• Home
 • »
 • News
 • »
 • tech
 • »
 • Jio vs Airtel: ಇನ್ಮುಂದೆ ದಿನಕ್ಕೆ 2ಜಿಬಿ ಡೇಟಾ! ಜಿಯೋ-ಏರ್​ಟೆಲ್​ನಿಂದ ಗ್ರಾಹಕರಿಗೆ ಹೊಸ ಆಫರ್

Jio vs Airtel: ಇನ್ಮುಂದೆ ದಿನಕ್ಕೆ 2ಜಿಬಿ ಡೇಟಾ! ಜಿಯೋ-ಏರ್​ಟೆಲ್​ನಿಂದ ಗ್ರಾಹಕರಿಗೆ ಹೊಸ ಆಫರ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದೀಗ ಬಹಳಷ್ಟು ಪ್ರಸಿದ್ಧಿ ಪಡೆದಿರುವುದು 2ಜಿಬಿಯ ಡೇಟಾ ಪ್ಲಾನ್. ಇದರಲ್ಲಿ ಮುಖ್ಯವಾಗಿ ದಿನಕ್ಕೆ 2GB ಡೇಟಾ ಪ್ಲಾನ್  ಹೊಂದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ಉಚಿತ ಎಸ್​ಎಮ್​ಎಸ್, ಓಟಿಟಿ ಆಫರ್ ಕೂಡ ಇದೆ. ಹಾಗಾದರೆ ಜಿಯೋ, ಏರ್ಟೆಲ್​ನ 2GB ಡೇಟಾದ ಅತ್ಯುತ್ತಮ ಯೋಜನೆಗಳು ಯಾವುದು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮುಂದೆ ಓದಿ ...
 • Share this:

  ಇತ್ತೀಚೆಗೆ ಟೆಲಿಕಾಂ ಕಂಪನಿಗಳಲ್ಲಿ (Telecom Company) ಜಿಯೋ (Jio) ಮತ್ತು ಏರ್ಟೆಲ್​ (Airtel) ಬಹಳಷ್ಟು ಮುನ್ನಡೆಯಲ್ಲಿದೆ. ಈ ಕಂಪನಿಗಳು ತನ್ನ ಗ್ರಾಹಕರಿಗೆ ಏನಾದರೊಂದು ಆಫರ್​ಗಳನ್ನು ನೀಡುತ್ತಲೇ ಬರುತ್ತಿದೆ. ಇದು ನೀಡುವಂತಹ ಯೋಜನೆಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿರುತ್ತದೆ. ಇತ್ತೀಚೆಗೆ ಏರ್ಟೆಲ್​ ತನ್ನ ಕಂಪನಿಯಿಂದ ಪ್ರಿಪೇಯ್ಡ್​ ಪ್ಲಾನ್​ನ ಯೋಜನೆಯ ದರವನ್ನು ಏರಿಕೆ ಮಾಡಿತ್ತು. ಆದರೆ ಈಗ ಮತ್ತೆ ಗ್ರಾಹಕರಿಗೆ ಆಫರ್​ಅನ್ನು (Offers) ನೀಡುತ್ತಿದೆ. ಇದೀಗ 5G (5G Network) ಸೇವೆ ನೀಡುವುದರಲ್ಲಿ ಎರಡೂ ಕಂಪನಿ ಬ್ಯುಸಿಯಾಗಿದೆ. ಇದರ ನಡುವೆ  ಜಿಯೋ ಟೆಲಿಕಾಂ ಕಂಪನಿಗಳ ಸೇವೆಯಲ್ಲಿ ಮುನ್ನಡೆಯಲ್ಲಿದ್ದು ಇದನ್ನು ಹಿಂದಿಕ್ಕಲು ಏರ್ಟೆಲ್ ಹೊಸ ಹೊಸ ಆಫರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಗ್ರಾಹಕರಿಗೆಂದೇ ಈ ಟೆಲಿಕಾಂ ಕಂಪನಿಗಳು ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಕೂಡ ನೀಡುತ್ತಿದೆ.


  ಇದೀಗ ಬಹಳಷ್ಟು ಪ್ರಸಿದ್ಧಿ ಪಡೆದಿರುವುದು 2ಜಿಬಿಯ ಡೇಟಾ ಪ್ಲಾನ್. ಇದರಲ್ಲಿ ಮುಖ್ಯವಾಗಿ ದಿನಕ್ಕೆ 2GB ಡೇಟಾ ಪ್ಲಾನ್  ಹೊಂದಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ, ಉಚಿತ ಎಸ್​ಎಮ್​ಎಸ್, ಓಟಿಟಿ ಆಫರ್ ಕೂಡ ಇದೆ. ಹಾಗಾದರೆ ಜಿಯೋ, ಏರ್ಟೆಲ್​ನ 2GB ಡೇಟಾದ ಅತ್ಯುತ್ತಮ ಯೋಜನೆಗಳು ಯಾವುದು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.


  ಜಿಯೋ 2GB ಡೇಟಾ ಪ್ಲಾನ್:


  249 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾವನ್ನು ಗ್ರಾಹಕರು ಉಚಿತವಾಗಿ ಪಡೆಯಬಹುದು. ಒಟ್ಟು ತಿಂಗಳಿಗೆ 46GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದು ಹೊಂದಿದೆ. ಜೊತೆಗೆ ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀಯಾಗಿ ನೀಡಿದ್ದಾರೆ. 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ ಈ ಆಫರ್ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಕೂಡ ಉಚಿತವಾಗಿ ಪಡೆಯಬಹುದು.


  ಇದನ್ನೂ ಓದಿ: ನಿಮ್ಮ ಆಧಾರ್ ಕಾರ್ಡ್ ಮೂಲಕ ನಕಲಿ ಸಿಮ್ ಖರೀದಿಸುತ್ತಿದ್ದಾರೆಯೇ ಎಂದು ಹೀಗೆ ಪರಿಶೀಲಿಸಿ!


  299 ರೂಪಾಯಿಯ ಪ್ಲಾನ್ : ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟು ತಿಂಗಳಿಗೆ 56GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದು ಹೊಂದಿರಲಿದೆ. ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀಯಾಗಿ ಮಅಡಬಹುದು. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಈ ಯೋಜನೆ ಮೂಲಕ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.


  533 ರೂಪಾಯಿಯ ಪ್ಲಾನ್: ಈ ಪ್ಲಾನ್​ ದಿನಕ್ಕೆ 2GB ಡೇಟಾ ಉಚಿತವಾಗಿ ನೀಡುತ್ತದೆ. ಒಟ್ಟಾರೆಯಾಗಿ 112GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದು ಹೊಂದಿದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.


  719 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 168GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 84 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.


  2879 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಒಟ್ಟಾರೆಯಾಗಿ 730GB ಡೇಟಾ ಸಿಗಲಿದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ದಿನಕ್ಕೆ 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 365 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಜಿಯೋ ಆ್ಯಪ್ ಚಂದಾದಾರಿಕೆ ಉಚಿತವಾಗಿ ಪಡೆಯಬಹುದು.


  ಏರ್​ಟೆಲ್​ನ ಡೇಟಾ ಪ್ಲಾನ್:


  319 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಪಡೆಯಬಹುದಾಗಿದೆ, ಅನಿಯಮಿತ ಕರೆ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀಯಾಗಿ ಮಾಡುವ ಅವಕಾಶವಿದೆ. ಇದು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಹೊಂದಬಹುದು.


  359 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಹೆಲೋ ಟ್ಯೂನ್ಸ್ ಮತ್ತು ಉಚಿತ ವಿಂಗ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ.


  399 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2.5GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


  499 ರೂಪಾಯಿಯ ಪ್ಲಾನ್: ಈ ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಉಚಿತವಾಗಿ ಸಿಗುತ್ತದೆ. ಅನಿಯಮಿತ ಕರೆ ಆಫರ್ ಕೂಡ ಇದ್ದು ಒಟ್ಟು 100 ಎಸ್​ಎಮ್​ಎಸ್​ ಫ್ರೀ ಇದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಒಂದು ವರ್ಷದ ಡಿಸ್ನಿ+ ಹಾಟ್​ಸ್ಟಾರ್ ಚಂದಾದಾರಿಕೆಯನ್ನೂ ಪಡೆಯುವ ಅವಕಾಶಗಳಿವೆ.

  Published by:Prajwal B
  First published: