Chinese Phones: ಪೇಟೆಂಟ್ ವಿವಾದ: ಜರ್ಮನಿಯಲ್ಲೂ ಬ್ಯಾನ್ ಆಯ್ತು ಚೀನಾದ ಮೊಬೈಲ್!

ಪ್ರಪಂಚದಾದ್ಯಂತದ ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಒಂದರಂತೆ ಒಂದು ಪೆಟ್ಟು ಬೀಳುತ್ತಲೇ ಇದ್ದು, ಸಂಕಷ್ಟದಲ್ಲಿ ಸಿಲುಕಿವೆ. ಮೊನ್ನೆ ತಾನೇ ಹನ್ನೆರಡು ಸಾವಿರಕ್ಕಿಂತ ಅಗ್ಗದ ಬೆಲೆಯಲ್ಲಿರುವ ಮೊಬೈಲ್ ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡುವ ನಿರ್ಧಾರ ಮಾಡಿರುವ ಬಗ್ಗೆ ವರದಿಯೊಂದು ಹೊರಬಿದ್ದಿತ್ತು. ಈಗ ಅದರ ಬೆನ್ನಲ್ಲೇ ಜರ್ಮನಿ ಸಹ ಇಂಥಹದ್ದೇ ಒಂದು ನಿರ್ಧಾರ ತೆಗೆದುಕೊಂಡಿದೆ.

ನೋಕಿಯಾ ಜೊತೆಗೆ 5G ಪೇಟೆಂಟ್ ವಿವಾದ

ನೋಕಿಯಾ ಜೊತೆಗೆ 5G ಪೇಟೆಂಟ್ ವಿವಾದ

  • Share this:
ಪ್ರಪಂಚದಾದ್ಯಂತದ ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ (Chinese Smart Phone company) ಒಂದರಂತೆ ಒಂದು ಪೆಟ್ಟು ಬೀಳುತ್ತಲೇ ಇದ್ದು, ಸಂಕಷ್ಟದಲ್ಲಿ ಸಿಲುಕಿವೆ. ಮೊನ್ನೆ ತಾನೇ ಹನ್ನೆರಡು ಸಾವಿರಕ್ಕಿಂತ ಅಗ್ಗದ ಬೆಲೆಯಲ್ಲಿರುವ ಮೊಬೈಲ್ ಗಳನ್ನು (Mobile) ಭಾರತ ಸರ್ಕಾರ ಬ್ಯಾನ್ ಮಾಡುವ ನಿರ್ಧಾರ ಮಾಡಿರುವ ಬಗ್ಗೆ ವರದಿಯೊಂದು ಹೊರಬಿದ್ದಿತ್ತು. ಈಗ ಅದರ ಬೆನ್ನಲ್ಲೇ ಜರ್ಮನಿ (Germany) ಸಹ ಇಂಥಹದ್ದೇ ಒಂದು ನಿರ್ಧಾರ ತೆಗೆದುಕೊಂಡಿದೆ. ಜರ್ಮನಿಯಲ್ಲಿ ಒಪ್ಪೋ, ಒನ್ ಪ್ಲಸ್ ಸ್ಮಾರ್ಟ್‌ಫೋನ್ ಗಳನ್ನು ನಿಷೇಧಿಸಲು ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಂಡಿದೆ. ಜರ್ಮನಿ ಮಾತ್ರವಲ್ಲದೇ ಯುರೋಪ್ ದೇಶಗಳು (Europe Country) ಸಹ ಇದೇ ನೀತಿಯನ್ನು ಅನುಸರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

5G ಸ್ಮಾರ್ಟ್‌ಫೋನ್‌ಗಳಾದ ಒಪ್ಪೋ ಮತ್ತು ಒನ್ ಪ್ಲಸ್ ಅನ್ನು ದೇಶದಲ್ಲಿ ಮಾರಾಟ ಮಾಡುವುದನ್ನು ಜರ್ಮನಿಯ ನ್ಯಾಯಾಲಯವು ನಿಷೇಧಿಸಿದೆ. ಶೀಘ್ರದಲ್ಲೇ, ಯುರೋಪಿಯನ್ ಒಕ್ಕೂಟದ ಇತರ ದೇಶಗಳು ಸಹ ಇದೇ ರೀತಿಯ ನಿಷೇಧ ಹೇರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ನಿಷೇಧಕ್ಕೆ ಕಾರಣ ಏನು?
ನೋಕಿಯಾ ಕಂಪನಿ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ವಾಮ್ಯದ 5G ತಂತ್ರಜ್ಞಾನವನ್ನು ಪರವಾನಗಿ ಇಲ್ಲದೆ ಬಳಸಿದ್ದಕ್ಕಾಗಿ ಒಪ್ಪೋ, ಒನ್ ಪ್ಲಸ್ ಎರಡು ಕಂಪನಿಗಳ ಮೇಲೆ ಮೊಕದ್ದಮೆ ಹೂಡಿತ್ತು. ಕಂಪನಿಗಳು ಉದ್ದೇಶಪೂರ್ವಕವಾಗಿ ತಮ್ಮ ಜರ್ಮನ್ ಸೈಟ್‌ಗಳಿಂದ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಪಟ್ಟಿಯಿಂದ ತೆಗೆದುಹಾಕಿವೆ ಮತ್ತು ಫಿನ್ನಿಷ್ ಕಂಪನಿಯಿಂದ ಯಾವುದೇ ಪರವಾನಗಿಯನ್ನು ಖರೀದಿಸದೆ ಪೇಟೆಂಟ್ ಪಡೆದ 5G ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ನೋಕಿಯಾ ಆರೋಪಿಸಿತ್ತು.

ಇದನ್ನೂ ಓದಿ: Mobile Ban: ಭಾರತದಲ್ಲಿ ಚೀನಾದ ಕಡಿಮೆ ಬೆಲೆಯ ಮೊಬೈಲ್ ಬ್ಯಾನ್? ಇದುವೇ ಕಾರಣ

ವಿಚಾರಣೆ ಬಳಿಕ ಕಂಪನಿಗಳ ವಿರುದ್ಧ ಮೊಕದ್ದಮೆ ಹೂಡಿದ ನೋಕಿಯಾ ಪರವಾಗಿ ಮ್ಯೂನಿಚ್ ನ್ಯಾಯಾಲಯ ತೀರ್ಪು ನೀಡಿದ್ದು, ಒಪ್ಪೋ ಮತ್ತು ಒನ್ ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುತ್ತಿರುವ 5G ತಂತ್ರಜ್ಞಾನಕ್ಕೆ ಮಾನ್ಯ ಪರವಾನಗಿಗಳನ್ನು ಹೊಂದಿಲ್ಲ ಎಂದು ತಿಳಿಸಿತು. ನಂತರ ನ್ಯಾಯಾಲಯವು ಪರವಾನಗಿ ಶುಲ್ಕದ ವಿಷಯದಲ್ಲಿ ಇತ್ಯರ್ಥಕ್ಕೆ ಬರುವಂತೆ ಎರಡೂ ದೇಶಗಳ ಕಂಪನಿಗಳಿಗೆ ಆದೇಶ ನೀಡಿತು, ಒಪ್ಪಂದ ವಿಫಲವಾದ ನಂತರ ಈ ಸ್ಮಾರ್ಟ್ ಫೋನ್ ಗಳ ಮೇಲೆ ನಿಷೇಧ ಹೇರಲಾಗಿದೆ.ಫಿನ್ನಿಶ್ ತಂತ್ರಜ್ಞಾನದ ಪ್ರಮುಖ ಕಂಪನಿ ನೋಕಿಯಾ, ಅತ್ಯಂತ ಪ್ರಮುಖ ಆರಂಭಿಕ ಮೊಬೈಲ್ ಫೋನ್ ತಯಾರಕರಲ್ಲಿ ಒಂದಾದ ತನ್ನ ಶಸ್ತ್ರಾಗಾರದಲ್ಲಿ 5G ತಂತ್ರಜ್ಞಾನದ ಮೇಲೆ ಪೇಟೆಂಟ್‌ಗಳನ್ನು ಹೊಂದಿದೆ ಮತ್ತು ಇದು ಹಲವಾರು ಚೀನೀ ಸ್ಮಾರ್ಟ್‌ಫೋನ್ ತಯಾರಕರಿಗೆ ತಲೆನೋವಾಗಿ ಬಿಟ್ಟಿದೆ.

ದೊಡ್ಡ ಮೊತ್ತದ ಹಣಕ್ಕೆ ಹೆದರಿ ಒಪ್ಪಂದದಿಂದ ಹಿಂದೆ ಸರಿದ ಚೀನಾ
ಅವರು ಪರವಾನಗಿ ಒಪ್ಪಂದಕ್ಕೆ ಹೋಗಿದ್ದರೆ, ಈ ಎರಡೂ ಸ್ಮಾರ್ಟ್‌ಫೋನ್ ತಯಾರಕರು ಅವರು ಮಾರಾಟ ಮಾಡಿದ ಪ್ರತಿ ಸಾಧನಕ್ಕೆ ಸುಮಾರು 2.50 ಯುರೋಗಳನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವು ಚೀನಾ ಕಂಪನಿಗಳ ಲಾಭದಿಂದ ಗಮನಾರ್ಹ ಪಾಲನ್ನು ಪಾವತಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಚೀನಾ ಕಂಪನಿ ನೋಕಿಯಾದ ಜೊತೆ ಒಪ್ಪಂದಕ್ಕೆ ಮುಂದಾಗಲಿಲ್ಲ.

ಇದನ್ನೂ ಓದಿ:  Realme 9i: ಬಿಡುಗಡೆಗೆ 2 ದಿನ ಬಾಕಿ, ಸೋರಿಕೆಯಾಯ್ತು ಹೊಸ ಸ್ಮಾರ್ಟ್​ಫೋನಿನ ವಿಶೇಷ ಫೀಚರ್ಸ್​!

ಈ ತೀರ್ಪಿನ ನಂತರ, ಒಪ್ಪೋ ಮತ್ತು ಒನ್ ಫ್ಲಸ್ ನ ಮೂಲ ಕಂಪನಿಯಾದ ಬಿಬಿಕೆ ಎಲೆಕ್ಟ್ರಾನಿಕ್ಸ್ ನ ಇತರ ತಯಾರಕರು ಇದೇ ರೀತಿಯ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ಬಿಬಿಕೆ ಎಲೆಕ್ಟ್ರಾನಿಕ್ಸ್‌ ನ ಪೋರ್ಟ್‌ಫೋಲಿಯೊದಲ್ಲಿರುವ ಇತರ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾಧ ವಿವೋ, iQOO, ರೀಲ್ ಮಿ ಫೋನ್ ಗಳು ನಿಷೇಧವಾಗಬಹುದು ಎನ್ನಲಾಗಿದೆ.

ಯುರೋಪ್ ದೇಶಗಳಲ್ಲೂ ಬ್ಯಾನ್ ಆಗುತ್ತಾ ಚೀನಾ ಫೋನ್ ಗಳು?
ಯುಕೆ, ನೆದರ್‌ಲ್ಯಾಂಡ್ಸ್, ಸ್ಪೇನ್, ಫ್ರಾನ್ಸ್, ಫಿನ್‌ಲ್ಯಾಂಡ್ ಮತ್ತು ಸ್ವೀಡನ್‌ನಲ್ಲಿ ಬಿಬಿಕೆ ಗುಂಪಿನ ವಿರುದ್ಧ ನೋಕಿಯಾ ಕಂಪನಿಯ ಹೆಚ್ಚಿನ ಮೊಕದ್ದಮೆಗಳ ಕಾರಣ, ಈ ದೇಶಗಳಲ್ಲೂ ಒಪ್ಪೋ, ಒನ್ ಫ್ಲಸ್, ವಿವೋ, ರೀಲ್ ಮಿ ಬ್ರ್ಯಾಂಡ್‌ಗಳು ಬ್ಯಾನದ ಆಗುವ ಸಾಧ್ಯತೆಗಳಿವೆ.
Published by:Ashwini Prabhu
First published: