Smartphone: ಕೋಪ ಬಂದಾಗ ಫೋನ್​​ ಎಸೆಯಬೇಡಿ.. ಯಾಕಂದ್ರೆ ಹೋದ ಪ್ರಾಣ ಮತ್ತೆ ಬಾರದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ!

Don't throw smartphone: 22 ವರ್ಷ ಪ್ರಾಯದ ರೆಕ್ಸಾನಾ ಅಡೆಲಿನಾ ಎಂಬ ಯುವತಿ 23 ವರ್ಷದ ಬಾಯ್​ ಫ್ರೆಂಡ್​ ಲೂಯಿಸ್​ ಗ್ವಾಂಟೇ ಮೇಲೆ ಫೋನ್​ ಎಸೆದಿದ್ದಾಳೆ. ಆಕೆ ಕೋಪದಿಂದ ಎಸೆದಿದ್ದೇನೋ ಸರಿ. ಆದರೆ ಆಕೆಯ ಫೋನ್​ ಎಸೆತದಿಂದ ಪ್ರಿಯಕರನ ಪ್ರಾಣವೇ ಹೋದ ಘಟನೆ ಅರ್ಜೆಂಟಿನಾದಲ್ಲಿ ನಡೆದಿದೆ.

(Photo: Google)

(Photo: Google)

 • Share this:
  ಕೋಪ ಬಂದಾಗ ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಕುವ ಅಭ್ಯಾಸವಿದೆಯಾ! ಅಂಥಹ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಯಾಕಂದ್ರೆ ಇಲ್ಲೊಬ್ಬಳು ಹುಡುಗಿ ತನ್ನ ಬಾಯ್​ಫ್ರೆಂಡ್​ ಮೇಲೆ ಸ್ಮಾರ್ಟ್​ಫೋನ್ (Smartphone)​ ಎಸೆಯುವ ಮೂಲಕ ಪ್ರಿಯಕರ ಪ್ರಾಣವನ್ನೇ ತೆಗೆದಿದ್ದಾಳೆ!

  22 ವರ್ಷ ಪ್ರಾಯದ ರೆಕ್ಸಾನಾ ಅಡೆಲಿನಾ ಎಂಬ ಯುವತಿ 23 ವರ್ಷದ ಬಾಯ್​ ಫ್ರೆಂಡ್​ ಲೂಯಿಸ್​ ಗ್ವಾಂಟೇ ಮೇಲೆ ಫೋನ್​ ಎಸೆದಿದ್ದಾಳೆ. ಆಕೆ ಕೋಪದಿಂದ ಎಸೆದಿದ್ದೇನೋ ಸರಿ. ಆದರೆ ಆಕೆಯ ಫೋನ್​ ಎಸೆತದಿಂದ ಪ್ರಿಯಕರನ ಪ್ರಾಣವೇ ಹೋದ ಘಟನೆ ಅರ್ಜೆಂಟಿನಾದಲ್ಲಿ ನಡೆದಿದೆ.

  ಅಂದಹಾಗೆಯೇ ಲೂಯಿಸ್​ ಗ್ವಾಂಟೇ ನ್ಯಾಸಿಯಾದ ಮನೆಯಲ್ಲಿದ್ದಾಗ ರೊಕ್ಸನಾ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾನೆ. ಆದರೆ ಇದರಿಂದ ಕೋಪಗೊಂಡ ರೊಕ್ಸನಾ ಆತನಿಂದ ತಪ್ಪಿಸಿಕೊಳ್ಳಲು ತನ್ನ ಕೈಯಲ್ಲಿದ್ದ ಮೊಬೈಲ್​ ಎಸೆದಿದ್ದಾಳೆ. ಪರಿಣಾಮ ಆತನ ತಲೆಯ ಮೇಲೆ ಬಿದ್ದಿದೆ.

  ಈ ಘಟನೆ ನಡೆದ ನಂತರದಿಂದ ಲೂಯಿಸ್​ಗೆ ತಲೆ ನೋವು ಕಾಣಿಸಿಕೊಂಡಿದೆ. ಜೋರಾಗಿ ತಲೆ ಸುತ್ತುವ ಸಮಸ್ಯೆ​ ಎದುರಾಗಿದೆ. ಕೊನೆಗೆ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಬಂದೊದಗಿತು. ಆಸ್ಪತ್ರೆಗೆ ದಾಖಲಾದ ಲೂಯಿಸ್​ನನ್ನ ವೈದ್ಯರು ಪರೀಕ್ಷೆ ನಡೆಸಿದರು ಆದರೆ ತಲೆಗೆ ವಿಪರೀತ ಗಾಯವಾಗಿದೆ ಎಂದು ಪರೀಕ್ಷೆ ವೇಳೆ ಗೊತ್ತಾಗಿದೆ. ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳಿದ್ದಾನೆ.

  ಲೂಯಿಸ್​ ಸಾವಿನಿಂದ ಬೇಸರಗೊಂಡ ಆತನ ತಾಯಿ ಕೋರ್ಟ್​ ಮೆಟ್ಟಿಲೇರಿದರು. ಪ್ರಿಯತಮೆ ರೊಕ್ಸನಾ ಮೇಲೆ ಕೇಸ್​ ಮಾಡಿದರು. ಫೋನ್​ ಆತನ ತಲೆಗೆ ಬಡಿದು ಆತ ಸಾವನ್ನಪ್ಪಿದ ಎಂದು ತಾಯಿ ಆರೋಪಿಸಿದರು.

  ಆದರೆ ರೊಕ್ಸನಾ ತಾನು ರಕ್ಷಣೆಗಾಗಿ ತನ್ನ ಫೋನ್​ ಎಸೆದದ್ದರಿಂದ ಕೋರ್ಟ್​ ಈ ಪ್ರಕರಣವನ್ನು ಖುಲಾಸೆಗೊಳಿಸಿದೆ.

  ಹಿಂದೊಮ್ಮೆ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಮಹಿಳೆತನ್ನ ರಕ್ಷಣೆಗಾಗಿ ತನ್ನ ಕೆಳಸ ಮಾಡಿದ್ದಳೆಂದು ಕೋರ್ಟ್​ ಈ ಕೇಸನ್ನು ಅಲ್ಲಿ ಇತ್ಯರ್ಥ ಮಾಡಿತ್ತು.

  Read Also ⇒ Divorce party | 17 ವರ್ಷದ ದಾಂಪತ್ಯಕ್ಕೆ ಫುಲ್​ ಸ್ಟಾಪ್​ ಇಟ್ಟಳು, ಖುಷಿಯಲ್ಲಿ ಸ್ನೇಹಿತರಿಗೆ ಡಿವೋರ್ಸ್​ ಪಾರ್ಟಿ ಕೊಟ್ಟಳು; ಇದು ಭಾರತೀಯ ಮಹಿಳೆಯೊಬ್ಬಳ ಕಥೆ!

  ಸ್ಮಾರ್ಟ್​ಫೋನ್​ನಿಂದಾಗಿ ಆಂರಿವಾಗಿ ಮತ್ತು ಬಾಹ್ಯವಾಗಿ ತೊಂದರೆಯಿದೆ ಎಂದುಬು ಈಗ ಹೆಚ್ಚು ಮನವರಿಯಾಗಿದೆ. ಸ್ಮಾರ್ಟ್​ಫೋನ್​ನಿಂದ ಹೊರ ಸೂಸುವ ವಿಕಿರಣಗಳಿಂದ ಸಾವು ಸಂಭವಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತಿದೆ. ಕ್ಯಾನ್ಸರ್​, ತಲೆನೋವು, ಕುತ್ತಿಗೆ ನೋವಿನಂತಹ ಸಮಸ್ಯೆಗಳಿಗೆ ಸ್ಮಾರ್ಟ್​ಫೋನ್ ಕಾರಣವಾಗಿದೆ. ಇದೀಗ ಬಾಹ್ಯವಾಗಿ ಅಂದರೆ ಎಸೆಯುವ ಮೂಲಕ ಪ್ರಿಯಕರ ಪ್ರಾಣ ಹೋದ ಘಟನೆ ಇವೆಲ್ಲದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

  ಸ್ಮಾರ್ಟ್​ಫೋನ್​ನಿಂದ ಎಷ್ಟು ಉಪಕಾರಿ ಇದೆಯೋ ಅಷ್ಟೇ ಅಪಾಯಕಾರಿಯೀ ಇದೆ. ಎಷದಟು ಬೇಕೋ ಅಷ್ಟೇ ಬಳಕೆ ಸೂಕ್ತ. ಕೊರೋನಾ ಸಮಯದಲ್ಲಿ ಮತ್ತು ಲಾಕ್​ಡೌನ್​ ಸಮಯದಲ್ಲಿ ಸ್ಮಾರ್ಟ್​ಫೋನ್​ ಬಳಕೆ ವಿಪರೀತವಾಗಿದೆ.  ಅದರಲ್ಲೂ ಇಂಟರ್​ನೆಟ್​ ಬಳಕೆ, ಸಿನಿಮಾ ವೀಕ್ಷಣೆ ಮತ್ತು ಆನ್​ಲೈನ್​ ಗೇಮ್​ಗಳ ಚಟಕ್ಕೆ ಅಂಟಿರುವ ಸಂಗತಿಗಳು ಆಗಾಗ ಹೊರಬರುತ್ತಿದೆ ಹಾಗಾಗಿ  ಪೋಷಕರು ಜಾಗೃತೆ ವಹಿಸಿ ಮಕ್ಕಳ ಸ್ಮಾರ್ಟ್​ಫೋನ್​ ಬಳಕೆ ಕುರಿತು ಜಾಗೃತೆ ವಹಿಸಿದರೆ ಇಂತಹ ಸಮಸ್ಯೆಗಳಿಗೆ ನಾಂದಿ ಹಾಡಬಹುದಾಗಿದೆ.

  ಮತ್ತೊಂದೆಡೆ ಸ್ಮಾರ್ಟ್​ಫೋನ್​ ಮತ್ತು ಇಂಟರ್​ನೆಟ್​ ಬಳಕೆಯ ಹೆಚ್ಚಾಗಿರುವಾಗ ಆನ್​ಲೈನ್​ ಮತ್ತಯ ಸೈಬರ್​ವಂಚಕರ ಕೈಚಳಕವು ಜೋರಾಗಿದೆ. ಬಳಕೆದಾರರ ಖಾಸಗಿ ಮಾಹಿತಿ ಎಗರಿಸಿ ಪೇಚಿಗೆ ಸಿಲುಕಿಸುವ ಅನೇಕ ಘಟನೆಗಳು ಕಣ್ಣ ಮುಂದೆ ಬರುತ್ತಿರುತ್ತದೆ.
  Published by:Harshith AS
  First published: