• Home
  • »
  • News
  • »
  • tech
  • »
  • 5G in India: ಎಲ್ಲಿ ಸಿಗುತ್ತೆ 5G ಸಿಮ್? ಮೊಬೈಲ್​ನಲ್ಲಿ ನೆಟ್ವರ್ಕ್​ ಹೇಗೆ ಆಕ್ಟಿವೇಟ್​ ಆಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

5G in India: ಎಲ್ಲಿ ಸಿಗುತ್ತೆ 5G ಸಿಮ್? ಮೊಬೈಲ್​ನಲ್ಲಿ ನೆಟ್ವರ್ಕ್​ ಹೇಗೆ ಆಕ್ಟಿವೇಟ್​ ಆಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಸ್ತುತ ಮಾರುಕಟ್ಟೆಯಲ್ಲಿ 2G, 3G ಮತ್ತು 4G ಸಿಮ್‌ಗಳು ಲಭ್ಯವಿದೆ. ನಾವು 5G ಸಿಮ್ ಬಗ್ಗೆ ಮಾತನಾಡಿದರೆ, ಅದು ಪ್ರಸ್ತುತ 4G ಸಿಮ್​ನಂತೆಯೇ ಇರುತ್ತದೆ. ಮಾಹಿತಿಯ ಪ್ರಕಾರ, 4G ಸಿಮ್‌ನ ಗಾತ್ರ ಅಥವಾ ಆಕಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನಲಾಗಿದೆ.

  • Share this:

ನವದೆಹಲಿ(ಅ.01): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)  ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC 2022)ನಲ್ಲಿ ರಿಮೋಟ್ ಬಟನ್ ಒತ್ತುವ ಮೂಲಕ ಭಾರತದಲ್ಲಿ 5G ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ಮೊದಲ ಹಂತದಲ್ಲಿ 13 ನಗರಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗುtftde. ಇವುಗಳಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ಸೇರಿವೆ. ಬಳಿಕ 5G ದೇಶದ ಪ್ರತಿಯೊಂದು ಭಾಗಕ್ಕೂ ತಲುಪಿಸಲಾಗುತ್ತದೆ. 5ಜಿ ಸೇವೆ ಆರಂಭಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ 5ಜಿ ಸ್ಮಾರ್ಟ್ ಫೋನ್​ಗಳು ಬಂದಿದ್ದು, ಸೇವೆ ಆರಂಭವಾದ ಕೂಡಲೇ ಜನರು ಸೂಪರ್ ಫಾಸ್ಟ್ 5ಜಿ ಇಂಟರ್ ನೆಟ್ ಅನುಭವಿಸಲು ಸಾಧ್ಯವಾಗುತ್ತದೆ ಎಂಬುದು ಗಮನಾರ್ಹ. ಆದಾಗ್ಯೂ, 5G ನೆಟ್‌ವರ್ಕ್ ಬಂದ ಬಳಿಕ, 5G ಸಿಮ್ ಹೇಗೆ ಲಭ್ಯವಾಗುತ್ತದೆ? ಅಲ್ಲದೇ ನಿಮ್ಮ ಹಳೆಯ ಸಂಖ್ಯೆಯನ್ನು 5G ಸಿಮ್ ಕಾರ್ಡ್‌ನಲ್ಲಿ ಹೇಗೆ ಬಳಸಬಹುದು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾದ್ರೆ 5G ಸ್ಮಾರ್ಟ್‌ಫೋನ್‌ನಲ್ಲಿ 5G ಸಿಮ್ ಕಾರ್ಡ್ ಅನ್ನು ಹೇಗೆ ಬಳಸಬಹುದು ಎಂಬ ವಿವರ ಇಲ್ಲಿದೆ ನೋಡಿ.


ಸಿಮ್ ಗಾತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ


ಪ್ರಸ್ತುತ ಮಾರುಕಟ್ಟೆಯಲ್ಲಿ 2G, 3G ಮತ್ತು 4G ಸಿಮ್‌ಗಳಿವೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರಸ್ತುತ, ಫೀಚರ್ ಫೋನ್ ಬಳಕೆದಾರರು 2G ಸಿಮ್ ಅನ್ನು ಬಳಸುತ್ತಿದ್ದರೆ, ಸ್ಮಾರ್ಟ್‌ಫೋನ್ ಬಳಕೆದಾರರು 3G ಮತ್ತು 4G ಸಿಮ್ ಕಾರ್ಡ್‌ಗಳನ್ನು ಬಳಸುತ್ತಾರೆ. ನಾವು 5G ಸಿಮ್ ಬಗ್ಗೆ ಮಾತನಾಡಿದರೆ, ಅದು ಪ್ರಸ್ತುತ 4G ಸಿಮ್ನಂತೆಯೇ ಇರುತ್ತದೆ. ಮಾಹಿತಿಯ ಪ್ರಕಾರ, 4G ಸಿಮ್‌ನ ಗಾತ್ರ ಅಥವಾ ಆಕಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.


ಇದನ್ನೂ ಓದಿ: 5G Launch: ಪ್ರಾಕೃತಿಕ ವಿಕೋಪ ಬರೋ ಮೊದಲೇ ಸಿಗುತ್ತೆ ಸೂಚನೆ, C-Dot Technologyಯಿಂದ ಮೊಬೈಲ್​ಗೆ ಸಂದೇಶ!


5G ನೆಟ್‌ವರ್ಕ್​ ಹಿಡಿಯುತ್ತದೆ 4G ಸಿಮ್


ನೀವು ಪ್ರಸ್ತುತ ಯಾವ ಕಂಪನಿಯ 4G ಸಿಮ್ ಬಳಸುತ್ತಿದ್ದೀರಿ, ಅದು 5G ನೆಟ್‌ವರ್ಕ್​ನಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಆದಾಗ್ಯೂ ಇದು ಹೇಗೆ ಸಾಧ್ಯ? ಸದ್ಯಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಾಸ್ತವವಾಗಿ, ಸಿಮ್‌ನಲ್ಲಿ ಯಾವುದೇ ತಂತ್ರಜ್ಞಾನವಿಲ್ಲ. SIM ಮೂಲಕ, ನಿಮಗೆ ಕೇವಲ ಒಂದು ವಿಶಿಷ್ಟ ID ಯನ್ನು ನೀಡಲಾಗುತ್ತದೆ ಮತ್ತು ಆ ID ಯ ಪ್ರಕಾರ ಯೋಜನೆಯನ್ನು ನಿಮ್ಮ ಸಂಖ್ಯೆಯಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೊಸ ಸಿಮ್ ಪಡೆಯುವ ಅಗತ್ಯವಿಲ್ಲ.


ಯಾವ ಮೊಬೈಲ್ ಫೋನ್‌ಗಲ್ಲಿ 5G ಸಿಮ್ ಕಾರ್ಯ ನಿರ್ವಹಿಸುತ್ತದೆ?


5G ಸಿಮ್ ಅನ್ನು 5G ಫೋನ್‌ಗಳಲ್ಲಿ ಮಾತ್ರ ಬಳಸಬಹುದು ಎಂಬುವುದು ಗಮನಿಸಲೇಬೇಕಾದ ವಿಚಾರ. ಅಲ್ಲದೆ, 5G ಫೋನ್‌ಗಳನ್ನು ಖರೀದಿಸಿದ ಮೊಬೈಲ್ ಬಳಕೆದಾರರು 5G ಸಿಮ್ ಅನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿಲ್ಲ. ಗ್ರಾಹಕರು ತಮ್ಮ 4G ಸಿಮ್‌ ಬಳಸಿ 5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Reliance AGM 2022: ಕೈಗೆಟುಕುವ ದರದಲ್ಲಿ 5ಜಿ ಸ್ಮಾರ್ಟ್ ಫೋನ್ಸ್! ರಿಲಯನ್ಸ್ ಕನಸಿಗೆ ಗೂಗಲ್ ಬೆಂಬಲ


5G ಯೋಜನೆyನ್ನು ಖರೀದಿಸಬೇಕು


4G ಸಿಮ್ ಕಾರ್ಡೇ 5G ಸಿಮ್‌ಗೆ ಪರಿವರ್ತನೆಯಾಗುವುದರಿಂದ ನೀವು ಏಕಾಏಕಿ 5G ಇಂಟರ್ನೆಟ್ ಅನ್ನು ಬಳಸಬಹುದು ಎಂದು ಇದರ ಅರ್ಥವಲ್ಲ. ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 5G ಸೇವೆಗಳ ಪ್ರಯೋಜನವನ್ನು ನೀವು ಬಯಸಿದರೆ, ನೀವು 5G ಯೋಜನೆಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ ಮತ್ತು ಆ 5G ಪ್ಯಾಕ್‌ನಲ್ಲಿ ಲಭ್ಯವಿರುವ ಪ್ರಯೋಜನಗಳ ಪ್ರಕಾರ, ನೀವು 5G ಸೇವೆಯನ್ನು ಪಡೆಯಬಹುದು.

Published by:Precilla Olivia Dias
First published: