Facebook: 40 ಕೋಟಿ ಫೇಸ್​ಬುಕ್​ ಬಳಕೆದಾರರ ಫೋನ್​ ನಂಬರ್​ ಲೀಕ್​​.!

ಅಮೆರಿಕದಲ್ಲಿ ಅತಿ ಹೆಚ್ಚು ಫೇಸ್​ಬುಕ್​ ಖಾತೆ ಹೊಂದಿರುವವರ ಮಾಹಿತಿ ಸೋರಿಕೆಯಾಗಿದ್ದು 13.3 ಕೋಟಿ ಮಂದಿಯ ಮೊಬೈಲ್​ ನಂಬರ್​ಗಳು ಬಟಾ ಬಯಲಾಗಿದೆ.

news18-kannada
Updated:September 6, 2019, 5:26 PM IST
Facebook: 40 ಕೋಟಿ ಫೇಸ್​ಬುಕ್​ ಬಳಕೆದಾರರ ಫೋನ್​ ನಂಬರ್​ ಲೀಕ್​​.!
ಫೇಸ್​ಬುಕ್​
  • Share this:
ಫೇಸ್​ಬುಕ್​​ನಲ್ಲಿ ಖಾಸಗಿ ವಿಚಾರದ ಗೌಪ್ಯತೆ ಮತ್ತೊಮ್ಮೆ ಸೋರಿಕೆಯಾಗಿದೆ. ಫೇಸ್​ಬುಕ್​ ಖಾತೆಯನ್ನು ಹೊಂದಿರುವ 40 ಕೋಟಿಗೂ ಅಧಿಕ ಬಳಕೆದಾರರ ಮೊಬೈಲ್​ ನಂಬರ್​ಗಳು ಸೋರಿಕೆಯಾಗಿದ್ದು, ಡೇಟಾ ಬೇಸ್​ವೊಂದರಲ್ಲಿ ಪತ್ತೆಯಾಗಿದೆ ಎಂದು ಟೆಕ್​ ಕ್ರಂಚ್​ ವರದಿ ಮಾಡಿದೆ.

ಅಮೆರಿಕದಲ್ಲಿ ಅತಿ ಹೆಚ್ಚು ಫೇಸ್​ಬುಕ್​ ಖಾತೆ ಹೊಂದಿರುವವರ ಮಾಹಿತಿ ಸೋರಿಕೆಯಾಗಿದ್ದು 13.3 ಕೋಟಿ ಮಂದಿಯ ಮೊಬೈಲ್​ ನಂಬರ್​ಗಳು ಬಟಾ ಬಯಲಾಗಿದೆ. ಯುನೈಟೆಡ್​ ಕಿಂಗ್​ಡಂ 1.8 ಕೋಟಿ, ವಿಯೆಟ್ನಾಂ 5 ಕೋಟಿ ಮಂದಿಯ ದಾಖಲೆಗಳು ಬಹಿರಂಗವಾಗಿ ಡೇಟಾಬೇಸ್​ನಲ್ಲಿವೆ ಪತ್ತೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಮಹಿಂದ್ರಾ ಎದುರು ಮಂಕಾದ ಜಾಗ್ವಾರ್; ತಮ್ಮ ಕಂಪನಿಯ ವಾಹನವೇ ಬಾಸ್ ಎಂದ ಆನಂದ್

ಡಾಟಾಬೇಸ್​​ನಲ್ಲಿ ಪ್ರತಿಯೊಬ್ಬರ ಖಾತೆಯ ಹೆಸರು, ಲಿಂಗ, ಫೋನ್​ ನಂಬರ್​ ಸೇರಿದಂತೆ ಖಾಸಗಿ ಮಾಹಿತಿಗಳು ಲಭ್ಯವಿದೆ. ಇನ್ನು ಈ ವಿಚಾರ ಬಯಲಾಗುತ್ತಿದ್ದಂತೆ ಡೇಟಾ ಬೇಸ್​ ಅನ್ನು ಆಫ್​ಲೈನ್​ನಲ್ಲಿರಿಸಲಾಗಿದೆ. ಈ ಮೂಲಕ ಮಾಹಿತಿಯನ್ನು ಮತ್ತಷ್ಟು ಕಡೆಗೆ ರವಾನೆಯಾಗುವುದನ್ನು ತಡೆಗಟ್ಟಲಾಗಿದೆ ಎಂದು ಹೇಳಿದೆ.

ಇನ್ನು ಫೇಸ್​ಬುಕ್​ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯ ಬಗ್ಗೆ ಫೇಸ್​ಬುಕ್​ ಪ್ರತಿಕ್ರಿಯೆ ನೀಡಿದ್ದು, ಸದ್ಯ ಲೀಕ್​ ಆಗಿರುವ ಮಾಹಿತಿಗಳು ಹಳೇಯದ್ದಾಗಿವೆ ಎಂದು ಸ್ಪಷ್ಟನೆ ನೀಡಿದೆ.
First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ