ಮಹಿಳೆಯರು ಸಾಮಾನ್ಯವಾಗಿ ಉತ್ತಮ ಕ್ಯಾಮೆರಾ ಹೊಂದಿದ ಮತ್ತು ಸೆಲ್ಪಿಗೆ ಯೋಗ್ಯವಾದ ಮೊಬೈಲ್ ಫೋನ್ಗಳನ್ನು ಜಾಸ್ತಿ ಬಳಸುತ್ತಾರೆ. ಆದರೆ ಕೆಲವು ಮೊಬೈಲ್ಗಳಲ್ಲಿ ಕ್ಯಾಮೆರಾ ಚೆನ್ನಾಗಿರುತ್ತವೆ ಹೊರತು ಪೀಚರ್ಗಳು ಯೋಗ್ಯವಾಗಿರುದಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಫೀಚರ್ ಜೊತೆಗೆ ಎಲ್ಲವನ್ನು ಒಳಗೊಂಡ ಮೊಬೈಲ್ ಇದ್ದರು ಮಹಿಳೆಯರಿಗೆ ಅವುಗಳ ಬಗ್ಗೆ ತಿಳಿದಿಲ್ಲ. ಹಾಗಿದ್ದರೆ ಮಹಿಳೆಯರಿಗೆ ಯೋಗ್ಯವಾದ ಮೊಬೈಲ್ ಯಾವುದು..? ಉತ್ತಮ ಫೀಚರ್ ಜೊತೆಗೆ ಬೆಸ್ಟ್ ಕ್ಯಾಮೆರಾ ಹೊಂದಿದ ಮೊಬೈಲ್ಗಳು ಯಾವುದು..? ಪರಿಚಯ ಇಲ್ಲಿದೆ.
ಒನ್ ಪ್ಲಸ್ 6ಟಿ
ಮಾರುಕಟ್ಟೆಯಲ್ಲಿ ಅಧಿಕವಾಗಿ ಮಾರಾಟಗೊಳ್ಳುತ್ತಿರುವ ಒನ್ ಪ್ಲಸ್ 6ಟಿ ಮೊಬೈಲ್ ಉತ್ತಮ ಫೀಚರ್ ಹಾಗೂ ಸೆಲ್ಫಿಗೆ ಯೋಗ್ಯವಾದ ಕ್ಯಾಮೆರಾವನ್ನು ಹೊಂದಿದೆ. ದೀರ್ಘ ಸಮಯದ ವರೆಗೆ ಬಳಸ ಬಹುದಾದ ಈ ಮೊಬೈಲ್ ಮಹಿಳೆಯರ ಬಳಕೆಗೆ ಹೇಳಿ ಮಾಡಿಸಿದಹಾಗಿದೆ. ಎಷ್ಟೇ ಬಳಸಿದರು ಹ್ಯಾಂಗ್ ಆಗದ ಒನ್ ಪ್ಲಸ್ ಮೊಬೈಲ್ ಒಕ್ಟಾಕೋರ್ ಪ್ರೊಸೆಸರ್ ಜೊತೆಗೆ 6 GB RAM ಒಳಗೊಂಡಿದೆ. ಇನ್ನೂ ಸೆಲ್ಫಿಗೆ ಯೋಗ್ಯವಾದ 16 ಮೆಗಾಫಿಕ್ಸೆಲ್ ಫ್ರಂಟ್ ಕ್ಯಾಮೆರಾ ಹಾಗೂ 16 ರೇರ್ ಕ್ಯಾಮೆರಾ ಇದರಲ್ಲಿದೆ. ಇದರ ಮುಖ ಬೆಲೆ 37,999 ರೂ
ಒಪ್ಪೋ ಫೈಂಡ್ ಎಕ್ಸ್
ಒಪ್ಪೋ ಮೊಬೈಲ್ಗಳು ಸೆಲ್ಪಿಗೆ ಹೆಸರುವಾಸಿ ಆದರೆ ಒಪ್ಪೋ ಫೈಂಡ್ ಎಕ್ಸ್ ಮೊಬೈಲ್ನಲ್ಲಿ ಸೆಲ್ಪಿ ಜೊತೆಗೆ ಅದ್ಬುತ ಫೀಚರ್ ಒಳಗೊಂಡಿದೆ. ನವೀನ ವಿನ್ಯಾಸದಿಂದ ಕೂಡಿದ ಈ ಮೊಬೈಲ್ನಲ್ಲಿ 3ಡಿ ಫೇಶಿಯಲ್ ಸ್ಕ್ಯಾನಿಂಗ್ ಆಯ್ಕೆ ಇದೆ. ಮೊಬೈಲ್ 6.4 ಇಂಚಿನ ಸ್ಕ್ರೀನ್ ಹೊಂದಿದ್ದು, ಒಕ್ಟಾಕೋರ್ ಪ್ರೊಸೆಸರ್ ಹಾಗೂ ಅಧಿಕ ಸಮಯ ಬಳಸ ಬಹುದಾದ 3730 mAh ಬ್ಯಾಟರಿ ಹೊಂದಿದೆ. ಅಟೋ ಬ್ಯೂಟಿ ಆಯ್ಕೆಯ ಜೊತೆಗೆ ಸೆಲ್ಫಿಗೆ ಯೋಗ್ಯವಾದ 25 ಮೆಗಾಫಿಕ್ಸೆಲ್ ಕ್ಯಾಮೆರಾ ಹಾಗೂ 16+20 ಮೆಗಾಫಿಕ್ಸೆಲ್ ರೇರ್ ಕ್ಯಾಮೆರಾ ಇದರಲ್ಲಿದೆ. ಒಪ್ಪೋ ಫೈಂಡ್ ಎಕ್ಸ್ ಮೊಬೈಲ್ ಮುಖಬೆಲೆ 61,990 ರೂ.
ಹುವಾಯ್ ನೋವಾ 3ಐ
ಮಹಿಳೆಯರಿಗೆ ಯೋಗ್ಯವಾದ ಹುವಾಯ್ ನೋವಾ 3ಐ ಸ್ಮಾರ್ಟ್ ಫೋನ್ನಲ್ಲಿ ಅದ್ಭುತವಾದ ಕ್ಯಾಮೆರಾ ಫೀಚರ್ ನೀಡಲಾಗಿದ್ದು, ಪೊಟ್ರೇಟ್ ಮೂಡ್, ಪ್ರೋ ಮೂಡ್, ಪನೋರಮ, ಲೈಟ್ ಪೈಟಿಂಗ್ 3ಡಿ ಪನೋರಮ, ಟೈಮ್ ಲ್ಯಾಪ್ಸ್ ಆಯ್ಕೆಯನ್ನು ನೀಡಿದೆ. 16 ಮೆಗಾಪಿಕ್ಸೆಲ್ ಕ್ಯಾಮೆರಾ ಜೊತೆಗೆ 24 ಮೆಗಾಫಿಕ್ಸೆಲ್ ರೇರ್ ಕ್ಯಾಮೆರಾ ಹೊಂದಿದೆ. ಮಾರುಕಟ್ಟೆಯಲ್ಲಿ ಕಪ್ಪು, ಬಿಳಿ ಹಾಗೂ ನೀಲಿ ಬಣ್ಣದಲ್ಲಿ ದೊರಕುವ ಈ ಮೊಬೈಲ್ನ ಮುಖಬೆಲೆಬೆಲೆ 21,999 ರೂ.
ಹಾನರ್ 10
ಹಾನರ್ 10 ಮೊಬೈಲ್ ಡುಯೆಲ್ ಸೆನ್ಸಾರ್ ರೇರ್ ಕ್ಯಾಮೆರಾವನ್ನು ಹೊಂದಿದೆ. ಈ ಮೊಬೈಲ್ನಲ್ಲಿ 22 ಕ್ಯಾಮೆರಾ ಮೂಡ್ ಆಯ್ಕೆಯನ್ನು ನೀಡಲಾಗಿದೆ. ಹಾನರ್ 10 ಮೊಬೈಲ್ ರೇರ್ ಕ್ಯಾಮೆರಾವು 24 ಮೆಗಾಫಿಕ್ಸೆಲ್ ಹೊಂದಿದ್ದು ಫ್ರಂಟ್ ಕ್ಯಾಮೆರಾ 24 ಮೆಗಾಫಿಕ್ಸೆಲ್ ನೀಡಲಾಗಿದೆ. ಇದರ ಮುಖ ಬೆಲೆಯು 32,999 ರೂ.
ಸ್ಯಾಮ್ಸಂಗ್ ಗ್ಯಾಲಕ್ಷಿ ಎ8 ಸ್ಟಾರ್
ಸ್ಯಾಮ್ಸಂಗ್ ಕಂಪೆನಿಯ ಗ್ಯಾಲಕ್ಷಿ ಎ8 ಸ್ಟಾರ್ ಸ್ಮಾರ್ಟ್ ಪೋನ್ ಉತ್ತಮ ಫೀಚರ್ ಹೊಂದಿದೆ. 6 GB RAM ಮತ್ತು 64 GB ಸ್ಟೋರೆಜ್ ಹೊಂದಿದೆ. ಗ್ಯಾಲಕ್ಷಿ ಎ8 ಸ್ಟಾರ್ ಮೊಬೈಲ್ ಸೆಲ್ಪಿಗೆ ಯೋಗ್ಯವಾದ 24 ಮೆಗಾಫಿಕ್ಸೆಲ್ ಫ್ರಂಟ್ ಕ್ಯಾಮೆರಾ ಹಾಗೂ 16 ಮೆಗಾಫಿಕ್ಸೆಲ್ ರೇರ್ ಕ್ಯಾಮೆರಾ ಇದರಲ್ಲಿದೆ. ಇದರ ಮುಖಬೆಲೆ 28490 ರೂ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ