ಗೂಗಲ್ ಪ್ಲೇ ಸ್ಟೋರ್ನಲ್ಲಿ ಆಗಾಗ ಮಾಲ್ವೇರ್ ಆ್ಯಪ್ಗಳು ಕಾಣಿಸಿಕೊಳ್ಳುತ್ತಿರುತ್ತವೆ. ಬಳಕೆದಾರರ ಮಾಹಿತಿಯನ್ನು ಎಗರಿಸಲು ಕದ್ದು ಮುಚ್ಚಿ ಕಾರ್ಯನಿರ್ವಹಿಸುತ್ತಿರುತ್ತದೆ. ಈ ವಿಚಾರ ಗೂಗಲ್ಗೆ ತಿಳಿದಾಗ ಅದನ್ನು ಪರಿಶೀಲಿಸಿ ನಂತರ ಪ್ಲೇ ಸ್ಟೋರ್ನಿಂದ ಕಿತ್ತೆಸೆಯುತ್ತದೆ. ಅದರಂತೆ ಈ ವರ್ಷ 36 ಮಾಲ್ವೇರ್ ಆ್ಯಪ್ಗಳು ಪ್ಲೇ ಸ್ಟೋರ್ನಲ್ಲಿ ಕಾಣಿಸಿಕೊಂಡಿದ್ದು, ಸ್ಮಾರ್ಟ್ಫೋನ್ ಬಳಕೆದಾರನಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಡಿಲೀಟ್ ಮಾಡಿದೆ. ಇದೀಗ ಡಿಲೀಟ್ ಮಾಡದೇ ಇರುವ ಆ್ಯಂಡ್ರಾಯ್ಡ್ ಪ್ರಿಯರು ಈ 36 ಆ್ಯಪ್ಗಳಲ್ಲಿ ಯಾವುದಾದರು ಸ್ಮಾರ್ಟ್ಫೋನ್ನಲ್ಲಿದ್ದರೆ ಅನ್ಇನ್ಸ್ಟಾಲ್ ಮಾಡಿ ಎಂದು ಹೇಳಿದೆ.
ಕಳೆದ ಮೂರು ತಿಂಗಳ ಹಿಂದೆ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗೆ ಜೋಕರ್ ಮಾಲ್ವೇರ್ ದಾಳಿ ನಡೆಸಿತ್ತು. ಜುಲೈ ತಿಂಗಳಿನಲ್ಲಿ 11 ಆ್ಯಪ್ಗಳಲ್ಲಿ ಜೋಕರ್ ಮಾಲ್ವೇರ್ ಪತ್ತೆಯಾಗಿತು. ಸೆಪ್ಟೆಂಬರ್ ತಿಂಗಳಿನಲ್ಲಿ 6 ಅಪ್ಲಿಕೇಶನ್ಗಳು ಮಾಲ್ವೇರ್ ಕಾಣಿಸಿಕೊಂಡವು. ಅಕ್ಟೋಬರ್ನಲ್ಲಿ 17 ಆ್ಯಪ್ಗಳಲ್ಲಿ ಮಾಲ್ವೇರ್ ಕಾಣಿಸಿಕೊಂಡವು. ಇದರನ್ನರಿತ ಗೂಗಲ್ ಪ್ಲೇ ಸ್ಟೋರ್ನಲ್ಲಿ ಹುದುಗಿರುವ ಮಾಲ್ವೇರ್ಗಳನ್ನು ಕಿತ್ತೆಸೆಯುತ್ತಾ ಬಂದಿದೆ.
ಮಾಲ್ವೇರ್ ಆ್ಯಪ್ಗಳು:
ಪ್ರಿನ್ಸೆಸ್ ಸಲೂನ್- Princess Salon
ನಂಬರ್ ಕಲರಿಂಗ್ - Number Coloring
ಕಾಟ್ ಆ್ಯಂಡ್ ಕಾಸ್ಪ್ಲೇ- Cats & Cosplay
ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್- All Good PDF Scanner