• Home
  • »
  • News
  • »
  • tech
  • »
  • iPhone: ಮೂಲ ಬೆಲೆಗಿಂತ 60 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮೊದಲ ಐಫೋನ್!

iPhone: ಮೂಲ ಬೆಲೆಗಿಂತ 60 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾಯ್ತು ಮೊದಲ ಐಫೋನ್!

2007ರ ಮೊದಲ ಆವೃತ್ತಿಯ ಐಫೋನ್

2007ರ ಮೊದಲ ಆವೃತ್ತಿಯ ಐಫೋನ್

2007 ರಲ್ಲಿ ಮೊದಲು ಬಿಡುಗಡೆಯಾದ ಐಫೋನ್ ನ ಒರಿಜಿನಲ್ ಆವೃತ್ತಿಯ ಐಫೋನ್ ಬಾಕ್ಸ್ ನಿಂದ ತೆರೆಯದೆ ಹಾಗೆ ಇಡಲಾಗಿತ್ತು ಮತ್ತು ಈಗ ಅದನ್ನು ಹರಾಜಿಗೆ ಇಟ್ಟರೆ, ಅದರ ಮೂಲ ಬೆಲೆಗಿಂತಲೂ ಒಂದಲ್ಲ, ಎರಡಲ್ಲ ಬರೋಬ್ಬರಿ 60 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜು ಹಾಕಲಾಗಿದ್ದು, ಅದರ ಮೌಲ್ಯವನ್ನು “ಅಮೂಲ್ಯವಾದ ಸಂಗ್ರಹ” ಎಂದು ಸಾಬೀತುಪಡಿಸಲಾಗಿದೆ.

ಮುಂದೆ ಓದಿ ...
  • Share this:

ಹದಿನೈದು ವರ್ಷಗಳ ಹಿಂದೆ ಮೊಬೈಲ್ (Mobile) ಕೊಳ್ಳುವ ವಿಷಯಕ್ಕೆ ಬಂದರೆ, ನಮ್ಮಲ್ಲಿ ಬರೀ ದೊಡ್ಡ ದೊಡ್ಡ ಸಾದಾ ಮೊಬೈಲ್ ಸೆಟ್ ಗಳು ಮತ್ತು ಕೆಲವೊಂದಿಷ್ಟು ಕಂಪನಿಗಳ ಸ್ಮಾರ್ಟ್‌ಫೋನ್ ಗಳು (Smart Phone) ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಆದರೆ ಈಗೆಲ್ಲಾ ಐಫೋನ್ ಗಳದ್ದೇ (iPhone) ಹವಾ, ಅಷ್ಟರ ಮಟ್ಟಿಗೆ ಐಫೋನ್ ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಹೆಸರು ಮಾಡಿವೆ. ಬಹುತೇಕರಿಗೆ ಈ ಐಫೋನ್ ಮೊದಲು ಬಂದಿದ್ದು ಯಾವ ವರ್ಷದಲ್ಲಿ ಅಂತ ಕೇಳಿದರೆ ಥಟ್ಟನೆ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಮೊದಲ ಐಫೋನ್ ಮಾದರಿಯನ್ನು 2007 ರಲ್ಲಿ ಆಪಲ್ ಕಂಪನಿಯವರು (Company) ವಿನ್ಯಾಸಗೊಳಿಸಿದ್ದರು.


ಮೊದಲ ಬಾರಿಗೆ ಐಫೋನ್ ಬಿಡುಗಡೆಯಾಗಲಿದೆ ಅಂತ ಜನವರಿ 9, 2007 ರಂದು ಅಧಿಕೃತವಾಗಿ ಘೋಷಿಸಲಾಯಿತು ಮತ್ತು ಇದನ್ನು ಜೂನ್ 29, 2007 ರಂದು ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಿಡುಗಡೆ ಮಾಡಲಾಯಿತು.


2007ರ ಒರಿಜಿನಲ್ ಆವೃತ್ತಿಯ ಐಫೋನ್ ಹೇಗಿತ್ತು ಗೊತ್ತೇ?
ಹೌದು.. 2007 ರಲ್ಲಿ ಮೊದಲು ಬಿಡುಗಡೆಯಾದ ಐಫೋನ್ ನ ಒರಿಜಿನಲ್ ಆವೃತ್ತಿಯ ಐಫೋನ್ ಬಾಕ್ಸ್ ನಿಂದ ತೆರೆಯದೆ ಹಾಗೆ ಇಡಲಾಗಿತ್ತು ಮತ್ತು ಈಗ ಅದನ್ನು ಹರಾಜಿಗೆ ಇಟ್ಟರೆ, ಅದರ ಮೂಲ ಬೆಲೆಗಿಂತಲೂ ಒಂದಲ್ಲ, ಎರಡಲ್ಲ ಬರೋಬ್ಬರಿ 60 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜು ಹಾಕಲಾಗಿದ್ದು, ಅದರ ಮೌಲ್ಯವನ್ನು “ಅಮೂಲ್ಯವಾದ ಸಂಗ್ರಹ” ಎಂದು ಸಾಬೀತುಪಡಿಸಲಾಗಿದೆ.


ಇದನ್ನೂ ಓದಿ:  iPhone 14 Plus: ಏನಾಯ್ತು Apple ಕಂಪೆನಿಗೆ? ಇನ್ನು ಮುಂದೆ ಮಾರುಕಟ್ಟೆಗೆ ಬರಲ್ವಾ ಐಫೋನ್‌?


ಅರೇ..ಈಗೆಲ್ಲಾ ಲೇಟೆಸ್ಟ್ ಆವೃತ್ತಿಗಳ ಐಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ, ಆದರೆ ಈ ಬಾಕ್ಸ್ ತೆರೆಯದೆ ಇಟ್ಟಿರುವ 2007 ರ ಮೊದಲ ಐಫೋನ್ ಅನ್ನು ಹರಾಜಿನಲ್ಲಿ ಇಷ್ಟು ಭಾರಿ ಮೊತ್ತಕ್ಕೆ ಏಕೆ ಕೊಂಡುಕೊಳ್ಳಲಾಯಿತು ಅಂತ ಅನೇಕರಿಗೆ ಆಶ್ಚರ್ಯವಾಗುತ್ತಿರಬಹುದು.


ಈ ತೆರೆಯದೆ ಇಟ್ಟಿರುವ ಬಾಕ್ಸ್ ನಲ್ಲಿರುವ ಐಫೋನ್ "ಮೊದಲ ಆವೃತ್ತಿಯ ಬಿಡುಗಡೆ" ಆಗಿದ್ದು, ಇದು ಇನ್ನೂ ಅಸಾಧಾರಣ ಸ್ಥಿತಿಯಲ್ಲಿದೆ ಎಂದು ವರದಿಯಾಗಿದೆ. ಇನ್ನೂ ಈ ಮೊದಲ ಒರಿಜಿನಲ್ ಆವೃತ್ತಿಯ ಐಫೋನ್ ನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಈ ಐಫೋನ್ ಎರಡು ಮೆಗಾಪಿಕ್ಸೆಲ್ ಕ್ಯಾಮೆರಾ, 4 ಮತ್ತು 8 ಜಿಬಿ ಸ್ಟೋರೆಜ್, ನವೀನವಾದ ಟಚ್ ಸ್ಕ್ರೀನ್ ಮತ್ತು ವೆಬ್ ಬ್ರೌಸರ್ ನೊಂದಿಗೆ ಬಂದಿದೆ ಅಂತ ಹೇಳಲಾಗುತ್ತಿದೆ.


ಮೊದಲಿದ್ದ ಬೆಲೆಗಿಂತ ಹೆಚ್ಚು ಬೆಲೆಗೆ ಹರಾಜು..
ಈ ಐಫೋನ್ ಅನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದಾಗ, ಅದರ ಬೆಲೆ 499 ರಿಂದ 599 ಡಾಲರ್ ಆಗಿತ್ತು. ಆದರೆ ಭಾನುವಾರ, ಈ ಮಾಡೆಲ್ ನ ಮೊದಲ ಬಿಡುಗಡೆಯನ್ನು ಯುಎಸ್ ಮೂಲದ ಎಲ್‌ಜಿಸಿ ಹರಾಜುಗಳು 39,339.60 ಡಾಲರ್ ಗೆ ಹರಾಜು ಹಾಕಿದೆ. ಈ ಐಫೋನ್ ವಾಸ್ತವಿಕವಾಗಿ ದೋಷರಹಿತ, ಹೊಚ್ಚ ಹೊಸ ಫೋನ್ ಆಗಿದೆ ಎಂದು ಹರಾಜು ಸಂಸ್ಥೆ ತಿಳಿಸಿದೆ. "ಸಂಗ್ರಾಹಕರು ಮತ್ತು ಹೂಡಿಕೆದಾರರು ಉತ್ತಮ ಉದಾಹರಣೆ ಇರುವ ಸಾಧನಗಳನ್ನು ಖರೀದಿಸಲು ನೋಡುತ್ತಿರುತ್ತಾರೆ" ಎಂದು ಅವರು ಹೇಳಿದರು.


ಈ ಐಫೋನ್ ಅನ್ನು 2007 ರಲ್ಲಿ ಸ್ಟೀವ್ ಜಾಬ್ಸ್ ಪರಿಚಯಿಸಿದ್ದರು..
ಐಫೋನ್ ಅನ್ನು 2007 ರಲ್ಲಿ ಆಪಲ್ ಸಹ ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ ಮೊದಲ ಬಾರಿಗೆ ಪರಿಚಯಿಸಿದರು. ಇದರ ನಂತರವೇ ಅನೇಕ ರೀತಿಯ ಐಫೋನ್ ಗಳು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು ಎಂದು ಜಾಬ್ಸ್ ಹೇಳಿದರು. ಈ ಐಫೋನ್ ಪರಿವರ್ತನಾಶೀಲ ಶಕ್ತಿ ಎಂದು ಸಾಬೀತಾಯಿತು, ಇದು ಇತರ ಐಫೋನ್ ಮಾದರಿಗಳಿಗೆ ಒಂದು ಮಾನದಂಡವಾಯಿತು ಎಂದು ಹೇಳಿದರು.


ಇದನ್ನೂ ಓದಿ:   Smartphone Cinematic Mode: ನಿಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ ವಿಡಿಯೋ ಸಿನಿಮಾದಷ್ಟು ಸಖತ್ ಆಗಿರ್ಬೇಕಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್


ಈ ಮೂಲ ಐಫೋನ್ ಅನ್ನು ಪ್ರಭಾವಶಾಲಿ ಉತ್ಪನ್ನವಾಗಿ ವ್ಯಾಪಕವಾಗಿ ಗುರುತಿಸಲಾಯಿತು. ಟೈಮ್ ನಿಯತಕಾಲಿಕವು ಇದನ್ನು 2007 ರಲ್ಲಿ ವರ್ಷದ ಆವಿಷ್ಕಾರ ಎಂದು ಹೆಸರಿಸಿತು. ಅಂದಿನಿಂದ ಆಪಲ್ ಐಫೋನ್ ನ 13 ಸ್ಮಾರ್ಟ್ ಮತ್ತು ಅತ್ಯಾಧುನಿಕ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಶ್ರೇಣಿಯಾದ ಐಫೋನ್ 14, ಸೆಪ್ಟೆಂಬರ್ 2022 ರಲ್ಲಿ ಗ್ರಾಹಕರಿಗೆ ಲಭ್ಯವಾಯಿತು.

Published by:Ashwini Prabhu
First published: