ಸ್ಯಾಮ್ಸಂಗ್​ಗಿಂತ ಒನ್​ ಪ್ಲಸ್​ 6 ಬೆಸ್ಟ್​ ಮೊಬೈಲ್​, ಏಕೆ ಗೊತ್ತೇ?

news18
Updated:May 27, 2018, 2:39 PM IST
ಸ್ಯಾಮ್ಸಂಗ್​ಗಿಂತ ಒನ್​ ಪ್ಲಸ್​ 6 ಬೆಸ್ಟ್​ ಮೊಬೈಲ್​, ಏಕೆ ಗೊತ್ತೇ?
news18
Updated: May 27, 2018, 2:39 PM IST
ಹೊಸದಿಲ್ಲಿ: ಭಾರತೀಯ ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ಸ್ಯಾಮ್ಸಂಗ್​ ವಿರುದ್ಧ ಟೊಂಕಕಟ್ಟಿ ನಿಂತಿರುವ ಒನ್​ ಪ್ಲಸ್​ ಇದೀಗ ನೂತನ ಮೊಬೈಲ್​ ಒನ್​ ಪ್ಲಸ್​ 6 ಲಾಂಚ್​ ಮಾಡುವ ಮೂಲಕ ಬಲವನ್ನು ವೃದ್ಧಿಸಿಕೊಂಡಿದೆ.

ಈಗಿರುವ ಎಲ್ಲಾ ಬಜೆಟೆಡ್​ ಮೊಬೈಲ್​ಗಳಿಗೆ ಸೆಡ್ಡು ಹೊಡೆದಿರುವ ಒನ್​ ಪ್ಲಸ್​ 6, ಸ್ಯಾಮ್ಸಂಗ್​ನ 57,990 ರೂ. ಮೌಲ್ಯದ ಗೆಲಾಕ್ಸಿ ಎಸ್​9 ಮೊಬೈಲ್​ಗಿಂತಲೂ ಅಧಿಕ ಫೀಚರ್​ಗಳನ್ನೊಳಗೊಂಡಿದೆ. ಈ ಕೆಳಗೆ ಎರಡೂ ಮೊಬೈಲ್​ ನಡುವಿನ ಹೋಲಿಕೆ ನೀಡಿದ್ದೇವೆ.

ಎರಡೂ ಮೊಬೈಲ್​ಗಳು ಶುದ್ಧ ಆಂಡ್ರಾಯ್ಡ್​ ಅಥವಾ ಸ್ಟಾಕ್​ ಆಂಡ್ರಾಯ್ಡ್​ ಆಪರೇಟಿಂಗ್​ ಸಿಸ್ಟ್ಂ ಹೊಂದಿಲ್ಲವಾದರೂ ಒನ್​ಪ್ಲಸ್​ 6ನಲ್ಲಿ ಪೂರ್ಣ ಪ್ರಮಾಣದ ಆಂಡ್ರಾಯ್ಡ್​ನ ಎಲ್ಲಾ ಅಪ್ಲಿಕೇಶನ್​ಗಳು ಇದರಲ್ಲಿ ಲಭ್ಯವಿದೆ.

ಆದರೆ ಸ್ಯಾಮ್ಸಂಗ್​ನ ತನ್ನದೇ ಯುಐಯನ್ನು ಒಂದಿರುವುದರಿಂದ ಓರಿಯೋಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದರ ಬಳಕೆಯನ್ನು ಮಾಡುತ್ತದೆ. ಆದರೆ ಶುದ್ಧ ಆಂಡ್ರಾಯ್ಡ್​ ಅನುಭವನ್ನು ಪಡೆಯಲು ಅಸಾಧ್ಯ.

ವೇಗದ ಅಪ್​ಡೇಟ್​
ಆಂಡ್ರಾಯ್ಡ್​ನಲ್ಲಿ ಯಾವುದೇ ಅಪ್​ಡೇಟ್​ಗಳು ಮಾರುಕಟ್ಟೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ತಮ್ಮ ಮೊಬೈಲ್​ಗೆ ಅಪ್​ಡೇಟ್​ ನೀಡುವಲ್ಲಿ ಒನ್​ ಪ್ಲಸ್​ ಸಫಲವಾಗಿದೆ. ಒಂದು ರೀತಿಯಲ್ಲಿ ಸ್ಯಾಮ್ಸಂಗ್​ ಸೇರಿದಂತೆ ಎಲ್ಲಾ ಮೊಬೈಲ್​ಗಳಿಗಿಂದ ಮೊದಲೇ ಒನ್​ಪ್ಲಸ್​ ಅಪ್​ಡೇಟ್​ನ್ನು ನೀಡುತ್ತದೆ.

ಸ್ನಾಪ್​ಡ್ರಾಗನ್​ ಪ್ರೊಸೆಸರ್​
Loading...

ಅಮೆರಿಕದಂತಹ ಕೆಲವೇ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್​ನಲ್ಲಿ ಎಸ್​9ನಲ್ಲಿ ಸ್ನ್ಯಾಪ್‌ಡ್ರಾಗನ್ 845 soc ಪ್ರೊಸೆಸರ್​ ಬಳಸಿದೆ, ಆದರೆ ಭಾರತದಂತಹ ಮಾರುಕಟ್ಟೆಯಲ್ಲಿ ಎಕ್ಸಿನೋಸ್ 9810ನ್ನು ಬಳಸಲಾಗಿದೆ. ಈ ಎಕ್ಸ್​​ನೋಸ್​ ಪ್ರೊಸೆಸರ್​ ಸಾಕಷ್ಟು ಹ್ಯಾಂಗಿಂಗ್​ ಸಮಸ್ಯೆ ಹಾಗೂ ಮಂದಗತಿಯ ಪ್ರೊಸೆಸ್ಸಿಂಗ್​ ವ್ಯವಸ್ಥೆಯಿದೆ.
ಆದರೆ ಒನ್​ಪ್ಲಸ್​ 6ನಲ್ಲಿ ಸ್ನ್ಯಾಪ್‌ಡ್ರಾಗನ್ 845 soc ಬಳಸಲಾಗಿದೆ. ಹೀಗಾಗಿ ಸ್ಪೀಡ್​ ಹಾಗೂ ಹೈಗ್ರಾಫಿಕ್ಸ್​ನಲ್ಲಿ ಈ ಮೊಬೈಲ್​ಗಳು ಬಹಳಷ್ಟು ಉಪಕಾರಿಯಾಗಿದೆ.

ನೋಟ್ಚ್​ ಡಿಸ್​ಪ್ಲೇ
ಈ ವ್ಯವಸ್ಥೆ ಸ್ಯಾಮ್ಸಂಗ್​ ಎಸ್​9 ಮೊಬೈಲ್​ನಲ್ಲಿ ಲಭ್ಯವಿಲ್ಲ, ಒನ್​ಪ್ಲಸ್​ ಅತ್ಯಂತ ಕಡಿಮೆ ಬೆಲೆಗೆ ನಾಟ್ಚ್​ ಡಿಸ್​ಪ್ಲೇ ವ್ಯವಸ್ಥೆಯ ಮೊಬೈಲ್​ ಮಾರುಕಟ್ಟೆಗೆ ಬಿಟ್ಟಿದೆ.

ಬೆಲೆಯಲ್ಲೂ ಒನ್​ಪ್ಲಸ್​ ಕಿಂಗ್​
ಎರಡೂ ಮೊಬೈಲ್​ಗಳನ್ನು ಹೋಲಿಸಿದರೆ ಸ್ಯಾಮ್ಸಂಗ್​ಗಿಂದ ಎಲ್ಲಾ ವಿಭಾಗದಲ್ಲಿ ಒನ್​ಪ್ಲಸ್​ 6 ಮುಂದೆ ನಿಲ್ಲುತ್ತದೆ.
ಎಸ್​9 64GBಗೆ 57,900 ಹಾಗೂ 256GB ಮೊಬೈಲ್​ಗೆ 65,900 ರೂ ಬೆಲೆಯಿದೆ.
ಆದರೆ 64GBಯ ಒನ್​​ಪ್ಲಸ್​ 6 ಮೊಬೈಲ್ಗೆ 34,999ರೂ ಹಾಗು 256GB ಮೊಬೈಲ್​ಗೆ Rs 44,999 ಬೆಲೆಯಿದೆ. ಹೀಗಾಗಿ ಸುಮಾರು 20,000 ರೂ ಉಳಿಸಬಹುದು.
First published:May 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...