• Home
 • »
 • News
 • »
 • tech
 • »
 • Recharge Plans: ಏರ್​ಟೆಲ್​ನ ಈ ಪ್ಲ್ಯಾನ್​ನಲ್ಲಿ​ ಪ್ರತೀದಿನ 3ಜಿಬಿ ಫ್ರೀ! ಇಂದೇ ನಿಮ್ಮ ಸಿಮ್​ಗೆ ಹಾಕಿಸ್ಕೊಳ್ಳಿ

Recharge Plans: ಏರ್​ಟೆಲ್​ನ ಈ ಪ್ಲ್ಯಾನ್​ನಲ್ಲಿ​ ಪ್ರತೀದಿನ 3ಜಿಬಿ ಫ್ರೀ! ಇಂದೇ ನಿಮ್ಮ ಸಿಮ್​ಗೆ ಹಾಕಿಸ್ಕೊಳ್ಳಿ

ಏರ್​​ಟೆಲ್​​ ಟೆಲಿಕಾಂ ಕಂಪನಿ

ಏರ್​​ಟೆಲ್​​ ಟೆಲಿಕಾಂ ಕಂಪನಿ

ಏರ್​​ಟೆಲ್​ ಭಾರತದಲ್ಲಿ 2 ನೇ ಜನಪ್ರಿಯ ಟೆಲಿಕಾಂ ಕಂಪನಿಯಾಗಿ ಗುರುತಿಸಿಕೊಂಡಿದೆ. ಇದೀಗ ತನ್ನ ಗ್ರಾಹಕರಿಗಾಗಿ ಈ ಕಂಪನಿ ಹೊಸ ಪ್ರೀಪೇಯ್ಡ್​ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಪ್ರತೀದಿನ 3 ಜಿಬಿ ಡೇಟಾ ಉಚಿತವಾಗಿರುತ್ತದೆ. ಜೊತೆಗೆ ಓಟಿಟಿ ಪ್ಲಾಟ್​​ಫಾರ್ಮ್​ಗಳಿಗೂ ಉಚಿತ ಚಂದಾದಾರಿಕೆ ಸೌಲಭ್ಯವನ್ನು ಪಡೆಯಬಹುದಾಗಿದೆ.

ಮುಂದೆ ಓದಿ ...
 • News18
 • 2-MIN READ
 • Last Updated :
 • Share this:

  ಭಾರತದ 2 ನೇ ಜನಪ್ರಿಯ ಟೆಲಿಕಾಂ ಕಂಪನಿಯೆಂದು (Telecom Company) ಗುರುತಿಸಿಕೊಂಡಿರುವ ಏರ್​​ಟೆಲ್ ಕಂಪನಿ (Airtel Company) ತನ್ನ ವಿಭಿನ್ನ ರೀಚಾರ್ಜ್​ ಪ್ಲ್ಯಾನ್​​ನಿಂದ ಮಾರುಕಟ್ಟೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಈ ಕಂಪನಿ ಪ್ರತೀ ಬಾರಿ ರೀಚಾರ್ಜ್​ ಪ್ಲ್ಯಾನ್ (Recharge Plan) ಅನ್ನು ಪರಿಚಯಿಸಿದಾಗ ಏನಾದರು ವಿಶೇಷತೆ ಇದ್ದೇ ಇರುತ್ತದೆ. ಈ ಯೋಜನೆಗಳ ಮುಖ್ಯ ಉದ್ದೇಶವೃ ಗ್ರಾಹಕರನ್ನು ತನ್ನತ್ತ ಸೆಳೆಯುವುದಾಗಿರುತ್ತದೆ. ಅದೇ ರೀತಿ ಈ ಬಾರಿಯೂ ಗ್ರಾಹಕರಿಗಾಗಿ ಏರ್​​ಟೆಲ್​ ಕಂಪನಿ ಹೊಸ ಪ್ರೀಪೇಯ್ಡ್​ ಪ್ಲ್ಯಾನ್​ (Prepaid Plan) ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಮೂಲಕ ಬಳಕೆದಾರರು ಬಹಳಷ್ಟು ಸೌಲಭ್ಯಗಳನ್ನು ಪಡೆಯಲಿದ್ದಾರೆ. ಈ ಮೂಲಕ ಏರ್​ಟೆಲ್ ಕಂಪನಿ ಇನ್ನಷ್ಟು ಗ್ರಾಹಕರನ್ನು ಪಡೆಯಲು ಪ್ರಯತ್ನಿಸುತ್ತಿದೆ.​


  ಹೌದು, ಏರ್​ಟೆಲ್​ ಟೆಲಿಕಾಂ ಕಂಪನಿ ಹೊಸ ಪ್ರೀಪೇಯ್ಡ್​ ರೀಚಾರ್ಜ್​ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗ್ರಾಹಕರು ಪ್ರತೀ ದಿನ 3 ಜಿಬಿ ಡೇಟಾ ಸೌಲಭ್ಯ ಮತ್ತು ಹಲವು ಓಟಿಟಿ ಪ್ಲಾಟ್​ಫಾರ್ಮ್​ಗಳ ಉಚಿತ ಚಂದಾದಾರಿಕೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗಿದ್ರೆ ಏರ್​​ಟೆಲ್ ಸದ್ಯ ಬಿಡುಗಡೆ ಮಾಡಿರುವ ಆ ವಿಶೇಷ ಯೋಜನೆ ಯಾವುದೆಂಬುದನ್ನು ಈ ಲೇಖನದಲ್ಲಿ ತಿಳಿಯೋಣ


  ಏರ್​​ಟೆಲ್​ನ 499 ರೂಪಾಯಿಯ ಪ್ರೀಪೇಯ್ಡ್​ ಪ್ಲ್ಯಾನ್ ಯೋಜನೆ


  ಏರ್‌ಟೆಲ್‌ ಟೆಲಿಕಾಂನ 499 ರೂಪಾಯಿ ಪ್ಲ್ಯಾನ್​ನಲ್ಲಿ ಪ್ರತಿದಿನ 3ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಯಾವುದೇ ನೆಟವರ್ಕ್​ಗೆ ಉಚಿತವಾಗಿ ಅನ್ಲಿಮಿಟೆಡ್​ ಕಾಲ್​ ಮಾಡುವಂತಹ ಅವಕಾಶವನ್ನು ಕಲ್ಪಿಸಲಾಗಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಮಾಡಬಹುದಾಗಿದೆ.


  ಇದನ್ನೂ ಓದಿ: 2023ರಲ್ಲಿ ಸದ್ದು ಮಾಡಲು ಸಜ್ಜಾಗಿರುವ ಸ್ಮಾರ್ಟ್​ಫೋನ್​ಗಳಿವು! ಫೀಚರ್ಸ್​ ನೋಡಿದ್ರೆ ಗ್ಯಾರಂಟಿ ತಗೊಳ್ತೀರಾ


  ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಇನ್ನು ಈ ಯೋಜನೆಯಲ್ಲಿನ ಹೆಚ್ಚುವರಿಯಾಗಿ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ಲಭ್ಯ ಇದ್ದು, ಜೊತೆಗೆ ಏರ್‌ಟೆಲ್‌ ಆ್ಯಪ್ಸ್​ಗಳು ಸೇವೆಗಳು ಲಭ್ಯ ಆಗಲಿವೆ. ಹಾಗೆಯೇ ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ವಿಂಕ್​ ಮ್ಯೂಸಿಕ್ ಅನ್ನು ಪಡೆಯಬಹುದಾಗಿದೆ.


  ಏರ್​ಟೆಲ್​ನ 839 ರೂಪಾಯಿ ರೀಚಾರ್ಜ್​ ಪ್ಲ್ಯಾನ್​


  ಏರ್‌ಟೆಲ್‌ ಟೆಲಿಕಾಂನ 839 ರೂಪಾಯಿ ರೀಚಾರ್ಜ್​ ಪ್ಲ್ಯಾನ್​ನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆಯಬಹುದಾಗಿದೆ. ಇದರೊಂದಿಗೆ ಯಾವುದೇ ನೆಟವರ್ಕ್​ಗೆ ಉಚಿತವಾಗಿ ಅನ್ಲಿಮಿಟೆಡ್​ ಕಾಲು ಕೂಡ ಮಾಡಬಹುದಾಗಿದೆ ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ಇದ್ದು, ಜೊತೆಗೆ ಏರ್‌ಟೆಲ್‌ ಆ್ಯಪ್ಸ್​ಗಳ ಸೇವೆಗಳು ಲಭ್ಯ ಆಗಲಿವೆ. ಹಾಗೆಯೇ ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ವಿಂಕ್​ ಮ್ಯೂಸಿಕ್ ಲಭ್ಯವಾಗುತ್ತದೆ.
  ಏರ್​​ಟೆಲ್​ 699 ರೂಪಾಯಿ ರೀಚಾರ್ಜ್​ ಪ್ಲ್ಯಾನ್


  ಏರ್‌ಟೆಲ್‌ ಟೆಲಿಕಾಂನ 699 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ಸಹ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಗ್ಋಅಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಅನ್ಲಿಮಿಟೆಡ್​ ವಾಯ್ಸ್​ ಕಾಲ್​ ಮಾಡುವ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪ್ರಯೋಜನ ಸಿಗಲಿದೆ. ಇದರೊಂದಿಗೆ ಫಾಸ್ಟ್‌ಟ್ಯಾಗ್‌ ರೀಚಾರ್ಜ್‌ನಲ್ಲಿ 100ರೂಪಾಯಿ ಕ್ಯಾಶ್‌ಬ್ಯಾಕ್‌ ಲಭ್ಯ ಆಗಲಿದೆ. ಹೆಲೋ ಟ್ಯೂನ್ ಹಾಗೂ ವಿಂಕ್ ಮ್ಯೂಸಿಕ್ ಸೌಲಭ್ಯ ದೊರೆಯಲಿದೆ.


  ಏರ್​​​ಟೆಲ್​ನ 599 ರೂಪಾಯಿ ರೀಚಾರ್ಜ್​ ಪ್ಲ್ಯಾನ್​


  ಏರ್‌ಟೆಲ್‌ ಟೆಲಿಕಾಂನ 599ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಅಲ್ಲದೇ ಈ ಯೋಜನೆಯಲ್ಲಿ ಅನ್ಲಿಮಿಟೆಡ್​ ಕಾಲ್​ ಮಾಡುವ ಅವಕಾಶ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಮಾಡುವ ಸೌಲಭ್ಯಗಳು ಕೂಡ ಲಭ್ಯ ವಾಗಲಿವೆ.


  ಏರ್​​ಟೆಲ್​​ ಟೆಲಿಕಾಂ ಕಂಪನಿ


  ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಮಾಡಬಹುದಾಗಿದೆ ಹಾಗೂ ಏರ್‌ಟೆಲ್ ಎಕ್ಸ್​​ಸ್ಟ್ರೀಮ್​ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್‌ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಿರುತ್ತದೆ.

  Published by:Prajwal B
  First published: