• Home
 • »
 • News
 • »
 • tech
 • »
 • 5G Network: ಹೈದರಾಬಾದ್‌ನಲ್ಲಿ 5ಜಿ ಸ್ಟಾರ್ಟ್! ದೇಶದೆಲ್ಲೆಡೆ ಯಾವಾಗ ಸಿಗುತ್ತೆ ಈ ಸೇವೆ?

5G Network: ಹೈದರಾಬಾದ್‌ನಲ್ಲಿ 5ಜಿ ಸ್ಟಾರ್ಟ್! ದೇಶದೆಲ್ಲೆಡೆ ಯಾವಾಗ ಸಿಗುತ್ತೆ ಈ ಸೇವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

5ಜಿ ಸೇವೆಯು ಕೆಲವೊಂದು ನಗರಗಳಲ್ಲಿ ಪ್ರಾರಂಭವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ದೇಶದಾದ್ಯಂತ ಬರಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ. ಈ 5ಜಿ ಸೇವೆ ಲಭ್ಯವಿರುವ ಪ್ರದೇಶಗಳಲ್ಲಿ ಯಾವ ರೀತಿ 5ಜಿ ಸೇವೆಯನ್ನು ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ...

 • Share this:

  ಇದೀಗ ದೇಶದೆಲ್ಲೆಡೆ 5ಜಿ ನೆಟ್‌ವರ್ಕ್ (5G Network) ಬಗ್ಗೆ‌ ಮಾತುಕತೆಗಳಾಗುತ್ತಿದೆ. ಈ ಮಧ್ಯೆ ಜಿಯೋ (Jio) ಕಳೆದ ತಿಂಗಳು ತನ್ನ 5ಜಿ ಸೇವೆಯನ್ನು ವಾರಣಾಸಿ, ಕೋಲ್ಕತ್ತಾ, ದೆಹಲಿ ಮತ್ತು ಮುಂಬೈನಲ್ಲಿ ಮೊದಲು ಜಿಯೋ ಟ್ರೂ 5ಜಿ (Jio True 5G ) ಸೇವೆಯನ್ನು ಪ್ರಾರಂಭಿಸಲಾಗಿದೆ. ಇದೀಗ ರಿಲಯನ್ಸ್‌ ಕಂಪನಿ (Reliance Company) ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ 5ಜಿಯನ್ನು ಪ್ರಾರಂಭಿಸಿದೆ. ಈಗ ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಣಾಸಿ, ನಾಥದ್ವಾರ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ 5G ಸೇವೆಗಳು ಲಭ್ಯವಿದೆ. 500 Mbps ನಿಂದ 1 Gbps ವರೆಗಿನ ವೇಗದೊಂದಿಗೆ ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಜಿಯೋ 5ಜಿ ಸೇವೆಗಳನ್ನು ಬಳಸಬಹುದು.


  ಇದೀಗ 5ಜಿ ಸೇವೆಯು ಕೆಲವೊಂದು ನಗರಗಳಲ್ಲಿ ಪ್ರಾರಂಭವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಪ್ರಪಂಚದಾದ್ಯಂತ ಬರಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ. ಇನ್ನು ಈ 5ಜಿ ಸೇವೆ ಲಭ್ಯವಿರುವ ಪ್ರದೇಶಗಳಲ್ಲಿ ಯಾವ ರೀತಿ 5ಜಿ ಸೇವೆಯನ್ನು ಪಡೆಯಬಹುದು ಎಂದು ಈ ಕೆಳಗೆ ತಿಳಿಸಲಾಗಿದೆ.


  5ಜಿಗಾಗಿ ಮೈ ಜಿಯೋ ಅಪ್ಲಿಕೇಶನ್‌ ಬಳಸಿ:


  ಜಿಯೋ 5ಜಿ ನೆಟ್‌ವರ್ಕ್ ಲಭ್ಯವಿರುವ ನಗರಗಳು ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಬಳಕೆದಾರರು 5ಜಿ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಒಮ್ಮೆ ಮೈ ಜಿಯೋ ಅಪ್ಲಿಕೇಶನ್ ಓಪನ್‌ ಮಾಡಿ ಮತ್ತು ಮಾಹಿತಿಯನ್ನು ಸ್ವೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. 


  5G service launched in Hyderabad This service will start all over the country by December 2023
  ಜಿಯೋ 5ಜಿ ನೆಟ್‌ವರ್ಕ್‌ ಸೇವೆ


  ಜಿಯೋ ಬಳಕೆದಾರರು SIM ಕಾರ್ಡ್ ಅನ್ನು ಬದಲಾಯಿಸದೆಯೇ ಜಿಯೋ 5ಜಿ ಸೇವೆಗಳನ್ನು ಬಳಸಬಹುದು. ಆದರೆ ನೀವು 5ಜಿ  ನೆಟ್‌ವರ್ಕ್‌ಅನ್ನು ಪಡೆಯಬೇಕಾದರೆ ನೀವು 5ಜಿ ಸ್ಮಾರ್ಟ್‌ಫೋನ್‌ ಅನ್ನು ಹೊಂದಿರಬೇಕು.


  ಇದನ್ನೂ ಓದಿ: ಅಸೂಸ್​ ಪರಿಚಯಿಸುತ್ತಿದೆ 18GB RAM ಆಯ್ಕೆಯ ಸ್ಮಾರ್ಟ್​ಫೋನ್​!; ಮಾರ್ಚ್​ 10 ರಂದು ಮಾರುಕಟ್ಟೆಗೆ!


  5G ಮೊಬೈಲ್‌ ಹೊಂದಿದ್ದರೆ ಮಾತ್ರ ನೀವು ಜಿಯೋ 5ಜಿ ನೆಟ್ವರ್ಕ್ ಅನ್ನು ಬಳಸಬಹುದು. ಜಿಯೋ 5ಜಿ ಅನ್ನು ಬಳಸಲು ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಆ ಸೆಟ್ಟಿಂಗ್‌ಗಳ ಬಗ್ಗೆ ತಿಳಿಯಿರಿ.


  ಸ್ಮಾರ್ಟ್‌ಫೋನ್‌ನಲ್ಲಿ 5ಜಿಗಾಗಿ ಇರುವ ಸೆಟ್ಟಿಂಗ್‌ಗಳು:


  • ಮೊದಲು ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.

  • ಅದರ ನಂತರ ಮೊಬೈಲ್ ನೆಟ್‌ವರ್ಕ್ ಅಥವಾ ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಆಯ್ಕೆಯನ್ನು ಆರಿಸಿ.

  • ಅದರಲ್ಲಿ ನೀವು ಜಿಯೋ ಸಿಮ್ ಅನ್ನು ಕ್ಲಿಕ್ ಮಾಡಬೇಕು.

  • ಅದರ ನಂತರ ಆದ್ಯತೆಯ ನೆಟ್ವರ್ಕ್ ಆಯ್ಕೆಯನ್ನು ಕ್ಲಿಕ್ ಮಾಡಿ.

  • 3G, 4G ಮತ್ತು 5G ಆಯ್ಕೆಗಳಿವೆ.

  • ಅದರಲ್ಲಿ 5G ಆಯ್ಕೆಯನ್ನು ಆರಿಸಬೇಕು.


  5G service launched in Hyderabad This service will start all over the country by December 2023
  ಜಿಯೋ 5ಜಿ ನೆಟ್‌ವರ್ಕ್‌ ಸೇವೆ


  ನೀವು 5G ನೆಟ್‌ವರ್ಕ್ ಅನ್ನು ಆಯ್ಕೆ ಮಾಡಿದರೆ, ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ವರ್ಕ್ ಸ್ಟೇಟಸ್ ಬಾರ್‌ನಲ್ಲಿ 5ಜಿ ಆಯ್ಕೆ ಕಾಣಿಸಿಕೊಳ್ಳುತ್ತದೆ. ಈಗ ನೀವು ಜಿಯೋ 5ಜಿ ನೆಟ್ವರ್ಕ್ ಅನ್ನು ಬಳಸಬಹುದು. ನೀವು 500 Mbps ನಿಂದ 1 Gbps ವೇಗದಲ್ಲಿ ಅನಿಯಮಿತ ಡೇಟಾವನ್ನು ಬಳಸಬಹುದು. ನೀವು 5G ಫೋನ್ ಬಳಸುತ್ತಿದ್ದರೆ, ನಿಮಗೆ ಸುಲಭದಲ್ಲಿ  5ಜಿ ಬಳಕೆ ಮಾಡಬಹುದಾಗಿದೆ. ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಿದ ನಂತರ ನಿಮಗೆ 5G ನೆಟ್‌ವರ್ಕ್ ಅನ್ನು ಬಳಸಲು ಸಾಧ್ಯವಾಗದಿದ್ದರೆ, ಸಾಫ್ಟ್‌ವೇರ್ ಅನ್ನು ಅಪ್‌ಡೇಟ್‌ ಮಾಡಿ.


  ಜಿಯೋ ಟ್ರೂ 5ಜಿ ಸೇವೆಗಳು ಡಿಸೆಂಬರ್ 2023 ರ ವೇಳೆಗೆ ದೇಶಾದ್ಯಂತ ಲಭ್ಯವಿರುತ್ತವೆ. ಜಿಯೋ 5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್ ಗಿಂತ ಹೆಚ್ಚಿನ ನೆಟ್‌ವರ್ಕ್‌ ವೇಗವನ್ನು ಹೊಂದಿದೆ. 5G ಗಾಗಿ ರಿಲಯನ್ಸ್‌ ಜಿಯೋ ಇದು 700MHz, 3500 MHz, 26 GHz ಬ್ಯಾಂಡ್‌ಗಳಲ್ಲಿ ಅತಿ ದೊಡ್ಡದಾದ, ಅತ್ಯಂತ ಸೂಕ್ತವಾದ ವೈರ್‌ಲೆಸ್ ಸ್ಪೆಕ್ಟ್ರಮ್ ಮಿಶ್ರಣವನ್ನು ಹೊಂದಿದೆ.

  Published by:Harshith AS
  First published: