UPI Payment: ಯುಪಿಐ ಪೇಮೆಂಟ್ ಮಾಡುವಾಗ ಈ 5 ಸುರಕ್ಷತಾ ಅಂಶಗಳು ನೆನಪಿರಲಿ

ನೀವು ಒಂದು ವೇಳೆ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮುಂತಾದ ಪಾವತಿ ಅಪ್ಲಿಕೇಶನ್‍ಗಳನ್ನು ಬಳಸುತ್ತಿದ್ದರೆ, ಆನ್‍ಲೈನ್ ಹಣ ವಂಚಕರ ಬಗ್ಗೆ ಎಚ್ಚರವಾಗಿರಿ. ಸುರಕ್ಷಿತವಾಗಿ ಆನ್‍ಲೈನ್ ಪಾವತಿಗಳನ್ನು ಮಾಡುಬ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಯಾವುದೇ ರೀತಿಯ ವ್ಯವಹಾರವಾಗಿರಲಿ (Business), ಅದು ಬೀದಿ ಬದಿಯಲ್ಲಿ ತರಕಾರಿ (Vegetables) ಖರೀದಿಸುವುದಿರಲಿ ಅಥವಾ ಯಾವುದೇ ಐಷಾರಾಮಿ ವಸ್ತು ಖರೀದಿಸುವುದಿರಲಿ, ಅದಕ್ಕೆ ಹಣ (Money) ನೀಡುವಾಗ ಈ ದಿನಗಳಲ್ಲಿ ಹೆಚ್ಚಿನವರು ಆದ್ಯತೆ ನಿಡುವುದು ಆನ್‍ಲೈನ್ ಪಾವತಿಗೆ (Online Payment). ಜನರು ಈಗ ತಮ್ಮ ಜೇಬಿನಲ್ಲಿ ಹಣ ಇಟ್ಟುಕೊಳ್ಳುವುದು ಕಡಿಮೆ, ಬದಲಿಗೆ ಯಾವುದೇ ರೀತಿಯ ಪಾವತಿ ಮಾಡಬೇಕಿದ್ದರೂ, ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮುಂತಾದ ಹಲವಾರು ಯುನಿಫೈಡ್ ಪೇಮೆಂಟ್ ಇಂಟರ್‍ಫೇಸ್ (ಯೂಪಿಐ) (UPI) ಲಿಂಕ್ ಮಾಡಿದ ಪಾವತಿ ಅಪ್ಲಿಕೇಶನ್‍ಗಳನ್ನು (Application) ಬಳಸುತ್ತಾರೆ. ಏಕೆಂದರೆ ಆನ್‍ಲೈನ್ ಪಾವತಿ ಅತ್ಯಂತ ಸುಲಭ.

ನಿಮ್ಮ ಸ್ಮಾರ್ಟ್ ಫೋನ್‍ನಲ್ಲಿ ಪಾವತಿ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಂಡರಾಯಿತು ಮತ್ತು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇದ್ದರಾಯಿತು, ಪಾವತಿ ಅಪ್ಲಿಕೇಶನ್‍ನಲ್ಲಿ ನೋಂದಾವಣಿ ಮಾಡಿಕೊಳ್ಳಬಹುದು. ನೀವು ಒಂದು ವೇಳೆ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಮುಂತಾದ ಪಾವತಿ ಅಪ್ಲಿಕೇಶನ್‍ಗಳನ್ನು ಬಳಸುತ್ತಿದ್ದರೆ, ಆನ್‍ಲೈನ್ ಹಣ ವಂಚಕರ ಬಗ್ಗೆ ಎಚ್ಚರವಾಗಿರಿ. ಸುರಕ್ಷಿತವಾಗಿ ಆನ್‍ಲೈನ್ ಪಾವತಿಗಳನ್ನು ಮಾಡುಬ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಯುಪಿಐ ಪಾವತಿ ಮಾಡುವಾಗ ಈ 5 ಸುರಕ್ಷತಾ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ

ಹಂತ 1 :
ಸ್ಕ್ರೀನ್ ಲಾಕ್ : ನಿಮ್ಮ ಪೋನ್‍ಗೆ ಮಾತ್ರವಲ್ಲ, ಪ್ರತಿಯೊಂದು ಹಣ ಪಾವತಿ ಮತ್ತು ಇತರ ಹಣಕಾಸಿಗೆ ಸಂಬಂಧಿಸಿದ ಅಪ್ಲಿಕೇಶನ್‍ಗಳಿಗೆ ಒಂದು ಸಮರ್ಥ ಸ್ಕ್ರೀನ್ ಲಾಕ್, ಪಾಸ್‍ವರ್ಡ್ ಅಥವಾ ಪಿನ್ ನಂಬರ್ ಹಾಕಿಡುವುದು ಅತ್ಯಂತ ಅಗತ್ಯ. ಅದು ನಿಮ್ಮ ಫೋನ್ ಅನ್ಯರ ಕೈಯಲ್ಲಿ ಸಿಕ್ಕಿ , ವಂಚನೆಗೆ ಒಳಗಾಗುವುದನ್ನು ತಪ್ಪಿಸುತ್ತದೆ ಮತ್ತು ನಿಮ್ಮ ವೈಯುಕ್ತಿಕ ಮತ್ತು ಇತರ ಗೌಪ್ಯ ಮಾಹಿತಿಗಳು ಸೋರಿಕೆಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಂತ ನೀವು ಫೋನ್‍ಗೆ, ನಿಮ್ಮ ಜನ್ಮ ದಿನಾಂಕ, ಹೆಸರು ಅಥವಾ ಮೊಬೈಲ್ ಸಂಖ್ಯೆ ಮುಂತಾದ ಸರಳ ಮತ್ತು ಊಹಿಸಲು ಸಾಧ್ಯವಾಗುವಂತಹ ಪಾಸ್‍ವರ್ಡ್‍ಗಳನ್ನು ಇಟ್ಟುಕೊಳ್ಳಬೇಡಿ.

ಇದನ್ನೂ ಓದಿ: CIBIL Score: ಉಚಿತವಾಗಿ ನಿಮ್ಮ ಸಿಬಿಲ್​ ಸ್ಕೋರ್​ ಚೆಕ್​ ಮಾಡೋದು ಈಗ ಸುಲಭ! ಜಸ್ಟ್​ ಹೀಗ್​ ಮಾಡಿ

ಹಂತ 2 :
ನಿಮ್ಮ ಪಿನ್ ಅನ್ನು ಯಾರಿಗೂ ನೀಡಬೇಡಿ : ನಿಮ್ಮ ಮೊಬೈಲ್ ಮತ್ತು ಹಣಕಾಸಿಗೆ ಸಂಬಂಧಪಟ್ಟ ವ್ಯವಹಾರಗಳ ಅಪ್ಲಿಕೇಶನ್‍ಗಳ ಪಿನ್‍ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಾಗೆ ಮಾಡಿದಲ್ಲಿ, ನೀವು ಆರಾಮವಾಗಿ ವಂಚಕರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಮತ್ತು ಅವರು ನಿಮ್ಮ ಪೋನನ್ನು ಬಳಸಿಕೊಂಡು ಹಣವನ್ನು ಕದಿಯುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ನಿಮ್ಮ ಪಿನ್ ಬೇರೆಯವರಿಗೆ ತಿಳಿಯಿತು ಎಂದು ಅನಿಸಿದರೆ, ಕೂಡಲೇ ನೀವು ಪಿನ್ ಬದಲಾಯಿಸಬೇಕು.

ಹಂತ 3 :
ಪರಿಶೀಲಿಸದ ಲಿಂಕ್‍ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ನಕಲಿ ಕರೆಗಳನ್ನು ಸ್ವೀಕರಿಸಬೇಡಿ : ನಿಮ್ಮ ಇನ್‍ಬಾಕ್ಸಿಗೆ, ಪರಿಶೀಲಿಸದ ಲಿಂಕ್‍ಗಳನ್ನು ಹೊಂದಿರುವ ಹಲವಾರು ಮೆಸೇಜ್‍ಗಳು ಬರುತ್ತವೆ. ಹಾಗೆಂದ ಮಾತ್ರಕ್ಕೆ ಆ ಎಲ್ಲಾ ಲಿಂಕ್‍ಗಳ ಮೇಲೆ ನೀವು ಕ್ಲಿಕ್ ಮಾಡಿದಿರಿ ಎಂದಾದಲ್ಲಿ ಆನ್‍ಲೈನ್ ಹಣಕಾಸಿನ ಮೋಸದ ಜಾಲಕ್ಕೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಅಂತಹ ಲಿಂಕ್‍ಗಳುಳ್ಳ ಮೆಸೇಜ್‍ಗಳ ಬಗ್ಗೆ ಸದಾ ಎಚ್ಚರವಾಗಿರಿ. ಅದೇ ರೀತಿ ನೀವು ನಕಲಿ ಕರೆಗಳನ್ನು ಕೂಡ ಸ್ವೀಕರಿಸಲು ಹೋಗಬೇಡಿ.

ಆ ರೀತಿಯ ಕರೆಗಳನ್ನು ಮಾಡುವವರು ಯಾವುದೋ ಬ್ಯಾಂಕ್ ಅಥವಾ ಸಂಸ್ಥೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ನಿಮ್ಮಿಂದ ಪಿನ್, ಓಟಿಪಿ ಮುಂತಾದ ಮಾಹಿತಿಗಳನ್ನು ಕೇಳುತ್ತಾರೆ. ಹ್ಯಾಕರ್‍ಗಳು ಸಾಮಾನ್ಯವಾಗಿ , ವೆರಿಫಿಕೇಶನ್‍ಗಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್‍ಗಳನ್ನು ಡೌನ್‍ಮಾಡಿಕೊಳ್ಳಿ ಎಂದು ಲಿಂಕ್‍ಗಳನ್ನು ಶೇರ್ ಮಾಡುತ್ತಾರೆ ಇಲ್ಲವೇ, ಅಥವಾ ಕರೆ ಮಾಡುತ್ತಾರೆ. ನೆನಪಿರಲಿ, ಬ್ಯಾಂಕ್‍ನವರು ಕರೆ ಮಾಡಿ, ಯಾವುದೇ ಪಿನ್, ಓಟಿಪಿ ಅಥವಾ ಯಾವುದೇ ಮಾಹಿತಿಗಳನ್ನು ಕೇಳುವುದಿಲ್ಲ.

ಹಂತ 4 :
ಯುಪಿಐ ಅಪ್ಲಿಕೇಶನ್ ಅನ್ನು ನಿಯಮಿತವಾಗಿ ನವೀಕರಣ ಮಾಡುತ್ತಿರಿ: ಪ್ರತೀ ಅಪ್ಲಿಕೇಶನ್ ಅನ್ನು ನವೀಕರಣ ಮಾಡುವುದು ಅಗತ್ಯ. ಪ್ರತೀ ಬಾರಿ ಅಪ್‍ಡೇಟ್ ಮಾಡಿದಾಗಲೂ ಹೊಸ ಫೀಚರ್‍ಗಳು ಮತ್ತು ಲಾಭಗಳನ್ನು ಪಡೆಯಬಹುದು. ನೀವು ಯುಪಿಐನ ನೂತನ ಆವೃತ್ತಿ ಹೊಂದಿರಬೇಕು ಎಂದಾದರೆ ಪ್ರತಿ ಬಾರಿ ನವೀಕರಣ ಮಾಡುತ್ತಲೇ ಇರಬೇಕು.

ಇದನ್ನೂ ಓದಿ: Salary Slip: ಈ ಸ್ಯಾಲರಿ ಸ್ಲಿಪ್ ಎಂದರೇನು? ಇದರ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿ ಇಲ್ಲಿದೆ

ಹಂತ 5 :
ಹಲವು ಪಾವತಿ ಅಪ್ಲಿಕೇಶನ್‍ಗಳನ್ನು ಬಳಸಬೇಡಿ : ನಿಮ್ಮ ಪೋನ್‍ನಲ್ಲಿ ಬಹಳಷ್ಟು ಪಾವತಿ ಅಪ್ಲಿಕೇಶನ್‍ಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ ಮತ್ತು ನೀವು ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ ನಿಂದ ವಿಶ್ವಾಸಾರ್ಹ ಮತ್ತು ಪರಿಶೀಲಿಸಿದ ಪಾವತಿ ಅಪ್ಲಿಕೇಶನ್‍ಗಳನ್ನು ಮಾತ್ರ ಇನ್‍ಸ್ಟಾಲ್ ಮಾಡಿಕೊಳ್ಳಬೇಕು.
Published by:Ashwini Prabhu
First published: