ರಿಯಲ್​ ಮಿ 2 ಬಿಡುಗಡೆಗೆ ಒಂದೇ ದಿನ ಬಾಕಿ


Updated:August 27, 2018, 5:13 PM IST
ರಿಯಲ್​ ಮಿ 2 ಬಿಡುಗಡೆಗೆ ಒಂದೇ ದಿನ ಬಾಕಿ

Updated: August 27, 2018, 5:13 PM IST
ಈಗಾಗಲೇ ಒಪ್ಪೊ ಸಂಸ್ಥೆಯಿಂದ ಬೇರ್ಪಟ್ಟಿರುವ ರಿಯಲ್​ ಮಿ ತನ್ನ ನೂತನ ಮೊಬೈಲ್​ ರಿಯಲ್​ ಮಿ 2 ಮೊಬೈಲ್​ನ್ನು ಫ್ಲಿಪ್​ಕಾರ್ಟ್​ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಮೊಬೈಲ್​ನ ವೈಶಿಷ್ಟ್ಯಗಳು ಕೂಡಾ ಬಹಿರಂಗವಾಗಿದೆ.

ಮೊಬೈಲ್​ ಡಿಸ್​ಪ್ಲೇ, ಬ್ಯಾಟರಿ ವೈಶಿಷ್ಟ್ಯ ಸೇರಿದಂತೆ ಫ್ಲಿಪ್​ಕಾರ್ಟ್​ನಲ್ಲಿ ಈ ಮೊಬೈಲ್​ ಪಡೆದುಕೊಳ್ಳಲು ‘Notify Me’ ಎಂಬ ಆಯ್ಕೆಯನ್ನು ಸಹ ನೀಡಲಾಗಿದೆ. ಈಗ ಚಾಲ್ತಿಯಲ್ಲಿರುವ ಅತ್ಯುತ್ತಮ ಬ್ಯಾಟರಿ ಮೊಬೈಲ್​ಗಳಲ್ಲಿ ಒಂದಾಗಿರುವ ರಿಯಲ್​ ಮಿ 2 ‘4230mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 6.2 ಇಂಚಿನ ಡಿಸ್​ಪ್ಲೇ ಹೊಂದಿದೆ.

ಹಿಂಭಾಗದಲ್ಲಿ ಪೊಟ್ರೇಟ್​ಗಾಗಿ ಎರಡು ಕ್ಯಾಮೆರಾ ಹೊಂದಿರುವ ಈ ಮೊಬೈಲನ್ನು ಸಂಸ್ಥೆ​ #ANotchAbove ಎಂಬ ಟ್ಯಾಗ್​ನೊಂದಿಗೆ ಕಳೆದ ಹಲವು ದಿನಗಳಿಂದ ಸಾಮಾಜಿ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದೆ. ಫೇಸ್​ ಅನ್​ಲಾಕರ್​ ವ್ಯವಸ್ಥೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಕುರಿತು ಸಂಸ್ಥೆ ಈ ವರೆಗೂ ಬಹಿರಂಗ ಪಡಿಸಿಲ್ಲ.

ರಿಯಲ್​ ಮಿ ಸಂಸ್ಥೆಯ ಟ್ರೇಡ್ಮಾರ್ಕ್ ಡಿಸೈನ್​ಗಳಲ್ಲಿ ಒಂದಾದ ಡೈಮಂಡ್​ ಕಟ್​ ಡಿಸೈನ್​ ಈ ಮೊಬೈಲ್​ನಲ್ಲೂ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಸಂಸ್ಥೆಯೇ ಹೇಳಿಕೊಂಡಂತೆ ಈ ಮೊಬೈಲ್​ 10,000ಕ್ಕೂ ಕಡಿಮೆ ಬೆಲೆಯಲ್ಲಿ ದೊರಕಬಹುದು ಎನ್ನಲಾಗಿದೆ. ಕಪ್ಪು, ಕೆಂಪು, ಹಾಗು ನೀಲಿ ಬಣ್ಣದಲ್ಲಿ ಈ ಮೊಬೈಲ್​ಗಳು ಲಭ್ಯವಿದೆ.

ಇನ್ನು ಪ್ರೊಸೆಸರ್​ ವಿಚಾರಕ್ಕೆ ಬಂದರೆ ಈ ಹಿಂದೆ ಬಿಡುಗಡೆಯಾಗಿದ್ದ ರಿಯಲ್​ ಮಿ ಮೊಬೈಲ್​ ಹೀಲಿಯೊ ಪಿ60 ಪ್ರೊಸೆಸರ್​ ಅಳವಡಿಸಲಾಗಿತ್ತು. ಈ ಮೊಬೈಲ್​ಗೆ ಸ್ನಾಪ್​ಡ್ರಾಗನ್​ ಪ್ರೊಸೆಸರ್​ ಬಳಕೆ ಮಾಡಲಾಗಿದೆ. ನೋಚ್​ ಡಿಸ್​ಪ್ಲೇ ಕೂಡಾ ಬಳಕೆ ಮಾಡಲಾಗಿದೆ. ಈ ಎಲ್ಲದಕ್ಕೂ ಮಿಗಿಲಾಗಿ ಈ ಹಿಂದೆ ಬಿಡುಗಡೆಯಾಗಿದ್ದ ರಿಯಲ್​ ಮಿ 1 ಮೊಬೈಲ್​ ಒಪ್ಪೊ ಸಹ ಒಡೆತನದಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಬಾರಿ ಒಪ್ಪೊ ಹಿಂದೆ ಬೀಳದೆ ತನ್ನದೇ ಬ್ರ್ಯಾಂಡ್​ನಲ್ಲಿ ಮೊಬೈಲ್ ಬಿಡುಗಡೆಯಾಗುತ್ತಿದೆ.

ಈ ಎಲ್ಲಾ ವೈಶಿಷ್ಟ್ಯಗಳನ್ನು ಗಮನಿಸಿದೆ ಶಿಯೋಮಿ, ಹಾನರ್​ ಲೆನೊವೊ ಎಲ್ಲಾ ಸಂಸ್ಥೆಗಳ ಬಜೆಟ್​ ಮೊಬೈಲ್​ಗಳ ಮೇಲೆ ರಿಯಲ್​  ಮಿ ಸಂಸ್ಥೆಯ ಮೊಬೈಲ್​ ಸೆಡ್ಡು ಹೊಡೆಯುವುದರಲ್ಲಿ ಸಂಶಯವಿಲ್ಲ. ಈ ಮೊಬೈಲ್​ ನಾಳೆ (ಆ.28)ರಂದು ಮಾರುಕಟ್ಟೆಗೆ ಬರಲಿದೆ.
First published:August 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ