ಅಮ್ಮನ ಐಫೋನನ್ನು 47 ವರ್ಷ ಕಾಲ ಲಾಕ್ ಮಾಡಿಟ್ಟ 2 ವರ್ಷದ ಮಗು


Updated:March 7, 2018, 6:14 PM IST
ಅಮ್ಮನ ಐಫೋನನ್ನು 47 ವರ್ಷ ಕಾಲ ಲಾಕ್ ಮಾಡಿಟ್ಟ 2 ವರ್ಷದ ಮಗು

Updated: March 7, 2018, 6:14 PM IST
- ನ್ಯೂಸ್18 ಕನ್ನಡ

ಬೀಜಿಂಗ್(ಮಾ. 07): ಎರಡು ವರ್ಷದ ಮಗುವೊಂದು ತನ್ನ ತಾಯಿಯ ಐಫೋನನ್ನು 47 ವರ್ಷಗಳ ಕಾಲ ಬಳಕೆಯೇ ಮಾಡದಂತೆ ಲಾಕ್ ಮಾಡಿಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ. ಅಂದಹಾಗೆ, ಇದ್ಯಾವುದಪ್ಪಾ ಜೀನಿಯಸ್ ಮಗು ಎಂದನಿಸಬಹುದು. ಆದರೆ, ಅದು ಮಾಮೂಲಿಯ ಮಗುವೇ. ಆದರೆ, ಐಫೋನ್​ನ ಪಾಸ್​ಕೋಡನ್ನು ಪದೇಪದೇ ತಪ್ಪಾಗಿ ಮಗು ಒತ್ತಿದ ಪರಿಣಾಮ ಐಫೋನ್ ಲಾಕ್ ಆಗಿದೆ. ಐಫೋನ್​ನಲ್ಲಿ ನೀವು ಪ್ರತೀ ಬಾರಿ ತಪ್ಪು ಪಾಸ್​ಕೋಡ್ ಒತ್ತಿದರೆ ನಿರ್ದಿಷ್ಟ ಅವಧಿಯವರೆಗೆ ಅದು ಸ್ಥಗಿತಗೊಳ್ಳುತ್ತದೆ. ಈ ಮಗು ಅದೆಷ್ಟು ಬಾರಿ ತಪ್ಪು ಪಾಸ್​ವರ್ಡ್ ಒತ್ತಿತೆಂದರೆ, 2.5 ಕೋಟಿ ನಿಮಿಷಗಳ ಕಾಲ ಫೋನು ಡಿಸೇಬಲ್ ಆಗಿದೆ. ಅಂದರೆ, 47 ವರ್ಷಗಳವರೆಗೂ ಆ ಐಫೋನು ಕೆಲಸವನ್ನೇ ಮಾಡೋದಿಲ್ಲ.

ಐಫೋನ್ ಈ ರೀತಿ ಲಾಕ್ ಆದರೆ ಏನು ಮಾಡಬೇಕು? ಒಂದು ನೀವು 47 ವರ್ಷ ಕಾಯಬೇಕು. ಇಲ್ಲದಿದ್ದರೆ ಫೋನ್​ವೊಳಗಿನ ನಿಮ್ಮ ಎಲ್ಲಾ ಡಾಟಾಗಳನ್ನು ಅಳಿಸಿ, ಸೆಟನ್ನು ಫ್ಯಾಕ್ಟರಿ ರೀಸೆಟ್​​ಗೆ ಇಡಬೇಕಾಗುತ್ತದೆ. ಫೋನಲ್ಲಿ ಮುಖ್ಯವಾದ ಡಾಟಾ ಇಟ್ಟುಕೊಂಡಿದ್ದರೆ ಅದನ್ನು ಕಳೆದುಕೊಳ್ಳುವುದು ಅನಿವಾರ್ಯ.

ಕಂಕನ್ಯೂಸ್ ಡಾಟ್ ಕಾಮ್ ಎಂಬ ವೆಬ್​ಸೈಟ್​ನಲ್ಲಿ ಈ ಸುದ್ದಿ ಬಂದಿದೆ. ಇಂಟರ್ನೆಟ್​ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸಲು ಐಫೋನನ್ನು ತಾಯಿ ತನ್ನ ಮಗುವಿನ ಕೈಗೆ ಕೊಟ್ಟಿದ್ದರೆನ್ನಲಾಗಿದೆ.
First published:March 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ