ಅಕ್ಟೋಬರ್ 1 ರಂದು ದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ನಲ್ಲಿ, ಭಾರತವು 5G ಯುಗಕ್ಕೆ ಕಾಲಿಟ್ಟಿತು. ಏರ್‌ಟೆಲ್ (Airtel) ಹಾಗೂ ಜಿಯೋ (Jio) ಸಂಸ್ಥೆಗಳು ತಮ್ಮ 5 ಜಿ ಸೇವೆಗಳು ಕೆಲವೊಂದು ಮೆಟ್ರೋಪಾಲಿಟನ್ ನಗರಗಳಲ್ಲಿ ಸಕ್ರಿಯವಾಗಿವೆ ಎಂಬುದಾಗಿ ಘೋಷಣೆಗಳನ್ನು ನಡೆಸಲು ಈ ಸಂದರ್ಭವನ್ನು ಬಳಸಿಕೊಂಡವು. ಅದಾಗ್ಯೂ 5ಜಿ ಡಿವೈಸ್ ಅನ್ನು ಹೊಂದಿರುವ ಹೆಚ್ಚಿನ ಬಳಕೆದಾರರು ಅತ್ಯಂತ ವೇಗವಾದ ಬ್ರ್ಯಾಡ್‌ಬ್ಯಾಂಡ್‌ಗೆ (Broadband) ಸ್ಪರ್ಧೆಯನ್ನೊಡ್ಡುವ ಇಂಟರ್ನೆಟ್ (Internet) ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಇದಕ್ಕೆ ಕಾರಣಗಳೇನು? ಇದನ್ನು ಹೇಗೆ ಸರಿಪಡಿಸಬಹುದು ಮೊದಲಾದ ಅಂಶಗಳನ್ನು ವಿವರವಾಗಿ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ
4 ಜಿ ನೆಟ್‌ವರ್ಕ್‌ನಲ್ಲೇ ಇರುವ ಐಫೋನ್ ಹಾಗೂ ಸ್ಯಾಮ್‌ಸಂಗ್ ಬಳಕೆದಾರರು
ಐಫೋನ್ ಬಳಕೆದಾರರಿಗೆ ಇನ್ನೂ 5ಜಿ ಸೇವೆಯ ಉತ್ತಮ ಬಳಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಐಫೋನ್ 12, ಆ್ಯಪಲ್‌ನ ಮೊದಲ 5ಜಿ ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಆಗಿದೆ. ಭಾರತದಲ್ಲಿರುವ ಹೆಚ್ಚಿನ ಮೊಬೈಲ್ ಮಾದರಿಗಳು 5ಜಿ ಬ್ಯಾಂಡ್‌ಗಳನ್ನು ಒಳಗೊಂಡಂತೆ ತಂತ್ರಜ್ಞಾನವನ್ನು ಬೆಂಬಲಿಸಿವೆ. ಆ್ಯಪಲ್ ಹಾಗೂ ಜಿಯೋ ಬೆಂಬಲದ ಹೊರತಾಗಿಯೂ ಐಫೋನ್ ಬಳಕೆದಾರರು ಇನ್ನೂ 4ಜಿ ನೆಟ್‌ವರ್ಕ್‌ನಲ್ಲೇ ಸಿಲುಕಿಕೊಂಡಿದ್ದಾರೆ.
ಇನ್ನು ಈ ವಿಷಯದಲ್ಲಿ ಐಫೋನ್ ಬಳಕೆದಾರರು ಮಾತ್ರವಲ್ಲದೆ ಸ್ಯಾಮ್‌ಸಂಗ್ ಗ್ರಾಹಕರು ಇದೇ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ. ದಕ್ಷಿಣ ಕೊರಿಯಾದ ಮೊಬೈಲ್ ಸಂಸ್ಥೆ ಸ್ಯಾಮ್‌ಸಂಗ್ ಬ್ರ್ಯಾಂಡ್‌ನ ಹೆಚ್ಚಿನ ಡಿವೈಸ್‌ಗಳು ಭಾರತದಲ್ಲಿ 5ಜಿ ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ತಂತ್ರಜ್ಞಾನಗಳನ್ನು ಒಳಗೊಂಡಿವೆ.
5ಜಿ ಸಕ್ರಿಯಗೊಳಿಸಿದ ಏರ್‌ಟೆಲ್‌ನ ಬೆಂಬಲ ಪುಟದಲ್ಲಿ ಚೀನಾ ಸ್ಮಾರ್ಟ್‌ಫೋನ್ ತಯಾರಕರಾದ ಶಿಯೋಮಿ, ವಿವೊ, ಐಕ್ಯು, ಒಪ್ಪೊ, ಒನ್‌ಪ್ಲಸ್, ರಿಯಲ್ಮಿ ಹಾಗೂ ಸ್ಯಾಮ್‌ಸಂಗ್‌ನ ಕೆಲವು ಮಾಡೆಲ್‌ಗಳು ಬೆಂಬಲ ಪಡೆದುಕೊಂಡಿವೆ. ಈ ಗ್ಯಾಜೆಟ್‌ಗಳನ್ನು ಬಳಸುವ ಅನೇಕ ಬಳಕೆದಾರರು ಮುಂದಿನ ಪೀಳಿಗೆಯ 5ಜಿ ನೆಟ್‌ವರ್ಕ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ ಏಕೆಂದರೆ ಏರ್‌ಟೆಲ್ ಹಾಗೂ ಜಿಯೋ ಸಾಮೂಹಿಕವಾಗಿ ವೆಲ್‌ಕಮ್ ಆಫರ್‌ನಂತೆ ಸಕ್ರಿಯಗೊಳಿಸಿವೆ.
ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಭಾರತದ ಮಾರುಕಟ್ಟೆಯನ್ನು ಕೇಂದ್ರೀಕರಿಸಿಲ್ಲ?
ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಜಾಗತಿಕ ಬ್ರ್ಯಾಂಡ್‌ಗಳೆಂದೆನಿಸಿವೆ. ಆದರೆ ಭಾರತ ಅವುಗಳ ಬಹುದೊಡ್ಡ ಮಾರುಕಟ್ಟೆಯಲ್ಲ. ಆ್ಯಪಲ್‌ಗೆ ಯುಎಸ್ ಹಾಗೂ ಚೀನಾ ಅತಿದೊಡ್ಡ ಮಾರುಕಟ್ಟೆಗಳೆಂದೆನಿಸಿವೆ. ಇನ್ನು ಸ್ಯಾಮ್‌ಸಂಗ್‌ಗೆ ಅಮೆರಿಕಾ ಹಾಗೂ ದಕ್ಷಿಣ ಕೊರಿಯಾ ಅತಿದೊಡ್ಡ ಮಾರುಕಟ್ಟೆಗಳಾಗಿವೆ.
ಗೂಗಲ್ ತನ್ನ ಫ್ಲ್ಯಾಗ್‌ಶಿಪ್‌ಗಳಿಗಾಗಿ ನಾಲ್ಕು ವರ್ಷಗಳ ಕಾಲ ಭಾರತದ ಮಾರುಕಟ್ಟೆಯನ್ನು ತಪ್ಪಿಸಿಕೊಂಡಿದ್ದು ಹೆಚ್ಚು ಕೈಗೆಟಕುವ ಕೊಡುಗೆಗಳ ಮೇಲೆ ಕೇಂದ್ರೀಕರಿಸಿದೆ. 2019 ರಲ್ಲಿ ಗೂಗಲ್‌ನ ಪಿಕ್ಸೆಲ್ 4 ಸೋಲಿ ರಾಡಾರ್ ಅನ್ನು ಬಳಸಿಕೊಂಡಿದ್ದು ಭಾರತೀಯ ಸೇನೆಯು ಫೋನ್ ಅನ್‌ಲಾಕ್ ಮಾಡಲು ಬಳಸುವ 60 GHz mm ತರಂಗ ಆವರ್ತನದಲ್ಲಿ ಕಾರ್ಯನಿರ್ವಹಣೆ ಹೊಂದಿದೆ.
ಇದನ್ನೂ ಓದಿ: Airtel 5G Plus: 5ಜಿ ನೆಟವರ್ಕ್ ಪಡೆಯಲು ಯಾವೆಲ್ಲಾ ಫೋನ್ ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಅಗತ್ಯವಿದೆ? ಇಲ್ಲಿದೆ ಲಿಸ್ಟ್
ಭಾರತ ಮತ್ತು ಜಪಾನ್‌ನ ಅನೇಕ ಮಾರುಕಟ್ಟೆಗಳಲ್ಲಿ ಈ ತಂತ್ರಜ್ಞಾನವನ್ನು ಅನುಮತಿಸಲಾಗುವುದಿಲ್ಲ ಎಂಬುದು ಎಂಜಿನಿಯರ್‌ಗಳು ತಿಳಿದಿರಲಿಲ್ಲ. ಆ್ಯಪಲ್‌ನ ಅತ್ಯಾಧುನಿಕ ತುರ್ತು SOS ವೈಶಿಷ್ಟ್ಯವು US ಮತ್ತು ಕೆನಡಾ ಕೇಂದ್ರಿತವಾಗಿದೆ ಮತ್ತು ಇದು ಎಂದಿಗೂ ಭಾರತಕ್ಕೆ ಆಗಮಿಸುವುದಿಲ್ಲ. ಸ್ಯಾಮ್‌ಸಂಗ್‌ನ ಸ್ಮಾರ್ಟ್‌ವಾಚ್‌ಗಳು ಭಾರತದಲ್ಲಿ ಇನ್ನೂ ಇಸಿಜಿಯನ್ನು ಬೆಂಬಲಿಸಿಲ್ಲ.
2020 ರಲ್ಲಿ, ಗೂಗಲ್ ಭಾರತದಲ್ಲಿ ಪಿಕ್ಸೆಲ್ 4a ಅಥವಾ ಪಿಕ್ಸೆಲ್ 5 ಅನ್ನು ಬಿಡುಗಡೆ ಮಾಡಬಹುದಿತ್ತು ಏಕೆಂದರೆ ಇವೆರಡೂ 5G ಡಿವೈಸ್‌ಗಳಾಗಿವೆ. ಆದರೆ ಇದು ಉದ್ದೇಶಪೂರ್ವಕವಾಗಿ 4G ಮಾದರಿಯನ್ನು ಪ್ರಾರಂಭಿಸಲು ಆಯ್ಕೆ ಮಾಡಿದ್ದು, ಇದು ದೇಶದಲ್ಲಿ ಅದರ 5G ಸಿದ್ಧತೆಯ ಬಗ್ಗೆ ನಮಗೆ ಮನವರಿಕೆ ಮಾಡಿಸುತ್ತದೆ. ಇದರ ನಡುವೆಯೇ, ಶಿಯೋಮಿ 2019 ರಿಂದ ಕಡಿಮೆ ದರದಲ್ಲಿ 5G ಫೋನ್‌ಗಳನ್ನು ಮಾರಾಟ ಮಾಡುತ್ತಿದೆ.
ಈ ಕುರಿತು ಗೂಗಲ್ ಏನು ಹೇಳಿದೆ?
ಭಾರತದಲ್ಲಿ ಪಿಕ್ಸೆಲ್ 7 ಬಿಡುಗಡೆಯೊಂದಿಗೆ, 5G ಸೇವೆಗಳನ್ನು ಸಕ್ರಿಯಗೊಳಿಸಲು ವಾಹಕ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಗೂಗಲ್ ಹೇಳಿಕೊಂಡಿದೆ. ಆದರೆ ಸಂಸ್ಥೆಯ ವಕ್ತಾರರು ತಿಳಿಸಿರುವಂತೆ ಡಿಸೆಂಬರ್‌ನಲ್ಲಿ ಯೋಜಿತ "ಫೀಚರ್ ಡ್ರಾಪ್" ಮೂಲಕ ಮಾತ್ರ ಸೇವೆಯನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ಬಹಿರಂಗಪಡಿಸಿದೆ.
ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಕೂಡ ಇದೇ ರೀತಿಯ ನಡೆಯನ್ನೇ ಅನುಸರಿಸಿದ್ದು ನೆಟ್‌ವರ್ಕ್ ಪರಿಶೀಲನೆಯನ್ನು ನಡೆಸುತ್ತಿವೆ ಎಂದು ತಿಳಿಸಿವೆ. ನಿಜವಾದ ವಿಷಯವೆಂದರೆ ಆ್ಯಪಲ್ ಕಾರ್ಯನಿರ್ವಾಹಕರು ಈ ವಾರ 5ಜಿ ಲಾಂಚ್‌ಗಾಗಿ ಏರ್‌ಟೆಲ್ ಅಧಿಕಾರಿಗಳನ್ನು ಭೇಟಿಮಾಡುತ್ತಿದ್ದಾರೆ ಹಾಗೂ ಗೂಗಲ್ ಮಾಡಿರುವಂತೆ ಡಿಸೆಂಬರ್‌ನಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ನವೀಕರಿಸುವ ಯೋಜನೆಯಲ್ಲಿದೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: 5G Network ಹೊಂದಿರುವ ಜಗತ್ತಿನ ಟಾಪ್-10 ದೇಶಗಳು ಇವು!
ಮೋದಿ ಸರಕಾರವು 5ಜಿ ಅನ್ನು ಬೆಂಬಲಿಸುವ ಸಾಫ್ಟ್‌ವೇರ್ ನವೀಕರಣಗಳನ್ನು ತ್ವರಿತಗೊಳಿಸಲು ಸ್ಮಾರ್ಟ್‌ಫೋನ್ ತಯಾರಕರಿಗಾಗಿ ಸಭೆಯನ್ನು ಕೂಡ ನಡೆಸಿದೆ. ಶಿಯೋಮಿ, ವಿವೊ, ಒಪ್ಪೊ, ಒನ್‌ಪ್ಲಸ್, ರಿಯಲ್ಮಿ ಹಾಗೂ ಐಕ್ಯೂ ಸಂಸ್ಥೆಗಳಿಗೆ ಚೀನಾ ಹೊರತುಪಡಿಸಿ ಭಾರತವು ಅಗತ್ಯ ಸೇವೆಗಳನ್ನೊದಗಿಸುವ ನೆಲವಾಗಿದೆ. ಶಿಯೋಮಿ ಹಾಗೂ ಬಿಬಿಕೆ ಎಲೆಕ್ಟ್ರಾನಿಕ್ಸ್‌ಗೆ (ವಿವೊ, ಒಪ್ಪೊ, ಒನ್‌ಪ್ಲಸ್, ರಿಯಲ್ಮಿ ಹಾಗೂ ಐಕ್ಯೂ ಪೋಷಕರಿಗೆ), ಗ್ರಾಹಕರ ಪ್ರಮಾಣ, ಲಾಭ ಹಾಗೂ ಹೂಡಿಕೆಯ ವಿಷಯದಲ್ಲಿ ಭಾರತವು ಅತ್ಯಂತ ಪ್ರಮುಖ ಸಾಗರೋತ್ತರ ಮಾರುಕಟ್ಟೆ ಎಂದೆನಿಸಿದೆ.
ಏರ್‌ಟೆಲ್, ರಿಲಯನ್ಸ್ ಜಿಯೋ ಗ್ರಾಹಕರಿಂದ ಏನನ್ನು ಮರೆಮಾಡುತ್ತಿದೆ?
ನೆಟ್‌ವರ್ಕ್ ಆಪರೇಟರ್‌ಗಳು ಕೂಡ ಕೆಲವೊಂದು ತಪ್ಪುಗಳಿಗೆ ಎಡೆಮಾಡಿಕೊಟ್ಟಿದ್ದಾರೆ. 5G ಸಂಪರ್ಕವು ನೆಟ್‌ವರ್ಕ್ ಸಾಂದ್ರತೆಯ ಸಂಯೋಜನೆಯನ್ನು ಅವಲಂಬಿಸಿರುತ್ತದೆ ಹಾಗಾಗಿ ವಾಹಕವು ಇಂತಿಷ್ಟೇ ಪ್ರಮಾಣದ ಬಳಕೆದಾರರ ಸಂಖ್ಯೆಯನ್ನು ಒಂದೇ ಸಮಯದಲ್ಲಿ ಯೋಜಿಸಲು ಸನ್ನದ್ಧವಾಗಿರುತ್ತದೆ.
ಆರಂಭದಲ್ಲಿ ಕಾಡುವ ನೆಟ್‌ವರ್ಕ್ ದಟ್ಟಣೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಉದಾಹರಣೆಗಾಗಿ ಏರ್‌ಟೆಲ್ ಈ ದಿಸೆಯಲ್ಲಿ ಎಂಟು ನಗರಗಳಲ್ಲಿ ಮಾತ್ರವೇ ಸದ್ಯಕ್ಕೆ 5ಜಿ ಬಿಡುಗಡೆ ಮಾಡುವುದಾಗಿ ಹೇಳಿದೆ. ನೆಟ್‌ವರ್ಕ್ ಯಾವುದೇ ಸಮಸ್ಯೆಯನ್ನು ತಂದೊಡ್ಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸುವ ಇರಾದೆಯನ್ನು ಏರ್‌ಟೆಲ್ ಹೊಂದಿದೆ.
ಏರ್‌ಟೆಲ್ 5ಜಿ ಲಾಂಚ್ ಅನ್ನು ನವದೆಹಲಿಯಲ್ಲಿ ಮಾಡಿದೆ ಎಂಬುದಾಗಿ ಉಲ್ಲೇಖಿಸಿದ್ದರೂ ಇದು ಸಮಾನವಾಗಿಲ್ಲ. ನಿಮ್ಮ ವಲಯದಲ್ಲಿ 5ಜಿ ಕವರೇಜ್ ಅನ್ನು ಹೊಂದಿದ್ದೀರಾ ಎಂಬುದನ್ನು ಪರಿಶೀಲಿಸಲು ಓಪನ್ ಸಿಗ್ನಲ್ ಆ್ಯಪ್ ಅನ್ನು ನೀವು ಬಳಸಬೇಕು. ಜಿಯೋ ಆಹ್ವಾನ ಮಾತ್ರ ವೆಲ್‌ಕಮ್ ಪ್ಲಾನ್ ಅನ್ನು ಪರಿಚಯಿಸಿದೆ ಆದರೆ ಇದನ್ನು ಪಡೆದುಕೊಳ್ಳುವುದೂ ಅಷ್ಟು ಸುಲಭವಲ್ಲ.
ಚೈನೀಸ್ ಸ್ಮಾರ್ಟ್‌ಫೋನ್ ತಯಾರಕರು ಏನು ಹೇಳುತ್ತಾರೆ?
ಒನ್‌ಪ್ಲಸ್ 10T, ಒನ್‌ಪ್ಲಸ್ ನಾರ್ಡ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್ 4, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4, ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ, ಮೊದಲಾದ ಡಿವೈಸ್‌ಗಳು ಏರ್‌ಟೆಲ್‌ನ 5ಜಿ ನೆಟ್‌ವರ್ಕ್ ಅನ್ನು ಬೆಂಬಲಿಸುತ್ತಿಲ್ಲ ಎಂಬುದು ವರದಿಯಾಗಿದೆ.
5ಜಿ ನೆಟ್‌ವರ್ಕ್ ಅನ್ನು ಸಕ್ರಿಯಗೊಳಿಸಲು ಸಾಫ್ಟ್‌ವೇರ್ ಅಪ್ಡೇಟ್ ಅಗತ್ಯವಿದೆ ಎಂದು ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಅಂಗೀಕರಿಸಿದ್ದರೂ ಚೀನಾ ಫೋನ್ ತಯಾರಕರು 5ಜಿ ಬೆಂಬಲವನ್ನು ಡಿವೈಸ್‌ಗಳು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Explained: 5ಜಿಯಿಂದ ಲೈಫೇ ಬದಲು! ಹೇಗಿರುತ್ತೆ ಮೊಬೈಲ್ ಎಕ್ಸ್‌ಪೀರಿಯನ್ಸ್?
ಅದಾಗ್ಯೂ ಹೆಚ್ಚುವರಿ ಪರೀಕ್ಷೆಗಳನ್ನು ಈ ಡಿವೈಸ್‌ಗಳಲ್ಲಿ ನಡೆಸುವ ಅಗತ್ಯವೂ ಇದೆ. ನಿಜವಾದ 5G ಬಿಡುಗಡೆಯು ಜಿಯೋಗೆ ಡಿಸೆಂಬರ್‌ನಲ್ಲಿ ಮತ್ತು ಏರ್‌ಟೆಲ್‌ಗೆ ಮಾರ್ಚ್‌ನಲ್ಲಿ ನಡೆಯಲಿದೆ. ಇದುವರೆಗೆ ಬರೇ ವಾಹಕಗಳಿಂದ ಪರಿಶೀಲನೆಗಳನ್ನು ಮಾತ್ರ ನೋಡುತ್ತಿದ್ದೇವೆ. ವೊಡಾಫೋನ್ ಈ ದಿಸೆಯಲ್ಲಿ ಇನ್ನೂ ಕಾರ್ಯನಿರ್ವಹಿಸಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ