• Home
  • »
  • News
  • »
  • tech
  • »
  • 5G Launch: ಸ್ಪೀಡ್​ ಜೊತೆ ಅಪಾಯವೂ ಹೆಚ್ಚಳ, ಬಳಕೆದಾರರು ಎಚ್ಚರ ವಹಿಸೋದು ಅತ್ಯಗತ್ಯ!

5G Launch: ಸ್ಪೀಡ್​ ಜೊತೆ ಅಪಾಯವೂ ಹೆಚ್ಚಳ, ಬಳಕೆದಾರರು ಎಚ್ಚರ ವಹಿಸೋದು ಅತ್ಯಗತ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

5G ವೈರ್‌ಲೆಸ್ ಸಂವಹನದ ವೇಗ ಮತ್ತು ರಿಯಾಕ್ಷನ್ ಹೆಚ್ಚಿಸುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ. ಆದರೆ ಹೊಸದೊಂದು ಆವಿಷ್ಕಾರ ತನ್ನೊಂದಿಗೆ ಹೊಸ ಅಪಾಯಗಳನ್ನೂ ಹೊತ್ತು ತರುತ್ತದೆ ಎಂಬುವುದನ್ನು ನಾವು ಎಂದಿಗೂ ಮರೆಯಬಾರದು. ಇದು 5G ತಂತ್ರಜ್ಞಾನಕ್ಕೂ ಅನ್ವಯಿಸುತ್ತದೆ.

  • Share this:

ನವದೆಹಲಿ(ಅ.01): ಇಂದಿನಿಂದ ಭಾರತದಲ್ಲಿ 5ಜಿ ಯುಗ ಆರಂಭವಾಗಿದೆ. ಅಕ್ಟೋಬರ್ 1, ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯನ್ ಮೊಬೈಲ್ ಕಾಂಗ್ರೆಸ್​ನಲ್ಲಿ (Indian Mobile Congress) ಪ್ರಧಾನಿ ನರೇಂದ್ರ ಮೋದಿ (Narendra Modi)  ಅವರು 5G ಸೇವೆಗೆ ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ, ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯ 13 ನಗರಗಳಲ್ಲಿ 5G ಸಂಪರ್ಕವನ್ನು (5G Network) ಪ್ರಾರಂಭಿಸಲಾಗುತ್ತದೆ. ಇದೇ ವೇಳೆ ರಿಲಯನ್ಸ್ ಜಿಯೋ ಈ ವರ್ಷದ ದೀಪಾವಳಿ ವೇಳೆಗೆ ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ 5G ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.


5G ತಂತ್ರಜ್ಞಾನವು ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರ, ಸಾರಿಗೆ, ವಿದ್ಯುತ್, ಬಾಹ್ಯಾಕಾಶ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಇದು ಜೀವನವನ್ನು ತುಂಬಾ ಸುಲಭಗೊಳಿಸುತ್ತದೆ. ಒಂದೆಡೆ ಇದರ ಸಕಾರಾತ್ಮಕ ಅಂಶಗಳು ಅಪರಿಮಿತವಾಗಿದ್ದರೆ, ಮತ್ತೊಂದೆಡೆ ಹ್ಯಾಕಿಂಗ್ ಅಥವಾ ಡೇಟಾ ಕಳ್ಳತನದಂತಹ ನಕಾರಾತ್ಮಕ ವಿಷಯಗಳೂ ಇರುತ್ತವೆ. 5G ವೈರ್‌ಲೆಸ್ ಸಂವಹನದ ವೇಗ ಮತ್ತು ರಿಯಾಕ್ಷನ್ ಹೆಚ್ಚಿಸುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ. ಆದರೆ ಹೊಸದೊಂದು ಆವಿಷ್ಕಾರ ತನ್ನೊಂದಿಗೆ ಹೊಸ ಅಪಾಯಗಳನ್ನೂ ಹೊತ್ತು ತರುತ್ತದೆ ಎಂಬುವುದನ್ನು ನಾವು ಎಂದಿಗೂ ಮರೆಯಬಾರದು. ಇದು 5G ತಂತ್ರಜ್ಞಾನಕ್ಕೂ ಅನ್ವಯಿಸುತ್ತದೆ.


ಇದನ್ನೂ ಓದಿ: 5G in India: ಎಲ್ಲಿ ಸಿಗುತ್ತೆ 5G ಸಿಮ್? ಮೊಬೈಲ್​ನಲ್ಲಿ ನೆಟ್ವರ್ಕ್​ ಹೇಗೆ ಆಕ್ಟಿವೇಟ್​ ಆಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ


ಅಪಾಯಗಳು ಹೆಚ್ಚಲಿವೆ


ಇಂದಿನ ಕಾಲದಲ್ಲಿ ಪ್ರತಿಯೊಂದು ಸಾಧನವೂ ಚಿಕ್ಕ ಗಣಕಯಂತ್ರದ ರೂಪವನ್ನು ಪಡೆದುಕೊಂಡಿದೆ. ಭಾರತದ ಅಸ್ತಿತ್ವದಲ್ಲಿರುವ ಇಂಟರ್ನೆಟ್ ಮೂಲಸೌಕರ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಇದು ಡೇಟಾ ರಕ್ಷಣಾ ಕ್ರಮಗಳನ್ನು ದುರ್ಬಲಗೊಳಿಸುತ್ತಿದೆ. ಅತ್ಯಾಧುನಿಕ ಬೋಟ್‌ನೆಟ್‌ಗಳು, ಗೌಪ್ಯತೆ ಉಲ್ಲಂಘನೆ ಮತ್ತು ವೇಗದ ಡೇಟಾ ವಿಶ್ಲೇಷಣೆಯ ಅಪಾಯವು 5G ಯೊಂದಿಗೆ ಹೆಚ್ಚಾಗಬಹುದು. 5G ಲಾಂಚ್​ನಿಂದ, ಸ್ಮಾರ್ಟ್ ಹೋಮ್ ಸಾಧನಗಳು, ಕಾರ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳು, ಸ್ಮಾರ್ಟ್ ಟಿವಿಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಸಾಧನಗಳು ಇಂಟರ್ನೆಟ್‌ಗೆ ಸಂಪರ್ಕಗೊಳ್ಳುತ್ತವೆ. ಡೇಟಾ ಸುರಕ್ಷತೆ ವಿಚಾರದಲ್ಲಿ ಇವುಗಳು ಬಹಳ ಅಪಾಯಕಾರಿಯಾಗಿ ಮಾರ್ಪಾಡಾಗಬಹುದು.


5Gಯ ದೊಡ್ಡ ಬ್ಯಾಂಡ್‌ವಿಡ್ತ್ ಅಪರಾಧಿಗಳಿಗೆ ಡೇಟಾಬೇಸ್‌ಗಳನ್ನು ಸುಲಭವಾಗಿ ಕದಿಯಲು ಸಹಾಯ ಮಾಡುತ್ತದೆ. ಕಾಲಾನಂತರದಲ್ಲಿ ಹೆಚ್ಚಿನ ಸಾಧನಗಳನ್ನು ಸೇರಿಸಲಾಗುತ್ತದೆ ಮತ್ತು ಇದು ಸೈಬರ್ ದಾಳಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇಷ್ಟೇ ಅಲ್ಲ, 5G ಬಂದ ನಂತರ ಸೈಬರ್ ಕ್ರೈಂಗಳು ಇನ್ನಷ್ಟು ಹೆಚ್ಚಳವಾಗಬಹುದು.


ಸರ್ಕಾರದ ಸಿದ್ಧತೆ


ಡೇಟಾ ಸುರಕ್ಷತೆ ಮತ್ತು ಸೈಬರ್ ದಾಳಿಯನ್ನು ತಡೆಯಲು ಸರ್ಕಾರವು ಇಕೋ ಸಿಸ್ಟಮ್ ರಚಿಸಬೇಕಾಗಿದ್ದರೂ, 5G ಸೇವೆಯನ್ನು ಬಳಸುವ ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಡೇಟಾ ಸುರಕ್ಷತೆಯ ಬಗ್ಗೆ ಸರ್ಕಾರವು ತುಂಬಾ ಗಂಭೀರವಾಗಿದೆ. ಸರ್ಕಾರ ಶೀಘ್ರದಲ್ಲೇ ಡೇಟಾ ರಕ್ಷಣಾ ವ್ಯವಸ್ಥೆ ತರಬಹುದು. ಮೊಬೈಲ್ ಸಿಮ್‌ನ ದುರ್ಬಳಕೆಯನ್ನು ತಡೆಯಲು, ಸರ್ಕಾರವು ಸಿಮ್‌ನ IMEI ಸಂಖ್ಯೆಯನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸಿದೆ. ಇನ್ನು ಒಂದೂವರೆ ವರ್ಷದಲ್ಲಿ ಡಿಜಿಟಲ್ ಇಂಡಿಯಾ ವ್ಯವಸ್ಥೆ ಸಿದ್ಧಪಡಿಸಲು ಸರ್ಕಾರ ಗುರು ಹೊಂದಿದೆ ಎನ್ನುತ್ತಾರೆ ತಜ್ಞರು.


ಇದನ್ನೂ ಓದಿ: 5G Launch: ಪ್ರಾಕೃತಿಕ ವಿಕೋಪ ಬರೋ ಮೊದಲೇ ಸಿಗುತ್ತೆ ಸೂಚನೆ, C-Dot Technologyಯಿಂದ ಮೊಬೈಲ್​ಗೆ ಸಂದೇಶ!


ಹೆಚ್ಚು ಜಾಗರೂಕರಾಗಿರಬೇಕು


ತಮ್ಮ ಡೇಟಾವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ 5G ಲಾಂಚ್ ಬಳಿಕ, ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳುತ್ತಾರೆ ಸೈಬರ್ ಭದ್ರತಾ ತಜ್ಞರು. ಇಂಟರ್ನೆಟ್ ವೇಗವು ಸೈಬರ್ ಅಪರಾಧಿಗಳಿಗೆ ಸೈಬರ್ ದಾಳಿಯನ್ನು ವೇಗವಾಗಿ ನಡೆಸಲು ಸಹಾಯ ಮಾಡುತ್ತದೆ. ಆದ್ದರಿಂದ, ಇಂಟರ್ನೆಟ್ ಬಳಸುವಾಗ, ಸ್ವಲ್ಪ ಅಜಾಗರೂಕತೆಯೂ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಬಹುದು. ಬಳಕೆದಾರರು ತಮ್ಮ ಆದ್ಯತೆಯ ಪಟ್ಟಿಯಲ್ಲಿ ಸೈಬರ್ ಭದ್ರತೆಯನ್ನು ಇಟ್ಟುಕೊಳ್ಳಬೇಕು. ಪಾಸ್‌ವರ್ಡ್‌ಗಳು, ಒಟಿಪಿಗಳು, ವೈಯಕ್ತಿಕ, ಹಣಕಾಸು ಮತ್ತು ಬ್ಯಾಂಕಿಂಗ್ ಡೇಟಾವನ್ನು ಹಂಚಿಕೊಳ್ಳದಿರುವ ಮತ್ತು ಪರಿಶೀಲನೆ ನಡೆಸದೆ ಏನನ್ನೂ ಡೌನ್‌ಲೋಡ್ ಮಾಡದಿರುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

Published by:Precilla Olivia Dias
First published: