ಮೀನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಕೇರಳದ ಈ ಬಾಲಕಿ ಫುಲ್​ ಟ್ರೆಂಡ್​!


Updated:July 28, 2018, 9:23 PM IST
ಮೀನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಕೇರಳದ ಈ ಬಾಲಕಿ ಫುಲ್​ ಟ್ರೆಂಡ್​!

Updated: July 28, 2018, 9:23 PM IST
ಮೀನು ಮಾರಿಕೊಂಡೇ ಜೀವನ ನಡೆಸುತ್ತೇನೆ ಎಂದಿದ್ದ ಕೊಚ್ಚಿಯ ವಿದ್ಯಾರ್ಥಿನಿಯೊಬ್ಬಳನ್ನು ನೆಟ್ಟಿಗರು ಟ್ರೋಲ್​ ಮಾಡಲು ಆರಂಭಿಸಿದ್ದು, ಈ ಪ್ರಕರಣವನ್ನು ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಆದೇಶಿಸಿದ್ದಾರೆ.

ಕೊಚ್ಚಿಯಲ್ಲಿ ತೃತೀಯ ವರ್ಷದ ಬಿಎಸ್​ಸಿ ಓದುತ್ತಿರುವ ಹನಾನ್​ ಹಮೀದ್​ ಕಳೆದ ಒಂದು ವಾರದಲ್ಲಿ ಕೇರಳದಾದ್ಯಂತ ಸೆನ್ಸೇಷನ್​ ಹುಟ್ಟು ಹಾಕಿದ್ದು, ಅಪ್ಪ ಬೇರ್ಪಟ್ಟ ಹಿನ್ನೆಲೆಯಲ್ಲಿ ಮೀನು ಮಾರಿ ಇತರೇ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡು ಅಮ್ಮನೊಂದಿಗೆ ಜೀವನ ನಡೆಸುತ್ತಿದ್ದ ಸುದ್ದಿಯಿಂದಲೇ ಈಕೆಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದು ವೈಯಕ್ತಿಯ ನಿಂದನೆ ನಡೆಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಆದೇಶಿಸಿದ್ದಾರೆ.

ಏನಿದು ಘಟನೆ?
ಹನಾನ ಹಮೀದ್​ ತನ್ನ ದೈನಂದಿನ ಜೀವನಕ್ಕೆ ಮೀನು ಮಾರಾಟ ಮಾಡಿಕೊಳ್ಳಿರುವುದಲ್ಲದೇ ಹಲವು ಸಿನಿಮಾಗಳಲ್ಲಿ ಕಲಾವಿದೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇದನ್ನೆಲ್ಲಾ ಸ್ಥಳೀಯ ಮಾಧ್ಯಮವೊಂದು ಪ್ರಸಾರ ಮಾಡಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕೆಲವು ಹೀನ ಮನಸ್ಥಿತಿಯ ಆನ್​ಲೈನ್​ ರೌಡಿಗಳು ಈಕೆಯ ಹಳೇಯ ಚಿತ್ರಗಳನ್ನು ಕೆದಕಲು ಆರಂಭಿಸಿದ್ದಾರೆ.

ನಟಿಯಾಗಿ ಕಾರ್ಯನಿರ್ವಹಿಸಿದ್ದ ಹಮೀದ್​ ಚಿತ್ರ ನಟ ಮೋಹನ್​ ಲಾಲ್​ ಸೇರಿದಂತೆ ಅವರ ಮಗ ಪ್ರಣವ್​ ಮೋಹನ್​ಲಾಲ್​ ಹಾಗು ಇತರೇ ನಟರೊಂದಿಗಿನ ಚಿತ್ರಗಳನ್ನು ಅಂತರ್ಜಾಲದಲ್ಲಿ ಬಿತ್ತಿದ್ದಾರೆ. ಮಾತ್ರವಲ್ಲದೇ ಈಕೆ ಯಾವುದೇ ದುಡುಯುವ ವರ್ಗಕ್ಕೆ ಸೇರಿದವಳಲ್ಲ, ತನ್ನ ಜನಪ್ರಿಯತೆಗಾಗಿ ಈ ರೀತಿ ಮಾಡುತ್ತಿದ್ದಾಳೆ ಎಂದು ಭಿತ್ತರಿಸಿದ್ದಾರೆ.

ಈ ಕುರಿತು ಮತ್ತೊಂದು ಮಾಧ್ಯಮ ಕಳೆದ ಶುಕ್ರವಾರದಂದು ಕಾರ್ಯಕ್ರಮವೊಂದನ್ನು ನಡೆಸಿದೆ, ಇದನ್ನು ವೀಕ್ಷಿಸಿದ ಮಹಿಳಾ ಆಯೋಗ ಸುಮೊಟೊ ಪ್ರಕರಣ ದಾಖಲಿಸಲು ರಾಜ್ಯ ಪೊಲಿಸ್​ ಮುಖ್ಯಸ್ಥ ಲೋಕನಾಥ್​ ಬೆಹ್ರಾಗೆ ಆದೇಶಿಸಿದ್ದಾರೆ.

ಇದಕ್ಕೆ ಫೇಸ್​ಬುಕ್​ನಲ್ಲೇ ಪ್ರತಿಕ್ರಿಯೆ ನಿಡಿದ್ದ ಸಿಎಂ ವಿಜಯನ್​, ಕೇರಳದ ಜನರು ಹಮೀದ್​ ಜತೆಯಿದ್ದು, ಯಾವುದೇ ಸಂದರ್ಭದಲ್ಲೂ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಎರ್ನಾಕುಲಂ ಜಿಲ್ಲಾಧಿಕಾರಿಯೂ ಹಮೀದ್​ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲಿನ ಪೊಲೀಸರಿಗೆ ಪ್ರಕರಣದ ತನಿಖೆಯನ್ನು ಶೀಘ್ರಗತಿಯಲ್ಲಿ ನಡೆಸುವಂತೆ ಹೇಳಿದ್ದಾರೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...