HOME » NEWS » Tech » 2021 BAJAJ PLATINA 100 WITH ELECTRIC START LAUNCHED IN INDIA AT RS 53920 HG

ಮಧ್ಯಮ ವರ್ಗದ ಜನರಿಗಾಗಿ ಮಾರುಕಟ್ಟೆ ಪ್ರವೇಶಿಸಿದ ಬಜಾಜ್​ ಪ್ಲಾಟೀನಾ BS6; ಬೆಲೆ ಎಷ್ಟು?

Bajaj Platina 2021: ಪ್ಲಾಟೀನಾ 100ಇಎಸ್​ ಬಿಎಸ್​6 ರೂಪದಲ್ಲಿ ಪರಿಚಯಿಸಿದೆ. 102 ಸಿಸಿ ಹೊಂದಿದೆ, ಸಿಂಗಲ್​​ ಸಿಲಿಂಡರ್​ ಅಳವಡಿಸಲಾಗಿದೆ. ಎಸ್​ಒಹೆಚ್​ಸಿ, ಏರ್​ ಕೂಲ್ಡ್​ ಎಂಜಿನ್​​ ಇದರಲ್ಲಿದೆ.

news18-kannada
Updated:March 4, 2021, 10:41 AM IST
ಮಧ್ಯಮ ವರ್ಗದ ಜನರಿಗಾಗಿ ಮಾರುಕಟ್ಟೆ ಪ್ರವೇಶಿಸಿದ ಬಜಾಜ್​ ಪ್ಲಾಟೀನಾ BS6; ಬೆಲೆ ಎಷ್ಟು?
Bajaj Platina
  • Share this:
ಜನಪ್ರಿಯ ಬಜಾಜ್ ಕಂಪೆನಿ ಪ್ಲಾಟೀನಾ 102ಸಿಸಿ ಬೈಕ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಪ್ಲಾಟೀನಾ 100 ಇಲೆಕ್ಟ್ರಿಕ್​​ ಸ್ಟಾರ್ಟ್​ ಬೈಕ್​ ಅನ್ನು 53,920 ರೂ ಗೆ ಮಾರಾಟ ಮಾಡುತ್ತಿದೆ. ಅಂದಹಾಗೆಯೇ​ ರೈಡರ್​ಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪ್ಲಾಟೀನಾ ಬೈಕ್​ ತಯಾರಿಸಲಾಗಿದೆ. ಅದರ ಜೊತೆಗೆ ಹಲವು ಫೀಚರ್​ಗಳನ್ನು ಇದರಲ್ಲಿ ಸೇರಿಸಲಾಗಿದೆ.

ಬಜಾಜ್​ ಅಟೊ ಲಿಮಿಡೆಟ್​​ ಮಾರ್ಕೆಟಿಂಗ್​ ಹೆಡ್​ ನಾರಾಯಣ ಸುಂದರರಾಮನ್​​ ಅವರು ಮಾತನಾಡಿ, ‘ಪ್ಲಾಟೀನಾ ಬ್ರಾಂಡ್​ 7 ಮಿಲಿಯನ್​​ ತೃಪ್ತಿಕರ ಗ್ರಾಹಕರೊಂದಿಗೆ ಸಾಟಿಯಿಲ್ಲದ ಪ್ರತಿಪಾದನೆಯನ್ನು ಹೊಂದಿದೆ. ಪ್ಲಾಟೀನಾ 100ಇಎಸ್​ ಕಡಿಮೆ ಬೆಲೆಗೆ ಪರಿಚಯಿಸಿದೆ. ಈ ಬೈಕ್​ ಕಿಕ್​ ಸ್ಟಾರ್ಟ್​​ನೊಂದಿಗೆ ಕಂಫರ್ಟ್​ ಟೆಕ್​ ಟೆಕ್ನಾಲಜಿಯನ್ನು ಹೊಂದಿದೆ’ ಎಂದರು.

ಇನ್ನು ಪ್ಲಾಟೀನಾ 100ಇಎಸ್​ ಬಿಎಸ್​6 ರೂಪದಲ್ಲಿ ಪರಿಚಯಿಸಿದೆ. 102 ಸಿಸಿ ಹೊಂದಿದೆ, ಸಿಂಗಲ್​​ ಸಿಲಿಂಡರ್​ ಅಳವಡಿಸಲಾಗಿದೆ. ಎಸ್​ಒಹೆಚ್​ಸಿ, ಏರ್​ ಕೂಲ್ಡ್​ ಎಂಜಿನ್​​ ಇದರಲ್ಲಿದೆ. ಜೊತೆಗೆ ಡಿಟಿಎಸ್​​-ಐ ಟೆಕ್ನಾಲಜಿ ಹೊಂದಿರುವ ಬಜಾಜ್ ಪ್ಲಾಟೀನಾ 5,5000 ಆರ್​ಪಿಎಂನಲ್ಲಿ 8.3 ಎಚ್​ಎಮ್​ ಗರಿಷ್ಠ ಟಾರ್ಕ್​ ವಿರುದ್ಧ 7,500 ಆರ್​ಪಿಎಂ ನಲ್ಲಿ 7.77 ಬಿಹೆಚ್​ಪಿ ಅಧಿಕ ಪವರ್ ಉತ್ಪಾದಿಸುತ್ತದೆ.

ಅಂದಹಾಗೆಯೇ ಈ ಬೈಕ್​​ 4 ಸ್ಪೀಡ್​​ ಗೇರ್​​ ಬಾಕ್ಸ್​ ಹೊಂದಿದ್ದು, 90 ಕೆಎಮ್​ಪಿಹೆಚ್​ ಅಧಿಕ ಸ್ಪೀಡ್​ನಲ್ಲಿ ಕ್ರಮಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಬಿಎಸ್​6 ವಾಹನಗಳು ರಾರಾಜಿಸುತ್ತಿದೆ. ಮತ್ತೊಂದೆಡೆ ಎಲೆಕ್ಟ್ರಿಕ್​ ವಾಹನಗಳು ಕೂಡ ಇದೆ. ಅದರಂತೆ ಬಜಾಜ್​ ಕಂಪೆನಿ ಕೈಗೆಟಕುವ ಬೆಲೆಗೆ ಹೊಸ ಪ್ಲಾಟೀನಾವನ್ನು ಪರಿಚಯಿಸಿದೆ. ಮಧ್ಯಮ ವರ್ಗದ ಜನರಿಗೆ ಈ ವಾಹನವು ಹೇಳಿ ಮಾಡಿಸಿದಂತಿದೆ.

ಎಲೆಕ್ಟ್ರಿಕ್​ ವಾಹನಗಳ ಅಬ್ಬರ ಜೋರಾಗಿದೆ. ಅದರ ಜೊತೆಗೆ ಬಿಎಸ್​6 ವಾಹಣ್ಳು ಚಾಲ್ತಿಯಲ್ಲಿವೆ. ಹಾಗಾಗಿ ಕಂಪೆನಿಗಳು ಬಿಎಸ್​6 ವಾಹನಗಳನ್ನು ತಯಾರಿಸುವದರ ಜೊತೆಗೆ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಯತ್ತ ಚಿತ್ತ ಹರಿಸುತ್ತಿದ್ದಾರೆ. ಈಗಾಗಲೇ ಅನೇಕ ಕಂಪೆನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Published by: Harshith AS
First published: March 4, 2021, 10:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories