UMANG App ಬಳಸುತ್ತಿದ್ದೀರಾ? ಹೊಸ ಆಧಾರ್ ಸಂಬಂಧಿತ ಸೇವೆಗಳು ಇದರಲ್ಲೂ ಲಭ್ಯ

ಕೇಂದ್ರದಿಂದ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಮತ್ತು ಇತರ ನಾಗರಿಕ ಕೇಂದ್ರಿತ ಸೇವೆಗಳ ವ್ಯಾಪ್ತಿಯಲ್ಲಿರುವ ಇಲೆಕ್ಟ್ರಾನಿಕ್ ಸರಕಾರಿ ಸೇವೆಗಳನ್ನು ಭಾರತೀಯ ನಾಗರಿಕರು ಭಾರತದಾದ್ಯಂತ ಬಳಸಲು ಸಾಧ್ಯವಾಗುವಂತೆ ಒಂದೇ ವೇದಿಕೆಯನ್ನು ಒದಗಿಸುತ್ತದೆ.. ಆಧಾರ್ ಕಾರ್ಡ್ ಬಳಕೆದಾರರ ಅನುಕೂಲಕ್ಕಾಗಿ ಉಮಂಗ್ ಆ್ಯಪ್ ನಾಗರಿಕ-ಕೇಂದ್ರಿತ ಸೇವೆಗಳ ಹೊಸ ಶ್ರೇಣಿಯನ್ನು ಸೇರ್ಪಡೆಗೊಳಿಸಿದೆ.

ಉಮಂಗ್ ಆ್ಯಪ್‌

ಉಮಂಗ್ ಆ್ಯಪ್‌

  • Share this:
    ಭಾರತದಲ್ಲಿ ಮೊಬೈಲ್ ಆಡಳಿತವನ್ನು ಮುನ್ನಲೆಗೆ ತರುವ ಸಲುವಾಗಿ ಅಂತೆಯೇ ಹೊಸ ಯುಗದ ಆಡಳಿತಕ್ಕಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ (NeGD) ಉಮಂಗ್ (UMANG) ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಕೇಂದ್ರದಿಂದ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಮತ್ತು ಇತರ ನಾಗರಿಕ ಕೇಂದ್ರಿತ ಸೇವೆಗಳ ವ್ಯಾಪ್ತಿಯಲ್ಲಿರುವ ಇಲೆಕ್ಟ್ರಾನಿಕ್ ಸರಕಾರಿ ಸೇವೆಗಳನ್ನು ಭಾರತೀಯ ನಾಗರಿಕರು ಭಾರತದಾದ್ಯಂತ ಬಳಸಲು ಸಾಧ್ಯವಾಗುವಂತೆ ಒಂದೇ ವೇದಿಕೆಯನ್ನು ಒದಗಿಸುತ್ತದೆ.. ಆಧಾರ್ ಕಾರ್ಡ್ ಬಳಕೆದಾರರ ಅನುಕೂಲಕ್ಕಾಗಿ ಉಮಂಗ್ ಆ್ಯಪ್ ನಾಗರಿಕ-ಕೇಂದ್ರಿತ ಸೇವೆಗಳ ಹೊಸ ಶ್ರೇಣಿಯನ್ನು ಸೇರ್ಪಡೆಗೊಳಿಸಿದೆ. ನನ್ನ #Aadhaar ಹೊಸ ಶ್ರೇಣಿಯ ನಾಗರಿಕ-ಕೇಂದ್ರಿತ ಸೇವೆಗಳನ್ನು ಉಮಂಗ್ ಸೇರಿಸಿದೆ.

    ಉಮಂಗ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಅಥವಾ 97183-97183 ಗೆ ಮಿಸ್ ಕಾಲ್ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು ಎಂದು ಉಮಂಗ್ ಆ್ಯಪ್ ಇಂಡಿಯಾ ಟ್ವೀಟ್ ಮಾಡಿದೆ.

    ನನ್ನ ಆಧಾರ್ ಅಡಿಯಲ್ಲಿ ಉಮಂಗ್ ಆ್ಯಪ್‌ನಲ್ಲಿ ಲಭ್ಯವಿರುವ ನಾಲ್ಕು ಸೇವೆಗಳು ಈ ಕೆಳಗಿನಂತಿವೆ

    ಆಧಾರ್ ಪರಿಶೀಲನೆ

    • ಆಧಾರ್ ಸ್ಟೇಟಸ್ ಪರಿಶೀಲಿಸಲು ಈ ಸೇವೆಯನ್ನು ನಾಗರಿಕರು ಬಳಸಬಹುದು

    • ದಾಖಲಾತಿಯ ಸ್ಥಿತಿಯನ್ನು ಪರಿಶೀಲಿಸಿ ಅಥವಾ ವಿನಂತಿಯನ್ನು ನವೀಕರಿಸಿ

    • ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಮತ್ತು ಇಮೇಲ್ ಅನ್ನು ಪರಿಶೀಲಿಸಿ

    • EID/ಆಧಾರ್ ಸಂಖ್ಯೆಯನ್ನು ಹಿಂಪಡೆಯಿರಿ: ಆಧಾರ್ ಸಂಖ್ಯೆ ಅಥವಾ ದಾಖಲಾತಿ ID (EID) ಅನ್ನು ಕಂಡುಹಿಡಿಯಲು ಈ ಸೇವೆಯನ್ನು ಬಳಸಿ.


    ಇದನ್ನೂ ಓದಿ: Message Scam: ನಿಮಗೂ ಈ ಮೆಸೇಜ್ ಗಳು ಬಂದಿದ್ಯಾ? ಹಣ ಕದಿಯಲು ಮಾಡಿರುವ ಪಿತೂರಿಯೂ ಆಗಿರಬಹುದು ಎಚ್ಚರ!

    ಹಲವಾರು ಅಗತ್ಯ ಉದ್ದೇಶಗಳಿಗಾಗಿ ಬಳಸಬಹುದಾದ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದೆನಿಸಿದೆ. ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) UIDAI ಯು 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒಳಗೊಂಡಿದ್ದು ನಿಮ್ಮ ಜನಸಂಖ್ಯಾಶಾಸ್ತ್ರ ಹಾಗೂ ಬಯೋಮೆಟ್ರಿಕ್ ಅಂಕಿಅಂಶಗಳನ್ನು ಹೊಂದಿರುವ ಕಾರಣ ಇದೀಗ ಮಹತ್ವದ ದಾಖಲೆಗಳಲ್ಲಿ ಒಂದೆನಿಸಿದೆ.

    ಇದಲ್ಲದೆ ಉಮಂಗ್ ಆ್ಯಪ್‌ನಲ್ಲಿ ಹಲವಾರು ಇತರ ಆಧಾರ್ ಸೇವೆಗಳನ್ನು ಲಭ್ಯವಾಗಿಸಿಕೊಳ್ಳಬಹುದು

    • ಆಧಾರ್ ಡೌನ್‌ಲೋಡ್ ಮಾಡಿ

    • ಆಧಾರ್‌ನ ಡಿಜಿಟಲ್ ಸಹಿ ಮತ್ತು ಪಾಸ್‌ವರ್ಡ್-ರಕ್ಷಿತ ಎಲೆಕ್ಟ್ರಾನಿಕ್ ಪ್ರತಿಯನ್ನು ಆ್ಯಪ್‌ನಿಂದ ಡೌನ್‌ಲೋಡ್ ಮಾಡಬಹುದು.

    • ಆಫ್‌ಲೈನ್ ಇ-ಕೆವೈಸಿ

    • ಆಫ್‌ಲೈನ್ ಗುರುತಿನ ಪರಿಶೀಲನೆಗಾಗಿ ಬಳಸುವ ಸುರಕ್ಷಿತ ಮತ್ತು ಹಂಚಿಕೊಳ್ಳಬಹುದಾದ ಇಕೆವೈಸಿ ಡಾಕ್ಯುಮೆಂಟ್‌ಗಳನ್ನು ಬಳಕೆದಾರರು ಪ್ರವೇಶಿಸಬಹುದು.


    ಇದನ್ನೂ ಓದಿ:  WhatsApp: ಹಳೆಯ ಸಂದೇಶವನ್ನು ಸುಲಭವಾಗಿ ಹುಡುಕಿ! ವಾಟ್ಸ್​ಆ್ಯಪ್​ ಪರಿಚಯಿಸುತ್ತಿದೆ ಹೊಸ ವೈಶಿಷ್ಟ್ಯ

    • ವರ್ಚುವಲ್ ಐಡಿ ಅಥವಾ ವಿಐಡಿ (VID) ರಚಿಸಿ: ಆಧಾರ್ ಸಂಖ್ಯೆಗೆ ಬದಲಾಗಿ ಇದನ್ನು ಬಳಸಬಹುದು.

    • ಪೇಮೆಂಟ್ ವಿವರ: ಪಾವತಿ ಮತ್ತು ಮರುಪಾವತಿ ಸ್ಥಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

    • ದೃಢೀಕರಣ ಇತಿಹಾಸ: ಇದು ನಿವಾಸಿಗಳಿಗೆ ತಮ್ಮ ಆಧಾರ್ ದೃಢೀಕರಣದ ಇತಿಹಾಸವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.


    ಉಮಂಗ್ ಆ್ಯಪ್‌ನಲ್ಲಿ ಆಧಾರ್ ಸೇವೆಗಳನ್ನು ಹೇಗೆ ಪಡೆಯುವುದು

    ಹಂತ 1: ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿ.

    ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ.

    ಹಂತ 3: 'ನನ್ನ ಆಧಾರ್' ಮೇಲೆ ಕ್ಲಿಕ್ ಮಾಡಿ.

    ಹಂತ 4: ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿ.

    ಹಂತ 5: ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸುವ ಒಟಿಪಿ (OTP) ಅನ್ನು ನಮೂದಿಸಿ ಮತ್ತು ಸೇವ್ ಕ್ಲಿಕ್ ಮಾಡಿ.

    ಇದನ್ನೂ ಓದಿ:  Chrome: ಈಗಲೇ ನಿಮ್ಮ ಕ್ರೋಮ್ ಬ್ರೌಸರ್ ಅಪ್ಡೇಟ್ ಮಾಡಿ, ಇಲ್ಲವಾದಲ್ಲಿ ಹ್ಯಾಕ್ ಆಗೋದು ಪಕ್ಕಾ

    ಇದೀಗ ಉಮಂಗ್ ಆ್ಯಪ್ ಮೂಲಕ ಆಧಾರ್‌ನ ಎಲ್ಲಾ ಸೇವೆಗಳನ್ನು ಬಳಸಲು ಸಿದ್ಧರಾಗಿರುವಿರಿ.
    Published by:Ashwini Prabhu
    First published: