• Home
  • »
  • News
  • »
  • tech
  • »
  • GPS Technology Advancements: ಜಿಪಿಎಸ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ; ಎಷ್ಟೆಲ್ಲಾ ಕೆಲಸಗಳನ್ನು ಮಾಡುತ್ತೆ ಗೊತ್ತಾ ಜಿಪಿಎಸ್?

GPS Technology Advancements: ಜಿಪಿಎಸ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ; ಎಷ್ಟೆಲ್ಲಾ ಕೆಲಸಗಳನ್ನು ಮಾಡುತ್ತೆ ಗೊತ್ತಾ ಜಿಪಿಎಸ್?

ಜಿಪಿಎಸ್

ಜಿಪಿಎಸ್

ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳು ನಡೆದಂತೆ ಜಿಪಿಎಸ್ ವ್ಯವಸ್ಥೆಯಲ್ಲಿ ಕೂಡ ಮಹತ್ತರ ಬದಲಾವಣೆಗಳು ಉಂಟಾಗಿವೆ. ಹಠಾತ್ ಕಾಣಿಸಿಕೊಳ್ಳುವ ಪ್ರವಾಹ, ಜ್ವಾಲಾಮುಖಿ ಸ್ಫೋಟಗಳು ಮೊದಲಾದ ನೈಸರ್ಗಿಕ ವಿಪತ್ತುಗಳ ಮುನ್ಸೂಚನೆಯನ್ನು ಜಿಪಿಎಸ್ ಸಂಕೇತಗಳು ನೀಡುತ್ತಿವೆ

  • Share this:

ಜಿಪಿಎಸ್ (Global Positioning System) ಉಪಯೋಗ ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದು ಹೆಚ್ಚಿನ ಸ್ಮಾರ್ಟ್‌ಫೋನ್ (Smart Phone) ಬಳಕೆದಾರರಿಗೆ ತಿಳಿದೇ ಇರುತ್ತದೆ. ಪೊಲೀಸರಿಗೆ (Police) ಅಪರಾಧಿಗಳನ್ನು ಸೆರೆಹಿಡಿಯಲು ಜಿಪಿಎಸ್ ಸಹಕಾರಿಯಾದ ಹಲವಾರು ಘಟನೆಗಳಿವೆ. ಇದು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂದರೆ ಸ್ಮಾರ್ಟ್‌ಫೋನ್‌ಗಳಲ್ಲಿರುವ ಜಿಪಿಎಸ್ ರಿಸೀವರ್ (GPS Receiver) ಹೆಚ್ಚಿನ ಉಪಗ್ರಹಗಳಿಂದ ಸಂಕೇತಗಳನ್ನು ಅಳೆಯುವ ಮೂಲಕ ಸುಮಾರು 1 ರಿಂದ 10 ಮೀಟರ್ ಒಳಗೆ ನೀವಿರುವ ನಿಖರವಾದ ಸ್ಥಳವನ್ನು ಪತ್ತೆ ಹಚ್ಚುತ್ತದೆ.


ಜಿಪಿಎಸ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ


ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳು ನಡೆದಂತೆ ಜಿಪಿಎಸ್ ವ್ಯವಸ್ಥೆಯಲ್ಲಿ ಕೂಡ ಮಹತ್ತರ ಬದಲಾವಣೆಗಳು ಉಂಟಾಗಿವೆ. ಹಠಾತ್ ಕಾಣಿಸಿಕೊಳ್ಳುವ ಪ್ರವಾಹ, ಜ್ವಾಲಾಮುಖಿ ಸ್ಫೋಟಗಳು ಮೊದಲಾದ ನೈಸರ್ಗಿಕ ವಿಪತ್ತುಗಳ ಮುನ್ಸೂಚನೆಯನ್ನು ಜಿಪಿಎಸ್ ಸಂಕೇತಗಳು ನೀಡುತ್ತಿವೆ. ಇದಿಷ್ಟೇ ಅಲ್ಲದೆ ವಿಜ್ಞಾನಿಗಳು ಜಿಪಿಎಸ್ ಮಾಡಬಹುದಾದ ಇನ್ನಷ್ಟು ಆಸಕ್ತಿಕರ ಹಾಗೂ ಸೋಜಿಗದ ಅಂಶಗಳನ್ನು ಹಂಚಿಕೊಂಡಿದ್ದು ಅದೇನು ಎಂಬುದನ್ನು ತಿಳಿದುಕೊಳ್ಳೋಣ.


ಜಿಎಸ್​ಟಿ


ಭೂಕಂಪನದ ಬಗ್ಗೆ ಮಾಹಿತಿ ನೀಡುತ್ತದೆ


ಭೂಮಿ ಎಷ್ಟು ಕಂಪಿಸಿದೆ, ಭೂಕಂಪನ ಪರಿಮಾಣ ಹಾಗೂ ಭೂಕಂಪನದ ಹಾನಿ ಮೊದಲಾದ ಅಂಶಗಳನ್ನು ಅರಿತುಕೊಳ್ಳಲು ವಿಜ್ಞಾನಿಗಳು ಭೂಕಂಪನ ಮಾಪಕಗಳನ್ನು ಅವಲಂಬಿಸಿದ್ದಾರೆ. ಜಿಪಿಎಸ್ ರಿಸೀವರ್‌ಗಳು ಇನ್ನಷ್ಟು ಹೆಚ್ಚಿನ ಸೂಚನೆಗಳನ್ನು ನೀಡುವಷ್ಟು ಸಮರ್ಥವಾಗಿವೆ.


ಭೂವೈಜ್ಞಾನಿಕ ಪ್ರಕ್ರಿಯೆಗಳನ್ನು ಪತ್ತೆಹಚ್ಚಲು ಜಿಪಿಎಸ್ ರಿಸೀವರ್ ಶಕ್ತವಾಗಿವೆ. ಭೂಮಿಯ ಕ್ರಸ್ಟಲ್ ಪ್ಲೇಟ್‌ಗಳು (ಭೂಮಿಯ ಹೊರಪದರದ ಗಟ್ಟಿಯಾದ ಭಾಗ) ಪುಡಿಯಾಗುವ ನಿಧಾನವಾದ ಪ್ರಕ್ರಿಯೆಯನ್ನು ಜಿಪಿಎಸ್ ರಿಸೀವರ್ ಪತ್ತೆ ಹಚ್ಚುತ್ತದೆ ಎಂಬುದು ವಿಜ್ಞಾನಿಗಳ ಅನ್ವೇಷಣೆಯಾಗಿದೆ.


ಇದನ್ನೂ ಓದಿ: Luxury Cars: ಮರ್ಸಿಡಿಸ್, ಬಿಎಂಡಬ್ಲ್ಯೂ ಸೇರಿದಂತೆ ಲಕ್ಸುರಿ ಕಾರುಗಳಲ್ಲಿ ಭದ್ರತಾ ವೈಫಲ್ಯ ಪತ್ತೆ! ನಿಮ್ಮ ಕಾರು ಸೇಫ್ ಆಗಿದೆಯಾ ಚೆಕ್ ಮಾಡಿಕೊಳ್ಳಿ!


ಭೂಕಂಪಗಳನ್ನು ನಿರ್ಣಯಿಸಲು ಸ್ಥಳಗಳನ್ನು ನಿಖರ ಹಾಗೂ ತ್ವರಿತವಾಗಿ ಮಾಪನ ಮಾಡಲು ಜಿಪಿಎಸ್‌ಗೆ ಸಾಧ್ಯವಿಲ್ಲ ಎಂದೇ ಮೊದಲು ವಿಜ್ಞಾನಿಗಳು ಭಾವಿಸಿದ್ದರು. ಆದರೆ ಜಿಪಿಎಸ್ ಉಪಗ್ರಹಗಳು ಭೂಮಿಗೆ ಕಳುಹಿಸುವ ಸಂಕೇತಗಳಿಂದ ಹೆಚ್ಚುರಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂಬುದನ್ನು ಅರಿತುಕೊಂಡರು.


ಜ್ವಾಲಾಮುಖಿಯ ಕುರಿತು ಮಾಹಿತಿ


ಭೂಕಂಪನ ಮಾತ್ರವಲ್ಲದೆ ಜಿಪಿಎಸ್ ಇತರ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.


ಜ್ವಾಲಾಮುಖಿ ವೀಕ್ಷಣಾಲಯಗಳು ಪರ್ವತಗಳ ಸುತ್ತ ಜಿಪಿಎಸ್ ರಿಸೀವರ್‌ಗಳನ್ನು  ಅಳವಡಿಸಿದ್ದು, ಇದು ಜ್ವಾಲಾಮುಖಿಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡುತ್ತವೆ. ಜ್ವಾಲಾಮುಖಿಯ ಏರಿಳಿತಗಳ ಬಗ್ಗೆ ಮಾಹಿತಿ ನೀಡುವ ಜಿಪಿಎಸ್ ಸೂಚಕಗಳು, ಕರಗಿದ ಬಂಡೆಯು ಯಾವ ದಿಕ್ಕಿಗೆ ಹರಿಯುತ್ತಿದೆ ಎಂಬುದನ್ನು ಅನ್ವೇಷಿಸಬಹುದಾಗಿದೆ.


ಜಿಪಿಎಸ್


2013 ರಲ್ಲಿ, ಹಲವಾರು ಸಂಶೋಧನಾ ಗುಂಪುಗಳು ನಾಲ್ಕು ವರ್ಷಗಳ ಹಿಂದೆ ಅಲಾಸ್ಕಾದಲ್ಲಿ ರೆಡೌಬ್ಟ್ ಜ್ವಾಲಾಮುಖಿಯ ಸ್ಫೋಟದಿಂದ ಜಿಪಿಎಸ್ ಡೇಟಾವನ್ನು ಅಧ್ಯಯನ ಮಾಡಿದರು ಮತ್ತು ಸ್ಫೋಟ ಪ್ರಾರಂಭವಾದ ಕೂಡಲೇ ಸಂಕೇತಗಳು ವಿರೂಪಗೊಂಡವು ಎಂಬುದನ್ನು ಕಂಡುಹಿಡಿದಿದೆ.


ಜಿಪಿಎಸ್ ಬಳಸಿ ನೀರಿನ ಮಟ್ಟವನ್ನು ಅಳೆಯುವುದು


ಮಣ್ಣಿನ ತೇವಾಂಶ ಹಾಗೂ ಮೇಲ್ಮೈಯಲ್ಲಿ ಎಷ್ಟು ಹಿಮ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ಈ ಜಿಪಿಎಸ್ ಟ್ರ್ಯಾಕರ್ ಪತ್ತೆಮಾಡುತ್ತದೆ. ಮಳೆ ಅಥವಾ ಹಿಮದ ರೂಪದಲ್ಲಿ ಹೊರಹೊಮ್ಮುವ ನೀರಿನ ಆವಿಯ ಪ್ರಮಾಣವನ್ನು ಅಧ್ಯಯನ ಮಾಡಲು ವಿಜ್ಞಾನಿಗಳ ಗುಂಪೊಂದು ಜಿಪಿಎಸ್ ಅನ್ನು ಬಳಸಿಕೊಂಡಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಂತಹ ಸ್ಥಳಗಳಲ್ಲಿ ಹಠಾತ್ ಪ್ರವಾಹ ಮುನ್ಸೂಚನೆಗಳನ್ನು ನೀಡಲು ಈ ಅಧ್ಯಯನ ಸಹಕಾರಿಯಾಗಿದೆ.


ಇದನ್ನೂ ಓದಿ: 5G Network Scam: 5ಜಿ ಹೆಸರಲ್ಲಿ ತಂತ್ರಜ್ಞಾನದಲ್ಲಿ ನಡೀತಿದೆ ದೊಡ್ಡ ಹಗರಣ! ತಪ್ಪಿಯೂ ಲಿಂಕ್​ ಕ್ಲಿಕ್ ಮಾಡ್ಬೇಡಿ


ಆಕಾಶದಿಂದ ಎಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂಬುದನ್ನು ಲೆಕ್ಕಾಚಾರ ಮಾಡಲು ಜಿಪಿಎಸ್ ಸಂಶೋಧಕರಿಗೆ ನೆರವಾಗಿದೆ. ಜುಲೈ 2013 ರ ಚಂಡಮಾರುತದ ಸಮಯದಲ್ಲಿ, ಹವಾಮಾನ ಶಾಸ್ತ್ರಜ್ಞರು ಮಾನ್ಸೂನ್ ತೇವಾಂಶವನ್ನು ಸಮುದ್ರ ತೀರದಲ್ಲಿ ಚಲಿಸುವುದನ್ನು ಪತ್ತೆ ಹಚ್ಚಲು GPS ಡೇಟಾವನ್ನು ಬಳಸಿದರು. ಇದರಿಂದ ಉಂಟಾಗಬಹುದಾದ ಹಠಾತ್ ಪ್ರವಾಹದ ಕುರಿತು ಎಚ್ಚರಿಕೆಯನ್ನು 17 ನಿಮಿಷಗಳ ಮೊದಲೇ ನೀಡಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ.


ಜಿಪಿಎಸ್


ನೀರಿನ ಮಟ್ಟದಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ನೆರವಾಗಿದೆ


ನೀರಿನ ಮಟ್ಟದಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಜಿಪಿಎಸ್ ನೆರವಾಗಿದೆ. ಕೊಲೊರಾಡೋದ ಬೌಲ್ಡರ್‌ನಲ್ಲಿರುವ UNAVCO ಜಿಯೋಫಿಸಿಕ್ಸ್ ಸಂಶೋಧನಾ ಸಂಸ್ಥೆಯ ಇಂಜಿನಿಯರ್ ಜಾನ್ ಗ್ಯಾಲೆಟ್ಜ್ಕಾ ಬಾಂಗ್ಲಾದೇಶದಲ್ಲಿ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಜಂಕ್ಷನ್‌ನಲ್ಲಿ ಜಿಪಿಎಸ್ ಕೇಂದ್ರಗಳನ್ನು ಸ್ಥಾಪಿಸಿದರು.


ನದಿಯಲ್ಲಿನ ಕೆಸರು ಸಂಕುಚಿತಗೊಳ್ಳುವುದರಿಂದ ಭೂಮಿಯ ಉಷ್ಣವಲಯದ ಚಂಡಮಾರುತಗಳು ಮತ್ತು ಸಮುದ್ರ ಮಟ್ಟ ಏರಿಕೆಯಾಗುವುದರಿಂದ ಪ್ರವಾಹಕ್ಕೆ ಕಾರಣವಾಗುತ್ತಿದೆಯೇ ಎಂಬುದನ್ನು ಅಳೆಯುವ ಉದ್ದೇಶದಿಂದವಾಗಿತ್ತು. ಈ ಸಮಯದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗಿತ್ತು. ಜಿಪಿಎಸ್‌ನಿಂದ ಇದನ್ನು ತಿಳಿದುಕೊಳ್ಳಲಾಯಿತು ಎಂದು ಜಾನ್ ತಿಳಿಸಿದ್ದಾರೆ.

First published: