ಕೇವಲ ರೂ.50,010ಕ್ಕೆ ಆ್ಯಕ್ಟೀವ ಐ ಬಿಡುಗಡೆ


Updated:July 26, 2018, 12:42 PM IST
ಕೇವಲ ರೂ.50,010ಕ್ಕೆ ಆ್ಯಕ್ಟೀವ ಐ ಬಿಡುಗಡೆ

Updated: July 26, 2018, 12:42 PM IST
ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ತನ್ನ ನೂತನ ಶ್ರೇಣಿಯ 2018 ಆ್ಯಕ್ಟೀವ ಐಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಎಕ್ಸ್​ ಶೋ ರೂಂ ದೆಹಲಿಯಲ್ಲಿ ರೂ.50,010ಕ್ಕೆ ಈ ವಾಹನ ಮಾರಾಟಕ್ಕೆ ಲಭ್ಯವಿದೆ.

ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಆ್ಯಕ್ಟೀವ ಐ ಎರಡು ನೂತನ ಬಣ್ಣಗಳಿಂದ ಕಂಗೊಳಿಸಲಿದ್ದು,  ಬ್ಲೂ&ವೈಟ್, ರೆಡ್&ಬ್ಲ್ಯಾಕ್, ಮಗೆಂಟ&ವೈಟ್, ಪರ್ಪಲ್/ವೈಟ್ ಮತ್ತು ಮ್ಯಾಟ್ ಗ್ರೇ. ಕ್ಯಾಂಡಿ ಜಾಝಿ ಬ್ಲೂ, ಇಂಪೀರಿಯಲ್ ರೆಡ್​ ಮೆಟಾಲಿಕ್​, ಲಷ್ ಮ್ಯಾಗ್ನೆಟಾ ಮೆಟಾಲಿಕ್​, ಆರ್ಕಿಡ್ ಪರ್ಪಲ್ ಮೆಟಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳನ್ನು ಹೊಂದಿದೆ.ಉಳಿದಂತೆ ಇದೇ ಮೊದಲ ಬಾರಿಗೆ ಎಲ್ಲಾ ಆ್ಯಕ್ಟಿವಾ ವಾಹನಗಳಿಗಿರುವಂತಯೆ ಈ ವಾಹನಕ್ಕೂ ಫೋರ್ ಇನ್ ಒನ್ ಇಗ್ನೇಷನ್​ ಕೊಡಲಾಗಿದೆ. ಸೀಟುಗಳ ಕೆಳಕ್ಕೆ ಮೊಬೈಲ್​ ಚಾರ್ಜಿಂಗ್​ ವ್ಯವಸ್ಥೆಯನ್ನೂ ನೀಡಲಾಗಿದೆ. ಇದರ ಮೂಲ ಎಂಜಿನ್​ ಸಾಮರ್ಥ್ಯ, ಗಾಡಿಯ ಶಕ್ತಿ ವಿಚಾರದಲ್ಲಿ ಯಾವುದೇ ಬದಲಾವಣೆಯನ್ನು ತರಲಾಗಿಲ್ಲ.

ಆ್ಯಕ್ಟೀವಾ ಐ 109 ಸಿಸಿ ಎಂಜಿನ್​ ಸಾಮರ್ಥ್ಯ ಹೊಂದಿದೆ, ಏರ್​ ಕೂಲ್​ ಸಿಂಗಲ್​ ಸಿಲಿಂಡರ್​ ನೊಂದಿಗೆ 8 ಅಶ್ವಭಲ ಹಾಗೂ 9ಎನ್​ಎಂ ತಿರುಗುಬಲ ಹೊಂದಿದೆ. ಹೊಸ ಫ್ರಂಟ್ ಹುಕ್, ಮೆಟ್ಯಾಲಿಕ್ ಮಫ್ಲರ್ ಪ್ರೊಟೆಕ್ಟರ್, ಇನ್ಸ್ಟ್ರುಮೆಂಟ್ ಕ್ಲಸ್ಟರ್​ನಲ್ಲಿ ಹೊಸ ತನ ಕಾಣಬಹುದು.

ಪ್ರತಿಸ್ಪರ್ಧಿಗಳು: ಟಿವಿಎಸ್ ಸ್ಕೂಟಿ ಝೆಸ್ಟ್, ಯಮಹಾ ರೇ ಝಡ್, ಹೀರೋ ಪ್ಲೆಷರ್ ಮತ್ತು ಸುಜುಕಿ ಲೆಟ್ಸ್.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ