Man Swallows Phone: ಫೋನ್ ನುಂಗಿದ ಪುಣ್ಯಾತ್ಮ! 6 ತಿಂಗಳಿಂದ ಹೊಟ್ಟೆಯಲ್ಲಿತ್ತು..ಆಮೇಲೆ ಏನಾಯ್ತು ಗೊತ್ತಾ?

ಆರು ತಿಂಗಳ ನಂತರ ಹೊಟ್ಟೆನೋವು ಜೋರಾಗಿದೆ. ಕೊನೆಗೆ ಆಸ್ಪತ್ರೆ ಸೇರಬೇಕಾದ ಅನಿವಾರ್ಯತೆ ಆತನಿಗೆ ಎದುರಾಯ್ತು. ವೈದ್ಯರು ಆತನನ್ನು ಪರಿಶೀಲನೆ ನಡೆಸಿದಾಗ ಹೊಟ್ಟೆಯಲ್ಲಿ ಫೋನ್ ಇರುವುದು ಗೊತ್ತಾಯ್ತು. ಇದನ್ನು ಕಂಡು ವೈದ್ಯರೇ ಆಚ್ಚರಿಗೊಂಡಿದ್ದಾರೆ.

ಅಸ್ವಾನ್​ ಯುನಿವರ್ಸಿಟಿ ಆಸ್ಪತ್ರೆ ವೈದ್ಯರು

ಅಸ್ವಾನ್​ ಯುನಿವರ್ಸಿಟಿ ಆಸ್ಪತ್ರೆ ವೈದ್ಯರು

  • Share this:
    ಬಹುತೇಕರಿಗೆ ಆಹಾರ ಬಗ್ಗೆ ಆಸೆ ಹುಟ್ಟಿಕೊಂಡಿರುತ್ತದೆ. ಪಿಜ್ಜಾ ತಿನ್ನಬೇಕು (Pizza), ಹನಿ ಕೇಸ್​ ರುಚಿ ಸವಿಯಬೇಕು, ಚಿಕನ್​ ಕಡಾಯಿ (Chicken Kdai) , ಮಟನ್ ಬಿಯಾನಿ (Mutton Biriyani) ತಿಂದು ತೇಗಬೇಕು ಎಂಬ ಆಸೆಯಿರುತ್ತದೆ. ಸರಿಯದ ಸಮಯ ಬಂದಾಗ ತಿನ್ನುತ್ತಾರೆ ಕೂಡ. ಆದರೆ ಇಲ್ಲೊಬ್ಬ ಪುಣ್ಯಾತ್ಮನಿಗೆ ಅದೇನಾಯ್ತೋ ಗೊತ್ತಿಲ್ಲ. ಆತ ಮಾತ್ರ ದಿನಬಳಕೆಯ ಫೋನನ್ನೇ (Phone) ನುಂಗಿದ್ದಾನೆ !.

    ಹೌದು ಅಚ್ಚರಿಯಾದ್ರು ನಿಜ ವ್ಯಕ್ತಿಯೋರ್ವ ಫೋನ್​ ನುಂಗಿದ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ. ಅಚ್ಚರಿ ವಿಚಾರವೆಂದರೆ 6 ತಿಂಗಳ ಕಾಲ ಫೋನ್ ನುಂಗಿ ಸುಮ್ಮಿನಿದ್ದನು. ಆ ಬಳಿಕ ಹೊಟ್ಟೆ ನೋವು ಪ್ರಾರಂಭವಾಗಿದೆ.

    ವ್ಯಕ್ತಿ ಫೋನ್ ನುಂಗಿದ್ದೇನೋ ನಿಜ. ಆದರೆ ಅದಾಗಿಯೇ ಹೊರಗೆ ಬರುತ್ತದೆ ಎಂದು ಭಾವಿಸಿಕೊಂಡಿದ್ದನಂತೆ ಆದರೆ ತಿಂಗಳು ಒಂದಾಯಿತು, ಎರಡಾಯಿತು, ಆರು ತಿಂಗಳಾದರು ಫೋನ್ ಮಾತ್ರ ಹೊಟ್ಟೆಯಿಂದ ಹೊರಬರದೆ ಅಲ್ಲೇ ಉಳಿದಿತ್ತು. ಈ ನಡುವೆ ಆತನಿಗೆ ವಿಪರೀತ ಹೊಟ್ಟೆ ನೋವು ಕೂಡ ಕಾಣಿಸಿಕೊಳ್ಳಲು ಆರಂಭಿಸಿತು. ಆದರೆ  ಅದಾವುದನ್ನುತಲೆಗೆ ತೆಗೆದುಕೊಳ್ಳದೆ ಫೋನ್​ ಹೊಟ್ಟೆಯಿಂದ ಹೊರಬರಬಹುದು ಎಂದು ಕಾದುಕೂತಿದ್ದನು.

    ಆರು ತಿಂಗಳ ನಂತರ ಹೊಟ್ಟೆನೋವು ಜೋರಾಗಿದೆ. ಕೊನೆಗೆ ಆಸ್ಪತ್ರೆ ಸೇರಬೇಕಾದ ಅನಿವಾರ್ಯತೆ ಆತನಿಗೆ ಎದುರಾಯ್ತು. ವೈದ್ಯರು ಆತನನ್ನು ಪರಿಶೀಲನೆ ನಡೆಸಿದಾಗ ಹೊಟ್ಟೆಯಲ್ಲಿ ಫೋನ್ ಇರುವುದು ಗೊತ್ತಾಯ್ತು. ಇದನ್ನು ಕಂಡು ವೈದ್ಯರೇ ಆಚ್ಚರಿಗೊಂಡಿದ್ದಾರೆ.

    ಇದನ್ನು ಓದಿ: Phone Explodes: ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಸ್ಫೋಟಗೊಂಡು ವಿದ್ಯಾರ್ಥಿ ಸಾವು

    ಈಜಿಪ್ಟ್​ನಲ್ಲಿ ಈ ಘಟನೆ ನಡೆದಿದೆ. 33 ವರ್ಷದ ವ್ಯಕ್ತಿ ಫೋನ್​ ನುಂಗಿ ಕೊನೆಗೆ ಆಹಾರ ಸೇವಿಸಲು ಮತ್ತು ಕುಡಿಯಲು ತೊಂದರೆ ಅನುಭವಿಸಿದನು. ಕೊನೆಗೆ ಅಲ್ಲಿನ ಅಶ್ವಾನ್​ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

    ಅಸ್ವಾನ್​ ಯುನಿವರ್ಸಿಟಿ ಆಸ್ಪತ್ರೆ ನಿರ್ದೇಶಕ ಮಂಡಳಿಯ ಅಧ್ಯಕ್ಷ ಮೊಹಮ್ಮದ್​ ಎಲ್​-ದಹಶೌರಿ ಈ ಬಗ್ಗೆ ಮಾತನಾಡಿ. ರೋಗಿಯು ಸಂಪೂರ್ಣ ಮೊಬೈಲ್​ ನುಂಗಿರುವಂತಹ ಇಂತಹ ಪ್ರಕರಣವನ್ನು ಇದೇ ಮೊದಲು ನೋಡಿದ್ದೇವೆ ಎಂದು ಹೇಳಿದ್ದಾರೆ.



    ಇಂತಹ ಅಪರೂಪದ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಕೆಲವೊಮ್ಮೆ ಅಧಿಕ ಪ್ರಸಂಗ ಮಾಡಲು ಹೋಗಿ ಕೊನೆಗೆ ಜೀವ ಕಳೆದುಕೊಂಡ ಅನೇಕ ಉದಾಹರಣೆಗಳು ಕಣ್ಣ ಮುಂದೆ ಬರುತ್ತಿರುತ್ತದೆ. ಫೋನ್​ ನುಂಗಿರುವ ಘಟನೆ ಮಾತ್ರವಲ್ಲದೆ. ನಾಣ್ಯ ನುಂಗಿದ ಘಟನೆಯು ಇದೆ.

    ಇದನ್ನು ಓದಿ: Log-in to God: ಆ್ಯಪ್​ ಬಳಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ!, ‘‘ಕ್ಲಿಕ್ ಟು ಪ್ರೇ‘‘ಮತ್ತೆ ಆರಂಭಿಸಿದ ಪೋಪ್​ ಫ್ರಾನ್ಸಿಸ್​

    ಅಷ್ಟೇ ಏಕೆ ವ್ಯಕ್ತಿಯೋರ್ವ ಶಿಶ್ನಕ್ಕೆ ಮೊಬೈಲ್​ ಕೇಬಲ್​ ವೈರ್​ ತುರುಕಿದ ಘಟನೆಯು ಈ ಹಿಂದೆ ವರದಿಯಾಗಿತ್ತು. ಚಿನ್ನದ ಸರವನ್ನು ನುಂಗಿದ ಪ್ರಸಂಗಗಳು ಆಗಾಗ ಕೇಳಿಬರುತ್ತಿರುತ್ತದೆ. ಹೀಗೆ ಇಂತಹ ಅಪರೂಪದ ಘಟನೆಗಳು ನಡೆಯುತ್ತೇ ಇರುತ್ತದೆ.

    ಆದರೆ ಈಜಿಪ್ಟ್​ನ ವ್ಯಕ್ತಿ ಅದೇನಾಯಿತೋ ಎನೋ ಮೊಬೈಲ್​ ಫೋನನ್ನು ನುಂಗಿದ್ದಾರೆ. ಅದೃಷ್ಟ ಚೆನ್ನಾಗಿ ಆರು ತಿಂಗಳ ಕಾಲ ಹೊಟ್ಟೆ ನೋವು ತಡೆದುಕೊಂಡು ಕೊನೆಗೆ ವೈದ್ಯರ ಸಹಾಯದಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹಾಗಾಗಿ ಇಂತಹ ಸನ್ನಿವೇಷಗಳನ್ನು ಎದುರಿಸಲು ಹೋಗಿ ತೊಂದರೆ ಸಿಲುಕುವ ಮೊದಲು ಎಚ್ಚರದಿಂದ ಇರಬೇಕಾಗಿರುವುದು ಅಗತ್ಯ.
    Published by:Harshith AS
    First published: