• Home
  • »
  • News
  • »
  • tech
  • »
  • Smartphones: ನಿಮ್ಮಿಷ್ಟದ ಬಜೆಟ್ ಸ್ನೇಹಿ ಸ್ಮಾರ್ಟ್​​ಫೋನ್​ಗಳ ಮೇಲೆ 40% ಡಿಸ್ಕೌಂಟ್, ಈ ಆಫರ್ ಮಿಸ್​ ಮಾಡ್ಕೋಬೇಡಿ

Smartphones: ನಿಮ್ಮಿಷ್ಟದ ಬಜೆಟ್ ಸ್ನೇಹಿ ಸ್ಮಾರ್ಟ್​​ಫೋನ್​ಗಳ ಮೇಲೆ 40% ಡಿಸ್ಕೌಂಟ್, ಈ ಆಫರ್ ಮಿಸ್​ ಮಾಡ್ಕೋಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಬಜೆಟ್‌ (Budget Phones) 50000 ರೂ. ಆಗಿದ್ರೆ, ನಿಮ್ಗೆ ನಾವಿಲ್ಲಿ ಕೆಲವು ಬೆಸ್ಟ್‌ ಸ್ಮಾರ್ಟ್‌ಪೋನ್‌ಗಳ (Best Smartphones) ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

  • Share this:

ಇಂದಿನ ಯುಗವೇ ಸ್ಮಾರ್ಟ್‌ಪೋನ್‌ (Smartphone) ಯುಗ ಎಂದರೂ ತಪ್ಪಾಗಲಾರದು. ಸ್ಮಾರ್ಟ್‌ಪೋನ್‌ ಇಲ್ಲದ ವ್ಯಕ್ತಿ ಇರೋದಕ್ಕೆ ಸಾಧ್ಯವೇ ಇಲ್ಲವೆಂತಾಗಿದೆ. ನಿಮ್ಮ ಪೋನ್‌ ಹಳೆಯದಾಗಿದ್ಯಾ? ಹೊಸ ಪೋನ್‌ ಖರೀದಿ (Mobile Purchase) ಮಾಡಬೇಕು ಅಂದ್ಕೊಂಡಿದ್ದೀರಾ? ನಿಮ್ಮ ಬಜೆಟ್‌ (Budget Phones) 50000 ರೂ. ಆಗಿದ್ರೆ, ನಿಮ್ಗೆ ನಾವಿಲ್ಲಿ ಕೆಲವು ಬೆಸ್ಟ್‌ ಸ್ಮಾರ್ಟ್‌ಪೋನ್‌ಗಳ (Best Smartphones) ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ನಿಮ್ಮ ಬಜೆಟ್‌ಗೆ ತಕ್ಕಂತೆ ಉತ್ತಮ ವಿನ್ಯಾಸ (Design), ಉತ್ತಮ ಕ್ಯಾಮೆರಾ (Good Camera), ಇನ್ನಷ್ಟು ಫೀಚರ್‌ ಹೊಂದಿರುವ ಪೋನ್‌ಗಳ ಬಗ್ಗೆ, ಈಗ ಅವುಗಳು ಹೊಂದಿರುವ ಆಫರ್‌ ಅಥವಾ ಡಿಸ್ಕೌಂಟ್‌ ಬಗ್ಗೆಯೂ ತಿಳಿಯೋಣ ಬನ್ನಿ.


ಬೆಸ್ಟ್‌ ಡಿಸ್ಕೌಂಟ್‌ನಲ್ಲಿ ಉತ್ತಮ ಸ್ಮಾರ್ಟ್‌ಪೋನ್‌ಗಳು ಇಲ್ಲಿವೆ


ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G


ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಹ್ಯಾಂಡ್‌ಸೆಟ್ ದರದಲ್ಲಿ 40 % ರಷ್ಟು ಕಡಿಮೆಯಾಗಿದೆ. ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಫೋನ್‌ ಆರಂಭದಲ್ಲಿ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಮಾದರಿಯು 74,999 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿತ್ತು.


ಈಗ ಬಿಗ್ ರಿಯಾಯಿತಿ ಪಡೆದಿದ್ದು, 44,999 ರೂ. ಗಳ ಆಫರ್‌ ಬೆಲೆಗೆ ಲಭ್ಯವಾಗಿದೆ. ಇದಕ್ಕೆ ಬರೋಬ್ಬರಿ 17,500 ರೂ. ಎಕ್ಸ್‌ಚೆಂಜ್‌ ಆಫರ್‌ (Exchange Offer) ಕೂಡ ಇದೆ. ಈ ಪೋನ್‌ ಖರೀದಿಗೆ ಬ್ಯಾಂಕ್‌ ಆಫರ್‌ (Bank Offers) ಕೂಡ ಇದೆ.


ಇದನ್ನೂ ಓದಿ:  QR CODE: ನಿಮ್ಮ ಮೊಬೈಲ್‌ ನಂಬರ್‌ಗೂ QR ಕೋಡ್​ ರಚಿಸಬಹುದು! ಅದು ಹೇಗೆ ಅಂತ ಗೊತ್ತಾ?


ಆಪಲ್‌ ಐಪೋನ್‌ 11


ಟೆಕ್‌ ದೈತ್ಯಾಕಾರ ಕಂಪನಿಯಾದ ಆಪಲ್‌ ಆಗಾಗ ಹೊಸ ಹೊಸ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಇತ್ತಿಚೆಗೆ ಆಪಲ್‌ ಬಿಡುಗಡೆ ಮಾಡಿದ್ದ ಐಪೋನ್‌ 11 ಪೋನ್‌ ಸ್ಟೋರೇಜ್‌ 128 GB ವೆರಿಯಂಟ್‌ ಮಾದರಿಯು 48,900 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿತ್ತು. ಈಗ ಬೊಂಬಾಟ್‌ ರಿಯಾಯತಿ ಪಡೆದಿದ್ದು, 5% ರಷ್ಟು ಕಡಿಮೆ ರಿಯಾಯತಿಯನ್ನು ಹೊಂದಿದೆ. ಈ ಪೋನ್‌ ಖರೀದಿಯು ಸದ್ಯಕ್ಕೆ ಫ್ಲಿಫ್‌ಕಾರ್ಟ್‌ನಲ್ಲಿ ಲಭ್ಯವಿದೆ.


ಗೂಗಲ್‌ ಫಿಕ್ಸೆಲ್‌ 6a


ಈ ಗೂಗಲ್‌ ಫಿಕ್ಸೆಲ್‌ 6a ಪೋನ್‌ 6GB RAM ಮತ್ತು 128 GB ಸ್ಟೋರೇಜ್‌ ಅನ್ನು ಹೊಂದಿದ್ದು, ಫ್ಲಿಫ್‌ಕಾರ್ಟ್‌ನಲ್ಲಿ ಇದರ ದರಕ್ಕೆ 20% ನಷ್ಟು ಡಿಸ್ಕೌಂಟ್‌ ಇದೆ. ಈ ಪೋನ್‌ 43,999 ರೂ. ಮೂಲಬೆಲೆಯನ್ನು ಹೊಂದಿದ್ದು, ಈಗ 34,999 ರೂ. ಕ್ಕೆ ಫ್ಲಿಫ್‌ಕಾರ್ಟ್‌ನಲ್ಲಿ ಲಭ್ಯವಿದೆ.


ಈ ಪೋನ್‌ಗೆ 20,500 ರೂ. ಎಕ್ಸ್‌ಚೆಂಜ್‌ ಆಫರ್‌ ಅನ್ನು ಹೊಂದಿದೆ. ಪೋನ್‌ ಖರೀದಿಗೆ ಫ್ಲಿಫ್‌ಕಾರ್ಟ್‌ ಬ್ಯಾಂಕ್‌ ಆಫರ್‌ ಸಹ ನೀಡುತ್ತಲಿದೆ.


ಆಪಲ್‌ ಐಪೋನ್‌ 12 ಮಿನಿ


128GB ಸ್ಟೋರೇಜ್‌ ವೇರಿಯಂಟ್‌ ಮಾದರಿಯ ರಿಟೈಲ್‌ ಪ್ರೈಸ್‌ 64,900 ರೂ. ಇದ್ದು, ಈಗ ಫ್ಲಿಫ್‌ಕಾರ್ಟ್‌ನಲ್ಲಿ 24 % ರಷ್ಟು ರಿಯಾಯತಿ ದರದಲ್ಲಿ 48,999 ರೂ. ಕ್ಕೆ ಗ್ರಾಹಕರೇ ಐಫೋನ್‌ 12 ಮಿನಿ ಲಭ್ಯವಿದೆ. ಇದಕ್ಕೆ ಬರೋಬ್ಬರಿ 17,500 ರೂ. ಎಕ್ಸ್‌ಚೆಂಜ್‌ ಆಫರ್‌ ಕೂಡ ಇದೆ. ಈ ಪೋನ್‌ ಖರೀದಿಗೆ ಬ್ಯಾಂಕ್‌ ಆಫರ್‌ ಕೂಡ ಇದೆ.


ಇದನ್ನೂ ಓದಿ:   BSNL Network: 4G ಯಿಂದ 5G ಗೆ ಅಪ್‌ಗ್ರೇಡ್‌ ಆಗುತ್ತಾ ಬಿಎಸ್‌ಎನ್ಎಲ್?


ಒಪೋ ರೆನೊ 8 ಪ್ರೊ 5G


ಒಪೋ ರೆನೊ 8 ಪ್ರೊ 5G ಸ್ಮಾರ್ಟ್‌ಪೋನ್‌ 12GB RAM ಮತ್ತು 256 ಸ್ಟೋರೆಜ್‌ ವೆರಿಯಂಟ್‌ ಮಾದರಿಯ ರಿಟೈಲ್‌ ಪ್ರೈಸ್‌ 52,999 ರೂ. ಇದ್ದು, ಸದ್ಯ ದೊಡ್ಡ ಇ-ಕಾಮರ್ಸ್‌ ಕಂಪನಿಯಾದ ಫ್ಲಿಫ್‌ಕಾರ್ಟ್‌ನಲ್ಲಿ ಬರೋಬ್ಬರಿ 13% ರಷ್ಟು ರಿಯಾಯತಿ ದರದಲ್ಲಿ 45,999 ರೂ. ಕ್ಕೆ ಗ್ರಾಹಕರು ಈ ಸ್ಮಾರ್ಟ್‌ಪೋನ್‌ ಅನ್ನು ಖರೀದಿ ಮಾಡಬಹುದು. ಇದಕ್ಕೆ ಬರೋಬ್ಬರಿ 17,500 ರೂ. ಎಕ್ಸ್‌ಚೆಂಜ್‌ ಆಫರ್‌ ಕೂಡ ಇದೆ. ಈ ಪೋನ್‌ ಖರೀದಿಗೆ ಬ್ಯಾಂಕ್‌ ಆಫರ್‌ ಕೂಡ ಇದೆ.

Published by:Mahmadrafik K
First published: