ಟೆಲಿಕಾಂ ಕಂಪೆನಿಗಳಲ್ಲಿ (Telecom Company) ಭಾರೀ ಮುಂಚೂಣಿಯಲ್ಲಿರುವ ಕಂಪೆನಿಯೆಂದರೆ ಅದು ಜಿಯೋ ಅಂತಾನೇ ಹೇಳ್ಬಹುದು. ಈ ಕಂಪೆನಿ ತನ್ನ ಗ್ರಾಹಕರಿಗೆ ವಿಶೇಷ ಆಫರ್ಗಳನ್ನು ನೀಡುತ್ತಾ ತನ್ನತ್ತ ಆಕರ್ಷಿಸಿಕೊಂಡಿದೆ. ಇದೀಗ ಜಿಯೋ ಹೊಸ ರೂಪದಲ್ಲಿ ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂದರೆ ತಪ್ಪಾಗಲಾರದು. ಜಿಯೋ ಕಂಪೆನಿ (Jio Company) ದೇಶದೆಲ್ಲೆಡೆ ಇದೀಗ 5ಜಿ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಜಿಯೋ ಗ್ರಾಹಕರು ಇನ್ನಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಜಿಯೋ ದೇಶದ ಹಲವು ಭಾಗಗಳಲ್ಲಿ ತನ್ನ ಟ್ರೂ 5ಜಿ ಸೇವೆಯನ್ನು (True 5G Network) ಪ್ರಾರಂಭಿಸಿತ್ತು. ಇದೀಗ ಮತ್ತೆ ಈ ಕಂಪೆನಿ ದೇಶದ 16 ನಗರಗಳಲ್ಲಿ ಜನವರಿ 17, 2023ರಂದು ವಿಸ್ತರಿಸಿದೆ.
ರಿಲಯನ್ಸ್ ಜಿಯೋ ಸದ್ಯ ವಿಶ್ವದಾದ್ಯಂತ 5ಜಿ ಸೇವೆಯನ್ನು ನೀಡುವ ಮೂಲಕ ಭಾರೀ ಸುದ್ದಿಯಲ್ಲಿದೆ. ಜನವರಿ 17, 2023ರಂದು ದೇಶದ 16 ನಗರಗಳಲ್ಲಿ ತನ್ನ ಜಿಯೋ ಟ್ರೂ 5ಜಿ ಸೇವೆಯನ್ನು ವಿಸ್ತರಿಸಿದೆ. ಹಾಗಿದ್ರೆ ಯಾವೆಲ್ಲಾ ನಗರಗಳಲ್ಲಿ ಎಂಬ ಕುತೂಹಲ ನಿಮಗಿದ್ರೆ ಈ ಲೇಖನವನ್ನೊಮ್ಮೆ ಓದಿ.
ಎಲ್ಲೆಲ್ಲಿ ಜಿಯೋ 5ಜಿ ಸೇವೆ ಲಭ್ಯ
ಜಿಯೋ ಸದ್ಯ ತನ್ನ ಟ್ರೂ 5ಜಿ ಸೇವೆಯನ್ನು ಕರ್ನಾಟಕದಲ್ಲಿ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿ ನಗರಗಳಲ್ಲಿ ವಿಸ್ತರಿಸಿದೆ. ಇನ್ನು ಆಂಧ್ರಪ್ರದೇಶದ ಕಾಕಿನಾಡ, ಕರ್ನೂಲ್, ಅಸ್ಸಾಂನ ಸಿಲ್ಚಾರ್, ಮಲಪ್ಪುರಂ ಸೇರಿದಂತೆ 16 ನಗರಗಳಲ್ಲಿ ಜನವರಿ 17, 2023ರಂದು ವಿಸ್ತರಿಸುವುದಾಗಿ ಘೋಷಿಸಿದೆ.
ಈ ಹೇಳಿಕೆಯಲ್ಲಿ ಕೇರಳದ ಪಾಲಕ್ಕಾಡ್, ಕೊಟ್ಟಾಯಂ, ಕಣ್ಣೂರು, ತಮಿಳುನಾಡಿನ ತಿರುಪ್ಪೂರ್, ತೆಲಂಗಾಣದ ನಿಜಾಮಾಬಾದ್, ಖಮ್ಮಂ ಮತ್ತು ಉತ್ತರ ಪ್ರದೇಶದ ಬರೇಲಿ ನಗರಗಳು ಸಹ ಒಳಗೊಂಡಿದೆ.
5ಜಿ ವಿಸ್ತರಣೆ ಬಗ್ಗೆ ಜಿಯೋ ವಕ್ತಾರರ ಅಭಿಪ್ರಾಯ
ಈ ನಗರಗಳಲ್ಲಿ 5ಜಿಯನ್ನು ವಿಸ್ತರಿಸಿದ ನಂತರ ಮಾತನಾಡಿದ ಜಿಯೋ ವಕ್ತಾರರು "ದೇಶದ 7 ರಾಜ್ಯಗಳ 16 ನಗರಗಳಲ್ಲಿ ನಮ್ಮ ಜಿಯೋ ಟ್ರೂ 5ಜಿ ಸೇವೆಯನ್ನು ವಿಸ್ತರಿಸಲು ನಾವು ತುಂಬಾ ಹೆಮ್ಮೆ ಪಡುತ್ತೇವೆ. ಈ 16 ನಗರಗಳು ಸೇರಿ ಇದುವರೆಗೆ ಜಿಯೋ ಟ್ರೂ 5ಜಿ ಸೇವೆ 134 ನಗರಗಳಲ್ಲಿ ಸ್ಥಾಪನೆಯಾಗಿದೆ. ಇನ್ನು ಈ ಬಾರಿ 2023ರಲ್ಲಿ ಜಿಯೋ ಟ್ರೂ 5ಜಿಯ ಪ್ರಯೋಜನಗಳನ್ನು ದೇಶದ ಪ್ರತಿಯೊಬ್ಬ ಜಿಯೋ ಬಳಕೆದಾರರು ಪಡೆಯವುದೇ ನಮ್ಮ ಉದ್ದೇಶವಾಗಿದೆ. ಇದಕ್ಕಾಗಿಯೇ ನಾವು ಜಿಯೋದಲ್ಲಿ ನೆಟ್ವರ್ಕ್ನ ವೇಗವನ್ನು ಇನ್ನೂ ಹೆಚ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಏಕೈಕ ಟೆಲಿಕಾಂ ಅಪರೇಟರ್ ಸಂಸ್ಥೆ
ಜಿಯೋ ಬೀದರ್, ದಾವಣಗೆರೆ, ಗದಗ, ಹೊಸಪೇಟೆ, ಶಿವಮೊಗ್ಗದ ನಗರಗಳಲ್ಲಿ 5ಜಿ ಸೇವೆಯನ್ನು ಸ್ಥಾಪಿಸಿದ ಏಕೈಕ ಮತ್ತು ಮೊದಲ ಟೆಲಿಕಾಂ ಕಂಪೆನಿಯೆಂದು ಜಿಯೋ ಗುರುತಿಸಿಕೊಂಡಿದೆ. ಇನ್ನು ಈ ಸೇವೆ ಮೂಲಕ ಗ್ರಾಹಕರು ಯಾವುದೇ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನ್ಲಿಮಿಟೆಡ್ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ ಕಮ್ ಆಫರ್ಗೆ ಆಹ್ವಾನಿಸಲಾಗಿದೆ.
ಏನೆಲ್ಲಾ ಸೌಲಭ್ಯಗಳು ಸಿಗಲಿವೆ?
ಈ ನಗರಗಳಲ್ಲಿ ಹೊಸದಾಗಿ ಪ್ರಾರಂಭಿಸಲಾದ ಈ ಟ್ರೂ 5ಜಿ ಸೇವೆಯಿಂದ ಪ್ರಮುಖ ಪ್ರವಾಸೋದ್ಯಮ ಮತ್ತು ವ್ಯವಹಾರದ ನಗರಗಳು ಹಾಗೂ ಪ್ರಮುಖ ಶಿಕ್ಷಣ ಕೇಂದ್ರಗಳು ಇನ್ನಷ್ಟು ಅಭಿವೃದ್ಧಿಯಾಗಲಿವೆ.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ನೋಕಿಯಾದ ಹೊಸ ಟ್ಯಾಬ್! 8000mAh ಬ್ಯಾಟರಿ ಬ್ಯಾಕಪ್
ಜಿಯೋ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ನೆಟ್ವರ್ಕ್ ಅನ್ನು ಪಡೆಯುವುದು ಮಾತ್ರವಲ್ಲದೇ, ಜತೆಗೆ ಇ-ಕಾಮರ್ಸ್, ಶಿಕ್ಷಣ, ಆಟೋಮೇಷನ್, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಇನ್ನಷ್ಟು ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ