• Home
  • »
  • News
  • »
  • tech
  • »
  • Redmi Note 12 Pro+ ಫೋನಿನಲ್ಲಿ 200-MP ಸ್ಯಾಮ್‌ಸಂಗ್ HPX ಕ್ಯಾಮೆರಾ! ನೀವು ನೋಡಲೇಬೇಕು

Redmi Note 12 Pro+ ಫೋನಿನಲ್ಲಿ 200-MP ಸ್ಯಾಮ್‌ಸಂಗ್ HPX ಕ್ಯಾಮೆರಾ! ನೀವು ನೋಡಲೇಬೇಕು

Redmi Note 12

Redmi Note 12

ಚೀನಾ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಶಿಯೋಮಿ ತನ್ನ ಹೊಸ Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರದಲ್ಲೇ ಪರಿಚಯಿಸುತ್ತಿದೆ ಎಂಬ ವದಂತಿಯ ಸುದ್ದಿ ಇತ್ತೀಚಿಗಷ್ಟೆ ಹೊರಬಿದ್ದಿತ್ತು.

  • Share this:

    ಇದೊಂದು ಹೊಸ ಸುದ್ದಿ (News) ಹೌದು. ಆದರೆ ಅಚ್ಚರಿ ಏನಿಲ್ಲ. ಅದೆಷ್ಟೋ ಸ್ಮಾರ್ಟ್ ಫೋನ್ (Smart Phone)ಕಂಪನಿಗಳು (Company) ಈ ಮಾದರಿಯಲ್ಲಿ (Model) ಮೊಬೈಲ್ (Mobile)ತಯಾರಿಕೆ ಮಾಡಿಕೊಂಡಿದೆ. ಆದರೆ ಸ್ಯಾಮ್ ಸಂಗ್ ಎನ್ನುವ ಬ್ರ್ಯಾಂಡ್ ಕಂಪನಿಯ ಕ್ಯಾಮೆರಾವನ್ನು ರೆಡ್ಮಿ  ನೋಟ್ 12ಪ್ರೋ+ (Redmi Note Pro +) ಹೊಂದಿದೆ ಎನ್ನುವಾಗ ವಿಶೇಷತೆ ಹೇಗಿರಬಹುದು ಎನ್ನುವ ಪ್ರಶ್ನೆ ಖಂಡಿತವಾಗಿಯು ಬಂದೇ ಬರುತ್ತದೆ. ಹಾಗಾದ್ರೆ ಬನ್ನಿ ಏನದು ಅನ್ನುವುದನ್ನು ತಿಳಿಯೋಣ. ಮುಂಬರುವ ಈ ಹೊಸ( Redmi Note 12 Pro+) ಸಾಧನದಲ್ಲಿ ಈ ವರ್ಷದ ಆರಂಭದಲ್ಲಿ ಸ್ಯಾಮ್‌ಸಂಗ್ (Sum Sung) ಅನಾವರಣಗೊಳಿಸಿದ ISOCELL HP3 ಸಂವೇದವು ಇರಲಿದೆ. ಈ ಕ್ಯಾಮೆರಾವು (Camera) 30fps ನಲ್ಲಿ 8K ಮತ್ತು 120 fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ (Recording) ಸಾಮರ್ಥ್ಯವನ್ನು ಹೊಂದಿರಲಿದೆ.


    200-MP Samsung HPX Camera in Redmi Note 12 Pro+ Phone! You must see
    Redmi Note 12 +


    ಚೀನಾ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಶಿಯೋಮಿ ತನ್ನ ಹೊಸ Redmi Note 12 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರದಲ್ಲೇ ಪರಿಚಯಿಸುತ್ತಿದೆ ಎಂಬ ವದಂತಿಯ ಸುದ್ದಿ ಇತ್ತೀಚಿಗಷ್ಟೆ ಹೊರಬಿದ್ದಿತ್ತು. ಇದೀಗ ಈ ಹೊಸ ಸರಣಿಯಲ್ಲಿನ ಪ್ರೀಮಿಯಂ ಸ್ಮಾರ್ಟ್‌ಫೋನ್ 200-ಮೆಗಾಪಿಕ್ಸೆಲ್ ಸಾಮರ್ಥ್ಯದ ಸ್ಯಾಮ್‌ಸಂಗ್ HPX ISOCELL HP3 ಕ್ಯಾಮೆರಾವನ್ನು ಹೊಂದಿರಲಿದೆ ಎಂಬ ಅಧಿಕೃತ ಸುದ್ದಿ ಹೊರಬಿದ್ದಿದೆ. ಹೌದು, ಮುಂಬರುವ ತನ್ನ Redmi Note 12 Pro+ ಸಾಧನವು 200-megapixel Samsung HPX ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಶಿಯೋಮಿ ಕಂಪೆನಿಯು Weibo ದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಮೊಬೈಲ್ ಪ್ರಿಯರಿಗೆ ಈ ಸುದ್ದಿ ಖುಷಿ ಕೊಟ್ಟಿದೆ.


    ಇದನ್ನೂ ಓದಿ:  Flipkart: ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಶ್ ಆನ್ ಡೆಲಿವರಿ ಮಾಡುವ ಮುನ್ನ ಸರಿಯಾಗಿ ಯೋಚಿಸಿ


    Redmi Note 12 ಫೀಚರ್ಸ್ ಹೇಗಿದೆ ಗೊತ್ತಾ?


    Redmi Note 12 ಸರಣಿಯ ಸ್ಮಾರ್ಟ್‌ಫೋನ್‌ಗಳು ಚೀನಾದ ಕಡ್ಡಾಯ ಪ್ರಮಾಣೀಕರಣ (3C) ಡೇಟಾಬೇಸ್‌ನಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. Redmi Note 12, Redmi Note 12 Pro ಮತ್ತು Redmi Note 12 Pro+ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 22101316C, 22101316UCP ಮತ್ತು 22101316UC ಮಾದರಿ ಸಂಖ್ಯೆಗಳನ್ನು ಹೊಂದಿವೆ.


    ಪ್ರಮುಖ ಟೆಕ್ ಮಾಧ್ಯಮ ವರದಿಗಳ ಪ್ರಕಾರ, ಈ ಮೂರು ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಕೆಲ ವೈಶಿಷ್ಟ್ಯಗಳ ಮಾಹಿತಿ ದೊರೆತಿದ್ದು, ಶಕ್ತಿಯುತ ಪ್ರೊಸೆಸರ್, 200MP ಮುಖ್ಯ ಕ್ಯಾಮೆರಾ ಮತ್ತು 210W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ.


    ಇದನ್ನೂ ಓದಿ: Moto Mobile: ಬಂಪರ್ ಆಫರ್! ಕಡಿಮೆ ಬೆಲೆಗೆ ಸಿಗ್ತಾ ಇದೆ Moto E22s ಫೋನ್


    Redmi Note 12 ಸರಣಿಯು ಹೊಸದಾಗಿ ಪ್ರಾರಂಭಿಸಲಾದ MediaTek ಡೈಮೆನ್ಸಿಟಿ 1080 SoC ಪ್ರೊಸೆಸರ್ ಮತ್ತು ARM Mali-G68 GPU ‌ನಿಂದ ಚಾಲಿತವಾಗಬಹುದು., Redmi Note 12 Pro+ ಸ್ಮಾರ್ಟ್‌ಫೋನ್ 210W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದರೆ, Redmi Note 12 Pro ಸ್ಮಾರ್ಟ್‌ಫೋನ್ 120W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರಲಿದೆ ಮತ್ತು ಬೇಸಿಕ್ Redmi Note 12 ಸ್ಮಾರ್ಟ್‌ಫೋನ್ 67W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರಬಹುದು ಎನ್ನಲಾಗಿದೆ. ಇನ್ನು ಈ ಮೂರು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಒಳಗೊಂಡಿರಲಿವೆ ಎಂದು ಹೇಳಲಾಗಿದೆ.

    Published by:Harshith AS
    First published: