ಕ್ರೀಡಾಭಿಮಾನಿಗಳಿಗೆ ವಿಶೇಷ ರಸದೌತಣ ಉಣಬಡಿಸಲಿದೆ 2020ರ ಟೋಕಿಯೋ ಒಲಿಂಪಿಕ್ಸ್​; ಹಳೇ ಗ್ಯಾಜೆಟ್​ಗಳಿಂದ ಪದಕ ವಿನ್ಯಾಸ

2020ರಲ್ಲಿ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ರೊಬೋಟ್​ಗಳು ರಾರಾಜಿಸಲಿದೆ.

news18-kannada
Updated:September 17, 2019, 9:14 PM IST
ಕ್ರೀಡಾಭಿಮಾನಿಗಳಿಗೆ ವಿಶೇಷ ರಸದೌತಣ ಉಣಬಡಿಸಲಿದೆ 2020ರ ಟೋಕಿಯೋ ಒಲಿಂಪಿಕ್ಸ್​; ಹಳೇ ಗ್ಯಾಜೆಟ್​ಗಳಿಂದ ಪದಕ ವಿನ್ಯಾಸ
ಟೋಕಿಯೋ ಒಲಿಂಪಿಕ್ಸ್
  • Share this:
2020ರ ಒಲಿಂಪಿಕ್ಸ್​ ಜಪಾನ್​ನ ಟೋಕಿಯೋದಲ್ಲಿ ನಡೆಯಲಿದ್ದು, ಕ್ರೀಡಾಕೂಟದ ಆಯೋಜನೆಯ ಅಂತಿಮ ಸಿದ್ಧತೆ ಬರದಿಂದ ಸಾಗುತ್ತಿದೆ. ಸದ್ಯ, ಈ ಸಲದ ಒಲಿಂಪಿಕ್ಸ್​ ಕ್ರೀಡಾಭಿಮಾನಿಗಳಿಗೆ ವಿಶೇಷವಾಗಿರುತ್ತದೆ ಎಂಬ ಮಾಹಿತಿಯೊಂದು ಕ್ರೀಡಾ ಆಯೋಜಕರಿಂದ ಹೊರಬಿದ್ದಿದೆ.

ಹಾಗಾದರೆ 2020 ಒಲಿಂಪಿಕ್ಸ್​ ಆಯೋಜಿಸಿರುವ ಯೋಜನೆಗಳೇನು? ಈ ಬಾರಿ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ. ಎಂಬ ಮಾಹಿತಿ ಇಲ್ಲಿದೆ.

ಸ್ವಾಗತ ಕೋರುವ ರೋಬೊಟ್​ಗಳು

2020ರಲ್ಲಿ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ರೊಬೋಟ್​ಗಳು ರಾರಾಜಿಸಲಿದೆ. ಕ್ರೀಡಾಭಿಮಾನಿಗಳನ್ನು ಸ್ವಾಗತಿಸಲು ಮತ್ತು ಕ್ರೀಡಾ ಪರಿಕರಗಳನ್ನು ಸಾಗಿಸಲು ರೋಬೋಟ್​ ಬಳಕೆ ಮಾಡಿಲಾಗಿದೆ. ಜಪಾನ್​ ಈ ರೊಬೋಟ್​​ಗಳನ್ನು ತಯಾರಿಸಿದೆ.

ಹಳೇ ಗ್ಯಾಜೆಟ್​ಗಳಿಂದ ಸಿದ್ಧವಾಯ್ತು ಕ್ರೀಡಾ ಪದಕಗಳು

2020ರ ಕ್ರೀಡಾಕೂಟಕ್ಕೆ ಹಳೇ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಕ್ರೀಡಾ ಪದಕವನ್ನು ತಯಾರಿಸಲಾಗಿದೆ. ಈಗಾಗಲೇ, ಜಪಾನ್​ ದೇಶವು 5 ಸಾವಿರದಷ್ಟು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ತಯಾರಿಸಿದೆ.

ಟೋಕಿಯೋ ದೇಶವು ಮುಂಬರುವ ಒಲಿಂಪಿಕ್​ ಕ್ರೀಡಾ ಕೂಡಕ್ಕಾಗಿ 2017 ರಿಂದಲೇ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಅದಕ್ಕಾಗಿ ಸಾರ್ವಜನಿಕರಲ್ಲಿ ಹಳೆಯ ಸ್ಮಾರ್ಟ್​ಫೋನ್​ಗಳನ್ನು ನೀಡುವಂತೆ ಕೋರಿಕೊಂಡಿತ್ತು. 2020ರ ಒಲಿಂಪಿಕ್ಸ್​ ನಲ್ಲಿ 6.21 ಟನ್​ ಗ್ಯಾಜೆಟ್​ ತ್ಯಾಜ್ಯಗಳಿಂದ ಪದಕಗಳನ್ನು ವಿಶೇಷವಾಗಿ ತಯಾರಿಸಲಾಗುತ್ತಿದೆ. ಕ್ರೀಡಾ ಪದಕಗಳನ್ನು ಜುನಿಶಿ ಕವಾಶಿನಿ ಎಂಬುವವರು ವಿನ್ಯಾಸ ಮಾಡಿದ್ದಾರೆ.3D ತಂತ್ರಜ್ಞಾನ

ಕ್ರೀಡಾಭಿಮಾನಿಗಳಿಗೆ 3D ಅಥ್ಲೆಟ್​ ಟ್ರ್ಯಾಕಿಂಗ್​ ತಂತ್ರಜ್ಞಾನದ ಮೂಲಕ ಹೊಸದಾದ ಅನುಭವನ್ನು ನೀಡಲು ಜಪಾನ್​ ಮುಂದಾಗಿದೆ. ಅದಕ್ಕೆಂದೇ ಇಂಟಲ್​ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.. ಕ್ರೀಡಾಭಿಮಾನಿಗಳು ಮತ್ತಷ್ಟು ಹತ್ತಿರದಿಂದ ದೃಶ್ಯವನ್ನು ವೀಕ್ಷಿಸುವಂತಹ 3D ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ