ವಾಟ್ಸ್​​ಆ್ಯಪ್​​ ದೋಷವನ್ನು ಕಂಡುಹಿಡಿದ 22 ವರ್ಷದ ಭಾರತೀಯ

ಮಣಿಪುರದ ಝೋನೆಲ್ ಸೌಜಿಜಮ್​ ಎಂಬಾತ ವಾಟ್ಸ್​​ ಆ್ಯಪ್​ನಲ್ಲಿ ಕಂಡು ಬಂದ ದೋಷವನ್ನು ಕಂಡು ಹಿಡಿದಿದ್ದಾರೆ. ಸಿವಿಲ್​​ ಇಂಜಿನಿಯರ್​ ಮಾಡುತ್ತಿರುವ  ಝೋನೆಲ್​​ ವಾಟ್ಸ್​ ಆ್ಯಪ್​ನಲ್ಲಿರುವ ವಾಯಿಸ್​ ಕರೆಯಲ್ಲಿ ಕಂಡು ಬಂದ ದೋಷವನ್ನು ಪತ್ತೆ ಹಚ್ಚಿದ್ದಾರೆ.

news18
Updated:June 12, 2019, 4:53 PM IST
ವಾಟ್ಸ್​​ಆ್ಯಪ್​​ ದೋಷವನ್ನು ಕಂಡುಹಿಡಿದ 22 ವರ್ಷದ ಭಾರತೀಯ
ಝೋನೆಲ್ ಸೌಜಿಜಮ್
  • News18
  • Last Updated: June 12, 2019, 4:53 PM IST
  • Share this:
ಇತ್ತೀಚೆಗೆ ವಾಟ್ಸ್​ನಲ್ಲಿ ಡೇಟಾ ಹ್ಯಾಕಿಂಗ್ ಸಮಸ್ಯೆಯೊಂದು ಕಂಡುಬಂದಿತ್ತು. ಇದೀಗ ವಾಟ್ಸ್​ ಆ್ಯಪ್​​​ ವಾಯಿಸ್​​ ಕರೆ ಮತ್ತು ವಿಡಿಯೋ ಕರೆಗಳಲ್ಲೂ ಕೆಲ ದೋಷಗಳು ಕಂಡುಬಂದ್ದಿದ್ದು, ಭಾರತದ 22 ವರ್ಷ ಇಂಜಿನಿಯರ್​ ವಿದ್ಯಾರ್ಥಿ ಈ ದೋಷವನ್ನು ಕಂಡು ಹಿಡಿದಿದ್ದಾನೆ.

ಮಣಿಪುರದ ಝೋನೆಲ್ ಸೌಜಿಜಮ್​ ಎಂಬಾತ ವಾಟ್ಸ್​​ ಆ್ಯಪ್​ನಲ್ಲಿ ಕಂಡು ಬಂದ ದೋಷವನ್ನು ಕಂಡು ಹಿಡಿದಿದ್ದಾರೆ. ಸಿವಿಲ್​​ ಇಂಜಿನಿಯರ್​ ಮಾಡುತ್ತಿರುವ  ಝೋನೆಲ್​​ ವಾಟ್ಸ್​ ಆ್ಯಪ್​ನಲ್ಲಿರುವ ವಾಯಿಸ್​ ಕರೆಯಲ್ಲಿ ಕಂಡು ಬಂದ ದೋಷವನ್ನು ಪತ್ತೆ ಹಚ್ಚಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್​ 3.4 ಲಕ್ಷ ಬಹುವಾನ ನೀಡಿದೆ. ಜೊತೆಗೆ ಫೇಸ್ಬುಕ್​ ತನ್ನ ‘ಹಾಲ್​​​​ ಆಫ್​ ಫೇಮ್​​ ಲೀಸ್ಟ್‘​ನಲ್ಲಿ ಝೆನೆಲ್​ ಹೆಸರನ್ನು ಸೇರಿಸಿದೆ.

ಇದನ್ನೂ ಓದಿ: ನೀರವ್​ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್​ ಹೈಕೋರ್ಟ್​; ವಜ್ರ ವ್ಯಾಪಾರಿಗೆ ಜೈಲೇ ಗತಿ

ಬಳಕೆದಾರರು ವಾಯಿಸ್​ ಕರೆಯಲ್ಲಿ ಮಾತನಾಡುತ್ತಿದ್ದಾಗ ಆ ಕರೆಯನ್ನು ವಿಡಿಯೋ ಕಾಲ್​​​ಗೆ ಬದಲಾಯಿಸಬಹುದಾಗಿದೆ. ಇದು ಕರೆಯನ್ನು ಸ್ಟೀಕರಿಸಿದ ಬಳಕೆದಾರನ ಗಮನಕ್ಕೆ ಬರುವುದಿಲ್ಲ ಎಂದು ಝೋನೆಲ್​ ಪಿಟಿಐಗೆ ತಿಳಿಸಿದ್ದಾನೆ. ಹೀಗಾಗಿ ಕರೆ ಸ್ವೀಕರಿಸಿದ ಬಳಕೆರದಾರ ಏನು ಮಾಡುತ್ತಿದ್ದಾನೆ ಎಂದು ವೀಕ್ಷಿಸಬಹುದಾಗಿದೆ.

ಕಳೆದ ಮಾರ್ಚ್​ ತಿಂಗಳಿನಲ್ಲಿ ಝೋನೆಲ್​​ ವಾಟ್ಸ್​ ಆ್ಯಪ್​ನಲ್ಲಿ ಕಂಡುಬಂದ ದೋಷವನ್ನು ಫೇಸ್ಬುಕ್​ ನಡೆಸಿದ ‘ಬಗ್​ ಬೌಂಟಿ‘ ಕಾರ್ಯಕ್ರಮದಲ್ಲಿ ತಿಳಿಸಿದ್ದಾನೆ.  ಈ ದೋಷವನ್ನು 15 ದಿನಗಳ ಒಳಗೆ ಸರಿಪಡಿಸುವುದಾಗಿ ತಿಳಿಸಿತ್ತು.

First published: June 12, 2019, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading