• Home
 • »
 • News
 • »
 • tech
 • »
 • Dizo Smartwatch: ಒಂದೇ ಕಂಪೆನಿಯಿಂದ 2 ಸ್ಮಾರ್ಟ್​​ವಾಚ್​ಗಳು ಭಾರತದಲ್ಲಿ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​?

Dizo Smartwatch: ಒಂದೇ ಕಂಪೆನಿಯಿಂದ 2 ಸ್ಮಾರ್ಟ್​​ವಾಚ್​ಗಳು ಭಾರತದಲ್ಲಿ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​?

ಡಿಝೋ ವಾಚ್​ ಡಿ ಅಲ್ಟ್ರಾ ಮತ್ತು ವಾಚ್ ಡಿ ಪ್ರೊ ಸ್ಮಾರ್ಟ್​ವಾಚ್​

ಡಿಝೋ ವಾಚ್​ ಡಿ ಅಲ್ಟ್ರಾ ಮತ್ತು ವಾಚ್ ಡಿ ಪ್ರೊ ಸ್ಮಾರ್ಟ್​ವಾಚ್​

ಡಿಝೋ ಕಂಪೆನಿ ಏಕಕಾಲದಲ್ಲಿ ಎರಡು ಸ್ಮಾರ್ಟ್​ವಾಚ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಸ್ಮಾರ್ಟ್​​ವಾಚ್​ಗಳು ಡಿಝೋ ವಾಚ್​ ಡಿ ಅಲ್ಟ್ರಾ ಹಾಗೂ ವಾಚ್​ ಡಿ ಪ್ರೋ ಎಂಬ ಹೆಸರನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್​​ವಾಚ್​ಗಳು ಬ್ಲೂಟೂತ್​ ಕಾಲಿಂಗ್​ ಫೀಚರ್ಸ್​ ಅನ್ನು ಹೋಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳು ಇದರಲ್ಲಿದೆ.

ಮುಂದೆ ಓದಿ ...
 • Share this:

  ಸ್ಮಾರ್ಟ್​​ವಾಚ್​​ಗಳು (Smartwathes) ಇತ್ತೀಚೆಗೆ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಾಗಿವೆ. ಒಂದು ಕಾಲದಲ್ಲಿ ವಾಚ್​ಗಳನ್ನು ಕೇವಲ ಸಮಯಕ್ಕಾಗಿ ಬಳಸುತ್ತಿದ್ದಾರೆ, ಆದರೆ ಈ ಟೆಕ್ನಾಲಜಿಯ ಅಭಿವೃದ್ಧಿಯಿಂದ ವಾಚ್​ಗಳಲ್ಲೇ ಕಾಲ್​, ಮೆಸೇಜ್ (Message)​ ಬಳಸಬಹುದಾಗಿದೆ. ಈಗಿನ ಸ್ಮಾರ್ಟ್​​ವಾಚ್​ಗಳು ಒಂದು ಮಿನಿ ಮೊಬೈಲ್​ ಎಂದೇ ಹೇಳ್ಬಹುದು. ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್​ವಾಚ್​ಗಳು ಹುಟ್ಟಿಕೊಂಡಿವೆ. ಅದ್ರಲ್ಲಿ ಡಿಝೋ ಕಂಪೆನಿಯು (Dizo Company) ಒಂದಾಗಿದೆ. ಈ ಡಿಜೊ ಕಂಪೆನಿಯು ಸ್ಮಾರ್ಟ್ ಎಂಟರ್‌ಟೈನ್‌ಮೆಂಟ್, ಸ್ಮಾರ್ಟ್ ಹೋಮ್, ಸ್ಮಾರ್ಟ್ ಕೇರ್ ಮತ್ತು ಆಕ್ಸೆಸರೀಸ್ ಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೀಗ ಈ ಕಂಪೆನಿ ಸ್ಮಾರ್ಟ್​​ವಾಚ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅಂದೂ ಒಂದಲ್ಲಾ ಎರಡು ಸ್ಮಾರ್ಟ್​ವಾಚ್​ಗಳನ್ನು ಡಿಝೋ ಕಂಪೆನಿ ಬಿಡುಗಡೆ ಮಾಡುತ್ತಿದೆ.


  ಡಿಝೋ ಕಂಪೆನಿ ಏಕಕಾಲದಲ್ಲಿ ಎರಡು ಸ್ಮಾರ್ಟ್​ವಾಚ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಸ್ಮಾರ್ಟ್​​ವಾಚ್​ಗಳು ಡಿಝೋ ವಾಚ್​ ಡಿ ಅಲ್ಟ್ರಾ ಹಾಗೂ ವಾಚ್​ ಡಿ ಪ್ರೋ ಎಂಬ ಹೆಸರನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್​​ವಾಚ್​ಗಳು ಬ್ಲೂಟೂತ್​ ಕಾಲಿಂಗ್​ ಫೀಚರ್ಸ್​ ಅನ್ನು ಹೋಂದಿದ್ದು, ಇನ್ನೂ ಹಲವಾರು ಫೀಚರ್ಸ್​ಗಳು ಇದರಲ್ಲಿದೆ.


  ಡಿಝೋ ವಾಚ್​ ಡಿ ಅಲ್ಟ್ರಾ ಸ್ಮಾರ್ಟ್​​ವಾಚ್​ ಫೀಚರ್ಸ್​


  ಡಿಸ್​ಪ್ಲೇ ವಿನ್ಯಾಸ


  ಡಿಝೋ ವಾಚ್ ಡಿ ಅಲ್ಟ್ರಾ 1.78 ಇಂಚಿನ ಅಮೋಲ್ಡ್​​ ಡಿಸ್‌ಪ್ಲೇ ಆಯ್ಕೆಯನ್ನು ಒಳಗೊಂಡಿದೆ. ಈ ಡಿಸ್​ಪ್ಲೇ 368 x 448 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಈ ವಾಚ್‌ 500 ನಿಟ್ಸ್​ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಡಿಸ್​ಪ್ಲೆಯನ್ನು ರಚಿಸಲಾಗಿದೆ.


  ಇದನ್ನೂ ಓದಿ: ಭಾರತದ ಮಾರುಕಟ್ಟೆಯಲ್ಲಿ ಐಕ್ಯೂ 11 ಸ್ಮಾರ್ಟ್​ಫೋನ್​ನ ಮಾರಾಟ ಆರಂಭ! ಬೆಲೆ ಎಷ್ಟು?


  ಇತರೆ ಫೀಚರ್ಸ್​


  ಇದರೊಂದಿಗೆ ಈ ಹೊಸ ಸ್ಮಾರ್ಟ್ ವಾಚ್ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ನಾಯ್ಸ್‌ ಕ್ಯಾನ್ಸಲಿಂಗ್ ಫೀಚರ್​​ ಅನ್ನೂ ಒಳಗೊಂಡಿದೆ. ವಿಶೇಷವಾಗಿ ಈ ಸ್ಮಾರ್ಟ್​​ವಾಚ್ ಬ್ಲೂಟೂತ್‌ ಕಾಲಿಂಗ್​ ಫೀಚರ್ಸ್‌ಅನ್ನು ಹೊಂದಿದೆ. ಈ ಫೀಚರ್​ನಿಂದ ಸ್ಮಾರ್ಟ್​​ವಾಚ್​ನಲ್ಲೇ ಕಾಲ್​ ಅನ್ನು ರಿಸೀವ್ ಮಾಡಬಹುದು ಮತ್ತು ಕಟ್​ ಮಾಡಬಹುದು. ಇದಕ್ಕಾಗಿ ಸ್ಪೀಕರ್​ಗಳನ್ನು ಅಳವಡಿಸಲಾಗಿದೆ.


  ಡಿಝೋ ವಾಚ್​ ಡಿ ಅಲ್ಟ್ರಾ ಮತ್ತು ವಾಚ್ ಡಿ ಪ್ರೊ ಸ್ಮಾರ್ಟ್​ವಾಚ್​


  ಸ್ಪೋರ್ಟ್ಸ್​​ ಮೋಡ್ ಫೀಚರ್ಸ್​


  ಹಾಗೆಯೇ ಈ ಸ್ಮಾರ್ಟ್​​ವಾಚ್ ಹೃದಯ ಬಡಿತ ಟ್ರ್ಯಾಕಿಂಗ್, SpO2 ರಕ್ತದ ಆಮ್ಲಜನಕದ ಮೇಲ್ವಿಚಾರಣೆ ಹಾಗೂ ಇತರ ಆರೋಗ್ಯ ಸಂಬಂಧಿತ ಟ್ರ್ಯಾಕಿಂಗ್‌ ತಂತ್ರಜ್ಞಾನವನ್ನು ಒಳಗೊಂಡಿದ್ದು, 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಈ ವಾಚ್‌ನಲ್ಲಿ ಅಳವಡಿಸಲಾಗಿದೆ.


  ಡಿಝೋ ವಾಚ್​​ ಡಿ ಪ್ರೋ ಸ್ಮಾರ್ಟ್​ವಾಚ್​


  ಡಿಸ್​ಪ್ಲೇ ವಿನ್ಯಾಸ


  ಡಿಝೋ ವಾಚ್​​ ಡಿ ಪ್ರೋ ಸ್ಮಾರ್ಟ್​ವಾಚ್​ 1.85 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇನ್ನು ಈ ಡಿಸ್​ಪ್ಲೇ ವಾಚ್​ ಡಿಅಲ್ಟ್ರಾಗಿಂತ ಹೆಚ್ಚು ಅಂದರೆ 600 ನಿಟ್ಸ್​ ಗರಿಷ್ಠ ಬ್ರೈಟ್‌ನೆಸ್‌ ಹಾಗೂ 60Hz ರಿಫ್ರೆಶ್ ರೇಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.


  ಇತರೆ ಫೀಚರ್ಸ್


  ಡಿಝೋ ಹೆಲ್ತ್ ಆ್ಯಪ್​ನೊಂದಿಗೆ ಜಿಪಿಎಸ್‌ ರನ್ನಿಂಗ್ ಸೇರಿದಂತೆ ಈ ವಾಚ್​ನ ತಂತ್ರಜ್ಞಾನದ ಮೂಲಕ ಹಲವು ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡಬಹುದಾಗಿದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ ವಿ5.3 ಮೂಲಕ ಕಾಲಿಂಗ್​ ಫೀಚರ್ಸ್‌ ಅನ್ನು ಸಹ ಹೊಂದಿದೆ. ಈ ಸ್ಮಾರ್ಟ್​​ವಾಚ್​ನಲ್ಲಿ ನಾಯ್ಸ್​ ಕ್ಯಾನ್ಸಲಿಂಗ್​ ಫೀಚರ್ಸ್​ ಅನ್ನು ಅಳವಡಿಸಲಾಗಿದೆ. ಇದರಿಂದ ಯಾವುದೇ ಸಂದರ್ಭದಲ್ಲಿ ಸುಲಭವಾಗಿ ಕಾಲ್​ನಲ್ಲಿ ಮಾತಾಡಬಹುದಾಗಿದೆ.


  ಡಿಝೋ ವಾಚ್​ ಡಿ ಅಲ್ಟ್ರಾ ಮತ್ತು ವಾಚ್ ಡಿ ಪ್ರೊ ಸ್ಮಾರ್ಟ್​ವಾಚ್​


  ಸ್ಪೋರ್ಟ್ಸ್​​ ಫೀಚರ್ಸ್​


  ಡಿಝೋ ವಾಚ್​​ ಡಿ ಪ್ರೋ ಸ್ಮಾರ್ಟ್​ವಾಚ್ ವಿಶೇಷವಾಗಿ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳ ಆಯ್ಕೆಯನ್ನು ಹೊಂದಿದೆ. ಇನ್ನು 110 ಕ್ಕೂ ಹೆಚ್ಚು ಸ್ಪೋರ್ಟ್ಸ್‌ಮೋಡ್‌ಗಳನ್ನು ಹೊಂದಿದೆ. ವಿಶೇಷವಾಗಿ ಹೃದಯ ಬಡಿತ ಮಾನಿಟರಿಂಗ್, ಕ್ಯಾಲೋರಿ ಟ್ರ್ಯಾಕರ್, ಸ್ಟೆಪ್ ಟ್ರ್ಯಾಕರ್ ಮತ್ತು SpO2 ಮಾನಿಟರ್ ಅನ್ನು ಇದು ಟ್ರ್ಯಾಕ್​ ಮಾಡುತ್ತದೆ. ಇದರಿಂದ ಬಳಕೆದಾರರು ಸುಲಭವಾಗಿ ತಮ್ಮ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಳ್ಳಬಹುದಾಗಿದೆ.


  ಬೆಲೆ ಮತ್ತು ಲಭ್ಯತೆ


  ಡಿಝೋ ವಾಚ್ ಡಿ ಅಲ್ಟ್ರಾ ಸ್ಮಾರ್ಟ್​​ವಾಚ್​ ಅನ್ನು 3,299 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಇದು ಕಪ್ಪು, ಬಿಳಿ ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಇನ್ನು ಈ ಸ್ಮಾರ್ಟ್​ವಾಚ್​ ಜನವರಿ 12, 2023 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.


  ಡಿಝೋ ವಾಚ್ ಡಿ ಪ್ರೋ ಸ್ಮಾರ್ಟ್​ವಾಚ್ ಅನ್ನು 2,699 ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ, ಹಾಗೇ ಈ ಸ್ಮಾರ್ಟ್​ವಾಚ್​ ಕೂಡ ನೀಲಿ, ಕಪ್ಪು ಮತ್ತು ಬೂದು ಬಣ್ಣದ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಪ್ರೋ ಮಾದರಿಯ ಸ್ಮಾರ್ಟ್​​ವಾಚ್​ ಅನ್ನು ಜನವರಿ 17, 2023 ರಂದು ಫ್ಲಿಪ್​ಕಾರ್ಟ್​ನಲ್ಲಿ ಖರೀದಿಸಬಹುದಾಗಿದೆ.

  Published by:Prajwal B
  First published: