ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾವನ್ನು (Social Media) ಬಳಸದೇ ಇರುವ ಜನರೇ ಇಲ್ಲ. ಪ್ರತಿಯೊಬ್ಬರ ಮೊಬೈಲಲ್ಲೂ (Mobile) ಒಂದಾದರೂ ಸೋಶಿಯಲ್ ಮೀಡಿಯಾ ಇದ್ದೇ ಇದೆ. ಆದರೆ ಯಾರೇ ಅಗಲಿ ಸೋಶಿಯಲ್ ಮೀಡಿಯಾಗಳನ್ನು ಅತಿಯಾಗಿ ಬಳಕೆ ಮಾಡಬಾರದು. ಈ ಎಲ್ಲಾ ವಿಚಾರಗಳನ್ನು ಗಮನಿಸಿಕೊಂಡು ಇತ್ತೀಚೆಗೆ ಹ್ಯಾಕರ್ಸ್ಗಳ (Hackers) ಸಂಖ್ಯೆ ಹೆಚ್ಚಾಗಿ. ಈ ಹ್ಯಾಕರ್ಸ್ಗಳ ಮುಖ್ಯ ಉದ್ದೇಶವೇ ಬಳಕೆದಾರರ ಬ್ಯಾಂಕ್ನಲ್ಲಿದ್ದ ಹಣವನ್ನು ಖಾಲಿ ಮಾಡುವುದು. ಆದರೆ ಇದಕ್ಕಾಗಿ ವಂಚಕರು ಹಗಲಿರುಳು ಕಾದು ಬೇಕಾದರೂ ವಂಚನೆ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಒಂದು ಲಿಂಕ್ ಬಂದಾಗ ಅದನ್ನು ಓಪನ್ ಮಾಡಬೇಕಾದ್ರೆ ಜಾಗೃತವಹಿಸಿ. ಇಲ್ಲದಿದ್ದರೆ ನೀವು ಮೋಸ ಹೋಗುವುದಂತೂ ಗ್ಯಾರಂಟಿ.
ಸೋಶಿಯಲ್ ಮೀಡಿಯಾಗಳನ್ನುಅತಿಯಾಗಿ ಬಳಕೆ ಮಾಡುವವರೇ ಎಚ್ಚರ. ಕೇವಲ ನಕಲಿ ಮೆಸೇಜ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಷಣಮಾತ್ರದಲ್ಲಿ ಖಾಲಿ ಮಾಡ್ತಾರೆ. ಇದೀಗ ಇದೇ ರೀತಿಯ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಕಮಿಷನ್ ದುಡ್ಡಿನ ಆಸೆಯಲ್ಲಿ ಕಳಕೊಂಡಿದ್ದು ಮಾತ್ರ ಬರೋಬ್ಬರಿ 37.80 ಲಕ್ಷ ರೂಪಾಯಿ. ಹಾಗಿದ್ರೆ ಅಂತದ್ದೇನು ಬಂತು ಮೆಸೇಜ್ ಎಂಬುದನ್ನು ತಿಳಿಬೇಕಾದ್ರೆ ಇದನ್ನು ಫುಲ್ ಓದಿ.
ಟೆಲಿಗ್ರಾಮ್ನಲ್ಲಿ ಬಂದ ಮೆಸೇಜ್
ಟೆಲಿಗ್ರಾಮ್ನಲ್ಲಿ ಮಹಿಳೆಯೊಬ್ಬಳು ಕಳುಹಿಸಿದ ಮೆಸೇಜ್ಗೆ ರಿಪ್ಲೈ ಕೊಡಲು ಹೋಗಿ ವ್ಯಕ್ತಿಯೊಬ್ಬ ಬರೋಬ್ಬರಿ 37.80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಆನ್ಲೈನ್ನಲ್ಲಿ ಹಣ ಗಳಿಸುವುದು ಹೇಗೆ? ನೀವು ಸುಲಭವಾಗಿ ಕಮಿಷನ್ ರೂಪದಲ್ಲಿ ಹಣ ಪಡೆಯುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ ಎಂದು ಹೇಳಿದ ಮಹಿಳೆ ಆತನಿಗೆ ಮೆಸೇಜ್ ಕಳಿಸಿದ್ದಳು. ಸದ್ಯ ಈ ಸುದ್ದಿ ಬಹಳಷ್ಟು ಚರ್ಚೆಯಲ್ಲಿದ್ದು ಪ್ರಕರಣದ ಬಗ್ಗೆ ದಿ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.
ಇದನ್ನೂ ಓದಿ: ಬರ್ತಿದೆ ನೋಡಿ ಲೆನೋವೋ ಕಂಪನಿಯ ಹೊಸ ಲ್ಯಾಪ್ಟಾಪ್! ಇದರ ಫೀಚರ್ಸ್ಗೆ ಫಿದಾ ಆಗ್ತೀರಾ
ಮೋಸಹೋಗಲು ಕಾರಣವೇನು?
ಮುಂಬೈನ 40 ವರಷದ ವ್ಯಕ್ತಿಗೆ ಮಹಿಳೆಯೊಬ್ಬಳು ಟೆಲಿಗ್ರಾಮ್ನಲ್ಲಿ ಒಂದು ಮೆಸೇಜ್ ಕಳುಹಿಸಿದ್ದಾಳೆ. ಈ ಮೆಸೇಜ್ನಲ್ಲಿ ಏನಿತ್ತೆಂದರೆ ಈ ಲಿಂಕ್ ಓಪನ್ ಮಾಡುವ ಮೂಲಕ ಸುಲಭದಲ್ಲಿ ಆನ್ಲೈನ್ನಲ್ಲಿ ಹಣ ಗಳಿಸಬಹುದು. ಆದರೆ ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ ಲಿಂಕ್ ಓಪನ್ ಮಾಡಿ ಕಂಪನಿ ವೆಬ್ಸೈಟ್ನಲ್ಲಿರುವ ಪ್ರೊಡಕ್ಟ್ಗಳಿಗೆ ರೇಟಿಂಗ್ ಅನ್ನು ನೀಡಬೇಕು. ಉತ್ತಮ ರೇಟಿಂಗ್ ನೀಡಿದರೆ ನಿಮಗೆ ಕಂಪನಿಯಿಂದ ಕಮಿಷನ್ ಬರುತ್ತದೆ ಎಂದು ಹೇಳಿ ಹಣದ ಆಸೆಯನ್ನು ಹುಟ್ಟಿಸಿದ್ದಾಳೆ.
ಕಮಿಷನ್ ಆಸೆಗೆ ಹೋಗಿ ಮೋಸಕ್ಕೆ ಗುರಿಯಾದ
ಮಹಿಳೆ ನೀಡಿದ ಕಮಿಷನ್ ಆಸೆ ಹಾಗೂ ಆಕೆಯ ಮೆಸೇಜ್ಗಳನ್ನು ನೋಡಿ ಮಾರುಹೋದ ವ್ಯಕ್ತಿ ಆ ಕ್ಷಣದಲ್ಲೇ ಆಕೆ ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾನೆ. ಲಿಂಕ್ ಓಪನ್ ಮಾಡಿದ ನಂತರ ಅಲ್ಲಿ ಮತ್ತೊಬ್ಬ ಮಹಿಳೆ ಅವನಿಂದ ವೆಬ್ಸೈಟ್ನಲ್ಲಿ ಕೆಲವು ಟಾಸ್ಕ್ಗಳನ್ನು ಪೂರೈಸಬೇಕೆಂದು ಹೇಳಿದ್ದಾಳೆ. ಆಕೆ ಹೇಳಿದಂತೆ ಈತನೂ ಕೂಡ ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಎಲ್ಲಾ ಡೀಟೇಲ್ಸ್ ಅನ್ನು ಫಿಲ್ ಮಾಡುವ ಮೂಲಕ ಆಕೆಯ ವೆಬ್ಸೈಟ್ಗೆ ಲಾಗಿನ್ ಕೂಡ ಆಗಿದ್ದಾನೆ. ಲಾಗಿನ್ ಆದ ಬಳಿಕ ನೀವು ಈ ವೆಬ್ಸೈಟ್ನಲ್ಲಿರುವ ಉತ್ಪನ್ನಗಳಿಗೆ ಉತ್ತಮ ರೇಟಿಂಗ್ ನೀಡಬೇಕು ಕೊನೆಗೆ ನಿಮ್ಮ ವ್ಯಾಲೆಟ್ಗೆ ಹಣ ಬರುತ್ತದೆ ಎಂದು ಹೇಳಿದ್ದಳು.
ರೇಟಿಂಗ್ ನೀಡಲು ಹಣ ಪಾವತಿಸಿದ್ದ
ಅದರಂತೆ ಮುಂಬೈನ ವ್ಯಕ್ತಿ ಆಕೆಯ ವೆಬ್ಸೈಟ್ನಲ್ಲಿ ನೀಡಲಾದ ಕಾರ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿದ್ದಾನೆ. ಇದರಲ್ಲಿ ಮಹಿಳೆ ತನ್ನದೆಂದು ಹೇಳಿದ ಕೆಲವು ಪ್ರೊಡಕ್ಟ್ಗಳಿಗೆ ಫೈವ್ ಸ್ಟಾರ್ ರೇಟಿಂಗ್ ನೀಡುವುದು ಈತನ ಕೆಲಸವಾಗಿತ್ತು. ಪ್ರತಿ ಬಾರಿಯೂ ಅವನು ರೇಟಿಂಗ್ ನೀಡಿದ ನಂತರ ಅದಕ್ಕಾಗಿ ಅವನು ಕೆಲವು ಪ್ರೀಮಿಯಂ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ಶುಲ್ಕ ಮಾತ್ರ ಇ-ವ್ಯಾಲೆಟ್ನಲ್ಲಿ ಮತ್ತೆ ವಾಪಾಸ್ ಬರಲಿದೆ ಎಂದು ಸೂಚನೆ ಕೂಡ ನೀಡಲಾಗಿದೆ.
ಹೀಗೆ ಪಾವತಿಸಿದ ವ್ಯಕ್ತಿ ಟಾಸ್ಕ್ ಕಂಪ್ಲೀಟ್ ಆಗುವ ಹೊತ್ತಿಗೆ ಕಳಕೊಂಡಿದ್ದು ಮಾತ್ರ 37.80 ಲಕ್ಷ ರೂಪಾಯಿ. ಆದರೆ ಮೊದಲೇ ಹೇಳಿದಂತೆ ಆತನ ವ್ಯಾಲೆಟ್ಗೆ ಯಾವುದೇ ರೀತಿಯ ವಾಪಸ್ ಹಣ ಬರಲಿಲ್ಲ. ಆದರೆ ಕೇವಲ 41 ರೂಪಾಯಿ ಮಾತ್ರ ಬಂದಿದೆ. ನಂತರ ತಾನು ಮೋಸ ಹೋಗಿರುವದನ್ನು ಅರಿತ ವ್ಯಕ್ತಿ ಎಷ್ಟು ರಿಕ್ವೆಸ್ಟ್ ಮಾಡಿದ್ರೂ ಆ ಮೆಸೇಜ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.
ನಂತರ ಈ ವಿಷಯದ ಕುರಿತು ಪೊಲೀಸ್ ಠಾಣೆಗೆ ಹೋಗಿ ದೂರನ್ನೂ ನೀಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ