HOME » NEWS » Tech » 2021 AUDI A7L REVEALED OPTS FOR CONVENTIONAL SEDAN STYLING OVER THE CLASSIC SPORTBACK DESIGN STG HG

ಸೆಡಾನ್ ಆವೃತ್ತಿಯೊಂದಿಗೆ ಸ್ಪೋರ್ಟ್ ಬ್ಯಾಕ್ ವಿನ್ಯಾಸದ 2021ರ Audi A7L ಅನಾವರಣ!

ಸಾಂಪ್ರದಾಯಿಕ ಎ7 ಮಾಡೆಲ್ ಮತ್ತು ಆಡಿ-ಎಫ್‌ಎಡಬ್ಲ್ಯೂ ಎ6ಎಲ್ ಸೆಡಾನ್‌ನ ಸಂಯೋಜನೆಯನ್ನು ಈ ಮಾದರಿ ಹೊಂದಿದೆ. ಸ್ಟೈಲಿಂಗ್ ಟ್ವೀಕ್‌ಗಳು ಸ್ವಲ್ಪ ವಿಭಿನ್ನವಾದ ಮೇಲ್ಭಾಗದ ಛಾವಣಿ, ಎತ್ತರದ ಕಿಟಕಿಗಳು ಮತ್ತು ಹೊಸ ಟೈಲ್‌ಗೇಟ್‌ಗೆ ಸೀಮಿತವಾಗಿವೆ. ಹೊಸ ಎಲ್ಇಡಿ ಗ್ರಾಫಿಕ್ಸ್‌ನೊಂದಿಗೆ ಲಿಪ್ ಸ್ಪಾಯ್ಲರ್ ಮತ್ತು ಟ್ವೀಕ್ಡ್ ಟೈಲ್‌ ಲೈಟ್‌ಗಳೂ ಇವೆ.

news18-kannada
Updated:April 20, 2021, 7:09 PM IST
ಸೆಡಾನ್ ಆವೃತ್ತಿಯೊಂದಿಗೆ ಸ್ಪೋರ್ಟ್ ಬ್ಯಾಕ್ ವಿನ್ಯಾಸದ 2021ರ Audi A7L ಅನಾವರಣ!
Audi A7L. (Photo: Audi)
  • Share this:
ಜರ್ಮನಿಯ ಹೆಡ್ ಕ್ವಾರ್ಟರ್ಡ್ ಪ್ರೀಮಿಯಂ ಕಾರುಗಳ ತಯಾರಕ ಆಡಿ ಅಧಿಕೃತವಾಗಿ 2021 ರ ಆಡಿ A7L ಮಾಡೆಲ್‌ನ ವಿನ್ಯಾಸವನ್ನು ಬಿಡುಗಡೆ ಮಾಡಿದೆ. ಆಡಿ ಮತ್ತು ಎಸ್‌ಐಸಿ ಮೋಟಾರ್ ಕಾರ್ಪೊರೇಶನ್‌ ಜಂಟಿ ಉದ್ಯಮದ ಮೂಲಕ ರೆಡಿಯಾದ ಚೀನಾದ ಮೊದಲ ಆಡಿ ಈ ವಾರ ನಡೆಯಲಿರುವ ಆಟೋ ಶಾಂಘೈ 2021 ಪ್ರದರ್ಶನಕ್ಕೆ ಸನ್ನದ್ಧವಾಗಿದೆ. ಆಕರ್ಷಕ ಲುಕ್ ಮತ್ತು ಮನಸೂರೆ ಮಾಡುವ ವಿನ್ಯಾಸವನ್ನು ಹೊಂದಿದೆ. ಇದು ಸೆಡಾನ್‌ನ ಸ್ಪೋರ್ಟ್‌ಬ್ಯಾಕ್ ಆವೃತ್ತಿಯ ಸೆಡಾನ್ ಆವೃತ್ತಿಯಾಗಿದೆ.

ಸಾಂಪ್ರದಾಯಿಕ ಎ7 ಮಾಡೆಲ್ ಮತ್ತು ಆಡಿ-ಎಫ್‌ಎಡಬ್ಲ್ಯೂ ಎ6ಎಲ್ ಸೆಡಾನ್‌ನ ಸಂಯೋಜನೆಯನ್ನು ಈ ಮಾದರಿ ಹೊಂದಿದೆ. ಸ್ಟೈಲಿಂಗ್ ಟ್ವೀಕ್‌ಗಳು ಸ್ವಲ್ಪ ವಿಭಿನ್ನವಾದ ಮೇಲ್ಭಾಗದ ಛಾವಣಿ, ಎತ್ತರದ ಕಿಟಕಿಗಳು ಮತ್ತು ಹೊಸ ಟೈಲ್‌ಗೇಟ್‌ಗೆ ಸೀಮಿತವಾಗಿವೆ. ಹೊಸ ಎಲ್ಇಡಿ ಗ್ರಾಫಿಕ್ಸ್‌ನೊಂದಿಗೆ ಲಿಪ್ ಸ್ಪಾಯ್ಲರ್ ಮತ್ತು ಟ್ವೀಕ್ಡ್ ಟೈಲ್‌ ಲೈಟ್‌ಗಳೂ ಇವೆ.

ಆರಂಭದಲ್ಲಿ ಕೇವಲ 1,000 ಯೂನಿಟ್‌ ಮಾತ್ರ ಉತ್ಪಾದನೆಯಾಗಲಿದ್ದು, ಆಡಿ 3.0-ಲೀಟರ್ ಟರ್ಬೋಚಾರ್ಜ್ಡ್ ವಿ6 ಎಂಜಿನ್ ಹೈಬ್ರಿಡ್ ತಂತ್ರಜ್ಞಾನ ಒಳಗೊಂಡಿದೆ. ಮೋಟಾರು ಗರಿಷ್ಠ 335 ಎಚ್‌ಪಿ ಮತ್ತು 369 ಎಲ್‌ಬಿ-ಅಡಿ (500 ನ್ಯೂಟನ್-ಮೀಟರ್ ) ಗರಿಷ್ಠ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಎಲ್ಲಾ ನಾಲ್ಕು ಚಕ್ರಗಳು ಮತ್ತು ಸೆವೆನ್ ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ಗೆ ಜೋಡಿಸಲಾದ ಕ್ವಾಟ್ರೋ ಆಲ್-ವೀಲ್-ಡ್ರೈವ್ ವ್ಯವಸ್ಥೆಯನ್ನು ಒಳಗೊಂಡಿದೆ.

ಕಾರಿನಲ್ಲಿರುವ ಆ್ಯಕ್ಸಲ್‌ಗಳ ನಡುವಿನ ಅಂತರವನ್ನು 3.85 ಇಂಚುಗಳು (98 ಮಿಲಿಮೀಟರ್) ವಿಸ್ತರಿಸಲಾಗಿದೆ ಮತ್ತು ಹುಡ್‌ನಿಂದ ಟೈಲ್ ಲೈಟ್‌ಗೆ ಇಡೀ ಕಾರು ಈಗ 5,076 ಮಿಮೀ (199.8 ಇಂಚು) ಅಳತೆಯನ್ನು ಹೊಂದಿದೆ. ಇದು ಸ್ಟ್ಯಾಂಡರ್ಡ್ ಎ 8 ಗಿಂತಲೂ ಸಣ್ಣದಾಗಿದೆ. ಆದರೆ ಕುತೂಹಲಕಾರಿಯಾಗಿದೆ. ಎಲ್‌ಡಬ್ಲ್ಯುಬಿ ಅಲ್ಲದ ಎ8 ಗೆ ಹೋಲಿಸಿದರೆ ವೀಲ್‌ಬೇಸ್ ಉದ್ದವಾಗಿದೆ.

ಈ ಮಾದರಿಯು ಸಾಮಾನ್ಯವಾಗಿ ಸ್ಪೋರ್ಟ್‌ಬ್ಯಾಕ್ ಮಾಡೆಲ್‌ನ ಉದ್ದವಾದ ಸೆಡಾನ್ ಆವೃತ್ತಿಯಾಗಿರುವುದರಿಂದ ವಾಹನದ ವಿನ್ಯಾಸದಲ್ಲಿ ಹೆಚ್ಚು ದಕ್ಕುವುದಿಲ್ಲ. ಹಿಂಭಾಗದ ಪ್ರಯಾಣಿಕರಿಗೆ ಹೆಚ್ಚುವರಿ ಲೆಗ್ ರೂಂ ಹೊರತುಪಡಿಸಿ ವಾಹನದ ಒಳಾಂಗಣಗಳಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ.

ಮೋಟಾರ್ 1 ಪ್ರಕಾರ ಆಡಿ ತನ್ನ ಜನಪ್ರಿಯ ಎ 3 ಮತ್ತು ಎ 4 ಸೆಡಾನ್ ಮಾದರಿಗಳನ್ನು ಚೀನಾದಲ್ಲಿ ಸಾಕಷ್ಟು ಬದಲಾವಣೆಗೆ ವಿಸ್ತರಿಸಿದೆ. ಏರ್ ಸಸ್ಪೆನ್ಷನ್, ದೊಡ್ಡ-ಸೆಡಾನ್, ಸ್ಥಿರತೆ ಮತ್ತು ಸೌಮ್ಯವಾದ ಚಾಲನೆಗೆ ನಾಲ್ಕು ಚಕ್ರಗಳ ಸ್ಟೀರಿಂಗ್ ನೆರವಾಗುತ್ತದೆ. ಇದು ಕಾರಿನ ಇತರ ಪ್ರಮುಖ ಲಕ್ಷಣಗಳಾಗಿವೆ. ಕಾರು ರಸ್ತೆಗೆ ಬರುವುದನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ.
ಆಡಿ ಲಕ್ಷುರಿ ಕಾರು ಅದೊಂದು ಸ್ಟೈಲ್ ಮಾತ್ರವಲ್ಲ ಲೈಫ್‌ಸ್ಟೈಲ್‌ ಅನ್ನೋದನ್ನು ಆಡಿ ತನ್ನ ಪ್ರತಿ ಆವೃತ್ತಿಯಲ್ಲೂ ಉಳಿಸಿಕೊಳ್ಳುತ್ತಿದೆ. ಇನ್ನು ಸೆಲೆಬ್ರಿಟಿಗಳಿಂದ ಹಿಡಿದು ದೊಡ್ಡ ಬ್ಯುಸಿನೆಸ್ ಮ್ಯಾನ್ ಸೇರಿದಂತೆ ಕಾರ್‌ಗಳ ಪ್ಯಾಷನ್ ಇರುವ ಪ್ರತಿಯೊಬ್ಬರಿಗೂ ಆಡಿ ಇಂದಿಗೂ ಡ್ರೀಂ ಕಾರ್ ಅನ್ನೋ ಶ್ರೇಷ್ಠತೆಯನ್ನು ಉಳಿಸಿಕೊಂಡು ಬರುತ್ತಲೇ ಇದೆ.
First published: April 20, 2021, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories