• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Infinix Smartphones: ಒಂದೇ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬರೋಬ್ಬರಿ 2 ಸ್ಮಾರ್ಟ್​​​ಫೋನ್ಸ್​! ಹೇಗಿದೆ ಗೊತ್ತಾ ಫೀಚರ್ಸ್​?

Infinix Smartphones: ಒಂದೇ ಕಂಪೆನಿಯಿಂದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬರೋಬ್ಬರಿ 2 ಸ್ಮಾರ್ಟ್​​​ಫೋನ್ಸ್​! ಹೇಗಿದೆ ಗೊತ್ತಾ ಫೀಚರ್ಸ್​?

ಇನ್ಫಿನಿಕ್ಸ್ ಝೀರೋ​ ಸ್ಮಾರ್ಟ್​​ಫೋನ್​

ಇನ್ಫಿನಿಕ್ಸ್ ಝೀರೋ​ ಸ್ಮಾರ್ಟ್​​ಫೋನ್​

Smartphones Launch: ಸ್ಮಾರ್ಟ್​​ಫೋನ್​ ಕಂಪೆನಿಗಳಲ್ಲಿ ಪ್ರಸಿದ್ಧ ಕಂಪೆನಿಯಾಗಿರುವ ಇನ್ಫಿನಿಕ್ಸ್​, ಸದ್ಯ ಫೆಬ್ರವರಿಯ ಆರಂಭದಲ್ಲೇ ಎರಡು ಸ್ಮಾರ್ಟ್​​​ಫೋನ್​ಗಳನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್​​​ಫೋನ್​ಗಳಿಗೆ ಇನ್ಫಿನಿಕ್ಸ್​ ಝೀರೋ 5ಜಿ 2023 ಹಾಗೂ ಝೀರೋ 5ಜಿ 2023 ಟರ್ಬೋ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್​​​​ಫೋನ್​ಗಳು ಸೈಡ್​ ಮೌಂಟೆಡ್​​ ಫಿಂಗರ್​ಪ್ರಿಂಟ್​ ಸ್ಕ್ಯಾನರ್​ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ.

ಮುಂದೆ ಓದಿ ...
  • Share this:

    ಮೊಬೈಲ್​​ ಮಾರುಕಟ್ಟೆಯಲ್ಲಿ (Mobile Market) ಹಲವಾರು ಸ್ಮಾರ್ಟ್​​ಫೋನ್​ ತಯಾರಿಕಾ ಕಂಪೆನಿಗಳಿವೆ. ಈ ಕಂಪೆನಿಗಳು ತನ್ನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹೊಸ ಹೊಸ ಮಾದರಿಯ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಜನಪ್ರಿಯ ಸ್ಮಾರ್ಟ್​​​ಫೋನ್​ ಕಂಪೆನಿಗಳಲ್ಲಿ (Smartphones) ಒಂದಾಗಿರುವ ಇನ್ಫಿನಿಕ್ಸ್ ಕಂಪೆನಿ ಇದುವರೆಗೆ ಹಲವಾರು ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಲ್ಲೂ ಕಳೆದ ವರ್ಷ ಕಂಪೆನಿಯಿಂದ ಭಾರತದಲ್ಲಿ ಮೊದಲ ಬಾರಿಗೆ 5ಜಿ ಸಕ್ರಿಯಗೊಳಿಸಲಾದ ಮೊಬೈಲ್​ಗಳನ್ನು ಪರಿಚಯಿಸಿದ್ದು. ಇದೀಗ ಇನ್ಫಿನಿಕ್ಸ್​ ಕಂಪೆನಿ (Infinix Company) ಮತ್ತೊಂದು ಯೋಜನೆಯನ್ನು ಕೈಗೊಂಡಿದ್ದು, ಈ ಮೂಲಕ ಇನ್ಫಿನಿಕ್ಸ್​ ಝೀರೋ ಸೀರಿಸ್​ನಲ್ಲಿ ಎರಡು ಸ್ಮಾರ್ಟ್​​ಫೋನ್​ಗಳನ್ನು ಅನಾವರಣ ಮಾಡಿದೆ.


    ಸ್ಮಾರ್ಟ್​​ಫೋನ್​ ಕಂಪೆನಿಗಳಲ್ಲಿ ಪ್ರಸಿದ್ಧ ಕಂಪೆನಿಯಾಗಿರುವ ಇನ್ಫಿನಿಕ್ಸ್​, ಸದ್ಯ ಫೆಬ್ರವರಿಯ ಆರಂಭದಲ್ಲೇ ಎರಡು ಸ್ಮಾರ್ಟ್​​​ಫೋನ್​ಗಳನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್​​​ಫೋನ್​ಗಳಿಗೆ ಇನ್ಫಿನಿಕ್ಸ್​ ಝೀರೋ 5ಜಿ 2023 ಹಾಗೂ ಝೀರೋ 5ಜಿ 2023 ಟರ್ಬೋ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್​​​​ಫೋನ್​ಗಳು ಸೈಡ್​ ಮೌಂಟೆಡ್​​ ಫಿಂಗರ್​ಪ್ರಿಂಟ್​ ಸ್ಕ್ಯಾನರ್​ ಅನ್ನು ಹೊಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ.


    ಇನ್ನು ಇನ್ಫಿನಿಕ್ಸ್​ ಝೀರೋ ಸೀರಿಸ್​ನಡಿಯಲ್ಲಿ ಬಿಡುಗಡೆಯಾಗುತ್ತಿರುವ ಎರಡೂ ಸ್ಮಾರ್ಟ್​​ಫೋನ್​ಗಳ ಫೀಚರ್ಸ್​ಗಳು ಒಂದೇ ರೀತಿಯಿದ್ದು, ಸ್ಟೋರೇಜ್ ಸಾಮರ್ಥ್ಯ ಮತ್ತು ಪ್ರೊಸೆಸರ್ ವೇಗದಲ್ಲಿ ಮಾತ್ರ ವಿಭಿನ್ನತೆಯನ್ನು ಕಾಣಬಹುದಾಗಿದೆ.


    ಇನ್ಫಿನಿಕ್ಸ್​ ಝೀರೋ ಸೀರಿಸ್​ನ ಸ್ಮಾರ್ಟ್​​ಫೋನ್​ಗಳ ಫೀಚರ್ಸ್​


    ಇನ್ಫಿನಿಕ್ಸ್ ಝೀರೋ 5ಜಿ 2023 ಸೀರಿಸ್​​ನಿಂದ ಬಿಡುಗಡೆಯಾದಂತಹ ಎರಡೂ ಸ್ಮಾರ್ಟ್‌ಫೋನ್‌ 6.79 ಇಂಚಿನ IPS LCD ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಪಂಚ್ ಹೋಲ್ ಕಟೌಟ್ ಶೈಲಿಯಲ್ಲಿ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಈ ಡಿಸ್​​ಪ್ಲೇಯು 1,080 x 2,460 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಇದರಲ್ಲಿದ್ದು, ಇದು 120Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿರಲಿದೆ.


    ಇದನ್ನೂ ಓದಿ: ಏರ್​​ಟೆಲ್​ನಿಂದ ಹೊಸ ಅಧಿಕ ವ್ಯಾಲಿಡಿಟಿ ಯೋಜನೆ ಲಾಂಚ್! ನೋಡಿದ್ರೆ ಗ್ಯಾರಂಟಿ ರೀಚಾರ್ಜ್ ಮಾಡ್ತೀರಾ


    ಇನ್ಫಿನಿಕ್ಸ್​ ಝೀರೋ ಸೀರಿಸ್​ ಪೋನ್​ಗಳ ಕ್ಯಾಮೆರಾ ಫೀಚರ್ಸ್​


    ಇನ್ಫಿನಿಕ್ಸ್ ಝೀರೋ ಸೀರಿಸ್​​ ಫೋನ್‌ಗಳು ವಿಶೇಷವಾಗಿ ಒಂದೇ ರೀತಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಎರಡೂ ಸ್ಮಾರ್ಟ್​​​ಫೋನ್​ಗಳು ಟ್ರಿಪಲ್​ ರಿಯರ್​ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್​ ಪ್ರಾಥಮಿಕ ಸೆನ್ಸಾರ್​, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇನ್ನು 16 ಮೆಗಾಪಿಕ್ಸೆಲ್​ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಅದೇ ರೀತಿ ಇದರಲ್ಲಿ ಕ್ಯಾಮೆರಾದ ಸಪೋರ್ಟ್​ಗಾಗಿ ಫ್ಲಾಶ್​​ ಲೈಟ್​ ಅನ್ನು ಆ್ಯಡ್​ ಮಾಡಲಾಗಿದೆ.


    ಪ್ರೊಸೆಸರ್​​ ಸಾಮರ್ಥ್ಯ


    ಇನ್ಫಿನಿಕ್ಸ್ ಝೀರೋ 5ಜಿ 2023 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಎಸ್​ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ಝೀರೋ 5ಜಿ 2023 ಟರ್ಬೋ ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 1080 ಚಿಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಎರಡೂ ಫೋನ್‌ಗಳು ಸಾಮಾನ್ಯವಾಗಿ 8 ಜಿಬಿ ರ್‍ಯಾಮ್ ಅನ್ನು ಹೊಂದಿದ್ದು, ಇಂಟರ್ನಲ್‌ ಸ್ಟೋರೇಜ್‌ ಮಾತ್ರ ಬೇರೆ ಬೇರೆಯಲ್ಲಿದೆ.


    ಇನ್ಫಿನಿಕ್ಸ್ ಝೀರೋ​ ಸ್ಮಾರ್ಟ್​​ಫೋನ್​


    ಇನ್ಫಿನಿಕ್ಸ್ ಝೀರೋ 5ಜಿ 2023 ಸ್ಮಾರ್ಟ್​​​​ಫೋನ್‌128 ಜಿಬಿ ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಇನ್ಫಿನಿಕ್ಸ್​ ಝೀರೋ 5ಜಿ 2023 ಟರ್ಬೊ ಸ್ಮಾರ್ಟ್​​ಫೋನ್ 256 ಜಿಬಿ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ.


    ಬ್ಯಾಟರಿ ಫೀಚರ್ಸ್​


    ಬ್ಯಾಟರಿ ವಿಚಾರದಲ್ಲೂ ಸಹ ಈ ಎರಡೂ ಫೋನ್‌ಗಳು ಒಂದೇ ಸಾಮರ್ಥ್ಯವನ್ನು ಪಡೆದುಕೊಂಡಿವೆ. 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಈ ಫೋನ್‌ಗಳಲ್ಲಿ ಲಭ್ಯವಿದೆ. ಈ ಬ್ಯಾಟರಿಯು 33W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ.


    ಇತರೆ ಫೀಚರ್ಸ್​


    ಇನ್ನುಳಿದಂತೆ 5ಜಿ, ಡ್ಯುಯಲ್‌ ಬ್ಯಾಂಡ್ ವೈ-ಫೈ, ಬ್ಲೂಟೂತ್ ಆವೃತ್ತಿ v5.1, ಜಿಪಿಎಸ್‌, 3.5mm ಆಡಿಯೋ ಜ್ಯಾಕ್​ ಹಾಗೂ ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆಯನ್ನು ಈ ಸ್ಮಾರ್ಟ್​​ಫೋನ್​ಗಳನ್ನು ಪಡೆದಿದೆ.




    ಬೆಲೆ ಮತ್ತು ಲಭ್ಯತೆ


    ಇನ್ಫಿನಿಕ್ಸ್ ಝೀರೋ 5ಜಿ 2023 ಸ್ಮಾರ್ಟ್‌ಫೋನ್‌ನ 8ಜಿಬಿ ರ್‍ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದ ಸ್ಮಾರ್ಟ್​​ಫೋನ್​ಗೆ ಭಾರತದಲ್ಲಿ 17,999 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದೆ.


    ಹಾಗೆಯೇ ಇನ್ಫಿನಿಕ್ಸ್ ಝೀರೋ 5ಜಿ 2023 ಟರ್ಬೋ ಫೋನ್‌ನ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ವೇರಿಯಂಟ್‌ಗೆ 19,999 ರೂಪಾಯಿಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಇನ್ನುಳಿದಂತೆ ಈ ಫೋನ್‌ಗಳು ಪರ್ಲಿ ವೈಟ್, ಕೋರಲ್ ಆರೆಂಜ್‌ ಸೇರಿದಂತೆ ನಾಲ್ಕು ಬಣ್ಣದ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಫೆಬ್ರವರಿ 11 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

    Published by:Prajwal B
    First published: