಆರಂಭ! ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಜಿಯೋ 5ಜಿ

ಜಿಯೋ 5ಜಿ

ರಿಲಯನ್ಸ್​​ ಜಿಯೋ ಕಂಪನಿ ಈ ಹಿಂದೆ ದೆಹಲಿ ಮತ್ತು ಬೆಂಗಳೂರಿನ ಹಲವು ನಗರಗಳಲ್ಲಿ 5ಜಿ ನೆಟ್​​ವರ್ಕ್​ ಸೇವೆಯನ್ನು ಆರಂಭಿಸಿದೆ. ಇದೀಗ ಕೇರಳದ ಎರಡು ನಗರಗಳಲ್ಲಿ ಜಿಯೋ 5ಜಿ ನೆಟ್​ವರ್ಕ್​ ಸೇವೆ ಮತ್ತು ವೈಫೈ ಸೇವೆಯನ್ನು ಆರಂಭಿಸಿದೆ.

  • Share this:

    ಟೆಲಿಕಾಂ ಕಂಪನಿಗಳಲ್ಲಿ (Telecom Company) ನಂಬರ್ 1 ಸ್ಥಾನವನ್ನು ಗಳಿಸಿರುವ ಜಿಯೋ ಕಂಪನಿ (Jio Company) ಈ ವರ್ಷ ಹಲವಾರು ಕಡೆಗಳಲ್ಲಿ ತನ್ನ 5ಜಿ ನೆಟ್​​ವರ್ಕ್ (5G Network)​ ಸೇವೆಯನ್ನು ಆರಂಭಿಸಿದೆ. ಇದೀಗ ವರ್ಷಾಂತ್ಯದಲ್ಲಿ ಮತ್ತೆ ಎರಡು ನಗರಗಳಲ್ಲಿ ರಿಲಯನ್ಸ್​ ಜಿಯೋ ಟ್ರೂ 5ಜಿ ನೆಟ್​​ವರ್ಕ್​ ಸೇವೆಯನ್ನು ಪ್ರಾರಂಭಿಸಿದೆ. ಕೊಚ್ಚಿ ನಗರ ಮತ್ತು ಗುರುವಾಯೂರ್ ದೇವಾಲಯದ ಆವರಣದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋದಿಂದ ಟ್ರೂ 5G ಸೇವೆಗಳನ್ನು ಕೇರಳದಲ್ಲಿ ಪ್ರಾರಂಭಿಸಲಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಡಿಸೆಂಬರ್ 20ನೇ ಮಂಗಳವಾರದಂದು ಕೊಚ್ಚಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕಾಗಿ ಜಿಯೋ ಟ್ರೂ 5ಜಿ (Jio True 5G) ಮತ್ತು ಜಿಯೋ ಟ್ರೂ 5ಜಿ ಚಾಲಿತ ವೈಫೈ ಸೇವೆಗಳನ್ನು ಡಿಜಿಟಲ್ ಆಗಿ ತಿರುವನಂತಪುರದಿಂದ ಪ್ರಾರಂಭಿಸಿದರು.


    ರಿಲಯನ್ಸ್​​ ಜಿಯೋ ಕಂಪನಿ ಈ ಹಿಂದೆ ದೆಹಲಿ ಮತ್ತು ಬೆಂಗಳೂರಿನ ಹಲವು ನಗರಗಳಲ್ಲಿ 5ಜಿ ನೆಟ್​​ವರ್ಕ್​ ಸೇವೆಯನ್ನು ಆರಂಭಿಸಿದೆ. ಇದೀಗ ಕೇರಳದ ಎರಡು ನಗರಗಳಲ್ಲಿ ಜಿಯೋ 5ಜಿ ನೆಟ್​ವರ್ಕ್​ ಸೇವೆ ಮತ್ತು ವೈಫೈ ಸೇವೆಯನ್ನು ಆರಂಭಿಸಿದೆ.


    ಕೇರಳದಲ್ಲಿ 5ಜಿ ಸೇವೆಗೆ 6 ಸಾವಿರ ಕೋಟಿ ಹೂಡಿಕೆ


    ಕೇರಳದಲ್ಲಿ 5ಜಿ ನೆಟ್‌ವರ್ಕ್ ಅನ್ನು ನಿಯೋಜಿಸಲು ಜಿಯೋ 6 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ. ಈ ನಿರ್ಧಾರ ಕೇರಳ ರಾಜ್ಯದ ಬೆಳವಣಿಗೆಗೆ ಕಾರಣವಾಗಬಹುದು ಅಂತಾನೂ ಹೇಳ್ಬಹುದು. ಜಿಯೋ ಈ ತಿಂಗಳ ಅಂತ್ಯದ ವೇಳೆಗೆ ತಿರುವನಂತಪುರದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಲಿದ್ದಾರೆ, ನಂತರ ಜನವರಿ 2023ರ ವೇಳೆಗೆ ತ್ರಿಶೂರ್, ಕೋಳಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ವಿಸ್ತರಿಸಲಿದ್ದಾರೆ. 2023ರ ಡಿಸೆಂಬರ್ ವೇಳೆಗೆ ಕೇರಳದ ಪ್ರತಿ ಗ್ರಾಮದಲ್ಲೂ ಜಿಯೋ ಸೇವೆ ವಿಸ್ತರಿಸಲಿದೆ ಎಂದು ಹೇಳಲಾಗಿದೆ.


    ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟಿದೆ ಇನ್ಫಿನಿಕ್ಸ್​ನ ಎರಡು ಸ್ಮಾರ್ಟ್​ಫೋನ್​ಗಳು! ಕ್ಯಾಮೆರಾ ಹೇಗಿದೆ ಗೊತ್ತಾ?


    5ಜಿ ಸೇವೆ ಕೇರಳದ ತಂತ್ರಜ್ಞಾನ ಬೆಳವಣಿಗೆಗೆ ಕಾರಣ


    ಮುಖ್ಯವಾಗಿ ಹೇಳಬೇಕಾದರೆ ಕೇರಳ ರಾಜ್ಯದ ಸರ್ಕಾರವು ಸ್ಟಾರ್ಟ್​ಅಪ್​ ತಂತ್ರಜ್ಞಾನದ ಮೇಲೆ ಹೆಚ್ಚು ಗಮನ ಹರಿಸಿದೆ. ಇದೀಗ ರಾಜ್ಯದಲ್ಲಿ 5ಜಿ ಸೇವೆ ಆರಂಭದ ಹಿನ್ನಲೆಯಲ್ಲಿ ಐಒಟಿ (IoT), ಬ್ಲಾಕ್‌ಚೈನ್ (Blockchain), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ (AI), ಮಶೀನ್‌ ಲರ್ನಿಂಗ್ ಮತ್ತು ಡೇಟಾ ಅನಾಲಿಟಿಕ್ಸ್‌ನಂತಹ ಹೊಸ ತಂತ್ರಜ್ಞಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಟಾರ್ಟ್ಅಪ್‌ಗಳಿಗೆ ಉತ್ತಮ ಕಾರ್ಯನಿರ್ವಹಿಸಲಿದೆ. 5ಜಿ ನೆಟ್​ವರ್ಕ್​ ಆಗಮನವು ಕೇರಳದಲ್ಲಿ ಈ ಸ್ಟಾರ್ಟ್‌ಅಪ್‌ಗಳನ್ನು ಮತ್ತಷ್ಟು ಅಬಿವೃದ್ಧಿ ಮಾಡುತ್ತದೆ.


    ಎರಡು ಕಡೆಗಳಲ್ಲಿ ಜಿಯೋ 5ಜಿ ಆರಂಭ


    ಈ ಸಂದರ್ಭದಲ್ಲಿ ಜಿಯೋ ವಕ್ತಾರರು ಮಾತನಾಡಿ, ಕೇರಳದ ಕೊಚ್ಚಿ ಮತ್ತು ಗುರುವಾಯೂರ್ ದೇವಸ್ಥಾನದಲ್ಲಿ ಜಿಯೋ ಟ್ರೂ 5G ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಜಿಯೋ ಟ್ರೂ 5ಜಿ ನೆಟ್‌ವರ್ಕ್ ಕೇರಳದ ಪ್ರತಿಯೊಂದು ನಗರಗಳಲ್ಲೂ ವಿಸ್ತರಿಸಲಿದೆ ಎಮದು ಹೇಳಿದ್ದಾರೆ.


    ಜಿಯೋ 5ಜಿ ಸ್ಪೀಡ್​


    ಡಿಸೆಂಬರ್ 20 ರಿಂದ ಕೊಚ್ಚಿ ಮತ್ತು ಗುರುವಾಯೂರ್‌ನಲ್ಲಿ ರಿಲಯನ್ಸ್​ ಜಿಯೋದಿಂದ ಮೊದಲ 5ಜಿ ನೆಟ್​ವರ್ಕ್​ ಸೇವೆ ಆರಂಭವಾಯಿತು. ಇದೀಗ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ, ಆ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್ + ವೇಗದಲ್ಲಿ ಅನ್ಲಿಮಿಟೆಡ್​ ಡೇಟಾವನ್ನು ಈ ಆಫರ್​ನಲ್ಲಿ ಪಡೆಯಬಹುದಾಗಿದೆ.


    ದೇಶದಾದ್ಯಂತ 5ಜಿ ನೆಟ್​ವರ್ಕ್​ ಹರಡಲು ಕಂಪನಿಯಿಂದ ಹಗಲಿರುಳು ಶ್ರಮ


    ಪ್ರತಿ ಭಾರತೀಯರಿಗೂ ಜಿಯೋ ಟ್ರೂ 5ಜಿ ಸೇವೆಯನ್ನು ತಲುಪಿಸಲು ಜಿಯೋ ಇಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೇರಳವನ್ನು ಡಿಜಿಟಲೈಸ್ ಮಾಡಲು, ಅದನ್ನು ಮುಂದಕ್ಕೆ ಒಯ್ಯಲು ಬೆಂಬಲ ನೀಡಿದ ಮುಖ್ಯಮಂತ್ರಿ ಮತ್ತು ಕೇರಳ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.

    Published by:Prajwal B
    First published: