ಆಡಿ RS5 ಕಾರ್ ಮಾರುಕಟ್ಟೆಗೆ ಬಿಡುಗಡೆ ; ಬೆಲೆ 1.1 ಕೋಟಿ

news18
Updated:April 25, 2018, 2:33 PM IST
ಆಡಿ RS5 ಕಾರ್ ಮಾರುಕಟ್ಟೆಗೆ ಬಿಡುಗಡೆ ; ಬೆಲೆ 1.1 ಕೋಟಿ
news18
Updated: April 25, 2018, 2:33 PM IST
ಶಾಲಿನಿ ಈಶ್ವರ್,  ನ್ಯೂಸ್ 18  ಕನ್ನಡ

ಬೆಂಗಳೂರು (ಏ.11) :   ಕಾಸ್ಟ್ಲೀ ಕಾರು ಗಳ ಪೈಕಿ ಆಡಿ ಕಾರ್ ಕೂಡ ಒಂದು. ಜನರಿಗೆ ಸಖತ್ ಇಷ್ಟ ಆಗುತ್ತದೆ  ಈ ಕಾರ್, ಈಗ ಮತ್ತೊಂದು ಹೊಸ ರೂಪದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಆಗಿದೆ.   

ಅದು ಕೂಡ ಸ್ಪೋಟ್ಸ್ ಕಾರ್, ಈಗಾಗಲೇ ಇದು ವಿದೇಶದಲ್ಲಿ ಬಹಳಷ್ಟು ಫೆಮಸ್ಸ್ ಆಗಿರುವ ಈ ಕಾರ್ ಅನ್ನು ಬೆಂಗಳೂರಿನಲ್ಲಿ ಟಿಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ ಲಾಂಚ್ ಮಾಡಿದರು. 

ಸೋಷಿಯಲ್ ಮೀಡಿಯಾ ದಿಂದ ಹಿಡಿದು ಯುವಕರ ಗುಂಪಿನ ಮಾತಲ್ಲೂ ಇತ್ತೀಚೆಗೆ ಕೇಳಿ ಬರ್ತಾ ಇರೋ ಒಂದೇ ಮಾತು, ಈ ಸಲ ಕಪ್ ನಮ್ದೇ.

ಇನ್ನು ಹೈಫೈ ಕಾರ್ ಗಳನ್ನ, ಒಮ್ಮೆ ನೋಡಿದ್ರೆ ಸಾಕು ಮತ್ತೆ ಮತ್ತೆ ನೋಡೊ ಆಸೆ ಎಲ್ಲರಿಗೂ ಆಗುತ್ತೆ. ಅದಕ್ಕೆ ತಕ್ಕಂತೆ ಒಂದಾದ್ರ ಮೇಲ್ಲೊಂದು ಕಾಸ್ಟ್ಲಿ ಕಾರ್ ಗಳು ಮಾರುಕಟ್ಟೆಗೆ ಲಗ್ಗೆ ಹಿಡುತ್ತಲ್ಲೇ ಇರುತ್ತವೆ.

ಈಗ ಅದೇ ಕಾಸ್ಲಿ ಕಾರ್ ಗಳ ಪೈಕಿ ಒಂದಾದ ಆಡಿ ಕಾರ್ , ಔಡಿ ಆರ್ ಎಸ್ 5 ಎಂಬ ಹೊಸ ಸ್ಪೋಟ್ಸ್ ಕಾರ್ ಅನ್ನ ಇಂದು ಭಾರತಕ್ಕೆ ಪರಿಚಯಿಸಿದರು. ಇದನ್ನ ಉದ್ಘಾಟನೆ ಮಾಡಿದ ವಿರಾಟ್ ನಿಂದ ಹಿಡಿದು ಈ ಕಾನ್ ನ್ನು ನೋಡಿದ ಕಾರ್ ಪ್ರೇಮಿಗಳು ಈ ಹೊಸ ಕಾರ್ ಗೆ ಫುಲ್ ಫಿದಾ ಆಗಿದ್ದಾರೆ.

ಬಹಳಷ್ಟು ಫಿಚರ್ಸ್ ಹೊಂದಿರುವ  ಆರ್​ಡಿ ಆರ್ ಎಸ್ 5 ಕಾರ್, 16.6 ಮೈಲೆಜ್ ನೀಡುತ್ತೆ,ಇನ್ನೂ ಕಾರ್ ನಲ್ಲಿ ಎರಡು ಇಂಜಿನ್ ಗಳ ಮಾಡೇಲ್ ಲಭ್ಯವಿದು. ಸುಮಾರು 6 ಬಣ್ಣದಲ್ಲಿ ಈ ಕಾರ್ ಲಭ್ಯವಿದೆ. ಈ ಕಾರಿನ ಬೆಲೆ 1.1 ಕೋಟಿ
Loading...ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಸುಮಾರು 7ಏರ್ ಬಾಕ್ಸ್ ನ ಅಳವಡಿಸಲಾಗಿದ್ದು, ಸ್ಪೋರ್ಟ್ ಪ್ರೇಮಿಗಳಿಗೆ ಈ ಕಾರ್ ಸಖತ್ ಇಷ್ಟವಾಗಲಿದೆ.

ಕಾಸ್ಲಿ ಕಾರ್ ಪ್ರೇಮಿಗಳು ಹೆಚ್ಚಾಗುತ್ತಿದಂತೆ, ಹೊಸ ಹೊಸ ಕಾಸ್ಲಿ ಕಾರ್ ಗಳು ಸಹ ಮಾರುಕಟ್ಟೆಗೆ ಬರುತ್ತಲ್ಲೇ ಇರುತ್ತಿದ್ದು, ಜನರಲ್ಲಿ  ಕಾರ್ ಕ್ರೇಜ್ ಜಾಸ್ತಿಯಾಗ್ತಾ ಇದೆ.
First published:April 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...